ಚಳಿಗಾಲದಲ್ಲಿ ಖರ್ಜೂರ, ಬೆಲ್ಲದ ಲಡ್ಡು ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನಗಳು ಸಿಗುತ್ತಾ?

ಆಸ್ತಮಾ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುತ್ತಿರುವ ದೀರ್ಘಕಾಲದ ಉಸಿರಾಟ ಸಂಬಂಧಿ ಕಾಯಿಲೆಯಾಗಿದೆ. ಇದರಿಂದ ಮುಕ್ತಿ ಪಡೆಯಲು ಅನೇಕರು ಇನ್ಹೇಲರ್‌ ಸೇರಿದಂತೆ ಇತರ ಔಷಧಿಗಳನ್ನು ಬಳಸುತ್ತಾರೆ. ಆದರೆ ಇವುಗಳಿಗಿಂತ ಮನೆಮದ್ದುಗಳು ಹೆಚ್ಚು ಪ್ರಯೋಜನಗಳನ್ನು ಒದಗಿಸುತ್ತವೆ ಎಂದು ತಿಳಿದರೆ ಆಶ್ಚರ್ಯವಾಗಬಹುದು. ಅದರಲ್ಲಿಯೂ ಖರ್ಜೂರ ಮತ್ತು ಬೆಲ್ಲದಿಂದ ಮಾಡಿದ ಲಡ್ಡುಗಳು ಆಸ್ತಮಾ ರೋಗಿಗಳಿಗೆ ದಿವ್ಯ ಔಷಧ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಖರ್ಜೂರ, ಬೆಲ್ಲದ ಲಡ್ಡು ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನಗಳು ಸಿಗುತ್ತಾ?
ಖರ್ಜೂರ, ಬೆಲ್ಲದ ಲಡ್ಡು

Updated on: Nov 25, 2025 | 8:04 PM

ಅಸ್ತಮಾ (Asthma) ಒಂದು ದೀರ್ಘಕಾಲದ ಉಸಿರಾಟ ಸಂಬಂಧಿ ಕಾಯಿಲೆಯಾಗಿದ್ದು ಲಕ್ಷಾಂತರ ಜನರನ್ನು ಬಾಧಿಸುತ್ತಿದೆ. ಈ ಆರೋಗ್ಯ ಸಮಸ್ಯೆ ಇರುವವರು ಉಸಿರಾಟದ ತೊಂದರೆ, ಎದೆ ಬಿಗಿತ ಮತ್ತು ಕೆಮ್ಮಿನಂತಹ ಲಕ್ಷಣಗಳಿಂದ ಬಳಲುತ್ತಾರೆ. ಹಾಗಾಗಿ, ಜನರು ಈ ರೀತಿಯ ಸಮಸ್ಯೆಗಳಿಂದ ನಿರಾಳತೆ ಪಡೆಯಲು ಇನ್ಹೇಲರ್‌ಗಳ ಜೊತೆಗೆ ಕೆಲವು ಔಷಧಿಗಳನ್ನು ಬಳಸುತ್ತಾರೆ. ಆದರೆ ಅಸ್ತಮಾ ರೋಗಿಗಳಿಗೆ ಇವುಗಳಿಗಿಂತ ಮನೆಮದ್ದು ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತವೆ. ಅದರಲ್ಲಿಯೂ ಖರ್ಜೂರ ಮತ್ತು ಬೆಲ್ಲದಿಂದ ಮಾಡಿದ ಲಡ್ಡು (Dates & Jaggery Laddus) ಸೇವನೆ ಈ ಸಮಸ್ಯೆಗಳಿಂದ ಬಳಲುವವರಿಗೆ ದಿವ್ಯ ಔಷಧ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ವಿಷಯ ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ಸತ್ಯ. ಈ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಖರ್ಜೂರ ಮತ್ತು ಬೆಲ್ಲದಲ್ಲಿ ಕಬ್ಬಿಣಾಂಶವಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಬೆಲ್ಲ, ಖರ್ಜೂರದ ಲಡ್ಡನ್ನು ಪ್ರತಿದಿನ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಜೊತೆಗೆ ಈ ಸಿಹಿ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಅದರಲ್ಲಿಯೂ ಚಳಿಗಾಲದಲ್ಲಿ ಪದೇ ಪದೇ ಕಂಡುಬರುವ ಕೆಮ್ಮು ಮತ್ತು ಶೀತಗಳಂತಹ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಈ ಲಡ್ಡು ತಿನ್ನುವುದು ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಖರ್ಜೂರ ಮತ್ತು ಬೆಲ್ಲ ದೇಹದ ಉಷ್ಣತೆಯನ್ನು ಹೆಚ್ಚಿಸಿ ಚಳಿಗಾಲದಲ್ಲಿ ಬೆಚ್ಚಗಿರುವಂತೆ ಮಾಡುತ್ತದೆ.

ಇದನ್ನೂ ಓದಿ: ಬೆಲ್ಲ vs ಸಕ್ಕರೆ; ಇವೆರಡರಲ್ಲಿ ಮಕ್ಕಳ ಆರೋಗ್ಯಕ್ಕೆ ಯಾವುದು ಉತ್ತಮ ಎಂಬುದನ್ನು ವಿವರಿಸಿದ್ದಾರೆ ಡಾ. ರವಿ ಮಲಿಕ್

ಬೆಲ್ಲ ಮತ್ತು ಖರ್ಜೂರದ ಲಡ್ಡಿನ ಪ್ರಯೋಜನ:

ಖರ್ಜೂರ ಮತ್ತು ಬೆಲ್ಲ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದು ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮಾತ್ರವಲ್ಲ, ಖರ್ಜೂರವು ನಾರಿನಂಶವನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆ, ಅನಿಲ ಮತ್ತು ಆಮ್ಲೀಯತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೆಲ್ಲ ಮತ್ತು ಖರ್ಜೂರ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಕೀಲುಗಳಲ್ಲಿ ಉರಿಯೂತ ಮತ್ತು ಊತವನ್ನು ತಡೆಯಲು ಸಹಾಯ ಮಾಡುತ್ತವೆ. ಹಾಗಾಗಿ ಬೆಲ್ಲ, ಖರ್ಜೂರದ ಲಡ್ಡನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಂಧಿವಾತದಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಬೆಲ್ಲ ಮತ್ತು ಖರ್ಜೂರದಿಂದ ಮಾಡಿದ ಎರಡು ಲಡ್ಡನ್ನು ಬೆಚ್ಚಗಿನ ಹಾಲಿನೊಂದಿಗೆ ಸೇವಿಸುವುದರಿಂದ ಪೌಷ್ಠಿಕಾಂಶದ ಪ್ರಯೋಜನಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಆದರೆ ಮಧುಮೇಹ ಇರುವವರು ಅಥವಾ ತಮ್ಮ ತೂಕವನ್ನು ನಿಯಂತ್ರಿಸಿಕೊಳ್ಳಲು ಬಯಸುತ್ತಿರುವವರು ಇಂತಹ ಲಡ್ಡುಗಳ ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Tue, 25 November 25