ClevelandClinic.org ನಡೆಸಿದ ಸಂಶೋಧನೆಯೊಂದರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸ್ವಲ್ಪ ವೇಗವಾಗಿ ಹೃದಯ ಬಡಿತವನ್ನು ಹೊಂದಿರುತ್ತಾರೆ. ಗರ್ಭಾವಸ್ಥೆ ಮತ್ತು ಋತುಬಂಧ ಎರಡೂ ಹೃದಯದ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ತಿಳಿದುಬಂದಿದೆ. ವಯಸ್ಕ ಮಹಿಳೆಯರಿಗೆ ಸರಾಸರಿ ಹೃದಯ ಬಡಿತವು ಪ್ರತಿ ನಿಮಿಷಕ್ಕೆ 78 ರಿಂದ 82 ಬಡಿತ ಇರುತ್ತದೆ, ಆದರೂ ಸಾಮಾನ್ಯ ವ್ಯಾಪ್ತಿಯು ನಿಮಿಷಕ್ಕೆ 60 ರಿಂದ 100 ಬೀಟ್ಸ್ ನಡುವೆ ಇರುತ್ತದೆ. ಹಾರ್ಮೋನುಗಳು, ವ್ಯಾಯಾಮ ಮತ್ತು ಜೀವನಶೈಲಿಯ ಆಯ್ಕೆಗಳಂತಹ ಬಹು ಅಂಶಗಳು ನಿಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧನೆ ತಿಳಿಸಿದೆ.
ಆದರೆ ಈ ಸಂಶೋಧನೆಗೆ ಸಂಬಂಧಿಸಿದಂತೆ ನೋಯ್ಡಾದ ಶಾರದಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುಭೇಂದು ಮೊಹಾಂತಿ ಈ ಹೇಳಿಕೆಯನ್ನು ನಿರಾಕರಿಸಿದರು, ಹೃದಯ ಬಡಿತವು ಲಿಂಗಕ್ಕೆ ಸಂಬಂಧಿಸಿಲ್ಲ. ಹೃದಯ ಬಡಿತವು ವ್ಯಕ್ತಿಯ ದೈಹಿಕ ಚಟುವಟಿಕೆಗಳಿಂದ ಬದಲಾವಣೆ ಉಂಟಾಗುತ್ತದೆ ಎಂದು ಡಾ. ಮೊಹಾಂತಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಯಿ ಮತ್ತು ಹಲ್ಲುಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯಬೇಡ
ಆದರೆ ಮಣಿಪಾಲ್ ಆಸ್ಪತ್ರೆಯ ಸಲಹೆಗಾರ ಡಾ.ರಂಜನ್ ಶೆಟ್ಟಿಯವರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯ ಹೃದಯ ಬಡಿತ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಪುರುಷ ಮತ್ತು ಮಹಿಳೆಯರ ಹೃದಯಬಡಿತದಲ್ಲಿ 10 ಬಡಿತಗಳ ವರೆಗೆ ವ್ಯಾತಾಸವಿರಬಹುದು ಎಂದು ಹೇಳಿದ್ದಾರೆ. ಉದಾಹರಣೆಗೆ ಹೆರಿಗೆಯ ಸಮಯದಲ್ಲಿ ಅವರ ಹೃದಯ ಬಡಿತವು ಸ್ವಾಭಾವಿಕವಾಗಿ ಹೆಚ್ಚಾಗಿರುತ್ತದೆ. ಆದ್ದರಿಂದ, ಎರಡು ನಿಮಿಷಗಳ ಕಾಲ ವಾಕಿಂಗ್ ಮತ್ತು ನಂತರ ಜಾಗಿಂಗ್ ಅಥವಾ ವ್ಯಾಯಾಮದ ಮೂಲಕ ಪುರುಷರು ಮತ್ತು ಮಹಿಳೆಯರು ನೈಸರ್ಗಿಕವಾಗಿ ತಮ್ಮ ಹೃದಯ ಬಡಿತವನ್ನು ಕಡಿಮೆ ಮಾಡಬಹುದು, ”ಡಾ ಶೆಟ್ಟಿ ತಿಳಿಸಿದ್ದಾರೆ. ಜೊತೆಗೆ ಸುಮಾರು 20 ರಿಂದ 25 ನಿಮಿಷಗಳ ಕಾಲ ವ್ಯಾಯಾಮ, ಯೋಗ ಮತ್ತು ಧ್ಯಾನದ ಸಂಯೋಜನೆಯಲ್ಲಿ ತೊಡಗಿಸಿಕೊಂಡರೆ ಹೃದಯ ಬಡಿತವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: