ಬೆಳಗಾವಿ: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ನಿಧನ
ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ನಡೆದಿದೆ. ರುದ್ರವ್ವ ತಳವಾರ (70) ಸಾವನ್ನಪ್ಪಿದವರು. ಹಣ್ಣಿನ ವ್ಯಾಪಾರಿಯಾಗಿದ್ದ ಬಾಳಪ್ಪ ತಳವಾರ (50) ಇಂದು ಮರದಿಂದ ಬಿದ್ದು ಸಾವನ್ನಪ್ಪಿದ್ದರು.
ಬಾಳಪ್ಪ ತಳವಾರ ಅವರು ಜೀವನದ ಬಂಡಿ ಸಾಗಿಸಲು ಹಣ್ಣಿನ ವ್ಯಾಪಾರ ಮಾಡುತ್ತಿದರು. ಎಂದಿನಂತೆ ಇಂದು ಸಂಜೆ ಹಣ್ಣು ಕೀಳಲೆಂದು ನೇರಳೆ ಮರಕ್ಕೆ ಹತ್ತಿದ್ದಾರೆ. ಈ ವೇಳೆ ಆಯತಪ್ಪಿ ಮರದ ಮೇಲಿಂದ ಬಿದ್ದು ಬಾಳಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದ ಬಾಳಪ್ಪ ಅವರ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಬಡಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿ, ಅತ್ಮಹತ್ಯೆಗೆ ಶರಣಾದ ಜೋಡಿ
ಕೊಪ್ಪಳ: ಅನೈತಿಕ ಸಂಬಂಧಕ್ಕೆ ಅಡ್ಡಿ ಹಿನ್ನೆಲೆ ವಿವಾಹಿತ ಜೋಡಿಯೊಂದು ಅತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. ಪೀರಸಾಬ್ ನದಾಫ್ (33), ಶಾರದಾ ಶರಣಪ್ಪ ಬಸಾಪೂರ (30) ಮೃತ ದುರ್ದೈವಿಗಳು. ಇಬ್ಬರಿಗೆ ಬೇರೆಬೇರೆ ಮದುವೆಯಾಗಿದ್ದರೂ ಅನೈತಿಕ ಸಂಬಂಧ ಬೆಸೆದಿತ್ತು. ಈ ವಿಚಾರ ತಿಳಿದ ನದಾಫ್ ಪತ್ನಿ ಶಾರದಾಗೆ ಎಚ್ಚರಿಕೆ ನೀಡಿದ್ದಾಳೆ. ಆದರೆ ಇಬ್ಬರೂ ಬಿಟ್ಟಿರಲಾರೆವು ಎಂದು ಇಂದು ಜಮೀನಿಗೆ ತೆರಳಿ ಇಬ್ಬರು ಒಟ್ಟಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಬಾಲಕ ಸಾವು: ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಣೆ
ಪೀರಸಾಬ್ ಹಾಗೂ ಶಾರದಾ ಇಬ್ಬರ ನಡುವೆ ಅನೈತಿಕ ಸಂಬಂಧ ಇರುವುದನ್ನು ತಿಳಿದ ಪೀರಸಾಬ್ ಪತ್ನಿ, ಶಾರದಾಳ ಜೊತೆ ಜಗಳವಾಡಿದ್ದಾಳೆ. ನನ್ನ ಗಂಡನ ಸಹವಾಸ ಬೀಡು ಅಂತ ಶಾರದಾ ಜೊತೆ ಆಗಾಗ ಜಗಳ ಮಾಡುತ್ತಿದ್ದಳು. ಆದರೆ ದೂರ ಆಗುವುದಾದರೇ ಇಬ್ಬರು ಜಗತ್ತಿನಿಂದ ದೂರ ಆಗುತ್ತೆವೆ ಅಂತ ಇಬ್ಬರೂ ಹೇಳುತ್ತಿದ್ದರು. ಈ ಬಗ್ಗೆ ಊರ ಹಿರಿಯರು ಇಬ್ಬರಿಗೂ ತಿಳುವಳಿಕೆ ಹೇಳಿದ್ದರು.
ಊರ ಹಿರಿಯರ ಮಾತು ಕೇಳದ ಪೀರಸಾಬ್ ಮತ್ತು ಶಾರದ, ಇಂದು ಜಮೀನಿಗೆ ತೆರಳಿ ಇಬ್ಬರು ಒಟ್ಟಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹನಮಸಾಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 pm, Wed, 31 May 23