Sign In

By signing in or creating an account, you agree with Associated Broadcasting Company's Terms & Conditions and Privacy Policy.

Side Effects of Coffee: ಅತಿಯಾದ ಕಾಫಿ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸಬಹುದೇ? ಇಲ್ಲಿದೆ ಮಾಹಿತಿ

ಅಧಿಕ ರಕ್ತದೊತ್ತಡ ಹೊಂದಿರುವವರು, ಕಾಫಿ ಕುಡಿಯುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು ಆದರೆ ಅದನ್ನು ತಪ್ಪಿಸುವ ಅಗತ್ಯವಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Side Effects of Coffee: ಅತಿಯಾದ ಕಾಫಿ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸಬಹುದೇ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 02, 2023 | 9:58 AM

ರಕ್ತದೊತ್ತಡದ ಬಗ್ಗೆ ನಿಮಗೆ ಅರಿವಿರಬಹುದು. ಆಧುನಿಕ ಜೀವನಶೈಲಿಯಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ರಕ್ತವು ಹೆಚ್ಚು ವೇಗದಿಂದ ಅಪಧಮನಿಗಳ ಮೂಲಕ ಪ್ರವಹಿಸುವಾಗ ಹೃದಯವು ವೇಗವಾಗಿ ರಕ್ತನಾಳಗಳಿಗೆ ಪಂಪ್ ಮಾಡಬೇಕಾಗುತ್ತದೆ ಆಗ ಹೃದಯಕ್ಕೆ ಹೆಚ್ಚು ಒತ್ತಡ ಉಂಟಾಗಿ ಅಧಿಕ ರಕ್ತದೊತ್ತಡವೆಂಬ ಮನೋದೈಹಿಕ ಸಮಸ್ಯೆ ನಿಮ್ಮನ್ನು ಕಾಡಬಹುದು. ಹಾಗಾಗಿ ನಮ್ಮ ದೇಹದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಹಠಾತ್ ಆತಂಕ, ಉಸಿರಾಟದ ತೊಂದರೆ, ವಾಕರಿಕೆ ಮತ್ತು ಎದೆ ನೋವು ಅಧಿಕ ರಕ್ತದೊತ್ತಡದ ಲಕ್ಷಣಗಳಾಗಿರಬಹುದು. ಅಧಿಕ ರಕ್ತದೊತ್ತಡವು ಭಾರತದಲ್ಲಿ 220 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಪ್ರಚಲಿತ ಸ್ಥಿತಿಯಾಗಿದೆ. ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಸಿಒಪಿಡಿ ಮತ್ತು ಮಧುಮೇಹದಂತಹ ಇತರ ಕೊಮೊರ್ಬಿಡಿಟಿಗಳಿಗೆ ಕಾರಣವಾಗಬಹುದು. ರೋಗದ ಹರಡುವಿಕೆ ಮತ್ತು ಅಪಾಯವು ವಿಭಿನ್ನ ತಡೆಗಟ್ಟುವ ತಂತ್ರಗಳು ಮತ್ತು ಹಲವು ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಹಾಗಾಗಿ ನಿಯಮಿತವಾಗಿ ಕಾಫಿ ಕುಡಿಯುವುದರಿಂದ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯೇ ಎಂಬುದು ಅವುಗಳಲ್ಲಿ ಒಂದಾಗಿದೆ.

ಕಾಫಿ ರಕ್ತದೊತ್ತಡವನ್ನು ಹೆಚ್ಚಿಸಬಹುದೇ?

ಕಾಫಿ ತಾತ್ಕಾಲಿಕವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ಅಧಿಕ ರಕ್ತದೊತ್ತಡ ಇರುವ ರೋಗಿಗಳಲ್ಲಿ, ಕೆಫೀನ್ ಸೇವನೆಯು ರಕ್ತದೊತ್ತಡದ ಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಬಳಿಕ ತಾತ್ಕಾಲಿಕ ಏರಿಕೆಯ ನಂತರ, ರಕ್ತದೊತ್ತಡದ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಹಾಗಾಗಿ ಕಾಫಿ ತ್ಯಜಿಸುವ ಆವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ;Cold Coffee Side Effects: ನಿಮಗೆ ನಿತ್ಯ ಕೋಲ್ಡ್​ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ, ಈ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು

ಒಂದೇ ದಿನದಲ್ಲಿ ಮೂರು ಕಪ್ ಕಾಫಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳುವ ನ್ಯೂಟ್ರಿಯಂಟ್ಸ್ 2 ನ ವರದಿಯಿಂದ ಕಾಫಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂಬ ಚರ್ಚೆಯು ಬಂದಿದೆ. ಏಕೆಂದರೆ ಕೆಫೀನ್ ಕ್ಲೋರೋಜೆನಿಕ್ ಆಮ್ಲಗಳು, ಕೆಫೆಸ್ಟಲ್ ಮತ್ತು ಕಹ್ವಿಯೋಲ್ ನಂತಹ ಸಂಯುಕ್ತಗಳನ್ನು ಹೊಂದಿದೆ, ಜೊತೆಗೆ ಸಣ್ಣ ಪ್ರಮಾಣದ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಈ ಸಂಯುಕ್ತಗಳು ರಕ್ತದೊತ್ತಡದ ಮಟ್ಟಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ತಿಳಿದು ಬಂದಿದೆ, ಆದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಅವುಗಳ ಬಳಕೆ ತಿಳಿದಿಲ್ಲ.

ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಕಾಫಿ ಸೇವನೆಯು ಪ್ರಯೋಜನಗಳು ಮತ್ತು ಮಿತಿಗಳನ್ನು ಹೊಂದಿವೆ. ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಯೋಜನಗಳು ಮತ್ತು ಮಿತಿಗಳು ಇಲ್ಲಿವೆ:

ಪ್ರಯೋಜನಗಳು

-ಹೈಪೋಟೆನ್ಷನ್ ಸಮಯದಲ್ಲಿ ಅಲ್ಪಾವಧಿಯ ರಕ್ತದೊತ್ತಡದ ಹೆಚ್ಚಳಕ್ಕೆ ಕೆಫೀನ್ ಸಹಾಯ ಮಾಡುತ್ತದೆ. ಇದು ಕೇಂದ್ರ ನರ ಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಅರಿವಿನ ಕಾರ್ಯವನ್ನು ಹೆಚ್ಚಿಸುತ್ತದೆ.

ಮಿತಿಗಳು

-ತಾತ್ಕಾಲಿಕ ರಕ್ತದೊತ್ತಡದ ಹೆಚ್ಚಳವು ಈಗಾಗಲೇ ಅಧಿಕ ರಕ್ತದೊತ್ತಡವನ್ನು ಹೊಂದಿರುವ ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

-ಅತಿಯಾದ ಕೆಫೀನ್ ಬಳಕೆಯು ರಕ್ತದೊತ್ತಡ ನಿರ್ವಹಣೆಗೆ ಜನರು ಬಳಸುವ ಔಷಧಿಗಳ ಪರಿಣಾಮಕಾರಿತ್ವಕ್ಕೆ ಅಡ್ಡಿಯಾಗಬಹುದು.

ಈ ಅಂಶಗಳಿಂದಾಗಿ, ವೈದ್ಯಕೀಯ ಉದ್ದೇಶಗಳಿಗಾಗಿ ಯಾವುದೇ ಪಾನೀಯ ಅಥವಾ ಔಷಧಿಗಳ ಸೇವನೆಯನ್ನು ಪ್ರಾರಂಭಿಸುವ ಮೊದಲು ಮುನ್ನೆಚ್ಚರಿಕೆಯನ್ನು ಅಭ್ಯಾಸ ಮಾಡುವುದು ಮತ್ತು ವೈದ್ಯರೊಂದಿಗೆ ಸಮಾಲೋಚಿಸುವುದು ಬಹಳ ಮುಖ್ಯ. ನೀಡಲಾದ ಅಂಶಗಳ ಪ್ರಕಾರ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಅಧಿಕ ರಕ್ತದೊತ್ತಡದ ರೋಗಿಗಳು ಹೆಚ್ಚು ಕೆಫೀನ್ ಸೇವಿಸುವುದನ್ನು ತಪ್ಪಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 9:56 am, Fri, 2 June 23