Women Health: ನೋಡಲು ದಪ್ಪಗಾಗಿದ್ದೀರಾ? ತಿಳಿಯಲೇಬೇಕಾದ ಕೆಲವೊಂದಿಷ್ಟು ಸಲಹೆಗಳನ್ನು ತಜ್ಞರು ನೀಡಿದ್ದಾರೆ

| Updated By: ganapathi bhat

Updated on: Jul 13, 2021 | 8:47 PM

ದೇಹವು ದಪ್ಪಗಿದೆ ಅಂದ ಮಾತ್ರಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಆದರೆ ದೇಹ ದಪ್ಪಗಾಗಿ ನಿಮ್ಮ ಆರೋಗ್ಯ ಕೆಡುತ್ತಿದೆ ಅಂದಾದಾಗಲೂ ನೀವು ನಿರ್ಲಕ್ಷ್ಯಿಸುತ್ತಿದ್ದರೆ ಆರೋಗ್ಯ ಕುಂಠಿತಗೊಳ್ಳುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

Women Health: ನೋಡಲು ದಪ್ಪಗಾಗಿದ್ದೀರಾ? ತಿಳಿಯಲೇಬೇಕಾದ ಕೆಲವೊಂದಿಷ್ಟು ಸಲಹೆಗಳನ್ನು ತಜ್ಞರು ನೀಡಿದ್ದಾರೆ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ದಪ್ಪಗಿರುವುದು ಅವರ ಮೂಲ ದೇಹವಾಗಿರಬಹುದು. ಅಂದರೆ ಅವರ ದೇಹ ಹುಟ್ಟಿದಾಗಿನಿಂದಲೂ ಹಾಗೆಯೇ ಇರಬಹುದು. ಇದು ಜೀನ್ಸ್​ ಮೂಲಕ ನಿರ್ಧಾರವಾಗುತ್ತದೆ. ನಮ್ಮ ಅಪ್ಪ-ಅಮ್ಮನಂತೆಯೇ ನಮ್ಮ ದೇಹ ರೂಪುಗೊಳ್ಳುವುದು ಸಾಮಾನ್ಯ ಸಂಗತಿ. ನೋಡಲು ದಪ್ಪಗಾಗಿ ಕಾಣಿಸುತ್ತಿರುವುದು ದೇಹದ ದುರ್ಬಲತೆಯಲ್ಲ. ಆದರೆ ಜಂಕ್​ಫುಡ್​ಗಳ ಸೇವನೆ, ಅಪೌಷ್ಟಿಕ ಆಹಾರದಿಂದ ಕೊಲೆಸ್ಟ್ರಾಲ್​ ಮಟ್ಟ ದೇಹದಲ್ಲಿ ಹೆಚ್ಚಾಗಿ ದೇಹ ಉಬ್ಬಿಕೊಳ್ಳುವುದು ಅನಾರೋಗ್ಯವನ್ನು ಉಂಟು ಮಾಡುತ್ತದೆ. ಅದರಲ್ಲಿಯು ಹೆಚ್ಚಾಗಿ ಈಗಿನ ಯುವತಿಯರಲ್ಲಿ (Women Health) ಬೊಜ್ಜು ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಿರುವಾಗ ದೇಹದಿಂದ ಬೊಜ್ಜಿನ(Obesity) ನಿವಾರಣೆ ಹೇಗೆ ಸಾಧ್ಯ? ಎಂಬುದರ ಕುರಿತಾಗಿ ತಜ್ಞರು ಮಾಹಿತಿ ನೀಡಿದ್ದಾರೆ.

ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಈಗಿನ ಯುವತಿಯಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚು ಕಾಡತೊಡಗಿದೆ. ಹೊರಗಿನ ಜಂಕ್​ಫುಡ್​ಗಳ ಸೇವನೆ, ಪೌಷ್ಠಿಕ ಆಹಾರದ ಕೊರತೆ ಅವರ ಆರೋಗ್ಯವನ್ನು ದುರ್ಬಲಗೊಳಿಸುತ್ತಿದೆ. ಹೀಗಿರುವಾಗ ತಮ್ಮ ಆರೋಗ್ಯದ ಕುರಿತಾಗಿ ಯುವತಿಯರು ಹೆಚ್ಚು ಗಮನವಹಿಸಲೇ ಬೇಕಾಗಿದೆ. ಈ ಕುರಿತಂತೆ ನ್ಯೂಟ್ರೀಷಿಯನಿಸ್ಟ್​ ತಜ್ಞರಾದ ವೀಣಾ ಭಟ್ ಶಿರಸಿ​ ಟಿವಿ9 ಕನ್ನಡದ ಜೊತೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಫಿಟ್ನೆಸ್​ಗಾಗಿ ಊಟಬಿಡುವುದಲ್ಲ!
ಈಗಿನ ಯುವತಿಯರಿಗೆ ಇದು ಅರ್ಥವೇ ಆಗುತ್ತಿಲ್ಲ. ಸುಂದರವಾಗಿ ಕಾಣಿಸಬೇಕು ಎಂಬುವುದು ಎಲ್ಲರ ಆಸೆ! ಇದು ಸರಿ. ಹೀಗಾಗಿಯೇ ವ್ಯಾಯಾಮ, ಯೋಗಾಸನಗಳಲ್ಲಿ ತೊಡಗುತ್ತಾರೆ, ಇದು ಒಳ್ಳೆಯ ವಿಚಾರವೇ. ಆದರೆ ಫಿಟ್ನೆಸ್​ ಮಾಡಬೇಕು ಎಂಬ ಕಾರಣಕ್ಕೆ ಊಟ ಬಿಡುವುದು, ಅನ್ನ ಸೇವಿಸದೇ ಇರುವುದು ಆರೋಗ್ಯಕ್ಕೆ ಹಾನಿ ತರುತ್ತವೆ. ದೇಹವು ದಪ್ಪಗಿದೆ ಅಂದ ಮಾತ್ರಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಆದರೆ ದೇಹ ದಪ್ಪಗಾಗಿ ನಿಮ್ಮ ಆರೋಗ್ಯ ಕೆಡುತ್ತಿದೆ ಅಂದಾದಾಗಲೂ ನೀವು ನಿರ್ಲಕ್ಷ್ಯಿಸುತ್ತಿದ್ದರೆ ಆರೋಗ್ಯ ಕುಂಠಿತಗೊಳ್ಳುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

ಯೋಗಾಭ್ಯಾಸ ಮಾಡಲೇಬೇಕು

ಕೆಲವರು ಫಿಟ್​ನೆಸ್​ ಕಾಪಾಡಿಕೊಳ್ಳಲು ಒಂದು ಹೊತ್ತಿನ ಊಟವನ್ನು ಬಿಡುತ್ತಾರೆ. ಹಾಗಂದ ಮಾತ್ರಕ್ಕೆ ನಿಮ್ಮ ದೇಹದಲ್ಲಿನ ಬೊಜ್ಜು ಕರಗುವುದಿಲ್ಲ. ಆಹಾರವನ್ನು ನಿಯಮಿತವಾಗಿ ಸೇವಿಸಿ. ಜತೆಗೆ ವ್ಯಾಯಾಮ ಅಭ್ಯಾಸವಿರಲೇಬೇಕು. ಪ್ರತಿನಿತ್ಯ ಯೋಗಾಸನ, ವಾಕಿಂಗ್​, ಜಾಂಗಿಂಗ್​ ಅಭ್ಯಾಸದಲ್ಲಿ ತೊಡಗಿಕೊಂಡರೆ ಮಾತ್ರ ನಿಮ್ಮ ದೇಹದಲ್ಲಿನ ಬೊಜ್ಜು ಕರಗುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ನಿಮ್ಮ ಆರೋಗ್ಯದ ಕುರಿತಾಗಿ ವೈದ್ಯರಲ್ಲಿ ಸಲಹೆ ಪಡೆಯಲೇಬೇಕು ಎಂಬುದು ತಜ್ಞರ ಅಭಿಪ್ರಾಯ.

ಈಗಿನ ದಿನಮಾನದ ಯುವತಿಯರು ಹೆಚ್ಚು ಮೊಬೈಲ್​ಗೆ ಅಂಟಿಕೊಂಡಿದ್ದಾರೆ. ದೇಹಕ್ಕೆ ಚಟುವಟಿಕೆಯೇ ಇಲ್ಲ. ಮೊದಲೆಲ್ಲಾ ಕ್ರೀಢಾಂಗಣದಲ್ಲಿ ಆಟವಾಡುವುದರಿಂದ ದೇಹ ಸದೃಢವಾಗುತ್ತಿತ್ತು. ಆದರೆ ಇದೀಗ ತಂತ್ರಜ್ಞಾನದ ಅಳವಡಿಕೆ ವಿಪರೀತವಾಗಿಬಿಟ್ಟಿದೆ. ಯಾವುದೇ ಒಂದು ತಂತ್ರಜ್ಞಾನವನ್ನು ಬೇಕಾದಷ್ಟಕ್ಕೇ ಬಳಸಿಕೊಳ್ಳಬೇಕೆ ವಿನಃ ಅತಿಯಾಗಿ ಬಳಸುವಿಕೆಯಿಂದ ಹಾನಿಯೇ ಹೆಚ್ಚು. ಆಹಾರದಲ್ಲಿಯೂ ಸಹ ಹಾಗೆಯೇ ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಹಾಗೆಯೇ ನಿಯಮಿತವಾದ ಆಹಾರವಿರಬೇಕು. ನಮ್ಮ ದೇಹ ಆಹಾರಕ್ಕೆ ಒಗ್ಗಿಕೊಳ್ಳುವಂತಿರಬೇಕು.

ಪೋಷಕರಿಗೆ ಸೂಚನೆ
ಚಿಕ್ಕವಯಸ್ಸಿನವರಿಗೂ ಸಹ ಬೊಜ್ಜು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಈಗಿನ ಮಕ್ಕಳಿಗೆ ಸುಸ್ತು ಎಂಬುದೇ ಆಗುವುದಿಲ್ಲ. ಮುಖ್ಯವಾಗಿ ಇದನ್ನು ಪೋಷಕರು ಅರಿಯಲೇಬೇಕು. ಮಕ್ಕಳು ಹೆಚ್ಚುಹೊತ್ತು ಆಟವಾಡಬೇಕು. ಆಗ ದೇಹ ಸದೃಢವಾಗುತ್ತದೆ. ಮಕ್ಕಳು ಗಟ್ಟಿಯಾಗುತ್ತಾರೆ. ಈಗಿನ ಪೋಷಕರು ಮಕ್ಕಳನ್ನು ಹೊರಗಡೆ ಆಟವಾಡಲು ಬಿಡುತ್ತಿಲ್ಲ. ಹೀಗಾಗಿಯೇ ಮಕ್ಕಳು ಮೊಬೈಲ್​ನಲ್ಲಿ ಮುಳುಗಿರುವುದು. ಇದು ಆರೋಗ್ಯಕ್ಕೆ ತುಂಬಾ ಹಾನಿ ತರುತ್ತದೆ ಎಂಬುದು ಎಚ್ಚರಿಕೆಯ ಮಾತು ಎನ್ನುತ್ತಾರೆ ತಜ್ಞರು.

ಬೊಜ್ಜು ಎಂದು ನಿರ್ಲಕ್ಷ್ಯ ಬೇಡ!
ಬೊಜ್ಜಿನ ಸಮಸ್ಯೆಯನ್ನು ಚಿಕ್ಕವಯಸ್ಸಿದ್ದಾಗಲೇ ನಿವಾರಿಸಿಕೊಳ್ಳುವುದು ಉತ್ತಮ. ಚಿಕ್ಕ ವಯಸ್ಸಿನಲ್ಲಿ ನಮ್ಮ ದೇಹ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಶಕ್ತವಾಗಿರುತ್ತದೆ. ಕೇವಲ ಬೊಜ್ಜು ಎಂಬ ನಿರ್ಲಕ್ಷ್ಯ ಮನೋಭಾವವಿರಬಹುದು. ಆದರೆ ಡಯಾಬಿಟಿಸ್​, ರಕ್ತದೊತ್ತಡ, ಸುಸ್ತು, ಶುಗರ್​ ಸಮಸ್ಯೆಗಳಿಗೆ ಇದೇ ಕಾರಣ. ಯುವತಿಯರು ಈಗಿನಿಂದಲೇ ನಿಮ್ಮ ಆರೋಗ್ಯದ ಕುರಿತಾಗಿ ಗಮನವಹಿಸಿದರೆ ನಿಮ್ಮ ಮುಂದಿನ ಜೀವನದಲ್ಲಿ ಆರೋಗ್ಯವಂತರಾಗಿರಬಹುದು ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ:

Women Health: ಟೈಟ್​ ಡ್ರೆಸ್​ ತೊಡುವುದು ಟ್ರೆಂಡ್​ ಆಗಿರಬಹುದು; ಆದರೆ ಧರಿಸುವ ಮುನ್ನ ಆರೋಗ್ಯದ ಬಗ್ಗೆಯೂ ಒಮ್ಮೆ ಯೋಚಿಸಿ

Women Health: ಬಂಜೆತನ ಸಮಸ್ಯೆಗೆ ಪರಿಹಾರವೇನು? ಗಮನಿಸಬೇಕಾದ ಅಂಶಗಳು ಇಲ್ಲಿದೆ