World Alzheimer’s Day 2025: ವಿಶ್ವ ಅಲ್ಝೈಮರ್ ದಿನದ ಇತಿಹಾಸ, ಮಹತ್ವ ತಿಳಿಯಿರಿ 

ದೇಹಕ್ಕೆ ವಯಸ್ಸು ಆಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ದೇಹವನ್ನು ಭಾದಿಸುತ್ತದೆ. ಬಿಪಿ, ಶುಗರ್, ಗಂಟು ನೋವಿನಿಂದ ಹಿಡಿದು ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾದ ವ್ಯಕ್ತಿಗಳಲ್ಲಿ ಈ ಮರೆವಿನ ಸಮಸ್ಯೆ ಸರ್ವೆ ಸಾಮಾನ್ಯ. ಜ್ಞಾಪಕ ಶಕ್ತಿ ಕುಂದುತ್ತಾ ಬರುವುದನ್ನೇ  ಅಲ್ಝೈಮರ್ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ವಿಶ್ವ ಅಲ್ಝೈಮರ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

World Alzheimer’s Day 2025: ವಿಶ್ವ ಅಲ್ಝೈಮರ್ ದಿನದ ಇತಿಹಾಸ, ಮಹತ್ವ ತಿಳಿಯಿರಿ 
ವಿಶ್ವ ಅಲ್ಝೈಮರ್ ದಿನ
Image Credit source: Pinterest

Updated on: Sep 21, 2025 | 10:24 AM

ಮರೆವು ವರವೇನೋ ನಿಜ, ಆದರೆ ಶಾಪವು ಆಗಿದೆ. ಬದುಕಿನ ಕಹಿ ಘಟನೆಗಳನ್ನು ಮರೆಯುವುದು ಅನಿವಾರ್ಯ. ಆದರೆ ಈ ಮರೆವು ಕಾಯಿಲೆಯಾಗಿ ಪರಿಣಮಿಸಿದರೆ ಹೇಗಿರಬಹುದು ಎಂಬುವುದನ್ನು ಯೋಚನೆ ಮಾಡಿದ್ದೀರಾ. ವಯಸ್ಸಾದವರಲ್ಲಿ ಈ ಮರೆವಿನ ಕಾಯಿಲೆ ಸಾಮಾನ್ಯವಾಗಿರುತ್ತದೆ. ಕಹಿ ಘಟನೆಗಳನ್ನು ಬಿಡಿ, ದೈನಂದಿನ ಬದುಕಿನ ಆಗುಹೋಗುಗಳನ್ನು ಮರೆತು ಬಿಡುತ್ತಾರೆ. ತಾವೆಲ್ಲಿದ್ದೇವೆ ಏನು ಮಾಡುತ್ತಿದ್ದೇವೆ ಎನ್ನುವುದರ ಪರಿವೇ ಇರಲ್ಲ, ಈ ಕಾಯಿಲೆಯ ಬಗ್ಗೆ  ಜಾಗೃತಿ ಮೂಡಿಸಲು ದಿನವನ್ನು ಮೀಸಲಿಡಲಾಗಿದ್ದು, ಅದುವೇ ವಿಶ್ವ ಅಲ್ಝೈಮರ್ ದಿನ (World Alzheimer’s Day).  ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ವಿಶ್ವ ಅಲ್ಝೈಮರ್ಸ್- ಡಿಮೆನ್ಶಿಯಾ ದಿನ ಆಚರಿಸಲಾಗುತ್ತಿದೆ.

ವಿಶ್ವ ಅಲ್ಝೈಮರ್ ದಿನದ ಇತಿಹಾಸವೇನು?

ಅಲ್ಝೈಮರ್ ದಿನ ಇತಿಹಾಸವು ಶತಮಾನಗಳಷ್ಟು ಹಳೆಯದು. ಜರ್ಮನ್‌ ಮನೋವೈದ್ಯ ಅಲೋಯಿಸ್‌ ಅಲ್ಝೈಮರ್ ಅವರು ಈ ರೀತಿಯ ಕಾಯಿಲೆಯನ್ನು ಮೊಟ್ಟ ಮೊದಲ ಬಾರಿಗೆ ಗುರುತಿಸಿದರು. 50 ವರ್ಷ ವಯಸ್ಸಿನ ಮಹಿಳೆಯೊಬ್ಬರಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಆದಾದ ಬಳಿಕ 1906ರಲ್ಲಿ ಈ ಕಾಯಿಲೆಯಿಂದ ಮಹಿಳೆಯೂ ಮೃತಪಟ್ಟರು. ಈ ಘಟನೆಯ ಬಳಿಕ ಈ ಕಾಯಿಲೆಯ ಜನರಿಗೆ ಅರಿವು ನೀಡುವ ಕೆಲಸಗಳು ನಡೆದವು. ಇದಾದ ಬಳಿಕ ಹಲವು ಪ್ರಕರಣಗಳು ಬೆಳಕಿಗೆ ಬಂದವು. ಮೊಟ್ಟ ಮೊದಲ ಬಾರಿಗೆ ಈ ರೀತಿ ಕಾಯಿಲೆಯನ್ನು ಪತ್ತೆ ಹಚ್ಚಿದ್ದ ಕಾರಣ, ಇದಕ್ಕೆ ಆ ವೈದ್ಯರ ಹೆಸರನ್ನೇ  ಇಡಲಾಯಿತು. ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ವಿಶ್ವ ಅಲ್ಝೈಮರ್  ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಅಲ್ಝೈಮರ್ ದಿನದ ಮಹತ್ವವೇನು?

ಮರೆವಿನ ಕಾಯಿಲೆಯಾದ ಅಲ್ಝೈಮರ್ ಬಗ್ಗೆ  ಜಾಗೃತಿ ಮೂಡಿಸುವುದು ಈ ದಿನದ ಮೂಲ ಉದ್ದೇಶ. ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ  ಅಲ್ಝೈಮರ್ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ನೀಡಿಸಬೇಕು. ಸುತ್ತಲಿನ ಪರಿಸರ  ಹಾಗೂ ಜೀವನ ಶೈಲಿಯನ್ನು ಸುಧಾರಿಸುವುದು ಕೂಡ ಈ ಕಾಯಿಲೆ ಕಾಣಿಸಿಕೊಂಡವರು ಚೇತರಿಸಿಕೊಳ್ಳುವಂತೆ ಮಾಡಬಹುದು. ಹೀಗಾಗಿ ಈ ಬಗ್ಗೆ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವುದು, ಈ ರೋಗದಿಂದ ಬಳಲುತ್ತಿರುವವರನ್ನು ನೋಡುವ ದೃಷ್ಟಿಕೋನ ಬದಲಾಯಿಸುವ ಉದ್ದೇಶದಿಂದ ಈ ದಿನವೂ ಮುಖ್ಯವಾಗಿದೆ.

ಇದನ್ನೂ ಓದಿ
ಯಾವುದೇ ಲಕ್ಷಣಗಳು ಕಂಡು ಬರದೆಯೇ ಜೀವಕ್ಕೆ ಅಪಾಯ ತರುತ್ತೆ ಈ ರೋಗಗಳು
ಮಳೆಗಾಲದಲ್ಲಿ ಶಿಲೀಂಧ್ರ ಸೋಂಕು, ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವುದೇಕೆ?
ದೇಹದಲ್ಲಿನ ಕಂಡುವರುವ ಈ ನೋವನ್ನು ಕಡೆಗಣಿಸುತ್ತೀರಾ? ಎಚ್ಚರ...
ಈ ಹಣ್ಣಿನ ಸಿಪ್ಪೆಯ ಚಹಾ ಹೊಟ್ಟೆ ಉಬ್ಬಿ ಅಜೀರ್ಣವಾಗುವುದನ್ನು ತಡೆಯುತ್ತೆ

ಅಲ್ಝೈಮರ್ ಕಾಯಿಲೆ ಎಂದರೇನು?

ಅಲ್ಝೈಮರ್ ಕಾಯಿಲೆ ಇದೊಂದು ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ವಯಸ್ಸಾದವರಲ್ಲಿ ಈ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಇದು ನೆನಪುಶಕ್ತಿ ಚಿಂತನೆ ಮತ್ತು ತಾರ್ಕಿಕ ಕೌಶಲ್ಯಗಳನ್ನು ಕ್ರಮೇಣವಾಗಿ ನಾಶ ಪಡಿಸುತ್ತದೆ. ಇದರಲ್ಲಿ ವ್ಯಕ್ತಿಯ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವು ಕುಂಠಿತಗೊಳ್ಳುತ್ತದೆ.

ಅಲ್ಝೈಮರ್ ಕಾಯಿಲೆಯ ಲಕ್ಷಣಗಳೇನು?

  • ನೆನಪಿನ ಶಕ್ತಿ ಕುಂದುವಿಕೆ
  • ದೈನಂದಿನ ಕೆಲಸ ಮಾಡುವಾಗ ತೊಡಕು
  • ವರ್ತನೆ ಹಾಗೂ ವ್ಯಕ್ತಿತ್ವದಲ್ಲಿ ಬದಲಾವಣೆಗಳು
  • ಸಂವಹನ ಕೌಶಲ್ಯದಲ್ಲಿ ತೊಂದರೆ

ಈ ರೋಗದ ಹಂತಗಳು ಹೇಗಿರುತ್ತದೆ?

ಈ ಕಾಯಿಲೆಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳು, ಆನುವಂಶಿಕ ಅಂಶಗಳು, ಆರೋಗ್ಯ ಹಾಗೂ ಜೀವನಶೈಲಿಯ ಕೆಲ ಅಂಶಗಳು ಒಟ್ಟಾಗಿ ಕೆಲಸ ಮಾಡುವುದರಿಂದ ಈ ರೀತಿ ಕಾಯಿಲೆ ಬರಬಹುದು. ಪ್ರಾರಂಭದಲ್ಲಿ ವ್ಯಕ್ತಿಯಲ್ಲಿ ಮರೆವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಾಲಾನಂತರದಲ್ಲಿ, ರೋಗಲಕ್ಷಣಗಳು ಹೆಚ್ಚು ತೀವ್ರಗೊಳ್ಳುತ್ತದೆ. ಕೊನೆಯ ಹಂತದಲ್ಲಿ ಮರೆವಿನ ಕೊರತೆಯೂ ತನ್ನ ದೈನಂದಿನ ಚಟುವಟಿಕೆಗೆ ಸಂಪೂರ್ಣವಾಗಿ ಅಡ್ಡಿಪಡಿಸುತ್ತದೆ. ವ್ಯಕ್ತಿಯೂ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಲು ಹಾಗೂ ತಮ್ಮ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲು ಕಷ್ಟ ಪಡುವಂತಾಗುತ್ತದೆ.

ಇದನ್ನೂ ಓದಿ:ಯಾವುದೇ ಲಕ್ಷಣಗಳು ಕಂಡು ಬರದೆಯೇ ಜೀವಕ್ಕೆ ಅಪಾಯ ತರುತ್ತೆ ಈ ರೋಗಗಳು

ಈ ಕಾಯಿಲೆಗೆ ಚಿಕಿತ್ಸೆ ಹೇಗೆ?

ವಯೋ ವೃದ್ಧರಲ್ಲಿ ಕಾಡುವ ಈ ಅಲ್ಝೈಮರ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಈ ರೋಗದ ಹಂತವನ್ನು ನಿಧಾನಗೊಳಿಸಲು ಹಾಗೂ ರೋಗ ಲಕ್ಷಣಗಳನ್ನು ನಿಯಂತ್ರಿಸಲು ಔಷಧಿಯನ್ನು ನೀಡಲಾಗುತ್ತದೆ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಸಾಮಾಜಿಕ ಚಟುವಟಿಕೆಗಳು  ಹಾಗೂ ಉತ್ತಮ ಪರಿಸರವೂ ಈ ಕಾಯಿಲೆಯನ್ನು ಸ್ವಲ್ಪ ಮಟ್ಟಿಗೆ ಗುಣಪಡಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 am, Sun, 21 September 25