AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Rose Day 2025: ಕ್ಯಾನ್ಸರ್‌ ರೋಗಿಗಗಳಿಗೆ ಮನೋಸ್ಥೈರ್ಯ ತುಂಬಲು ಮೀಸಲಿರುವ ರೋಸ್‌ ಡೇ ಬಗ್ಗೆ ತಿಳಿಯಿರಿ

ಕ್ಯಾನ್ಸರ್‌ ಎನ್ನುವಂತಹದ್ದು ಮಾನವರಿಗೆ ಬಾಧಿಸುವಂತಹ ಗಂಭೀರ ಕಾಯಿಲೆಗಳಲ್ಲಿ ಒಂದು. ಈ ಮಾರಣಾಂತಿಕ ರೋಗವು ವ್ಯಕ್ತಿಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕುಗ್ಗಿಸುತ್ತದೆ. ಹಾಗಾಗಿ ಕ್ಯಾನ್ಸರ್‌ ರೋಗಿಗಳಿಗೆ ಭರವಸೆ, ಮನೋಸ್ಥೈರ್ಯ ತುಂಬಲು, ಈ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್‌ 22 ರಂದು ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

World Rose Day 2025: ಕ್ಯಾನ್ಸರ್‌ ರೋಗಿಗಗಳಿಗೆ ಮನೋಸ್ಥೈರ್ಯ ತುಂಬಲು ಮೀಸಲಿರುವ ರೋಸ್‌ ಡೇ ಬಗ್ಗೆ ತಿಳಿಯಿರಿ
ವಿಶ್ವ ಗುಲಾಬಿ ದಿನImage Credit source: Google
ಮಾಲಾಶ್ರೀ ಅಂಚನ್​
|

Updated on: Sep 22, 2025 | 9:32 AM

Share

ಮಾನವನಿಗೆ ಬಾಧಿಸುವಂತಹ ಗಂಭೀರ ಕಾಯಿಲೆಗಳಲ್ಲಿ ಕ್ಯಾನ್ಸರ್‌ (cancer) ರೋಗವೂ ಒಂದು. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ 1 ಕೋಟಿ ಜನರು ಕ್ಯಾನ್ಸರ್ ರೋಗದಿಂದ ಸಾಯುತ್ತಿದ್ದಾರಂತೆ. ಇದೊಂದು ಗಂಭೀರ ಕಾಯಿಲೆಯಾಗಿರುವ ಕಾರಣದಿಂದ ಕ್ಯಾನ್ಸರ್‌ ಎಂದರೆ ಜೀವ, ಜೀವನದ ಅಂತ್ಯ ಎಂದು ಭಾವಿಸುತ್ತಾರೆ. ಹೀಗೆ ಈ ರೋಗವು ವ್ಯಕ್ತಿಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕುಗ್ಗಿಸುತ್ತದೆ. ಹಾಗಾಗಿ ಬದುಕುವ ಭರವಸೆ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳುವ ಮೂಲಕ ಈ ರೋಗದ ವಿರುದ್ಧ ಧೈರ್ಯವಾಗಿ ಹೋರಾಡಿ ಜಯಿಸಬಹುದು ಎಂದು ಕ್ಯಾನ್ಸರ್‌ ರೋಗಿಗಳಲ್ಲಿ ಮನೋಸ್ಥೈರ್ಯವನ್ನು ತುಂಬಲು ಪ್ರತಿವರ್ಷ ಸೆಪ್ಟೆಂಬರ್‌ 22 ರಂದು ವಿಶ್ವ ಗುಲಾಬಿ ದಿನವನ್ನು (World Rose Day) ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿಂದಿನ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವ ಗುಲಾಬಿ ದಿನದ ಇತಿಹಾಸವೇನು?

ಕ್ಯಾನ್ಸರ್ ನಿಂದ ಬಳಲುತ್ತಿರುವ ಜನರಿಗೆ ಬೆಂಬಲ, ಭರವಸೆ ನೀಡುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ 22 ರಂದು ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. ಇದು 1994 ರಿಂದ ಪ್ರಾರಂಭವಾದ  ಇದು ಜಾಗತಿಕ ಅಭಿಯಾನವಾಗಿದ್ದು, ಈ ದಿನದ ಆಚರಣೆಯನ್ನು ಕೆನಡಾಡದ ಮೆಲಿಂಡಾ ರೋಸ್‌ ಎಂಬ 12 ವರ್ಷ ವಯಸ್ಸಿನ ಪುಟ್ಟ ಬಾಲಕಿಯ ನೆನಪಿಗಾಗಿ ಪ್ರಾರಂಭಿಸಲಾಯಿತು. 1994 ರಲ್ಲಿ ಮೆಲಿಂಡಾ ರೋಸ್‌ ಆಸ್ಕಿನ್‌ ಟ್ಯೂಮರ್‌ ಎಂಬ ಮಾರಣಾಂತಿಂಕ ರಕ್ತದ ಕ್ಯಾನ್ಸರ್‌ಗೆ ತುತ್ತಾಗುತ್ತಾಳೆ. ಕ್ಯಾನ್ಸರ್‌ ಆಕೆಯನ್ನು ಭಾದಿಸಿದೆ ಎಂದು ಪತ್ತೆಯಾದ ನಂತರ ಈಕೆ ಕೇವಲ ಎರಡು ವಾರಗಳ ಕಾಲ ಮಾತ್ರ ಬದುಕುಳಿಯಲು ಸಾಧ್ಯ ಎಂದು ವೈದ್ಯರು ಹೇಳುತ್ತಾರೆ. ಆದರೆ ರೋಸ್‌ ಮಾತ್ರ ಬದುಕುವ ಛಲ ಮತ್ತು ಭರವಸೆಯಿಂದ ಆರು ತಿಂಗಳುಗಳ ಕಾಲ ಕ್ಯಾನ್ಸರ್‌ನಿಂದ ಹೋರಾಡಿ ಇಹಲೋಕ ತ್ಯಜಿಸಿದಳು. ಜೊತೆಗೆ ಈ ಆರು ತಿಂಗಳುಗಳ ಕಾಲ ಆಕೆ ತನಗೆ ಕ್ಯಾನ್ಸರ್‌ ರೋಗವಿದೆ ಎಂದು ಮಾನಸಿಕವಾಗಿ ಕುಗ್ಗದೆ ಸಕಾರಾತ್ಮಕ ಆಲೋಚನೆಗಳನ್ನು ಆಲೋಚನೆಗಳನ್ನು ಮೈಗೂಡಿಸಿಕೊಂಡು ಕಥೆ, ಕವನಗಳನ್ನು ಬರೆಯುತ್ತಿದ್ದಳು. ಇತರೆ ಕ್ಯಾನ್ಸರ್‌ ರೋಗಿಗಳ ಜೊತೆ ಸಮಯವನ್ನು ಕಳೆಯುತ್ತಾ ಅವರ ನೋವನ್ನು ಮರೆಸಲು ಅವರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಳು.

ಹೀಗೆ ಆರು ತಿಂಗಳುಗಳ ಕಾಲ ರೋಸ್‌ ಕ್ಯಾನ್ಸರ್‌ ವಿರುದ್ಧ ಹೋರಾಡಿದ ರೀತಿ, ಆಕೆಯ ಬದುಕುವ ಹುಮ್ಮಸ್ಸು ಕ್ಯಾನ್ಸರ್‌ ರೋಗಿಗಳಿಗೆ ಮಾದರಿಯಾಗುವಂತಿತ್ತು. ಹಾಗಾಗಿ ಈ ಧೈರ್ಯವಂತ ಬಾಲಕಿಯ ನೆನಪಿಗಾಗಿ ವಿಶ್ವ ರೋಸ್‌ ಡೇ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

ಇದನ್ನೂ ಓದಿ
Image
ವಿಶ್ವ ಅಲ್ಝೈಮರ್ ದಿನದ ಇತಿಹಾಸ,  ಮಹತ್ವ ತಿಳಿಯಿರಿ 
Image
ಆರಂಭಿಕ ಹಂತದಲ್ಲಿನ ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯನ್ನು ತಡೆಯುವುದೇಗೆ?
Image
ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ ಪ್ರಥಮ ಚಿಕಿತ್ಸೆ
Image
ಕ್ಯಾನ್ಸರ್ ವಿರುದ್ಧ ರಷ್ಯಾದಿಂದ ಲಸಿಕೆ ಸಿದ್ಧ

ವಿಶ್ವ ಗುಲಾಬಿ ದಿನದ ಆಚರಣೆಯ ಮಹತ್ವವೇನು?

  • ಇದು ಕ್ಯಾನ್ಸರ್‌ ರೋಗದ ವಿರುದ್ಧ ಹೋರಾಡುತ್ತಿರುವ ಜನರಲ್ಲಿ ಬದುಕಿನ ಭರವಸೆ ಮತ್ತು ಉತ್ಸಾಹವನ್ನು ಹರಡಲು ಮೀಸಲಾಗಿರುವ ದಿನವಾಗಿದೆ.
  • ಈ ದಿನದಂದು ಕ್ಯಾನ್ಸರ್‌ ರೋಗಿಗಳಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ಕ್ಯಾನ್ಸರ್‌ ರೋಗವು ಜೀವನದ ಅಂತ್ಯವಲ್ಲ ಎಂದು ಸಂದೇಶ ಸಾರಲಾಗುತ್ತದೆ ಮತ್ತು ಈ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡಿ ಜಯಿಸಬಹುದು ಎಂಬ ಭರವಸೆಯನ್ನು ಮೂಡಿಸಲಾಗುತ್ತದೆ.
  • ಈ ದಿನದಂದು ಜನರಿಗೆ ಕ್ಯಾನ್ಸರ್ ರೋಗ, ಅದರ ತಡೆಗಟ್ಟುವಿಕೆಗಾಗಿ ಅವರು ಅಳವಡಿಸಿಕೊಳ್ಳಬಹುದಾದ ಕ್ರಮಗಳನ್ನು ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಲು ಪ್ರೋತ್ಸಾಹಿಸಲಾಗುತ್ತದೆ.
  • ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಜನರನ್ನು ಪ್ರೇರೇಪಿಸಲು ಜನರು ಈ ದಿನದಂದು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಒಗ್ಗಟ್ಟಿನಿಂದ ನಾವು ಕಷ್ಟಗಳನ್ನು ಎದುರಿಸಬಹುದು ಎಂಬುದನ್ನು ಈ ದಿನ ತೋರಿಸುತ್ತದೆ.

ಇದನ್ನೂ ಓದಿ: ಆರಂಭಿಕ ಹಂತದಲ್ಲಿನ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು 5 ಮಾರ್ಗಗಳು

ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಗುಲಾಬಿಯನ್ನು ಪ್ರೀತಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ ಹಾಗಾಗಿ ವಿಶ್ವ ಗುಲಾಬಿ ದಿನದಂದು, ಕ್ಯಾನ್ಸರ್ ರೋಗಿಗಳಿಗೆ ಗುಲಾಬಿಗಳನ್ನು ನೀಡಲಾಗುತ್ತದೆ, ಜೊತೆಗೆ ಅವರು ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದರೂ, ನಾವೆಲ್ಲರೂ ಮಾನಸಿಕವಾಗಿ ಅವರೊಂದಿಗೆ ನಿಲ್ಲುತ್ತೇವೆ ಎಂಬ ಸಂದೇಶವನ್ನು ನೀಡಲಾಗುತ್ತದೆ. ಬದುಕಿನ ಭರವಸೆಯನ್ನು ತುಂಬಲಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ