ಈ ಹಣ್ಣನ್ನು ತಿಂದು ಸಿಪ್ಪೆ ಬಿಸಾಡಬೇಡಿ! ಇದರಿಂದ ಚಹಾ ಮಾಡಿ ಕುಡಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯೇ ಬರಲ್ಲ
ದಾಳಿಂಬೆ ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ವೈದ್ಯರು ಕೂಡ ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಿ, ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ, ನಾವು ಈ ಹಣ್ಣಿನೊಳಗಿನ ದಾಳಿಂಬೆ ಬೀಜವನ್ನು ತಿಂದು ಗಟ್ಟಿ ಗಟ್ಟಿಯಾಗಿರುವ ಈ ಸಿಪ್ಪೆಗಳನ್ನು ಎಸೆಯುತ್ತೇವೆ. ಆದರೆ ವಾಸ್ತವದಲ್ಲಿ ದಾಳಿಂಬೆ ಸಿಪ್ಪೆಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇವುಗಳನ್ನು ಬಳಸಿ ಚಹಾ ತಯಾರಿಸಿ ಕುಡಿಯುವುದರಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹಾಗಾದರೆ ಈ ಚಹಾವನ್ನು ಮನೆಯಲ್ಲಿಯೇ ಮಾಡುವುದು ಹೇಗೆ? ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದಾಳಿಂಬೆ (Pomegranate) ಬೀಜಗಳು ಹಲವಾರು ರೀತಿಯಲ್ಲಿ ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿವೆ ಎಂಬುದು ತಿಳಿದಿರುವ ವಿಚಾರ. ಆದರೆ ಅದರ ಸಿಪ್ಪೆಯಲ್ಲಿಯೂ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೀವು ನಂಬಲೇಬೇಕು. ದಾಳಿಂಬೆ ಸಿಪ್ಪೆಯಲ್ಲಿರುವ ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಈ ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಸರಿಯಾಗಿ ಉಪಯೋಗಿಸಿಕೊಂಡ್ರೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮಾತ್ರವಲ್ಲ ಈ ಸಿಪ್ಪೆಯಿಂದ ಚಹಾ (Pomegranate Peel Tea) ಮಾಡಿ ಕುಡಿದರೆ, ಇದರಲ್ಲಿರುವ ಆರೋಗ್ಯಕರ ಗುಣಗಳು ದುಪ್ಪಟ್ಟಾಗುತ್ತದೆ. ಈ ವಿಷಯ ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ಸತ್ಯ. ಹಾಗಾದರೆ ಈ ಚಹಾವನ್ನು ಮನೆಯಲ್ಲಿಯೇ ಮಾಡುವುದು ಹೇಗೆ? ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದಾಳಿಂಬೆ ಸಿಪ್ಪೆಯ ಚಹಾ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು:
- ಒಂದು ದಾಳಿಂಬೆ ಸಿಪ್ಪೆ (ಶುದ್ಧೀಕರಿಸಿದ)
- ಎರಡು ಕಪ್ ನೀರು
- ಜೇನುತುಪ್ಪ ಅಥವಾ ನಿಂಬೆ ರಸ (ರುಚಿಗೆ)
ತಯಾರಿಸುವ ವಿಧಾನ:
ಒಣಗಿಸಿಟ್ಟುಕೊಂಡ ದಾಳಿಂಬೆ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಪಾತ್ರೆಗೆ ಎರಡು ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನೀರು ಕುದಿಯಲು ಪ್ರಾರಂಭವಾದ ಮೇಲೆ, ಕತ್ತರಿಸಿ ಇಟ್ಟುಕೊಂಡ ದಾಳಿಂಬೆ ಸಿಪ್ಪೆಯನ್ನು ಹಾಕಿ. ಹತ್ತರಿಂದ, ಹದಿನೈದು ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ, ಚಹಾವನ್ನು ಒಂದು ಕಪ್‌ಗೆ ಸೋಸಿ. ಬೇಕಾದಲ್ಲಿ ರುಚಿಗೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
ಪ್ರಯೋಜನಗಳೇನು?
ಹೇರಳವಾದ ಉತ್ಕರ್ಷಣ ನಿರೋಧಕಗಳಿದೆ:
ದಾಳಿಂಬೆ ಸಿಪ್ಪೆಗಳು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಅವು ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ನಿವಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಒಳ್ಳೆಯದು:
ದಾಳಿಂಬೆ ಸಿಪ್ಪೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿವೆ. ಅವು ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿ ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.
ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಒಂದು ಬೌಲ್ ದಾಳಿಂಬೆ ಸೇವಿಸಿದ್ರೆ ರಕ್ತದಲ್ಲಿ ಈ ಬದಲಾವಣೆ ಖಂಡಿತ
ಚರ್ಮದ ಆರೋಗ್ಯಕ್ಕೆ ಒಳ್ಳೆಯದು:
ದಾಳಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಉರಿಯೂತ, ಮೊಡವೆ ಮತ್ತು ಚರ್ಮ ಬಹುಬೇಗ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಮಾತ್ರವಲ್ಲ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಚರ್ಮ ಯೌವನದಿಂದ ಕೂಡಿರುವಂತೆ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಸಹಕಾರಿ:
ದಾಳಿಂಬೆ ಸಿಪ್ಪೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ತೂಕ ಇಳಿಸಿಕೊಳ್ಳುವುದಕ್ಕೂ ಕೂಡ ಸಹಕಾರಿಯಾಗಿದೆ. ಇದು ನೈಸರ್ಗಿಕ ಮೂತ್ರವರ್ಧಕವಾಗಿದ್ದು ದೇಹದಿಂದ ಹೆಚ್ಚುವರಿ ದ್ರವಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








