
ಇಂದು ವಿಶ್ವ ರಕ್ತದಾನಿಗಳ ದಿನ. ಈ ಮಹತ್ತರ ದಿನದ ಅಂಗವಾಗಿ, ನಿರಂತರವಾಗಿ ರಕ್ತದಾನ ಮಾಡುವ ಮಹಾತ್ಮರಿಗೂ, ಇನ್ನೊಬ್ಬರನ್ನು ಪ್ರೇರೇಪಿಸುವ ನಿಜವಾದ ದಾನಶೀಲರಿಗೂ, ಜಾಗೃತಿ ಮೂಡಿಸುವ ಆರೋಗ್ಯ ಕಾರ್ಯಕರ್ತರಿಗೂ, ರಕ್ತ ನಿಧಿಗಳ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನೂ ಸೇರಿದಂತೆ ಎಲ್ಲರಿಗೂ ಹೃತ್ಪೂರ್ವಕ ಪ್ರಣಾಮಗಳು. ರಕ್ತದಾನ ಒಂದು ಸೇವೆ ಮಾತ್ರವಲ್ಲ – ಅದು ತ್ಯಾಗ, ಶಿಸ್ತು ಮತ್ತು ಮೌಲ್ಯಾಧಾರಿತ ಬದುಕಿನ ಸಂಕೇತ. ಈ ತ್ಯಾಗವು ಆರೋಗ್ಯದ ಕಂಬೀರುಗಳ ಮೇಲೆ ನಿಂತಿರಬೇಕು. ಯಾಕೆಂದರೆ, ಪ್ರತಿಯೊಬ್ಬ ದಾನಿಯೂ ತಮ್ಮದೇ ಆದ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನೂ ಹೊರುತ್ತಾರೆ.
ಇವೆಲ್ಲವನ್ನು ನಿತ್ಯ ಜೀವನದ ಭಾಗವನ್ನಾಗಿಸಿಕೊಳ್ಳುವುದು ಅಗತ್ಯ.
ಚತುರ್ಮಾಸ ವ್ರತ, ಒಂದು ತಿಂಗಳ ಉಪವಾಸದ ಆಚರಣೆ – ಇವು ಸಂಪ್ರದಾಯಗಳಲ್ಲಿ ಪ್ರಸಿದ್ಧ. ಆದರೆ ರಕ್ತದಾನವೆಂದರೆ 18ರಿಂದ 60 ವಯಸ್ಸಿನವರೆಗಿನ 42 ವರ್ಷದ ಪರೋಪಕಾರಿ ಶ್ರೇಯಸ್ವರೂಪಿ ವ್ರತ. ಆರೋಗ್ಯವಂತ ವ್ಯಕ್ತಿ 18ನೇ ವಯಸ್ಸಿನಲ್ಲಿ ರಕ್ತದಾನ ಆರಂಭಿಸಿ, ನಿರಂತರವಾಗಿ ಆರೈಕೆಯಿಂದ ಜೀವನ ನಡೆಸಿದರೆ, ಪುರುಷರು 150 ಬಾರಿ ಹಾಗೂ ಸ್ತ್ರೀಯರು 100 ಬಾರಿ ರಕ್ತದಾನ ಮಾಡಬಹುದಾಗಿದೆ.
ಇದನ್ನೂ ಓದಿ: ಶುಗರ್ ಇದ್ಯಾ? ಹಾಗಿದ್ರೆ ಈ ಸೊಪ್ಪನ್ನು ತಪ್ಪದೇ ಸೇವಿಸಿ
ಈ ಸೇವೆಗೆ ಪ್ರಶಸ್ತಿಗಳಿಲ್ಲ, ಭಿತ್ತಿಯಿಲ್ಲ, ಭದ್ರತೆಗಳಿಲ್ಲ. ಅದು ಸ್ವಯಂ ಪ್ರೇರಿತ ಮನಸ್ಸಿನ ವ್ರತ. ಆದ್ದರಿಂದ ರಕ್ತದಾನಿಗಳು ಹಾಗೂ ಅವರ ಕುಟುಂಬದ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸೇರಿದ್ದಾರೆಯೆಂದು ಕಾಲಕಾಲಕ್ಕೆ ಪರಿಶೀಲನೆ ಮಾಡಿಕೊಳ್ಳುವುದು ಸೂಕ್ತ.
ಲೇಖನ: ಡಾ. ರವಿಕಿರಣ ಪಟವರ್ಧನ
(ಆಯುರ್ವೇದ ವೈದ್ಯ, ಶಿರಸಿ)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ