ಕುಟುಂಬ ಸಮೇತ ರಕ್ತದಾನ ಮಾಡಿ ಮಾದರಿಯಾದ ದಂಪತಿ; ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಸಭಾಂಗಣ ನಿರ್ಮಾಣಕ್ಕೆ ರಕ್ತದಾನಿಗಳ ಮನವಿ

ಕುಟುಂಬ ಸಮೇತ ರಕ್ತದಾನ ಮಾಡಿ ಮಾದರಿಯಾದ ದಂಪತಿ; ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಸಭಾಂಗಣ ನಿರ್ಮಾಣಕ್ಕೆ ರಕ್ತದಾನಿಗಳ ಮನವಿ
ಕುಟುಂಬ ಸಮೇತ ರಕ್ತದಾನ

ಪ್ರಸ್ತುತ ದಿನಗಳಲ್ಲಿ ಕುಟುಂಬ ಸಮೇತ ರಕ್ತದಾನ ಮಾಡುವುದು ಮಾದರಿ ಮತ್ತು ಅಪರೂಪ ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಮತ್ತು ಸೆನೆಟ್ ಸದಸ್ಯ ಡಾ.ಪಿ.ವಿ.ಶ್ರೀಧರ್ ಹೇಳಿದರು.

TV9kannada Web Team

| Edited By: Ayesha Banu

May 22, 2022 | 5:29 PM

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಿನೂತನ ಕುಟುಂಬ ಸಮೇತ ರಕ್ತದಾನ ಎಂಬ ರಕ್ತದಾನ ಶಿಬಿರ ಮಾಡಿ ಮಾದರಿಯಾಗಿದೆ. ನೆಲದನಿ ಬಳಗದ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ದಂಪತಿ, ಇಡೀ ಕುಟುಂಬಸ್ಥರು ರಕ್ತದಾನ ಮಾಡಿದ್ದಾರೆ. ಹಾಗೂ ದಂಪತಿಯೊಬ್ಬರು ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹಿಸಿದ್ದಾರೆ. ರಕ್ತದಾನ ಮಹಾದಾನ, ರಕ್ತದ ಅವಶ್ಯಕತೆ ಹೆಚ್ಚಿದೆ‌. ಹಾಗಾಗಿ ಪ್ರತಿಯೊಬ್ಬರೂ ಸಹ ರಕ್ತದಾನ ಮಾಡುವ ಮೂಲಕ ಒಂದು ಜೀವವನ್ನ ಉಳಿಸಿ ಎಂದು ಸಂದೇಶ ಸಾರಿದ್ದಾರೆ.

ಲಂಕೇಶ್ ಎಂಬ ವ್ಯಕ್ತಿ ಕಳೆದ 20 ವರ್ಷಗಳಿಂದ ರಕ್ತದಾನ ಶಿಬಿರವನ್ನ ಆಯೋಜನೆ ಮಾಡಿ ಕೊಂಡು ಬಂದಿದ್ದಾರೆ. 1996 ರಲ್ಲಿ ಲಂಕೇಶ್ ತಂದೆಯವರಿಗೆ ಅನಾರೋಗ್ಯವಾಗಿತ್ತು. ಆಗ ರಕ್ತ ಸಿಗದೆ ಲಂಕೇಶ್ ತಂದೆ ಸಾವನ್ನಪ್ಪಿದ್ದರು. ಈ ಹಿನ್ನಲೆ ಪ್ರತಿ ವರ್ಷ ರಕ್ತದಾನ ಶಿಬಿರಿ ಆಯೋಜನೆ ಮಾಡುತ್ತಿದ್ದಾರೆ. ಲಂಕೇಶ್ ದಂಪತಿ ರಕ್ತದಾನ ಶಿಬಿರ ಆರಂಭ ಮಾಡಿದ್ದು ಪ್ರತಿಯೊಬ್ಬರು ರಕ್ತದಾನ ಮಾಡುವ‌ಂತೆ ಉತ್ತೇಜನ ನೀಡುತ್ತಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಕುಟುಂಬ ಸಮೇತ ರಕ್ತದಾನ ಮಾಡುವುದು ಮಾದರಿ ಮತ್ತು ಅಪರೂಪ ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಮತ್ತು ಸೆನೆಟ್ ಸದಸ್ಯ ಡಾ.ಪಿ.ವಿ.ಶ್ರೀಧರ್ ಹೇಳಿದರು. ನಗರದ ರಕ್ತನಿಧಿ ಕೇಂದ್ರದಲ್ಲಿ ನೆಲದನಿ ಬಳಗ ಮಂಗಲ, ಮಹಿಳಾ ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್.ಪದವಿ ಘಟಕ, ರಕ್ತನಿಧಿ ಕೇಂದ್ರ, ಕರ್ನಾಟಕ ಜನಶಕ್ತಿ ಸಂಘಟನೆ ಆಯೋಜಿಸಿದ್ದ 2ನೇ ವರ್ಷದ ಕುಟುಂಬ ಸಮೇತ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಲಂಕೇಶ್ ಮಂಗಲ ಮತ್ತು ನೆಲದನಿ ಬಳಗವು ವಿಶಿಷ್ಠತೆ ಮತ್ತು ವೈಶಿಷ್ಠತೆ ಸೇವಾಕಾರ್ಯಗಳನ್ನು ನೀಡುತ್ತಿದ್ದಾರೆ. ಮದುವೆ ಮನೆಗಳಲ್ಲಿ, ವಿವಾಹವಾರ್ಷಿಕೋತ್ಸವ, ಹುಟ್ಟುಹಬ್ಬದಿನ ಮತ್ತು ರಾಷ್ಟ ನಾಯಕ ಜನ್ಮದಿನಗಳಲ್ಲಿ ರಕ್ತದಾನ ಮಾಡುವುದು ವಿಭಿನ್ನವಾಗಿದೆ. ಇಂದು ಕುಟುಂಬ ಸಮೇತ ರಕ್ತದಾನ ಮಾಡುವ ಮೂಲಕ ಮಾದರಿ ಮತ್ತು ಅಪರೂಪಗೊಳಿಸಿದ್ದಾರೆ ಎಂದು ಪ್ರಶಂಶಿಸಿದರು. ಇದನ್ನೂ ಓದಿ: ಕರ್ನಾಟಕದ ಕರಾವಳಿ ದಂಡೆಯ ರಸ್ತೆ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ | ನಾರ್ವೇ ದೇಶದ ಪ್ರಜೆ ಟ್ವೀಟ್‌

ನಾವು ಕೂಡ ದಂಪತಿ ಸಮೇತ ರಕ್ತದಾನ ಮಾಡಿದ್ದೀವಿ, ಈ ವರ್ಷ ಸಾಧ್ಯವಾಗುತ್ತಿಲ್ಲ, ಕಾಲೇಜು ಶಿಬಿರದಲ್ಲಿ ರಕ್ತದಾನ ಮಾಡಿದ್ದೀವಿ. ಕುಟುಂಬ ಸಮೇತ ರಕ್ತದಾನ ಮಾಡುವುದು ಯುವಕರಿಗೆ ಪ್ರೇರಣೆಯಾಗುತ್ತದೆ ಎಲ್ಲರೂ ರಕ್ತದಾನಿಗಳಾಗೊಣ ಎಂದು ಮನವಿ ಮಾಡಿದರು. ರಕ್ತದಾನಕ್ಕೆ ಯುವ ಸಮುದಾಯ ಹಿನ್ನಡೆಯಲ್ಲಿದೆ, ನಾವು ರಕ್ತದಾನ ಮಾಡಿದ ಮೇಲೆ 130ಕ್ಕೂ ಹೆಚ್ಚು ರಕ್ತದಾನಿಗಳು ಮುಂದಾದರು, ಇಂತಹ ಸನ್ನಿವೇಶಗಳು ಹೇಳುಬೇಕೆನಿಸುತ್ತದೆ ಎಂದರು ನುಡಿದರು.

ಬಳಿಕ ಎಸ್.ಡಿ.ಜಯರಾಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಾದೇಶ್ ಮಾತನಾಡಿ, ಭಾರತದೇಶದಲ್ಲಿ 130ಕೋಟಿ ಜನಸಂಖ್ಯೆ ಇದ್ದು, ವಾರ್ಷಿಕ 5 ಕೋಟಿ ಯುನಿಟ್ ರಕ್ತದ ಅವಶ್ಯಕತೆ ಇದೆ, ಆದರೆ 2ಕೋಟಿ ಯುನಿಟ್ ಮಾತ್ರ ಸಂಗ್ರಹವಾಗುತ್ತಿದೆ. ರಕ್ತದಾನ ಮಾಡುವ ಮೂಲಕ ಯುವಜನತೆ ಮಾನವೀಯತೆ ಮೆರೆಯಬೇಕಿದೆ ಎಂದು ತಿಳಿಸಿದರು. 1942ರಲ್ಲಿ ರಕ್ತನಿಧಿ ಸಂಗ್ರಹಾಲಯ ಸ್ಥಾಪನೆಗೊಂಡು ಸರ್ಕಾರಿ ನೌಕರರು ರಕ್ತದಾನ ಮಾಡಿ ಇತಿಹಾಸ ಸೃಷ್ಟಿಸುತ್ತಾರೆ. ಅಲ್ಲಿಂದ ರಕ್ತನಿಧಿ ಕೇಂದ್ರಗಳು ಸ್ಥಾಪನೆಗೊಂಡವು. ಯುವಜನತೆ ಜಾಗೃತಗೊಂಡು ರಕ್ತದಾನ ಮಾಡಲು ಮುಂದಾದರು ಎಂದು ಸ್ಮರಿಸಿದರು.

ಮಂಡ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಕ್ತದಾನ ಮಾಡಲಿಕ್ಕೆ ಯಾರೂ ಹಿಂಜರಿಯಬಾರದು, ಆರೋಗ್ಯವಂತರು 18ವರ್ಷ ಮೇಲ್ಪಟ್ಟವರು ಪುರುಷ-ಮಹಿಳೆಯರು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಸಾಗಬೇಕು ಎಂದು ಮನವಿ ಮಾಡಿದರು. ಬಳಿಕ ಕುಟುಂಬ ಸಮೇತ ರಕ್ತದಾನ ಮಾಡಿ ಮಾತನಾಡಿದ ಲಂಕೇಶ್ ಮಂಗಲ ಅವರು, ನಾವು ಇದುವರೆಗೂ 60 ಬಾರಿ ರಕ್ತದಾನ ಮಾಡಿದ್ದೇನೆ. ನನ್ನ ಪತ್ನಿ ಸುನೀತ 3ನೇ ಬಾರಿ, ಕಾರ್ಯದರ್ಶಿ ಸಂತೆಕಸಲಗೆರೆ ಯೋಗೇಶ್ ಅವರು 43ನೇ ಬಾರಿ, ಚೈತ್ರ 5, ಬಳಗದ ಪದಾಧಿಕಾರಿ ಪ್ರತಾಪ 26 ಬಾರಿ ರಕ್ತದಾನ ಮಾಡಿದ್ದಾರೆ ಎಂದು ತಿಳಿಸಿದರು. ದಯಮಾಡಿ ಮಿಮ್ಸ್ನ ಆಡಳಿತ ಮಂಡಳಿಯುವ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಸಭಾಂಗಣ ನಿರ್ಮಿಸಲು ಮುಂದಾಗಬೇಕಿದೆ. ಇದ್ದ ಸಭಾಂಗಣವನ್ನು ಉಪಯೋಗಿಸಿಕೊಳ್ಳುತ್ತಿದ್ದೀರಿ, ಮುಂದಿನ ದಿನಗಳಲ್ಲಿ ರಕ್ತದಾನಿಗಳ ಉಪಯೋಗಕ್ಕಾಗಿ ಸಭಾಂಗಣ ಅತ್ಯವಶ್ಯವಿದೆ, ಬಾಡಿಗೆ ಕಟ್ಟಿ ಶಿಬಿರಗಳನ್ನು ಆಯೋಜಿಸಲಾಗುವುದಿಲ್ಲ, ಸಹಕಾರ ನೀಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಆಧುನಿಕ ಶಕುಂತಲಾ ಕಥನ: ದಮನಕ್ಕೊಳಗಾದ ಹೆಣ್ಣುಮಕ್ಕಳಿಗೆ ನನ್ನ ಜೀವನ ಸ್ಫೂರ್ತಿಯಾಗಲಿ

ಇದೇ ಸಂದರ್ಭದಲ್ಲಿ ಮಂಗಲ ಲಂಕೇಶ್ ಕುಟುಂಬ ಮತ್ತು ಸಂತೆಕಸಲಗೆರೆ ಯೋಗೇಶ್ ಕುಟಂಬ ಹಾಗೂ ಗೆಳೆಯರು ರಕ್ತದಾನ ಮಾಡಿ ಮಾನವೀಯತೆ ಮೆರದರು. ಎನ್.ಎಸ್.ಎಸ್.ಪದವಿ ಘಟಕದ ವಿದ್ಯಾರ್ಥಿನಿಯರು ಮತ್ತು ರಕ್ತದಾನಿಗಳು ರಕ್ತದಾನ ಮಾಡಿ ಪ್ರಮಾಣಪತ್ರ ಸ್ವೀಕರಿಸಿದರು. ಕೇಂದ್ರದ ಆವರಣದಲ್ಲಿ ತೆಂಗು ಮತ್ತು ಔಷಧಿ ಸಸ್ಯಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಮಿಮ್ಸ್ನ ರೋಗಲಕ್ಷಣ ಶಾಸ್ತ ವಿಭಾಗದ ಮುಖ್ಯಸ್ಥ ಡಾ.ಸಿದ್ದೇಗೌಡ, ರಕ್ತನಿಧಿಕೇಂದ್ರದ ಡಾ.ಯೋಗೇಂದ್ರ, ಪ್ರಸೂತಿ ಮತ್ತು ಸ್ತ್ರಿ ರೋಗ ತಜ್ಞ ಡಾ.ಯೋಗೇಂದ್ರಕುಮಾರ್, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ, ಉಪನ್ಯಾಸಕ ಡಾ.ಮನುಕುಮಾರ್, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಜಿ.ಪೂರ್ಣಿಮಾ, ಕಲಾವಿದೆ ಮಹಾಲಕ್ಷ್ಮಿ, ಅಧಿಕಾರಿ ಕೋಮಲ್‌ಕುಮಾರ್, ಕಲಾವಿದೆ ಕೋಮಲಾ, ನಂಜುಂಡ ಸೇರಿದಂತೆ ಹಲವರು ಇದ್ದರು.

Follow us on

Related Stories

Most Read Stories

Click on your DTH Provider to Add TV9 Kannada