World Chocolate Day: ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಬಯಸುತ್ತೀರಾ, ಡಾರ್ಕ್ ಚಾಕೊಲೇಟ್ ಸೇವನೆ ಮಾಡಿ

ಸಂಶೋಧನೆಗಳ ಪ್ರಕಾರ ಚಾಕೊಲೇಟ್ ಸೇವನೆ ಮಾಡಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಜೊತೆಗೆ ಡಾರ್ಕ್ ಚಾಕೊಲೇಟ್ ಸೇವನೆಯು ವ್ಯಕ್ತಿಯಲ್ಲಿ ಪ್ರೀತಿಯ ಭಾವನೆ ಹೆಚ್ಚಿಸುತ್ತದೆ ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ. ಹಾಗಾದರೆ ದಂಪತಿಗಳು ಯಾವಾಗ ಚಾಕೊಲೇಟ್ ಸೇವನೆ ಮಾಡಬೇಕು? ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

World Chocolate Day: ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಬಯಸುತ್ತೀರಾ, ಡಾರ್ಕ್ ಚಾಕೊಲೇಟ್ ಸೇವನೆ ಮಾಡಿ
Dark chocolate
Edited By:

Updated on: Jul 07, 2024 | 6:32 PM

ಚಾಕೊಲೇಟ್ ರುಚಿಯ ಜೊತೆಗೆ ಮನಸ್ಸಿಗೆ ಸಂತೋಷ ನೀಡುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜನರಿಗೆ ಚಾಕೊಲೇಟ್ ನಿಂದ ಮಾಡಿದ ಐಸ್ ಕ್ರೀಮ್ ಆಗಿರಲಿ ಅಥವಾ ಕೇಕ್ ಆಗಿರಲಿ, ಅವರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲಿಯೂ ಹುಡುಗಿಯರಿಗೆ ಚಾಕೊಲೇಟ್ ಎಂದರೆ ಸಾಮಾನ್ಯವಾಗಿ ತುಂಬಾ ಇಷ್ಟವಾಗಿರುತ್ತದೆ. ಇನ್ನು ಕೆಲವು ಸಂಶೋಧನೆಗಳ ಪ್ರಕಾರ ಚಾಕೊಲೇಟ್ ಸೇವನೆ ಮಾಡಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಜೊತೆಗೆ ಡಾರ್ಕ್ ಚಾಕೊಲೇಟ್ ಸೇವನೆಯು ವ್ಯಕ್ತಿಯಲ್ಲಿ ಪ್ರೀತಿಯ ಭಾವನೆ ಹೆಚ್ಚಿಸುತ್ತದೆ ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ. ಹಾಗಾದರೆ ದಂಪತಿಗಳು ಯಾವಾಗ ಚಾಕೊಲೇಟ್ ಸೇವನೆ ಮಾಡಬೇಕು? ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ:

ತಜ್ಞರು ಹೇಳುವ ಪ್ರಕಾರ ಚಾಕೊಲೇಟ್‌ನಲ್ಲಿ ಫೆನೈಲೆಥೈಲಮೈನ್ ಎಂಬ ರಾಸಾಯನಿಕವಿದ್ದು ಇದನ್ನು ಪ್ರೀತಿಯ ರಾಸಾಯನಿಕ ಅಥವಾ ಲವ್ ಕೆಮಿಕಲ್ ಎಂದೂ ಕರೆಯುತ್ತಾರೆ. ಹಾಗಾಗಿ ಇದರ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು. ಇನ್ನು ಮಹಿಳೆಯರು ಚಾಕೊಲೇಟ್ ಸೇವನೆ ಮಾಡುವುದರಿಂದ ಹೆಚ್ಚು ಸಂತೋಷವಾಗಿರುತ್ತಾರೆ. ಅದರಲ್ಲಿಯೂ ಲೈಂಗಿಕ ಕ್ರಿಯೆ ನಡೆಸುವ ಮೊದಲು ಚಾಕೊಲೇಟ್ ಸೇವನೆ ಮಾಡುವುದು ಒಳ್ಳೆಯದು, ಏಕೆಂದರೆ ಡಾರ್ಕ್ ಚಾಕೊಲೇಟ್ ಸೇವನೆ ಉತ್ತಮ ಪರಾಕಾಷ್ಠೆ ಪಡೆಯಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾಗಿ ಮಹಿಳೆಯರಿಗೆ ಮೂಡ್ ಬರಿಸಲು ಚಾಕೊಲೇಟ್ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಪ್ರತಿದಿನ ಚಾಕೊಲೇಟ್ ಸೇವನೆ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಕೆಫೀನ್ ಅಂಶವಿದ್ದು ಹೆಚ್ಚು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಇದನ್ನೂ ಓದಿ: ಹೋಮ್ ಮೇಡ್ ಚಾಕೊಲೇಟ್ ಸವಿಯಬೇಕಾದ್ರೆ ಈ ಸ್ಥಳಗಳಲ್ಲಿ ತಪ್ಪದೇ ಭೇಟಿ ನೀಡಿ

ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ:

ಪುರುಷರು ಸಂಭೋಗದ ಮೊದಲು ಚಾಕೊಲೇಟ್ ಸೇವನೆ ಮಾಡುವುದು ಕೂಡ ಒಳ್ಳೆಯದು, ಇದರಿಂದ ಅವರ ತ್ರಾಣ ಹೆಚ್ಚಾಗುವುದಲ್ಲದೆ ಹೆಚ್ಚು ಸಮಯದವರೆಗೆ ಸಂಭೋಗಿಸಬಹುದು ಎಂದು ಹೇಳಲಾಗುತ್ತದೆ. ಅಂದರೆ, ಚಾಕೊಲೇಟ್ ತಿನ್ನುವುದು ಪುರುಷರ ಲೈಂಗಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. ಹಾಗಾಗಿ ದಂಪತಿ ಲೈಂಗಿಕ ಕ್ರಿಯೆ ನಡೆಸುವ ಮೊದಲು ಚಾಕೊಲೇಟ್‌ ತಿನ್ನುವುದು ಒಳ್ಳೆಯದು. ಅಲ್ಲದೆ ಡಾರ್ಕ್ ಚಾಕೊಲೇಟ್ ಸೇವನೆ ಲೈಂಗಿಕ ಬಯಕೆಯನ್ನು ಹೆಚ್ಚಿಸುವುದಕ್ಕೂ ಸಹಕಾರಿಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ