World Chocolate Day 2024: ಮಗುವಿನ ಬೆಳವಣಿಗೆಗೆ ಡಾರ್ಕ್ ಚಾಕೊಲೇಟ್ ಉತ್ತಮವೇ, ತಜ್ಞರು ಹೇಳುವುದೇನು?

ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿದ್ದು, ನೀವು ಚಾಕೊಲೇಟ್ ತಿನ್ನುವುದು ಒಳ್ಳೆಯದಲ್ಲ ಎಂದುಕೊಂಡಿದ್ದರೆ ಆ ನಂಬಿಕೆಯನ್ನು ದೂರ ಮಾಡುವಂತಹ ಸುದ್ದಿ ಇಲ್ಲಿದೆ. ಹೌದು, ವಾಸ್ತವವದಲ್ಲಿ ಡಾರ್ಕ್ ಚಾಕೊಲೇಟ್ ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ ಅದರಲ್ಲಿಯೂ ಮಕ್ಕಳಿಗೆ ಈ ವಿಧದ ಚಾಕೊಲೇಟ್ ಕೊಡಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾ್ದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಮಕ್ಕಳಿಗೆ ಹೇಗೆ ಒಳ್ಳೆಯದು? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.

World Chocolate Day 2024: ಮಗುವಿನ ಬೆಳವಣಿಗೆಗೆ ಡಾರ್ಕ್ ಚಾಕೊಲೇಟ್ ಉತ್ತಮವೇ, ತಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 07, 2024 | 3:00 PM

ಮಕ್ಕಳಿಗೆ ತುಂಬಾ ಇಷ್ಟವಾಗುವ ಆಹಾರಗಳಲ್ಲಿ ಚಾಕೊಲೇಟ್ ಕೂಡ ಒಂದು. ಇದು ಒಂದು ರೀತಿ, ಅವರ ಕೋಪವನ್ನು ತಣಿಸುವ ಆಯುಧದಂತೆ. ಆದರೆ ಪೋಷಕರು ಮಕ್ಕಳಿಗೆ ಹೆಚ್ಚು ಚಾಕೊಲೇಟ್ ಕೊಡಲು ಭಯಪಡುತ್ತಾರೆ. ಇದರಿಂದ ಹಲ್ಲು ಹುಳುಕಾಗುವುದರ ಜೊತೆಗೆ ಇನ್ನಿತರ ಸಮಸ್ಯೆ ಉಂಟಾಗಬಹುದು ಎಂಬುದು ಪೋಷಕರ ಅಭಿಪ್ರಾಯವಾಗಿರುತ್ತದೆ. ಆದರೆ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿದ್ದು, ನೀವು ಚಾಕೊಲೇಟ್ ತಿನ್ನುವುದು ಒಳ್ಳೆಯದಲ್ಲ ಎಂದುಕೊಂಡಿದ್ದರೆ ಆ ನಂಬಿಕೆಯನ್ನು ದೂರ ಮಾಡುವಂತಹ ಸುದ್ದಿ ಇಲ್ಲಿದೆ. ಹೌದು, ವಾಸ್ತವವದಲ್ಲಿ ಡಾರ್ಕ್ ಚಾಕೊಲೇಟ್ ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ ಅದರಲ್ಲಿಯೂ ಮಕ್ಕಳಿಗೆ ಈ ವಿಧದ ಚಾಕೊಲೇಟ್ ಕೊಡಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಮಕ್ಕಳಿಗೆ ಹೇಗೆ ಒಳ್ಳೆಯದು? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.

*ಮಕ್ಕಳಿಗೆ ಡಾರ್ಕ್ ಚಾಕೊಲೇಟ್ ಹೆಚ್ಚು ಒಳ್ಳೆಯದು ಎನ್ನಲು ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಎಂದರೆ ಇವು ನೈಸರ್ಗಿಕವಾಗಿರುತ್ತವೆ ಹಾಗೂ ಇದರಲ್ಲಿ ಯಾವುದೇ ರೀತಿಯ ಸಕ್ಕರೆ ಅಂಶವಿರುವುದಿಲ್ಲ. ಹಾಗಾಗಿ ಇದನ್ನು ಯಾರು ಬೇಕಾದರೂ ಸೇವನೆ ಮಾಡಬಹುದು.

*ಉತ್ತಮವಾದ ಡಾರ್ಕ್ ಚಾಕಲೊಲೇಟ್ ಅನ್ನು ಮಕ್ಕಳಿಗೆ ನೀಡುವುದು ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಅವರ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ಡೋಪಮೈನ್, ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಾದ ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮಕ್ಕಳ ಒತ್ತಡವೂ ನಿವಾರಣೆಯಾಗುತ್ತದೆ.

*ಡಾರ್ಕ್ ಚಾಕೊಲೇಟ್ ನಲ್ಲಿ ಪೋಷಕಾಂಶ ಮತ್ತು ಖನಿಜಾಂಶಗಳು ಹೇರಳವಾಗಿರುತ್ತದೆ. ಅಲ್ಲದೆ ಇದು ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲ್ಲದೆ ಇದರಲ್ಲಿರುವ ಕಬ್ಬಿಣ, ಸತು, ಪೊಟ್ಯಾಸಿಯಮ್‌ಗಳು ದೇಹದ ಚಯಾಪಚಯ ಪ್ರಕ್ರಿಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

*ಡಾರ್ಕ್ ಚಾಕೊಲೇಟ್ ಮಕ್ಕಳ ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳ ಕಲಿಕಾ ಪ್ರಕ್ರಿಯೆಗೆ ಇದು ಸಹಕಾರಿಯಾಗುತ್ತದೆ.

ಇದನ್ನೂ ಓದಿ: ಹೋಮ್ ಮೇಡ್ ಚಾಕೊಲೇಟ್ ಸವಿಯಬೇಕಾದ್ರೆ ಈ ಸ್ಥಳಗಳಲ್ಲಿ ತಪ್ಪದೇ ಭೇಟಿ ನೀಡಿ

*ಡಾರ್ಕ್ ಚಾಕೊಲೇಟ್ ಅನ್ನು ಒಂದು ರೀತಿಯ ಎನರ್ಜಿ ಬೂಸ್ಟರ್ ಎಂದು ಕರೆಯಲಾಗುತ್ತದೆ. ಇದನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಶಕ್ತಿ ಹೆಚ್ಚುತ್ತದೆ ಜೊತೆಗೆ ದಿನಪೂರ್ತಿ ಮಕ್ಕಳು ಆಕ್ಟಿವ್ ಆಗಿ ಇರಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?