AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮಕ್ಕಳಿಗೆ ಬಿಸ್ಕೆಟ್ ನೀಡಬಹುದೇ? ಬಿಸ್ಕೆಟ್ ಸೇವನೆಯಿಂದಾಗುವ ಪರಿಣಾಮಗಳೇನು?

ಬಿಸ್ಕತ್ ತಿನ್ನುವ ಮಕ್ಕಳು ಸಿಹಿಗೆ ದಾಸರಾಗುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಸಕ್ಕರೆಯನ್ನು ಸೇರಿಸುವುದರಿಂದ ಮಕ್ಕಳು ಈ ಬಿಸ್ಕತ್ತುಗಳನ್ನು ಬಯಸುತ್ತಾರೆ. ಕೊಬ್ಬು, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕೃತಕ ಸಿಹಿಕಾರಕಗಳನ್ನು ಬಿಸ್ಕತ್‌ಗೆ ಸೇರಿಸುವುದರಿಂದ ಇದು ಮಗುವಿನ ಅನ್ನನಾಳದಲ್ಲಿ ಶಾಶ್ವತ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Health Tips: ಮಕ್ಕಳಿಗೆ ಬಿಸ್ಕೆಟ್ ನೀಡಬಹುದೇ? ಬಿಸ್ಕೆಟ್ ಸೇವನೆಯಿಂದಾಗುವ ಪರಿಣಾಮಗಳೇನು?
Side Effects Of Eating Biscuits
ಅಕ್ಷತಾ ವರ್ಕಾಡಿ
|

Updated on: Jul 07, 2024 | 7:47 PM

Share

ಮಕ್ಕಳಿಗೆ ಬಿಸ್ಕೆಟ್ ಕೊಡಬೇಕೆ ಎಂಬ ಪ್ರಶ್ನೆ ಪ್ರತಿ ಪೋಷಕರಲ್ಲೂ ಕಾಡಬಹುದು. ಆದರೆ ಬಿಸ್ಕತ್ ಮಕ್ಕಳಿಗೆ ಇಷ್ಟವಾದ ತಿಂಡಿ. ಆದರೆ ಬಿಸ್ಕತ್ ತಿನ್ನುವುದರಿಂದ ಮಕ್ಕಳಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಬಿಸ್ಕೆಟ್‌ಗೆ ಸೇರಿಸುವ ಪದಾರ್ಥಗಳು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಮತ್ತು ಯಾವುದೇ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ ಎಂದು ಅವರು ಹೇಳುತ್ತಾರೆ.

ಮಕ್ಕಳನ್ನು ಆಕರ್ಷಿಸಲು ಮಾರುಕಟ್ಟೆಯಲ್ಲಿ ವಿವಿಧ ರುಚಿಯ ಬಿಸ್ಕತ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಹಾಗೆ ಮಾರುವ ಬಿಸ್ಕೆಟ್ ನಲ್ಲಿರುವ ಪೌಷ್ಟಿಕಾಂಶ ನೋಡಿದರೆ ಅದು ಶೂನ್ಯ.ಕೊಬ್ಬು, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕೃತಕ ಸಿಹಿಕಾರಕಗಳನ್ನು ಬಿಸ್ಕತ್‌ಗೆ ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಗುವಿನ ಅನ್ನನಾಳದಲ್ಲಿ ಶಾಶ್ವತ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಬಿಸ್ಕತ್ತುಗಳ ತಯಾರಿಕೆಯಲ್ಲಿ ಬಳಸುವ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು ಸಂಸ್ಕರಿಸಲ್ಪಟ್ಟಿದೆ, ಆದ್ದರಿಂದ ಅದರ ಪೋಷಕಾಂಶಗಳನ್ನು ತೆಗೆದುಹಾಕಲಾಗುತ್ತದೆ. ಅಲ್ಲದೆ ಬಿಸ್ಕೆಟ್ ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಮೈದಾ, ಗ್ಲೂಕೋಸ್, ಯೀಸ್ಟ್, ಸೋಡಿಯಂ ಬೈಕಾರ್ಬನೇಟ್, ಸುವಾಸನೆ ಮತ್ತು ಬಿಸ್ಕತ್ತುಗಳಲ್ಲಿ ಇರುವ ವರ್ಣದ್ರವ್ಯಗಳು ಜೀರ್ಣಕಾರಿ ಅಸ್ವಸ್ಥತೆಗಳು ಮತ್ತು ಮಲಬದ್ಧತೆಗೆ ಕಾರಣವಾಗುತ್ತವೆ.

ಇದನ್ನೂ ಓದಿ: ಹೋಮ್ ಮೇಡ್ ಚಾಕೊಲೇಟ್ ಸವಿಯಬೇಕಾದ್ರೆ ಈ ಸ್ಥಳಗಳಲ್ಲಿ ತಪ್ಪದೇ ಭೇಟಿ ನೀಡಿ

ಬಿಸ್ಕತ್ ತಿನ್ನುವ ಮಕ್ಕಳು ತಮ್ಮಲ್ಲಿ ಅಡಗಿರುವ ಸಿಹಿಗೆ ದಾಸರಾಗುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಸಕ್ಕರೆಯನ್ನು ಸೇರಿಸುವುದರಿಂದ ಮಕ್ಕಳು ಈ ಬಿಸ್ಕತ್ತುಗಳನ್ನು ಬಯಸುತ್ತಾರೆ. ಬಿಸ್ಕೆಟ್ ನೀಡುವುದರಿಂದ ದೇಹದಲ್ಲಿರುವ ಒಳ್ಳೆಯ ಕೊಬ್ಬು ನಾಶವಾಗಿ ಕೆಟ್ಟ ಕೊಬ್ಬು ಹೆಚ್ಚುತ್ತದೆ. ಇದು ಅಂತಿಮವಾಗಿ ಮಕ್ಕಳಲ್ಲಿ ಮಧುಮೇಹ ಮತ್ತು ಬೊಜ್ಜು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ