ಮೊಟ್ಟೆ ಸಸ್ಯಾಹಾರಿಯಾ? ಮಾಂಸಾಹಾರಿಯಾ? ಎಂಬ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಆದರೆ, ಕೆಲವು ಸಸ್ಯಾಹಾರಿಗಳೂ ಕೂಡ ಮೊಟ್ಟೆಯನ್ನು ಸೇವನೆ ಮಾಡುತ್ತಾರೆ. ಮೊಟ್ಟೆಯಲ್ಲಿ ಹೇರಳವಾದ ಪ್ರೋಟೀನ್, ವಿಟಮಿನ್, ಖನಿಜಾಂಶಗಳಿವೆ. ಇವು ಮೊಟ್ಟೆಯನ್ನು ಅತ್ಯಂತ ಪೌಷ್ಟಿಕ ಆಹಾರವಾಗಿ ಮಾಡಿವೆ. ಡಯೆಟ್ ಮಾಡುವವರಿಗೆ, ಸೌಂದರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವವರಿಗೆ ಮೊಟ್ಟೆ ಅತ್ಯುತ್ತಮ ಆಹಾರ.
ಮೊಟ್ಟೆಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ. ಖನಿಜಗಳು, ಅಮೈನೋ ಆಮ್ಲಗಳು, ಸೆಲೆನಿಯಮ್, ರಂಜಕ, ಕೋಲೀನ್, ವಿಟಮಿನ್ ಬಿ 12, ಪ್ರೋಟೀನ್, ಕ್ಯಾಲೋರಿಯನ್ನು ಹೊಂದಿರುವ ಮೊಟ್ಟೆಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಹೃದಯದ ಆರೋಗ್ಯಕ್ಕೆ ಸಹಕಾರಿ:
ಮೊಟ್ಟೆಯನ್ನು ಸೇವಿಸಿದರೆ ಹೃದ್ರೋಗದ ಸಾಧ್ಯತೆ ಕಡಿಮೆಯಾಗುತ್ತದೆ. ಪ್ರಿಡಯಾಬಿಟಿಸ್ ಅಥವಾ ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರು ಸಹ ತೂಕ ಇಳಿಸಲು ಮೊಟ್ಟೆಯ ಸೇವನೆ ಮಾಡುತ್ತಾರೆ. ಇತ್ತೀಚಿನ ಚೀನೀ ಅಧ್ಯಯನದ ಪ್ರಕಾರ, ದಿನಕ್ಕೆ ಸುಮಾರು ಒಂದು ಮೊಟ್ಟೆಯನ್ನು ತಿನ್ನುವ ಜನರು ಹೃದ್ರೋಗಕ್ಕೀಡಾಗುವ ಸಾಧ್ಯತೆ ಮೊಟ್ಟೆ ತಿನ್ನದವರಿಗಿಂತ ಸುಮಾರು 20% ಕಡಿಮೆ
ಇದನ್ನೂ ಓದಿ: ನಿಮ್ಮ ಕಾಲುಗಳಲ್ಲಿನ ಈ 6 ಲಕ್ಷಣಗಳು ಅಧಿಕ ಕೊಲೆಸ್ಟ್ರಾಲ್ನ ಲಕ್ಷಣಗಳಾಗಿರಬಹುದು, ಎಚ್ಚರ!
ಬಲವಾದ ಸ್ನಾಯುಗಳು:
ಮೊಟ್ಟೆಗಳಲ್ಲಿನ ಪ್ರೋಟೀನ್ ಸ್ನಾಯು ಸೇರಿದಂತೆ ದೇಹದ ಅಂಗಾಂಶಗಳನ್ನು ನಿರ್ವಹಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ.
ಮೆದುಳಿನ ಆರೋಗ್ಯ:
ಮೊಟ್ಟೆಗಳು ಮೆದುಳು ಮತ್ತು ನರಮಂಡಲವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ.
ಶಕ್ತಿ ಉತ್ಪಾದನೆ:
ಮೊಟ್ಟೆ ದೇಹವು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ.
ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆ:
ಮೊಟ್ಟೆಯಲ್ಲಿರುವ ವಿಟಮಿನ್ ಎ, ವಿಟಮಿನ್ ಬಿ-12 ಮತ್ತು ಸೆಲೆನಿಯಮ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಪ್ರಮುಖವಾಗಿವೆ.
ಆರೋಗ್ಯಕರ ಗರ್ಭಧಾರಣೆಗೆ ಸಹಕಾರಿ:
ಮೊಟ್ಟೆಗಳು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಗರ್ಭಿಣಿಯರಿಗೆ ಅತ್ಯಂತ ಮುಖ್ಯವಾದುದು. ಇದು ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬಾಯಿಯ ದುರ್ವಾಸನೆಗೆ ಕಾರಣವೇನು? ಇದಕ್ಕೆ ಮನೆಮದ್ದುಗಳು ಯಾವುವು?
ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ:
ಮೊಟ್ಟೆಗಳಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ವಯೋಸಹಜ ಕುರುಡುತನಕ್ಕೆ ಪ್ರಮುಖ ಕಾರಣವಾದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿರುವ ಇತರ ಜೀವಸತ್ವಗಳು ಸಹ ಉತ್ತಮ ದೃಷ್ಟಿಯನ್ನು ಉತ್ತೇಜಿಸುತ್ತವೆ.
ತೂಕ ಇಳಿಸಲು ಸಹಕಾರಿ:
ಮೊಟ್ಟೆಗಳಲ್ಲಿರುವ ಪ್ರೊಟೀನ್ ಜನರು ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಅನುಭವ ನೀಡುತ್ತದೆ. ಇದು ಲಘು ಆಹಾರದ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಕ್ತಿಯ ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಉಪಯುಕ್ತ:
ಮೊಟ್ಟೆಯಲ್ಲಿರುವ ಕೆಲವು ಜೀವಸತ್ವಗಳು ಮತ್ತು ಖನಿಜಗಳು ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪ್ರೋಟೀನ್ ಚರ್ಮದ ಆರೋಗ್ಯಕ್ಕೆ ಸಹಕಾರಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ