
ಪ್ರತಿಯೊಬ್ಬರು ಆರೋಗ್ಯವಾಗಿರಬೇಕು, ಅದಕ್ಕಾಗಿ ನಮ್ಮನ್ನು ಪ್ರತಿದಿನ ಎಚ್ಚರಿಸಲೇಬೇಕು. ಕೆಲವೊಂದು ಬಾರಿ ನಮ್ಮ ದಿನ ಒತ್ತಡದಿಂದ ಆರೋಗ್ಯ ಕಡೆಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಇದರಲ್ಲಿ ಮಹಿಳೆಯರು, ಪುರುಷರು ಎಂಬ ಬೇಧ ಭಾವ ಇಲ್ಲ ಅದಕ್ಕಾಗಿ ಪ್ರತಿ ವರ್ಷ ನಮ್ಮನ್ನು ಎಚ್ಚರಿಸಲು ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು (World Health Day) ಆಚರಣೆ ಮಾಡಲಾಗುತ್ತದೆ. ಇಡಿ ಜಗತ್ತು ಒಗ್ಗೂಡಿ ಈ ದಿನವನ್ನು ಆರೋಗ್ಯವಾಗಿ ಆಚರಣೆ ಮಾಡುವುದರ ಜತೆಗೆ ನಮ್ಮ ದಿನದಲ್ಲಿ ಈ ಸಿಂಪಲ್ ಆರೋಗ್ಯ ಚಟುವಟಿಕೆಗಳನ್ನು ಆಚರಣೆ ಮಾಡುವುದು ಮುಖ್ಯವಾಗಿರುತ್ತದೆ ಹಾಗೂ ಅಳವಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.
ಪ್ರತಿ ವರ್ಷ WHO ಏಪ್ರಿಲ್ 7ರಂದು ದಿನವನ್ನು ಆಚರಣೆ ಮಾಡುತ್ತದೆ. ಒಂದು ವಿಷಯಗಳನ್ನು ಇಟ್ಟುಕೊಂಡು ಈ ದಿನವನ್ನು ಅದ್ಭುತವಾಗಿ ಆಚರಣೆ ಮಾಡುತ್ತದೆ. ಅದಕ್ಕಾಗಿ ಈ ಬಾರಿ ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯ. “ಆರೋಗ್ಯಕರ ಆರಂಭಗಳು, ಭರವಸೆಯ ಭವಿಷ್ಯಗಳು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡುತ್ತಿದೆ. ಈ ಬಾರಿ ಮಹಿಳೆಯರಿಗೆ ಹಾಗೂ ಶಿಶುಗಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ.
ಗರ್ಭಿಣಿಯರ ಆರೋಗ್ಯದ ಜತೆಗೆ ಅವರಿಗೆ ಹುಟ್ಟುವ ಮಕ್ಕಳ ಆರೋಗ್ಯದ ಹಾಗೂ ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಸರ್ಕಾರಗಳು ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಗತ್ತಿನಲ್ಲಿ ಗರ್ಭಿಣಿ ಮಹಿಳೆಯರ ಸಾವು ಹಾಗೂ ಶಿಶುಗಳ ಸಾವು ಹೆಚ್ಚಾಗಿದೆ. ಕೆಲವೊಂದು ದೇಶದಲ್ಲಿ ಈ ಕಾರಣದಿಂದಲ್ಲೇ ಜನಸಂಖ್ಯೆ ಕೂಡ ಕಡಿಮೆ ಆಗಿದೆ. ಇನ್ನು ನಮ್ಮ ಕರ್ನಾಟಕದಲ್ಲೂ ಗರ್ಭಿಣಿಯರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇದು ಸರ್ಕಾರದ ವೈಫಲ್ಯವೋ ಗೊತ್ತಿಲ್ಲ, ಆದರೆ ಗರ್ಭಿಣಿಯರ ಹಾಗೂ ಶಿಶುಗಳ ಆರೋಗ್ಯ ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಕರ್ನಾಟಕದ 97 ಐಸ್ ಕ್ರೀಮ್, ತಂಪು ಪಾನೀಯ ಘಟಕಗಳಲ್ಲಿ ಡಿಟರ್ಜೆಂಟ್ ಪೌಡರ್, ಫಾಸ್ಪರಿಕ್ ಆಸಿಡ್ ಬಳಕೆ
ಗರ್ಭಿಣಿಯರು ಪ್ರತಿದಿನ ತಮ್ಮ ಆಹಾರದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದಕ್ಕಾಗಿ ಪ್ರತಿದಿನ ಹೆಚ್ಚು ಊಟ ಮಾಡಬಾರದು. ಅಂದರೆ ಸ್ಥಿರವಾದ ಮಟ್ಟದಲ್ಲಿ ಆಹಾರ ಸೇವನೆ ಮಾಡುವುದು ಉತ್ತಮ. ಇದು ನಿಮ್ಮಲ್ಲಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಫೈಬರ್ ಭರಿತ ಆಹಾರಗಳನ್ನು ಸೇವನೆ ಮಾಡಬೇಕು ಇದು ನಿಮ್ಮ ಆರೋಗ್ಯಕ್ಕೂ ಹಾಗೂ ಮಗುವಿನ ಬೆಳವಣಿಗೂ ಉತ್ತಮವಾಗಿರುತ್ತದೆ, ಅದಕ್ಕಾಗಿ ನೀವು ಧಾನ್ಯ, ದ್ವಿದಳ, ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವನೆ ಮಾಡಬೇಕು. ಗರ್ಭಧಾರಣೆ ಸಮಯದಲ್ಲಿ ಇದು ಅಗತ್ಯವಾಗಿರುತ್ತದೆ. ಇದರ ಜತೆಗೆ ನಿಮ್ಮಲ್ಲಿ ಕಾಡುವ ಮಲಬದ್ಧತೆಯನ್ನು ತಡೆಯುತ್ತದೆ.
ಗರ್ಭಿಣಿಯರ ಮೂಳೆಗಳನ್ನು ಹಾಗೂ ಮಕ್ಕಳ ಬೆಳವಣಿಗೆಯನ್ನು ಆರೋಗ್ಯವಾಗಿಡಲು, ಡೈರಿ ಉತ್ಪನ್ನಗಳನ್ನು, ದ್ವಿದಳ ಧಾನ್ಯಗಳನ್ನು ಮೊಟ್ಟೆಯಂತಹ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಆಹಾರಗಳನ್ನು ಸೇವನೆ ಮಾಡಬೇಕು.
ಗರ್ಭಿಣಿಯರು ಹೆಚ್ಚು ನೀರು ಕುಡಿಯಬೇಕು, ಯಾಕೆಂದರೆ ನಿಮ್ಮ ದೇಹದಲ್ಲಿ ಸೇರಿರುವ ವಿಷಾಂಶಗಳನ್ನು ಹೊರ ಹಾಕುತ್ತದೆ. ಮೂತ್ರನಾಳದ ಸೋಂಕಿನಿಂದ ಅಪಾಯ ಕಡಿಮೆ ಮಾಡುತ್ತದೆ.
ಗರ್ಭಿಣಿಯರಿಗೆ ಹೊರಗಿನ ಆಹಾರ ತಿನ್ನಬೇಕು ಎಂಬ ಆಸೆಗಳು ಹೆಚ್ಚಿರುತ್ತದೆ. ಆದರೆ, ಇದು ಅಪಾಯಕಾರಿ, ಜಂಕ್ ಫುಡ್ಗಳಿಂದ ದೂರ ಇರಬೇಕು. ಎಣ್ಣೆಯುಕ್ತ, ಸಕ್ಕರೆ ಮತ್ತು ಖಾರದ ಆಹಾರಗಳಿಂದ ದೂರವಿರಿ. ಅತಿಯಾದ ಸಂಸ್ಕರಿಸಿದ ಆಹಾರಗಳು ಅನಗತ್ಯ ತೂಕ ಹೆಚ್ಚಾಗಬಹುದು.
ಕೆಲವೊಂದು ಕಡೆ ಮಗುವಿನ ಬೆಳವಣಿಗೆ ಗರ್ಭಿಣಿಯರಿಗೆ ಆಲ್ಕೋಹಾಲ್ ಸೇರಿಸಿದ ಆಹಾರಗಳನ್ನು ನೀಡುತ್ತಾರೆ. ಇನ್ನು ಇದಕ್ಕೆ ಪರ್ಯಾಯವಾಗಿ ತಂಗಿನ ನೀರು ಅಥವಾ ಮಜ್ಜಿಗೆಯನ್ನು ಸೇವನೆ ಮಾಡಿ.
ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಿ, ನೀವು ಸೇವನೆ ಮಾಡುವ ಆಹಾರದಿಂದ ಅಲರ್ಜಿ ಅಥವಾ ಅಸ್ವಸ್ಥತೆ ಉಂಟಾಗಬಹುದು, ಒಂದು ವೇಳೆ ಇಂತಹ ಸಮಸ್ಯೆ ಉಂಟಾದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Sun, 6 April 25