
ಇತ್ತೀಚೆಗಿನ ದಿನಗಳಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಮನುಷ್ಯನ ಜೀವಕ್ಕೆ ಕಂಟಕವಾಗಿದೆ. ನೀವು ಈ ಥಲಸ್ಸೆಮಿಯಾ ಕಾಯಿಲೆಯ ಬಗ್ಗೆ ಕೇಳಿರಬಹುದು. ಇದೊಂದು ಆನುವಂಶಿಕವಾಗಿ ಬರುವ ರಕ್ತದ ಕಾಯಿಲೆಯಾಗಿದ್ದು ತಂದೆ ತಾಯಿಯಿಂದ ಮಕ್ಕಳಿಗೆ ಹರಡುತ್ತವೆ. ಈ ರೋಗದ ಲಕ್ಷಣವೆಂದರೆ ಮಗುವಿನ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಸರಿಯಾಗಿ ಆಗದೇ ಇರುವುದು. ಈ ವೇಳೆಯಲ್ಲಿ ಜೀವಕೋಶಗಳ ಜೀವಿತಾವಧಿಯೂ ಬಹಳ ಕಡಿಮೆಯಾಗುತ್ತದೆ. ಈ ಕಾಯಿಲೆಯಿಂದ ಬಲಳುತ್ತಿರುವ ವ್ಯಕ್ತಿಗೆ 21 ದಿನಗಳ ನಂತರ ಕನಿಷ್ಠ ಒಂದು ಯೂನಿಟ್ ರಕ್ತವು ಬೇಕಾಗುತ್ತದೆ. ಈ ಕಾಯಿಲೆಗೆ ತುತ್ತಾಗುವ ಮಕ್ಕಳು ಬದುಕುವ ಸಾಧ್ಯತೆಯು ತೀರಾ ಕಡಿಮೆಯಾಗಿದೆ.
* ಅರೆನಿದ್ರಾವಸ್ಥೆ ಮತ್ತು ಆಯಾಸ
* ಎದೆ ನೋವು
* ಉಸಿರಾಟದ ತೊಂದರೆ
* ಬೆಳವಣಿಗೆಯಾಗದೇ ಇರುವುದು
* ತಲೆನೋವು
* ಕಾಮಾಲೆ
* ತೆಳುವಾದ ಚರ್ಮ
* ತಲೆ ಸುತ್ತುವಿಕೆ ಹಾಗೂ ಮೂರ್ಛೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ತೂಕ ಹೆಚ್ಚಳ ಹೃದ್ರೋಗಕ್ಕೆ ಕಾರಣವಾಗಬಹುದು ಎಚ್ಚರ!
ರಕ್ತಹೀನತೆ ತಪಾಸಣೆ ಥಲಸ್ಸೆಮಿಯಾ ವಾಹಕಗಳನ್ನು ಪತ್ತೆ ಮಾಡುತ್ತದೆ. ಅದಲ್ಲದೇ ಈ ಕಾಯಿಲೆಯ ಚಿಕಿತ್ಸೆಯು ಪರಿಸ್ಥಿತಿಯ ವಿಧ ಮತ್ತು ತೀವ್ರತೆಯನ್ನು ಅವಲಂಬಿಸಿದೆ. ಥಲಸ್ಸೆಮಿಯಾ ಮಕ್ಕಳಿಗೆ ಜೀವಿತಾವಧಿಯಲ್ಲಿ ಎರಡು ಮೂರು ವಾರಗಳಿಗೊಮ್ಮೆ ರಕ್ತ ವರ್ಗಾವಣೆಯನ್ನು ಮಾಡಲಾಗುತ್ತದೆ. ರೋಗದ ತೀವ್ರತೆಯ ಆಧಾರದ ಮೇಲೆ ಅಸ್ಥಿಮಜ್ಜೆ ಕಸಿಗಳು, ಜೀನ್ ಚಿಕಿತ್ಸೆ, ಜಿಂಟೆಗ್ಲೋ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ