Year End 2022: 2022ರಲ್ಲಿ ಬಳಕೆಯಾದ ಅತ್ಯಂತ ಜನಪ್ರಿಯ ಮನೆಮದ್ದುಗಳು ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 31, 2022 | 7:07 PM

ಶೀತಕ್ಕೆ ಗಿಡಮೂಲಿಕೆ ಚಹಾ, ತಲೆನೋವು ನಿವಾರಣೆಗೆ ತೈಲಗಳ ಮನೆ ಮದ್ದು ಪ್ರಕಾರಗಳನ್ನು ಬಳಸಿರಬಹುದು. ಅದು ನಿಮ್ಮ ಅಜ್ಜಿ ಅಥವಾ ನೀವು ಆನ್‍ಲೈನ್‍ನಲ್ಲಿ ಸರ್ಚ್ ಮಾಡುವ ಮೂಲಕ ತಿಳಿದುಕೊಂಡಿರಬಹುದು.

Year End 2022: 2022ರಲ್ಲಿ ಬಳಕೆಯಾದ ಅತ್ಯಂತ ಜನಪ್ರಿಯ ಮನೆಮದ್ದುಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಶೀತಕ್ಕೆ ಗಿಡಮೂಲಿಕೆ ಚಹಾ, ತಲೆನೋವು ನಿವಾರಣೆಗೆ ತೈಲಗಳ ಮನೆ ಮದ್ದು ಪ್ರಕಾರಗಳನ್ನು ಬಳಸಿರಬಹುದು. ಅದು ನಿಮ್ಮ ಅಜ್ಜಿ ಅಥವಾ ನೀವು ಆನ್‍ಲೈನ್‍ನಲ್ಲಿ ಸರ್ಚ್ ಮಾಡುವ ಮೂಲಕ ತಿಳಿದುಕೊಂಡಿರಬಹುದು. ಮನೆ ಮದ್ದು ಚಿಕಿತ್ಸೆಯು ಪರಿಣಾಮಕಾರಿಯೆ ಎಂಬುದು ಅಸ್ಪಷ್ಟವಾಗಿದೆ. ಇದು ಪ್ಲಸೀಬೊ ಪರಿಣಾಮವೇ ಅಥವಾ ದೇಹದಲ್ಲಿ ನಿಜವಾದ ಶಾರೀರಿಕ ಬದಲಾವಣೆಯೇ ಗೊತ್ತಿಲ್ಲ.

ಆದರೂ ದಶಕಗಳ ಸಂಶೋಧನೆಯು ಈ ಅನೇಕ ಪರಿಹಾರಗಳು ನಿಜವಾಗಿಯೂ ಪರಿಣಾಮಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ. ನಾವು ಮನೆಮದ್ದುಗಳನ್ನು ಅವಲಂಬಿಸಿರಲು ವಿವಿಧ ಕಾರಣಗಳಿವೆ. ಈ ಲೇಖನದಲ್ಲಿ ಈ ವರ್ಷ ಟ್ರೆಂಡಿಂಗ್ ಆಗಿರುವ ಕೆಲವು ಉತ್ತಮ ಮನೆಮದ್ದುಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಈ ವರ್ಷದ ಜನಪ್ರಿಯ ಮನೆಮದ್ದು:

ಜೇನು ತುಪ್ಪ

ಕೆಮ್ಮುಗೆ ಜೀನುತುಪ್ಪವು ತುಂಬಾ ಪರಿಣಾಮಕಾರಿಯಾಗಿದೆ. ಚಿಕ್ಕ ಮಕ್ಕಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಆದರೂ ಹೆಚ್ಚಾಗಿ ಇದನ್ನು ಮಕ್ಕಳಿಗೆ ನೀಡಬೇಡಿ ಏಕೆಂದರೆ ಕೆಲವೊಮ್ಮೆ ಫುಡ್ ಫಾಯಿಸನ್‍ನಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಪುದೀನಾ

ಪುದೀನಾವನ್ನು ನೂರಾರು ವರ್ಷಗಳಿಂದ ಆರೋಗ್ಯ ಸಹಾಯಕವಾಗಿ ಬಳಸಲಾಗುತ್ತಿದೆ. ಪುದೀನಾ ಎಣ್ಣೆಯು ತಲೆನೋವು ಮತ್ತು ಕೆರಳಿಸುವ ಕರುಳಿನ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಧೀರ್ಘಕಾಲದ ಕಾಯಿಲೆಯಾಗಿದ್ದು, ಅದು ಹೊಟ್ಟೆಯುಬ್ಬರ, ಸೆಳೆತ, ಗ್ಯಾಸ್, ಅತಿಸಾರ ಮತ್ತು ಮಲಬದ್ಧತೆಯನ್ನು ಉಂಟು ಮಾಡಬಹುದು. ಈ ಸಮಸ್ಯೆಗಳಿಗೆ ಪುದೀನಾ ಎಲೆಯು ತುಂಬಾನೇ ಪರಿಣಾಮಕಾರಿಯಾಗಿದೆ.

ಮೆಂತ್ಯೆ

ಮೆಂತ್ಯೆಯನ್ನು ಚಹಾದಲ್ಲಿ ಕುದಿಸಿ ಹಾಲುಣಿಸುವ ತಾಯಂದಿರಿಗೆ ಕೊಡುವುದರಿಂದ ಹಾಲು ಉತ್ಪಾದನೆಗೆ ಇದು ಸಹಾಯವಾಗುತ್ತದೆ. ಮೆಂತ್ಯೆಯು ನೀರಿನಲ್ಲಿ ಕರಗುವ ಫೈಬರ್ ಆಗಿದ್ದು, ಅತಿಸಾರದಿಂದ ಬಳಲುತ್ತಿರುವವರಿಗೆ ಮಲವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ನೀವು ಮಲಬದ್ಧತೆ ಹೊಂದಿದ್ದರೆ ಈ ಬೀಜಗಳನ್ನು ಬಳಕೆ ಮಾಡದಂತೆ ಸೂಚಿಸಲಾಗುತ್ತದೆ. ಮೆಂತ್ಯೆಯು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:Year End 2022: ಈ ವರ್ಷ ಜನರು ಕಲಿತ ಆರೋಗ್ಯ ಮತ್ತು ನೈರ್ಮಲ್ಯದ ಪಾಠಗಳು

ಶುಂಠಿ

ವಾಕರಿಕೆ ಮತ್ತು ವಾಂತಿಗೆ ಚಿಕಿತ್ಸೆ ನೀಡಲು ಶುಂಠಿಯು ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳುತ್ತದೆ. ಹೊಟ್ಟೆನೋವು, ಅತಿಸಾರ ಮತ್ತು ವಾಕರಿಕೆಯನ್ನು ಗುಣಪಡಿಸಲು ಏಷ್ಯಾದ ಔಷಧಗಳಲ್ಲಿ ಸಾವಿರಾರು ವರ್ಷಗಳಿಂದ ಇದನ್ನು ಬಳಸಲಾಗುತ್ತದೆ. ಇದು ಮುಟ್ಟಿನ ಸೆಳೆತವನ್ನು ಸಹ ಕಡಿಮೆ ಮಾಡುತ್ತದೆ ಎಂದು ಕೆಲವು ಪುರಾವೆಗಳು ಹೇಳುತ್ತದೆ. ಆದರೆ ಎಲ್ಲರಿಗೂ ಇದು ಪ್ರಯೋಜನವಾಗುವುದಿಲ್ಲ. ಇದು ಕೆಲವು ಜನರಲ್ಲಿ ಹೊಟ್ಟೆನೋವು, ಎದೆಯುರಿ, ಗ್ಯಾಸ್, ಅತಿಸಾರ ಮತ್ತು ಇತರ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ. ಮತ್ತು ಇತರ ಔಷಧಿಗಳ ಪರಿಣಾಮಕತ್ವವನ್ನು ಅಡ್ಡಿಪಡಿಸಬಹುದು. ಆದ್ದರಿಂದ ವೈದ್ಯರನ್ನು ಭೇಟಿ ಮಾಡಿ ನಂತರ ಅದನ್ನು ಬಳಸುವುದು ಉತ್ತಮವಾಗಿದೆ.

ಅರಶಿನ

4,000 ವರ್ಷಗಳ ಹಿಂದೆ ಅರಶಿನವನ್ನು ಆಯುರ್ವೇದ ಚಿಕಿತ್ಸೆಯ ಭಾಗವಾಗಿ ದಕ್ಷಿಣ ಏಷ್ಯಾದಲ್ಲಿ ಬಳಕೆಗೆ ಬಂದಿತು. ನೋವನ್ನು ಕಡಿಮೆ ಮಾಡಲು, ವಿಶೇಷವಾಗಿ ಉರಿಯೂತದಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಇದು ಸಹಾಯವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಸಂಧಿವಾತ ನೋವು ಹೊಂದಿರುವ ರೋಗಿಗಳು 50ಮಿಗ್ರಾಂ ಉರಿಯೂತದ ಔಷಧಿ ಡೊಕ್ಲೋಫೆನಾಕ್ ಸೋಡಿಯಂಗೆ ಹೋಲಿಸಿದರೆ 500ಮಿಲಿಗ್ರಾಂ ಅರಶಿನವನ್ನು ತೆಗೆದುಕೊಳ್ಳಲು ಶುರು ಮಾಡಿದ ನಂತರ ಕಡಿಮೆ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದೆ.

ಗ್ರೀನ್ ಟೀ

ಈ ಹಿತವಾದ ಪಾನೀಯವು ಉತ್ಕರ್ಷಣ ನಿರೋಧಕಗಳ ಅದ್ಭುತ ಮೂಲವಾಗಿದೆ. ಅದು ನಿಮ್ಮ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಮತ್ತು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಚರ್ಮ, ಸ್ತನ, ಶ್ವಾಸಕೋಶ ಮತ್ತು ಕರುಳಿನ ಕ್ಯಾನ್ಸರ್‍ನಂತಹ ಅಪಾಯಕಾರಿ ರೋಗ ಬರುವುದನ್ನು ತಡೆಗಟ್ಟುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ