Health Tips: ಮನೆಯಲ್ಲೇ ಇದೆ ಮದ್ದು; ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ

| Updated By: shruti hegde

Updated on: Jun 19, 2021 | 9:17 AM

ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್​ನ​ನ ವೈದ್ಯರು ನಾವು ಸೇವಿಸುವ ಆಹಾರ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಅದರಂತೆ ಭಾರತೀಯರು ಬಳಸುವ ವಿವಿಧ ರೀತಿಯ ಆಹಾರಗಳು ಬೆನ್ನು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Health Tips: ಮನೆಯಲ್ಲೇ ಇದೆ ಮದ್ದು; ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ
ಸಾಂದರ್ಭಿಕ ಚಿತ್ರ
Follow us on

ಆಧುನಿಕ ಯುಗದಲ್ಲಿ ಬಹುತೇಕ ಎಲ್ಲಾ ಉದ್ಯೋಗಗಳು ಕೂಡ ಬೆನ್ನಿನ ಮೇಲೆ ಹೆಚ್ಚು ಪರಿಣಾಮಕಾರಿಯಾಗಿವೆ. ಅದರಲ್ಲೂ ವರ್ಕ್​ ಫ್ರಮ್ ಹೋಮ್ ಜಾರಿಯಾದ ಮೇಲೆ ಇವುಗಳ ಪರಿಣಾಮ ಹೆಚ್ಚಾಗಿದ್ದು, ಹೆಚ್ಚಿನ ಜನರು ಬೆನ್ನು ನೋವಿನಿಂದಾಗಿ ಬಳಲುತ್ತಿದ್ದಾರೆ. ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಈ ನೋವಿಗೆ ಮುಖ್ಯ ಕಾರಣ. ಇದನ್ನು ಕಡಿಮೆ ಮಾಡಲು ವಿವಿಧ ಔಷಧಿಗಳನ್ನು ಬಳಸಲಾಗುತ್ತದೆ. ಆದರೆ ಈ ನೋವು ದಿನಗಳಿಂದ ವರ್ಷಕ್ಕೆ ತಿರುಗಿ ಸಂಕಷ್ಟಕ್ಕೆ ಗುರಿ ಮಾಡುತ್ತದೆ. ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್​ನ​ನ ವೈದ್ಯರು ನಾವು ಸೇವಿಸುವ ಆಹಾರ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಅದರಂತೆ ಭಾರತೀಯರು ಬಳಸುವ ವಿವಿಧ ರೀತಿಯ ಆಹಾರಗಳು ಬೆನ್ನು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಟ್ಯೂನಾ
ಟ್ಯೂನಾದಲ್ಲಿ ವಿವಿಧ ಖನಿಜಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಇದು ನಿರ್ವಿಶೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹದ ಇತರ ನೋವುಗಳ ಜೊತೆಗೆ ಉರಿಯೂತವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.

ಸ್ಯಾಮನ್ ಮೀನು
ಇದರಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಮತ್ತು ಜೀವಸತ್ವಗಳಿವೆ. ಇದು ವಿಶೇಷವಾಗಿ ಒಮೆಗಾ 3 ರಲ್ಲಿ ಸಮೃದ್ಧವಾಗಿದೆ. ಇದು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ಮೆಣಸು ಪುಡಿಯೊಂದಿಗೆ ಸ್ಯಾಮನ್ ಮೀನು ತೆಗೆದುಕೊಳ್ಳುವುದು ಉತ್ತಮ.

ಕ್ಯಾರೆಟ್
ಇದು ದೇಹಕ್ಕೆ ಉತ್ತಮವಾದ ಪೌಷ್ಟಿಕ ಆಹಾರವಾಗಿದೆ. ಇದು ಬೆನ್ನು ನೋವನ್ನು ಕಡಿಮೆ ಮಾಡುವುದಲ್ಲದೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕ್ಯಾರೆಟ್​ನಲ್ಲಿ ವಿಟಮಿನ್ ಮತ್ತು ಪೋಷಕಾಂಶಗಳು ಅಧಿಕವಾಗಿರುತ್ತವೆ, ಆದ್ದರಿಂದ ಇದನ್ನು ದೈನಂದಿನ ಆಹಾರದಲ್ಲಿ ತೆಗೆದುಕೊಳ್ಳುವುದು ಉತ್ತಮ.

ಗೆಣಸು
ಗೆಣಸು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆನ್ನು ನೋವನ್ನು ಕ್ರಮೇಣ ಕಡಿಮೆ ಮಾಡುವುದರ ಜತೆಗೆ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.

ನಟ್ಸ್
ನಟ್ಸ್ ರಕ್ತ ಪರಿಚಲನೆ ಸುಧಾರಿಸುತ್ತದೆ. ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ಉತ್ತಮ ಕೊಬ್ಬಿನಾಂಶವನ್ನು ಶೇಕಡಾವಾರು ಪ್ರಮಾಣದಲ್ಲಿ ಹೊಂದಿದೆ. ಬಾದಾಮಿ ಮತ್ತು ಗೋಡಂಬಿಯನ್ನು ಪ್ರತಿದಿನ ಸೇವಿಸುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.

ಗ್ರೀನ್ ಟೀ
ಗ್ರೀನ್ ಟೀ ತೂಕ ನಷ್ಟಕ್ಕೆ ಮಾತ್ರ ಕೆಲಸ ಮಾಡುತ್ತದೆ ಎಂದು ಭಾವಿಸಬೇಡಿ. ಇದು ಬೆನ್ನು ನೋವು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಗ್ರೀನ್ ಟೀಯ ವಿಶೇಷತೆಗಳು ಹಲವಾರು ಅಧ್ಯಯನಗಳಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ:

Jackfruit: ಹಲಸಿನ ಹಣ್ಣಿನ ಆರೋಗ್ಯಯುತ ಗುಣಗಳ ಬಗ್ಗೆ ತಿಳಿದರೆ ಒಂದು ಹಣ್ಣನ್ನೂ ಹಾಳು ಮಾಡುವುದಿಲ್ಲ

ಬಿಳಿ ಜಂಬೂ ಅಥವಾ ಪನ್ನೇರಳೆ ಹಣ್ಣು ರುಚಿಯಷ್ಟೇ ಆರೋಗ್ಯಕರ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣನ್ನು ಒಮ್ಮೆ ತಿಂದು ನೋಡಿ