ಸಾಮಾನ್ಯವಾಗಿ ನಾವು ತುಂಬಾ ನೋವಿಗೀಡಾದಾದ ಅಳುತ್ತೇವೆ. ಇನ್ನು ಕೆಲವರಿಗೆ ತುಂಬಾ ಖುಷಿಯಾದಾಗಲು ಕಣ್ಣಿನಿಂದ ನೀರು ಹೊರಬರುವುದುಂಟು. ಅದರಲ್ಲೂ ದುಖಃ ಇಮ್ಮಡಿಯಾದಾಗ ಕಣ್ಣಿನಿಂದ ಅತಿ ಹೆಚ್ಚು ನೀರು ಹೊರಬರುತ್ತದೆ. ಆದರೆ ಅಳುವುದರಿಂದ ಆರೋಗ್ಯಕರ ಉಪಯೋಗಗಳಿವೆ. ಕಣ್ಣಿನಿಂದ ಹೊರಬರುವ ನೀರು ನಮ್ಮ ಆರೋಗ್ಯದ ರಕ್ಷಣೆ ಮಾಡುತ್ತದೆ ಎನ್ನುವ ವಿಚಾರ ಎಷ್ಟು ಜನರಿಗೆ ತಿಳಿದಿದೆ ಹೇಳಿ. ಕಣ್ಣೀರಿನಿಂದ ಮನಸ್ಸು ಹಗುರವಾಗುತ್ತದೆ ಎನ್ನುವುದು ಅಥವಾ ದುಖಃ ಹೊರ ಹಾಕಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎನ್ನುವುದು ನಿಜ. ಅದರ ಜತೆಗೆ ಇನ್ನು ಅನೇಕ ಸಮಸ್ಯೆಗಳಿಗೆ ನಿವಾರಕವಾಗಿ ಕಣ್ಣೀರು ಹೊರಹಾಕುವ ಪ್ರಕ್ರಿಯೆ ಸಹಾಯ ಮಾಡುತ್ತದೆ. ಹಾಗಿದ್ದರೆ ಅಳುವುದು ದೇಹಕ್ಕೆ ಒಳ್ಳೆಯದೇ ಎಂದು ಹುಬ್ಬೇರಿಸುವವರಿಗೆ ಉತ್ತರ ಇಲ್ಲಿದೆ.
ಕಣ್ಣಿನ ಕಲ್ಮಶ ದೂರವಾಗುತ್ತದೆ
ಕಣ್ಣಿಗೆ ದೂಳು ಬಿದ್ದಾಗ ಸಾಮಾನ್ಯವಾಗಿ ಕಣ್ಣಿನಲ್ಲಿ ನೀರು ಬರುತ್ತದೆ. ಆಗ ಕಣ್ಣನ್ನು ಉಜ್ಜುವ ಅಭ್ಯಾಸ ನಿಮಗೆ ಇದ್ದರೆ ಬಿಟ್ಟುಬಿಡಿ. ಏಕೆಂದರೆ ಕಣ್ಣಿನಿಂದ ಹೊರಬರುವ ನೀರು ಕಣ್ಣುಗಳಲ್ಲಿನ ಧೂಳನ್ನು ಹೊರಗೆ ಹಾಕುತ್ತದೆ. ಜತೆಗೆ ಕಣ್ಣಿನಲ್ಲಿನ ಐಸೋಜೈಮ್ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ. ಒಟ್ಟಾರೆ ಕಣ್ಣಿನ ಕಲ್ಮಶವನ್ನು ಇದು ಹೊರಹಾಕುತ್ತದೆ.
ಬಿಪಿ ನಿಯಂತ್ರಿಸುತ್ತದೆ
ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಣ್ಣಿನಿಂದ ಹೊರಬರುವ ನೀರು ಸಹಾಯಕವಾಗಿದೆ. ಇದಕ್ಕೆ ಕಾರಣ ಅತಿಯಾದ ದುಖಃವನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡರೆ ಅಪಾಯ ಜಾಸ್ತಿ. ಹೀಗಾಗಿ ಅದನ್ನು ಹೊರಹಾಕುವುದು ಉತ್ತಮ. ಬಿಪಿ ಇದ್ದವರು ಅಳುವುದರಿಂದ ಬಿಪಿ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
ಖಿನ್ನತೆಯನ್ನು ನಿವಾರಿಸುತ್ತದೆ
ದೀರ್ಘಕಾಲದವರೆಗೆ ಅಳುವವರಲ್ಲಿ ಆಕ್ಸಿಟೋಸಿನ್ ಮತ್ತು ಇಂಡ್ರಾಫಿನ್ ನಂತಹ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದು ಉತ್ತಮ ರಾಸಾಯನಿಕವಾಗಿರುವುದರಿಂದ ಇದು ದೈಹಿಕ ಮತ್ತು ಮಾನಸಿಕ ಭಾವನೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಉಂಟುಮಾಡುತ್ತದೆ. ಆ ಮೂಲಕ ಖಿನ್ನತೆಯನ್ನು ನಿವಾರಿಸುತ್ತದೆ. ಮನಸ್ಸಿನ ಭಾರವಾದ ಭಾವನೆಯನ್ನು ಕಣ್ಣೀರು ದೂರ ಮಾಡುತ್ತದೆ.
ಒತ್ತಡ ನಿವಾರಣೆ
ಇತ್ತೀಚಿನ ಯುಗದಲ್ಲಿ ಕೆಲಸದ ಒತ್ತಡ ಅತಿಯಾಗಿರುತ್ತದೆ. ಸಂತೋಷವಾಗಿರಲೂ, ದುಖಃವನ್ನು ವ್ಯಕ್ತಪಡಿಸಲು ಸಹ ಅವಕಾಶ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಒತ್ತಡದ ಭಾವನೆ ಅತಿಯಾಗುತ್ತದೆ. ಆಗ ಮನಸ್ಪೂರ್ತಿಯಾಗಿ ಅತ್ತು ಬಿಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಜತೆಗೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುತ್ತದೆ.
ದೈಹಿಕ ನೋವನ್ನು ಕಡಿಮೆ ಮಾಡುತ್ತದೆ
ಕಣ್ಣೀರು ಕಣ್ಣಿಗೆ ಶಾಂತವಾಗಿರಲು ವ್ಯಾಯಾಮವಾಗಿ ಕಾರ್ಯನಿರ್ವಹಿಸುತ್ತವೆ. ಅಳುವುದು ಭಾವನಾತ್ಮಕ ಮತ್ತು ದೈಹಿಕ ನೋವನ್ನು ಕಡಿಮೆ ಮಾಡುತ್ತದೆ. ಜತೆಗೆ ಮನಸ್ಸಿನಲ್ಲಿನ ನೂರಾರು ಗೊಂದಲಗಳನ್ನು ದೂರ ಮಾಡಿ ಮನಸ್ಸು ಹಗುರವಾಗಲು ಕಣ್ಣೀರು ಸಹಾಯ ಮಾಡುತ್ತದೆ.
ಇದನ್ನೂ ಓದಿ:
ರಾತ್ರಿ ಊಟ ಮಾಡಿದ ಬಳಿಕ ಸ್ನಾನ ಮಾಡುವ ಅಭ್ಯಾಸ ಇದೆಯೇ? ಹಾಗಿದ್ದರೆ ಅದರಿಂದ ಉಂಟಾಗುವ ಸಮಸ್ಯೆ ಬಗ್ಗೆ ಗಮನಿಸಿ