Dance Benefits: ನೃತ್ಯ ಮಾಡುವುದು ಕೇವಲ ಮನರಂಜನೆಗಲ್ಲ; ಆರೋಗ್ಯಕರ ಬದಲಾವಣೆಯಲ್ಲೂ ಇದರ ಪಾತ್ರವಿದೆ ಗಮನಿಸಿ

| Updated By: preethi shettigar

Updated on: Dec 12, 2021 | 7:10 AM

ದೇಹದ ಬಹುತೇಕ ಎಲ್ಲಾ ಅಂಗಗಳು ನೃತ್ಯದಿಂದ ವ್ಯಾಯಮ ಪಡೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ಇದು ಮೆದುಳಿಗೆ ಚಿಕಿತ್ಸೆಯಾಗಿ ಕೂಡ ಕಾರ್ಯನಿರ್ವಹಿಸುತ್ತದೆ. ನೃತ್ಯ ಒತ್ತಡವನ್ನು ನಿವಾರಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.

Dance Benefits: ನೃತ್ಯ ಮಾಡುವುದು ಕೇವಲ ಮನರಂಜನೆಗಲ್ಲ; ಆರೋಗ್ಯಕರ ಬದಲಾವಣೆಯಲ್ಲೂ ಇದರ ಪಾತ್ರವಿದೆ ಗಮನಿಸಿ
ಸಾಂದರ್ಭಿಕ ಚಿತ್ರ
Follow us on

ನೃತ್ಯಾಭ್ಯಾಸ ಮಾಡುವುದು ಅನೇಕರಲ್ಲಿ ರೂಡಿ ಇದೆ. ಇದನ್ನು ಹೊರತುಪಡಿಸಿ ಪಾರ್ಟಿ ಇದ್ದಾಗ, ಸಂತೋಷದ ಸಂದರ್ಭದಲ್ಲಿ, ಫ್ಯಾಮಿಲಿ ಫಂಕ್ಷನ್ ಇದ್ದಾಗ ತುಂಬಾ ಖುಷಿಯಿಂದ ಕುಣಿಯುತ್ತೇವೆ. ಆದರೆ ನೃತ್ಯವು ನಿಮ್ಮ ಮನರಂಜನೆಯ ಸಾಧನ ಅಷ್ಟೇ ಅಲ್ಲ. ಇದು ಉತ್ತಮ ವ್ಯಾಯಾಮವಾಗಿದೆ. ನೃತ್ಯ (Dance) ನಿಮ್ಮ ದೇಹ ಮತ್ತು ಮನಸ್ಸು ಎರಡಕ್ಕೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ತಜ್ಞರ ಪ್ರಕಾರ, ಅರ್ಧ ಗಂಟೆ ನೃತ್ಯ ಮಾಡುವುದರಿಂದ 10,000 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ದೇಹದ ಬಹುತೇಕ ಎಲ್ಲಾ ಅಂಗಗಳು ನೃತ್ಯದಿಂದ ವ್ಯಾಯಮ ಪಡೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ಇದು ಮೆದುಳಿಗೆ ಚಿಕಿತ್ಸೆಯಾಗಿ ಕೂಡ ಕಾರ್ಯನಿರ್ವಹಿಸುತ್ತದೆ. ನೃತ್ಯ ಒತ್ತಡವನ್ನು ನಿವಾರಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.

ನೃತ್ಯದಿಂದ ಆಗುವ ಉಪಯೋಗಗಳು
ತೂಕ ನಷ್ಟ
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಅಥವಾ ನಿಮ್ಮ ದೇಹವನ್ನು ಫಿಟ್ ಆಗಿ ಇಡಲು ಬಯಸಿದರೆ, ನೃತ್ಯವು ಇದಕ್ಕೆ ಅತ್ಯುತ್ತಮ ಮಾಧ್ಯಮವಾಗಿದೆ. ನೃತ್ಯವು ನಿಮ್ಮ ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ ಮತ್ತು ನಿಮ್ಮ ದೇಹವನ್ನು ಟೋನ್ ಮಾಡುವ ಮೂಲಕ ನಿಮ್ಮನ್ನು ಸದಾ ಆರೋಗ್ಯವಾಗಿಡುವಂತೆ ಮಾಡುತ್ತದೆ.

ಸ್ನಾಯುಗಳು ಬಲಗೊಳ್ಳುತ್ತವೆ
ನೃತ್ಯವು ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೇಹದಲ್ಲಿ ನಮ್ಯತೆಯನ್ನು ತರುತ್ತದೆ. ಇದರಿಂದಾಗಿ ದೇಹದ ಯಾವುದೇ ಭಾಗದಲ್ಲಿ ಬಿಗಿತದ ಸಮಸ್ಯೆ ಇರುವುದಿಲ್ಲ.

ಶಾಸ್ತ್ರೀಯ ನೃತ್ಯವು ಕಣ್ಣುಗಳ ಆರೋಗ್ಯಕ್ಕೆ ಉತ್ತಮ
ನೃತ್ಯ ಮಾಡುವಾಗ ಅನೇಕ ರೀತಿಯ ಭಂಗಿಗಳನ್ನು ಮಾಡಲಾಗುತ್ತದೆ. ವಿಶೇಷವಾಗಿ ಕಥಕ್, ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯದಲ್ಲಿ ಕಣ್ಣುಗಳು ಪ್ರದಕ್ಷಿಣಾಕಾರವಾಗಿ ಮತ್ತು ವಿರೋಧಿ ಪ್ರದಕ್ಷಿಣಾಕಾರವಾಗಿ ತಿರುಗುತ್ತಿರುವಾಗ ಉಸಿರನ್ನು ದೀರ್ಘವಾಗಿ ಹಿಡಿದಿಟ್ಟುಕೊಳ್ಳುವುದು, ಉಸಿರು ಬಿಡುವುದು, ದೀರ್ಘವಾದ ಉಸಿರನ್ನು ತೆಗೆದುಕೊಳ್ಳುವುದು ಮುಂತಾದ ಹಲವು ಹಂತಗಳಿವೆ. ಈ ಹಂತಗಳು ವ್ಯಾಯಾಮವಾಗಿ ಕಾರ್ಯನಿರ್ವಹಿಸುತ್ತವೆ. ಇದು ಉಸಿರಾಟದ ಕಾಯಿಲೆಗಳು ಮತ್ತು ಕಣ್ಣಿನ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಅದೇ ಸಮಯದಲ್ಲಿ, ಪಾದಗಳು ನಿರಂತರವಾಗಿ ಲಯದ ಪ್ರಕಾರ ಚಲಿಸುತ್ತವೆ. ಇದರಿಂದಾಗಿ ಕೀಲುಗಳಲ್ಲಿ ನೋವಿನ ಸಮಸ್ಯೆ ಇರುವುದಿಲ್ಲ ಮತ್ತು ಕಾಲುಗಳಲ್ಲಿ ವಕ್ರತೆ ಬರುವುದಿಲ್ಲ.

ಖಿನ್ನತೆ ದೂರವಾಗುತ್ತದೆ
ನೃತ್ಯದ ಬಗ್ಗೆ ಒಲವು ಇರುವವರಲ್ಲಿ ಖಿನ್ನತೆ ದೂರವಾಗುತ್ತದೆ. ನೃತ್ಯವು ವ್ಯಕ್ತಿಯನ್ನು ರಂಜಿಸುತ್ತದೆ. ಆ ಮೂಲಕ ಜೀವನದಲ್ಲಿ ಒಂಟಿತನವನ್ನು ಹೋಗಲಾಡಿಸುತ್ತದೆ. ನೃತ್ಯ ಮಾಡುವ ವ್ಯಕ್ತಿಯು ಸಂತೋಷವಾಗಿರುತ್ತಾನೆ. ಇದರಿಂದಾಗಿ ಖಿನ್ನತೆ ಮತ್ತು ಒತ್ತಡದಿಂದ ಮುಕ್ತವಾಗಬಹುದು.

ಬಿಪಿ ಸಮಸ್ಯೆಯೂ ದೂರವಾಗುತ್ತದೆ
ಅಧಿಕ ಬಿಪಿಗೆ ಒತ್ತಡವೇ ಕಾರಣ ಎಂದು ನಂಬಲಾಗಿದೆ. ಆದರೆ ನೃತ್ಯವು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ನೃತ್ಯ ಮಾಡುವುದರಿಂದ ಅಧಿಕ ಬಿಪಿ ಸಮಸ್ಯೆಯು ದೂರವಾಗುತ್ತದೆ. ಅದೇ ಸಮಯದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಹೃದಯದ ಆರೋಗ್ಯವನ್ನು ಇದು ಕಾಪಾಡುತ್ತದೆ.

ಇದನ್ನೂ ಓದಿ:
ಕರ್ಪೂರ ಆರತಿ ಬೆಳಗಲು ಮಾತ್ರ ಅಲ್ಲ; ದೈಹಿಕ ಮತ್ತು ಮಾನಸಿಕ ಸಮಸ್ಯೆಯ ನಿವಾರಣೆಯಲ್ಲಿ ಇದರ ಪಾತ್ರ ಏನು ತಿಳಿಯಿರಿ

ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ