ಪಿಸ್ತಾ ದೇಹವನ್ನು ಸೋಂಕಿನಿಂದ ರಕ್ಷಿಸುವುದರ ಜೊತೆಗೆ ನಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಪಿಸ್ತಾ ಫೈಬರ್, ಕಾರ್ಬೋಹೈಡ್ರೇಟ್, ಅಮೈನೋ ಆಸಿಡ್, ವಿಟಮಿನ್ ಎ, ಕೆ, ಸಿ, ಬಿ -6, ಡಿ, ಇ, ಪ್ರೋಟೀನ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಫೋಲೇಟ್ ಅಂಶಗಳನ್ನು ಒಳಗೊಂಡಿದೆ. ಆಹಾರದಲ್ಲಿ ಇದನ್ನು ಸೇರಿಸುವುದರಿಂದ ದೇಹವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಒಮ್ಮೆಗೆ ಹೆಚ್ಚು ಹಸಿವಾಗಿದ್ದರೆ ಪಿಸ್ತಾವನ್ನು ಸೇವಿಸಬಹುದು ಅಥವಾ ಬೆಳಗಿನ ಉಪಹಾರದ ಜತೆಗೆ ಪಿಸ್ತಾಗಳನ್ನು ತಿನ್ನಬಹುದು. ಪಿಸ್ತಾ(Pista) ತಿನ್ನುವುದರಿಂದ ಆಗುವ ಈ ಐದು ಪ್ರಯೋಜನಗಳ ಬಗ್ಗೆ ಗಮನಹರಿಸುವುದು ಸೂಕ್ತ.
1. ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ
ಇತ್ತೀಚಿನ ದಿನಗಳಲ್ಲಿ ಮರೆವು ತುಂಬಾ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಕಡಿಮೆ ಮಾಡಲು ಪಿಸ್ತಾ ಸೇವಿಸುವುದು ಸೂಕ್ತ. ಇದು ಬಹಳಷ್ಟು ಖನಿಜಗಳನ್ನು ಹೊಂದಿರುತ್ತದೆ. ಇವು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಪಿಸ್ತಾ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
2. ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಪಿಸ್ತಾ ತಿನ್ನುವುದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ 4 ರಿಂದ 5 ಪಿಸ್ತಾಗಳನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೂರವಾಗುತ್ತದೆ. ಅಲ್ಲದೆ ಹೃದಯವನ್ನು ಎಲ್ಲಾ ಅಪಾಯಗಳಿಂದ ಇದು ರಕ್ಷಿಸುತ್ತದೆ. ಅದಕ್ಕಾಗಿಯೇ ಪಿಸ್ತಾವನ್ನು ಹೃದಯಕ್ಕೆ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗಿದೆ.
3. ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ
ಪಿಸ್ತಾ ತಿನ್ನುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯಕ ಎಂದು ಪರಿಗಣಿಸಲಾಗುವ ಪಿಸ್ತಾದಲ್ಲಿ ಕಾರ್ಸಿನೋಜೆನಿಕ್ ವಿರೋಧಿ ಅಂಶಗಳು ಕಂಡುಬರುತ್ತವೆ. ಇವು ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ.
4. ಮೂಳೆಗಳನ್ನು ಬಲಪಡಿಸುತ್ತದೆ
ಬಲವಾದ ಮೂಳೆಗಳಿಗೆ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅಗತ್ಯವಿದೆ. ಈ ಎರಡೂ ಅಂಶಗಳು ಪಿಸ್ತಾಗಳಲ್ಲಿ ಇರುತ್ತವೆ. ಇದರ ದೈನಂದಿನ ಸೇವನೆಯು ಮೂಳೆಗಳನ್ನು ಬಲಪಡಿಸುತ್ತದೆ. ಮೂಳೆಗಳಿಗೆ ಸಂಬಂಧಿಸಿದ ಎಲ್ಲಾ ರೋಗಗಳಿಂದ ಪಿಸ್ತಾ ಪರಿಹಾರ ನೀಡುತ್ತದೆ.
5. ಕಣ್ಣಿನ ಆರೋಗ್ಯಕ್ಕೆ ಉತ್ತಮ
ಕಣ್ಣುಗಳು ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಇವುಗಳ ಮೂಲಕವೇ ನಾವು ಜಗತ್ತನ್ನು ನೋಡುತ್ತೇವೆ ಆದ್ದರಿಂದ ಈ ಬಗ್ಗೆ ಹೆಚ್ಚು ಗಮನಹರಿಸುವುದು ಮತ್ತು ಇದನ್ನು ಆರೋಗ್ಯವಾಗಿರಿಸುವುದು ಮುಖ್ಯ. ಪಿಸ್ತಾದಲ್ಲಿ ವಿಟಮಿನ್ ಎ ಮತ್ತು ಇ ಇರುವುದರಿಂದ ಇದು ಕಣ್ಣಿಗೆ ಒಳ್ಳೆಯದು.
ಇದನ್ನೂ ಓದಿ:
Desi Chutney: ಈ ಆರು ಪದಾರ್ಥಗಳಿಂದ ತಯಾರಿಸಿದ ಚಟ್ನಿ ರುಚಿಗೆ ತಕ್ಕಂತೆ ಆರೋಗ್ಯಕರ ಗುಣಗಳನ್ನು ಹೊಂದಿದೆ
Published On - 6:56 am, Mon, 30 August 21