ಬೇಳೆಕಾಳುಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವ ಕಡಲೆಕಾಳು ದೇಹಕ್ಕೆ ಹಲವು ರೀತಿಯಲ್ಲಿ ಒಳ್ಳೆಯದು. ಇದು ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ಗಳಿಂದ ಸಮೃದ್ಧವಾಗಿದೆ. ಇದನ್ನು ನೇರವಾಗಿ ನೀರಿನಲ್ಲಿ ನೆನೆಸಿ ಕುಡಿಯಬಹುದು ಅಥವಾ ಈ ಕಡಲೆಕಾಳನ್ನು ಕುದಿಸಿ ಜೀರಿಗೆ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ತಿನ್ನಬಹುದು. ಇನ್ನು ನೆನೆಸಿದ ಕಡಲೆಕಾಳಿನ ನೀರಿನಿಂದ (Gram Water) ಆನೇಕ ಆರೋಗ್ಯಕರ ಪ್ರಯೋಜನಗಳಿವೆ. ಅವುಗಳು ಯಾವುದು ಎಂಬುವುದಕ್ಕೆ ಇಲ್ಲಿದೆ ಉತ್ತರ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಲೆಕಾಳು ನೆನೆಸಿದ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಎಲ್ಲಾ ರೀತಿಯ ರೋಗಗಳಿಂದಲೂ ನಿಮ್ಮನ್ನು ಇದು ರಕ್ಷಿಸುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ನೆನೆಸಿದ ಕಡಲೆಕಾಳು ನೀರು ಸಹಾಯಕವಾಗಿದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ
ನೆನೆಸಿದ ಕಡಲೆಕಾಳು ನೀರು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಈ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ತೂಕ ಇಳಿಕೆ
ತೂಕ ಇಳಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ನೆನೆಸಿದ ಕಡಲೆಕಾಳು ನೀರನ್ನು ಕುಡಿಯುವುದು ಒಳ್ಳೆಯದು. ಇದು ಆಯಾಸವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ದುರ್ಬಲವಾಗಿರುವ ದೇಹವನ್ನು ಶಕ್ತಿಯುತವನ್ನಾಗಿ ಮಾಡುತ್ತದೆ. ಹಾಗೆಯೇ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದರಿಂದ ಪದೇ ಪದೇ ತಿನ್ನುವ ಅಭ್ಯಾಸ ದೂರವಾಗಿ ದೇಹದ ತೂಕ ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಲೆಕಾಳು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ. ಗ್ಯಾಸ್ಟ್ರಿಕ್ ಮತ್ತು ಅಜೀರ್ಣವನ್ನು ಕಡಲೆಕಾಳು ನೀರು ನಿವಾರಿಸುತ್ತದೆ.
ಚರ್ಮದ ಕಾಂತಿ ಹೆಚ್ಚುತ್ತದೆ
ನೆನೆಸಿದ ಕಡಲೆಕಾಳು ನೀರು ಕುಡಿಯುವುದರಿಂದ ಚರ್ಮ ಸ್ವಚ್ಛಗೊಳ್ಳುತ್ತದೆ. ಜೊತೆಗೆ ಚರ್ಮದ ಸಮಸ್ಯೆಗಳನ್ನು ಇದು ತಡೆಯುತ್ತದೆ. ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸುವಲ್ಲಿಯೂ ನೆನೆಸಿದ ಕಡಲೆಕಾಳು ನೀರು ಪ್ರಮುಖ ಪಾತ್ರ ವಹಿಸುತ್ತದೆ.
ಇದನ್ನೂ ಓದಿ:
Garam Masala Benefits: ಗರಂ ಮಸಾಲೆ ಪರಿಮಳ ಮತ್ತು ರುಚಿಗಷ್ಟೇ ಸಿಮಿತವಾಗಿಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿದೆ
Salt: ಉಪ್ಪು ಕಡಿಮೆ ತಿನ್ನುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಎಚ್ಚರ ತಪ್ಪಬೇಡಿ
Published On - 8:22 am, Wed, 4 August 21