ಚೀನಿಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಈ ಕಾರಣಕ್ಕೆ ಚೀನಿಕಾಯಿಯ ಬಳಕೆ ಕಡಿಮೆ. ಕೆಲವರು ಮಾತ್ರ ಅಡುಗೆಯಲ್ಲಿ ಚೀನಿಕಾಯಿಯನ್ನು ಬಳಸುತ್ತಾರೆ. ಆದರೆ ಈ ತರಕಾರಿಯ ಬಗ್ಗೆ ಮೂಗು ಮುರಿಯುವವರೇ ಹೆಚ್ಚು. ಹೀಗಾಗಿ ಚೀನಿಕಾಯಿಯ ಆರೋಗ್ಯಕರ ಪ್ರಯೋಜನದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಇದರಲ್ಲಿ ವಿಟಮಿನ್ ಸಿ, ಇ, ಎ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ. ಚೀನಿಕಾಯಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಎ, ಕ್ಯಾರೋಟಿನ್ ಮತ್ತು ಕ್ಸಾಂಥೈನ್ ಹೊಂದಿದೆ. ಅಲ್ಲದೆ ಉರಿಯೂತವನ್ನು ಕಡಿಮೆ ಮಾಡುವ ವಿಟಮಿನ್ ಬಿ, ಬಿ 6 ಅನ್ನು ಹೊಂದಿದೆ. ಚೀನಿಕಾಯಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೊಡವೆ ಮತ್ತು ತಲೆಹೊಟ್ಟು ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ.
ಕಬ್ಬಿಣಾಂಶದ ಕೊರತೆಯನ್ನು ನಿವಾರಿಸುತ್ತದೆ
ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿರುವವರು ಚೀನಿಕಾಯಿ ತಿನ್ನುವುದು ಸೂಕ್ತ. ಇದರಲ್ಲಿರುವ ವಿಟಮಿನ್ ಎ, ಕ್ಯಾರೋಟಿನ್ ಮತ್ತು ಕ್ಸಾಂಥೈನ್ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಜತೆಗೆ ರಕ್ತಹೀನತೆ, ತಲೆತಿರುಗುವಿಕೆ, ಸಮಸ್ಯೆಯನ್ನು ದೂರ ಮಾಡುತ್ತದೆ. ಚೀನಿಕಾಯಿಯಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ.
ಚರ್ಮಕ್ಕೆ ಹೊಳಪು ನೀಡುತ್ತದೆ
ಚರ್ಮದಲ್ಲಿ ಕಂಡು ಬರುವ ಹಳದಿ ಬಣ್ಣದ ಸಮಸ್ಯೆಯನ್ನು ದೂರ ಮಾಡುತ್ತದೆ. ಉಗುರುಗಳು ದುರ್ಬಲಗೊಳ್ಳುವ ಸಮಸ್ಯೆಯನ್ನು ಚೀನಿಕಾಯಿ ನಿವಾರಿಸುತ್ತದೆ. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವುದರ ಜತೆಗೆ ಮೊಡವೆಗಳ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಚೀನಿಕಾಯಿಯಿಂದ ಫೇಸ್ಪ್ಯಾಕ್ ಕೂಡ ಮಾಡಿಕೊಳ್ಳಬಹುದು. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಚೀನಿಕಾಯಿ ತಿರುಳು ಮತ್ತು ಬೀಜಗಳಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಉಂಟಾಗುವ ಸೋಂಕು ತಗ್ಗಿಸಲು ನೆರವು ನೀಡುತ್ತದೆ. ಜತೆಗೆ ಬಿಳಿ ರಕ್ತ ಕಣಗಳನ್ನು ಸಹ ಉತ್ಪಾದಿಸಿ ದೇಹವನ್ನು ಸದೃಢವಾಗಿಸುತ್ತದೆ.
ತೂಕ ನಷ್ಟಕ್ಕೆ ಸಹಕಾರಿ
ಚೀನಿಕಾಯಿಯಲ್ಲಿ ಫೈಬರ್ ತುಂಬಾ ಹೆಚ್ಚು. ಕ್ಯಾಲೊರಿಗಳು ಕಡಿಮೆ. ಅಷ್ಟೇ ಅಲ್ಲ ಕೊಬ್ಬಿನಂಶವೂ ಕಡಿಮೆ. ಚೀನಿಕಾಯಿಯಲ್ಲಿನ ಫೈಬರ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ, ಮಾತ್ರವಲ್ಲದೆ ಹಸಿವನ್ನು ನಿಯಂತ್ರಿಸುತ್ತದೆ.
ಕಾಲೋಚಿತ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ
ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರ, ಗಂಟಲು ನೋವು ಮತ್ತು ಇನ್ನಿತರ ಸಮಸ್ಯೆಗೆ ಚೀನಿಕಾಯಿ ರಾಮಬಾಣವಾಗಿದೆ. ಇದರಲ್ಲಿ ವಿಟಮಿನ್ ಎ, ಇ, ಸಿ ಮತ್ತು ಐರನ್ ಇದ್ದು, ಕಾಲೋಚಿತ ಸಮಸ್ಯೆಯನ್ನು ದೂರ ಮಾಡುತ್ತದೆ. ಚೀನಿಕಾಯಿಯಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಇದು ಕಣ್ಣುಗಳಿಗೆ ಒಳ್ಳೆಯದು.
ಇದನ್ನೂ ಓದಿ: