ಆರೋಗ್ಯಕರವಾಗಿರಲು ಸೊಪ್ಪು ತರಕಾರಿಯನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಈ ತರಕಾರಿಗಳು ದೇಹವನ್ನು ಪೋಷಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು(Immunity) ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಅದರಲ್ಲೂ ಪಾಲಕ್ ಸೊಪ್ಪು(spinach) ದೇಹದ ಆರೋಗ್ಯಕ್ಕೆ(Health) ಉತ್ತಮ. ಇದು ವಯಸ್ಕರಿಗೆ ಮತ್ತು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ಪಾಲಕ್ ಸೊಪ್ಪು ಹಲವಾರು ಗುಣಗಳನ್ನು ಹೊಂದಿದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಜೊತೆಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಾದ ಕ್ಯಾರೋಟಿನ್, ಅಮೈನೋ ಆಮ್ಲಗಳು, ಕಬ್ಬಿಣ, ಅಯೋಡಿನ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿದೆ. ಇದರ ರುಚಿ ಕೂಡ ತುಂಬಾ ಚೆನ್ನಾಗಿದೆ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವಂತೆ ನಿಯಮಿತ ಪ್ರಮಾಣದಲ್ಲಿ ಇದನ್ನು ಸೇವಿಸುವುದು ಉತ್ತಮ.
ಸಲಾಡ್, ಸೂಪ್ ಅಥವಾ ತರಕಾರಿ ರೂಪದಲ್ಲಿ ನೀವು ಪಾಲಕ್ ಅನ್ನು ನಿಮ್ಮ ಆಹಾರದ ಭಾಗವಾಗಿ ಮಾಡಬಹುದು. ಪಾಲಕ್‌ನ ಅನೇಕ ಪ್ರಯೋಜನಗಳ ಹೊರತಾಗಿಯೂ, ಇದು ಹಾನಿಯನ್ನುಂಟುಮಾಡುತ್ತದೆ. ಪಾಲಕ್ ಸೊಪ್ಪು ಎಲ್ಲರಿಗೂ ಉತ್ತಮವಲ್ಲ. ಈ ಕೆಳಕಂಡ ಕಾಯಿಲೆಗೆ ತುತ್ತಾದವರು ಪಾಲಕ್ ತಿನ್ನುವುದುರಿಂದ ದೂರ ಇರಬೇಕು.
ಮೂತ್ರಪಿಂಡದ ಸಮಸ್ಯೆ
ಕಿಡ್ನಿ ಸಮಸ್ಯೆ ಇರುವವರು ಪಾಲಕ್ ಸೊಪ್ಪನ್ನು ಸೇವಿಸುವುದನ್ನು ತಪ್ಪಿಸಬೇಕು ಎನ್ನುತ್ತಾರೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಆಕ್ಸಾಲಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ. ತಜ್ಞರ ಪ್ರಕಾರ, ಇದು ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಈ ಕಾರಣದಿಂದಾಗಿ, ಕ್ಯಾಲ್ಸಿಯಂ ಆಕ್ಸಲೇಟ್ ಮೂತ್ರಪಿಂಡದಲ್ಲಿ ಶೇಖರಣೆಯಾಗುತ್ತದೆ.
ಕಿಡ್ನಿ ಸ್ಟೋನ್
ಪಾಲಕ್ ಸೊಪ್ಪಿನಿಂದ ಕಿಡ್ನಿಯಲ್ಲಿ ಸಂಗ್ರಹವಾಗುವ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಕಲ್ಲಿನ ಸಮಸ್ಯೆ ಇರುವವರು ಪಾಲಕ್ ಸೊಪ್ಪನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ವಾಸ್ತವವಾಗಿ, ಪಾಲಕ್ ಅನ್ನು ತೊಳೆದ ನಂತರವೂ ಅದರಲ್ಲಿರುವ ಮಣ್ಣು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಈ ಮಣ್ಣನ್ನು ರುಚಿಯಲ್ಲಿ ಸಹ ಕಂಡುಹಿಡಿಯಲಾಗುವುದಿಲ್ಲ, ಆದರೆ ಕ್ರಮೇಣ ಇದು ಕಿಡ್ನಿ ಕಲ್ಲಿಗೆ ಕಾರಣವಾಗುತ್ತದೆ.
ಕೀಲು ನೋವು
ಪಾಲಕ್ನಲ್ಲಿ ಪ್ಯೂರಿನ್ ಹೇರಳವಾಗಿ ಲಭ್ಯವಿದೆ ಮತ್ತು ಇದು ಒಂದು ರೀತಿಯ ಸಂಯುಕ್ತವಾಗಿದೆ ಎಂದು ನಂಬಲಾಗಿದೆ. ತಜ್ಞರ ಪ್ರಕಾರ, ಆಕ್ಸಾಲಿಕ್ ಆಮ್ಲ ಮತ್ತು ಪ್ಯೂರಿನ್ ಒಟ್ಟಿಗೆ ಸಂಧಿವಾತಕ್ಕೆ ಕಾರಣವಾಗುತ್ತವೆ. ಕೀಲು ನೋವಿನಿಂದ ಬಳಲುತ್ತಿರುವವರು ಈ ಸ್ಥಿತಿಯಲ್ಲಿ ಪಾಲಕ್ ಸೊಪ್ಪನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಹೀಗೆ ಮಾಡುವುದರಿಂದ ಕೀಲುಗಳಲ್ಲಿ ನೋವು ಇನ್ನಷ್ಟು ಹೆಚ್ಚಾಗಬಹುದು.
ರಕ್ತ ತೆಳುಗೊಳಿಸುವ ಔಷಧ
ನೀವು ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಹ, ನೀವು ಪಾಲಕ್ ಅನ್ನು ತಿನ್ನಬಾರದು. ವರದಿಗಳ ಪ್ರಕಾರ ವಿಟಮಿನ್ ಎ ಕೂಡ ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿದೆ. ವಿಟಮಿನ್ ಎ ಈ ಔಷಧಿಯೊಂದಿಗೆ ಪ್ರತಿಕ್ರಿಯಿಸಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:
Kempakki: ಕೆಂಪಕ್ಕಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಗೊತ್ತಾ?