ಚಿಕ್ಕ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಏಕೆ ಸಂಭವಿಸುತ್ತದೆ? ತಜ್ಞರು ಹೇಳುವುದೇನು?

ಕಳೆದ ಕೆಲವು ದಶಕಗಳಲ್ಲಿ 30-40 ವಯೋಮಾನದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿವೆ. ಹಾರ್ಮೋನ್ ಅಸಮತೋಲನ, ಆನುವಂಶಿಕತೆ, ಜೀವನಶೈಲಿ, ಬೊಜ್ಜು, ಮದ್ಯಪಾನ, ಧೂಮಪಾನ, ಮುಂತಾದವು ಪ್ರಮುಖ ಕಾರಣಗಳು. ಆರಂಭಿಕ ಪತ್ತೆ ಮತ್ತು ಚಿಕಿತ್ಸೆ (ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ರೇಡಿಯೊಥೆರಪಿ) ಮುಖ್ಯ ಎಂದು ಡಾ.ಶ್ರುತಿ ಭಾಟಿಯಾ ಎಚ್ಚರಿಸುತ್ತಾರೆ.

ಚಿಕ್ಕ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಏಕೆ ಸಂಭವಿಸುತ್ತದೆ? ತಜ್ಞರು ಹೇಳುವುದೇನು?
Breast Cancer
Follow us
ಅಕ್ಷತಾ ವರ್ಕಾಡಿ
|

Updated on: Dec 12, 2024 | 5:58 PM

ಕೆಲವು ದಶಕಗಳ ಹಿಂದೆ, ಸ್ತನ ಕ್ಯಾನ್ಸರ್ ಪ್ರಕರಣಗಳು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸಂಭವಿಸುತ್ತಿದ್ದವು. ಆದರೆ ಈಗ 30 ರಿಂದ 40 ವರ್ಷ ವಯೋಮಾನದ ಮಹಿಳೆಯರು ಈ ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ. ICMR ಪ್ರಕಾರ 2020 ರಲ್ಲಿ ಭಾರತದಲ್ಲಿ 13.9 ಲಕ್ಷ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. 2025ರ ವೇಳೆಗೆ ಇದು 15 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ. ಮಹಿಳೆಯರಲ್ಲಿ ಬರುವ ಎಲ್ಲಾ ಕ್ಯಾನ್ಸರ್ ಪ್ರಕರಣಗಳಿಗೆ ಸ್ತನ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಕಳೆದ ದಶಕದಲ್ಲಿ ಈ ಕ್ಯಾನ್ಸರ್ ಪ್ರಕರಣಗಳು ಶೇಕಡಾ 22 ರಷ್ಟು ಹೆಚ್ಚಾಗಿದೆ. ಆದರೆ ಚಿಕ್ಕ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಏಕೆ ಸಂಭವಿಸುತ್ತದೆ? ಅದರ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ದಿಲ್ಲಿಯ ಸ್ತ್ರೀರೋಗ ಶಸ್ತ್ರಚಿಕಿತ್ಸಾ ಮತ್ತು ಕ್ಯಾನ್ಸರ್ ವಿಭಾಗದ ಡಾ.ಶ್ರುತಿ ಭಾಟಿಯಾ ಅವರು ಹೇಳುವಂತೆ, “ಮಹಿಳೆಯರು ಅನೇಕ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್ ಬರುವ ಅಪಾಯವನ್ನು ಎದುರಿಸುತ್ತಾರೆ. ಹಾರ್ಮೋನ್ ಮಟ್ಟ ಕಡಿಮೆಯಾಗುವುದು ಸ್ತನ ಕ್ಯಾನ್ಸರ್ಗೆ ಮೊದಲ ಕಾರಣವಾಗಿದೆ. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಟ್ಟದಲ್ಲಿನ ಕುಸಿತದಿಂದಾಗಿ ಇದು ಸಂಭವಿಸುತ್ತದೆ. ಇದಲ್ಲದೆ, ಕುಟುಂಬದ ಇತಿಹಾಸದ ಪ್ರಭಾವ ಮತ್ತು ಮಹಿಳೆಯರಲ್ಲಿ ಆನುವಂಶಿಕ ರೂಪಾಂತರಗಳು ಸಹ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಒಬ್ಬರ ಕುಟುಂಬದಲ್ಲಿ ಅವರ ತಾಯಿಯಲ್ಲಿ ಈ ಕ್ಯಾನ್ಸರ್ ಇದ್ದರೆ, ಅದು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಡುತ್ತದೆ”.

ಪ್ರಿಮೆಚ್ಯೂರ್ ಪಿರಿಯಡ್ಸ್ ಕೂಡ ಈ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಡಾ.ಶ್ರುತಿ. ಇದಲ್ಲದೆ, ಬೊಜ್ಜು, ವ್ಯಾಯಾಮದ ಕೊರತೆ, ಅತಿಯಾದ ಮದ್ಯಪಾನ ಮತ್ತು ಧೂಮಪಾನದಂತಹ ಜೀವನಶೈಲಿ ಅಂಶಗಳೂ ಮಹಿಳೆಯರಲ್ಲಿ ಈ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಯುವತಿಯರಲ್ಲಿ ಮದ್ಯಪಾನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಸ್ತನ ಕ್ಯಾನ್ಸರ್‌ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. 20 ರಿಂದ 25 ವರ್ಷದ ಮಧ್ಯವಯಸ್ಸಿನಲ್ಲಿ ಬರುವ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಕ್ಯಾನ್ಸರ್‌ಗೆ ಜೀವನಶೈಲಿಗಿಂತ ಹೆಚ್ಚಾಗಿ ಆನುವಂಶಿಕ ಕಾರಣ ಇರಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ನಿತ್ಯ ನೀವು ಕುಡಿಯುವ 3 ಲೋಟ ಕಾಫಿ, ನಿಮ್ಮ ಆಯುಷ್ಯವನ್ನು ಇಷ್ಟು ವರ್ಷ ವೃದ್ಧಿಸುತ್ತಂತೆ!

ಸ್ತನ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳು ಯಾವುವು?

  • ಸ್ತನದಲ್ಲಿ ಹೊಸ ಉಂಡೆ ಅಥವಾ ದ್ರವ್ಯರಾಶಿ
  • ಸ್ತನದ ಆಕಾರದಲ್ಲಿ ಬದಲಾವಣೆ
  • ಚರ್ಮದ ವಿನ್ಯಾಸ ಅಥವಾ ಬಣ್ಣದಲ್ಲಿನ ಬದಲಾವಣೆ

ಸ್ತನ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?

  • ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡಿ
  • ಪ್ರತಿದಿನ ವ್ಯಾಯಾಮ ಮಾಡುವುದು
  • ಮದ್ಯಪಾನ ಮಾಡಬೇಡಿ
  • 30 ವರ್ಷಗಳ ನಂತರ ಕ್ಯಾನ್ಸರ್ ಪರೀಕ್ಷೆ ಮಾಡಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ