ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುವ ಮನಸ್ಥಿತಿ ಇರುವವರು, ತಮ್ಮ ಗುರಿ ಸಾಧಿಸಲು ಏನು ಬೇಕಾದ್ರು ಮಾಡ್ತಾರೆ

ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುವ ಮನಸ್ಥಿತಿ ಇರುವವರು, ತಮ್ಮ ಗುರಿ ಸಾಧಿಸಲು ಏನು ಬೇಕಾದ್ರು ಮಾಡ್ತಾರೆ
ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಬನ್ನಿ ಅಂತಹ ಶ್ರಮಿಸುವ 5 ರಾಶಿಗಳ ಬಗ್ಗೆ ತಿಳಿಯೋಣ.

TV9kannada Web Team

| Edited By: Ayesha Banu

Jun 11, 2022 | 6:30 AM

ಟೆಕ್ನಾಲಜಿ ಬೆಳೆಯುತ್ತಾ ಬೆಳೆಯುತ್ತಾ ಜನ ಹಾರ್ಡ್ ವರ್ಕ್ಗಿಂತ ಸ್ಮಾರ್ಟ್ ವರ್ಕ್ ಜಾಸ್ತಿ ಮಾಡ್ತಿದ್ದಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಬನ್ನಿ ಅಂತಹ ಶ್ರಮಿಸುವ 5 ರಾಶಿಗಳ ಬಗ್ಗೆ ತಿಳಿಯೋಣ.

  1. ಮಕರ ರಾಶಿ: ಒಟ್ಟು 12 ರಾಶಿಗಳ ಪೈಕಿ ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುವವರ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ರಾಶಿಯವರು ಸದಾ ಕಷ್ಟಪಟ್ಟು ದುಡಿಯುತ್ತಿರುತ್ತಾರೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ತಮ್ಮ ಕೆಲಸವನ್ನು ಪರಿಪೂರ್ಣತೆಯಿಂದ ಮುಗಿಸುತ್ತಾರೆ. ಕಚೇರಿಯಲ್ಲಿ ಇತರರ ಕೆಲಸವನ್ನೂ ಮಾಡುತ್ತಾರೆ. ಅವರಿಗೆ ಹೆಚ್ಚುವರಿ ಕೆಲಸ ಮತ್ತು ಜವಾಬ್ದಾರಿಗಳನ್ನು ಸಹ ನಿಯೋಜಿಸಲಾಗುತ್ತೆ. ಅಲ್ಲದೆ ಕೆಲಸವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುತ್ತಾರೆ.
  2. ಕುಂಭ ರಾಶಿ: ಕುಂಭ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಮಾನಸಿಕವಾಗಿ ಪ್ರಬುದ್ಧರಾಗಿರುತ್ತಾರೆ. ಅಲ್ಲದೆ ಯಾವುದೇ ಸಂದರ್ಭದಲ್ಲೂ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವ ಕಲೆ ಇದೆ. ಯಾವುದೇ ನಕಾರಾತ್ಮಕ ಪರಿಸ್ಥಿತಿಯಲ್ಲೂ ಸ್ವಂತ ಕೆಲಸವೆಂದು ಪರಿಗಣಿಸಿ ಮತ್ತು ಅದನ್ನು ತ್ವರಿತವಾಗಿ ಮಾಡುತ್ತಾರೆ. ಅದೇ ಸಮಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಾರೆ. ಅಲ್ಲದೆ ಈ ರಾಶಿಚಕ್ರದ ಜನರು ಬಹಳ ಮಹತ್ವಾಕಾಂಕ್ಷೆಯುಳ್ಳವರು. ಅವರು ತಮ್ಮ ಆಕಾಂಕ್ಷೆಗಳನ್ನು ಸಾಧಿಸಲು, ಅವರ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಅವರು ಕಷ್ಟಪಟ್ಟು ದುಡಿಯುವ ತತ್ವವನ್ನು ಹೊಂದಿದ್ದಾರೆ.
  3. ಮೀನ ರಾಶಿ: ಈ ರಾಶಿಯವರು ಕಷ್ಟಪಟ್ಟು ದುಡಿಯುವವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿಷಯಗಳನ್ನು ನಿಧಾನವಾಗಿ ತೆಗೆದುಕೊಂಡು ಸಮಸ್ಯೆಯ ಮೇಲೆ ಹೆಚ್ಚು ಗಮನಹರಿಸದಿರಲು ಪ್ರಯತ್ನಿಸುತ್ತಾರೆ. ಪೂರ್ಣ ಏಕಾಗ್ರತೆಯಿಂದ ಸುಲಭವಾಗಿ ಯೋಚಿಸಿದ್ದನ್ನು ಸಾಧಿಸುತ್ತಾರೆ. ಆಗಾಗ್ಗೆ ಸ್ವಂತ ಕೆಲಸದಂತೆ ಕೆಲಸ ಮಾಡಿ ಎಲ್ಲೆಡೆ ಗೌರವವನ್ನು ಪಡೆದುಕೊಳ್ಳುತ್ತಾರೆ. ಗುರಿಯನ್ನು ನಿಗದಿಪಡಿಸಿದ ನಂತರ, ಅದನ್ನು ಸಾಧಿಸಲು ಶ್ರಮಿಸುತ್ತಾರೆ.
  4. ಕರ್ಕಾಟಕ: ಕರ್ಕ ರಾಶಿಯವರು ಕಷ್ಟದ ಸಂದರ್ಭದಲ್ಲಿ ಹಿಂದೆ ಸರಿಯುವುದಿಲ್ಲ. ಬಹಳ ಶಾಂತವಾಗಿ ತಮ್ಮ ಕೆಲಸವನ್ನು ನಿರ್ವಹಿಸುವುದು ಇವರ ವಿಶೇಷತೆ. ಯಾರಿಗೂ ತೊಂದರೆ ಕೊಡುವುದಿಲ್ಲ. ಅವರು ತಮ್ಮ ಕೆಲಸದ ಬಗ್ಗೆ ಕಡಿಮೆ ಮಾತನಾಡುತ್ತಾರೆ ಮತ್ತು ಅದರ ಮೇಲೆ ಹೆಚ್ಚು ಶ್ರಮಿಸುತ್ತಾರೆ. ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ ಅದು ಸಮಯಕ್ಕೆ ಮುಗಿಯುವವರೆಗೂ ಮಲಗುವುದಿಲ್ಲ.
  5. ಸಿಂಹ ರಾಶಿ: ಈ ರಾಶಿಯ ಜನರು ಹೆಚ್ಚು ಕೋಪಿಷ್ಟರು ಎಂದು ಭಾವಿಸಲಾಗಿದೆ. ಆದರೆ ಇವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಸಿಂಹ ರಾಶಿಯವರು ಹಣದ ಹಿಂದೆ ಓಡುತ್ತಾರೆ. ಈ ಜನರು ಹಗಲು ರಾತ್ರಿ ಕಷ್ಟಪಟ್ಟು ಹಣ ಸಂಗ್ರಹಿಸುತ್ತಾರೆ. ಕೆಲಸದಿಂದ ಎಂದಿಗೂ ಹಿಂಜರಿಯುವುದಿಲ್ಲ. ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುವವರೆಗೆ ಬಿಡುವುದಿಲ್ಲ.
Basavaraj Guruji

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937,9972548937

Follow us on

Related Stories

Most Read Stories

Click on your DTH Provider to Add TV9 Kannada