Daily Horoscope 24 October 2024: ಈ ರಾಶಿಯವರಿಗೆ ಇನ್ನೊಬ್ಬರ ನೋವು ನೋಡಿ ಸುಮ್ಮನೆ ಇರಲಾಗದು
Daily Horoscope 24 October 2024: ಅಕ್ಟೋಬರ್ 24, 2024ರ ನಿಮ್ಮ ಭವಿಷ್ಯ ಹೇಗಿದೆ? ಬುಧವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ ,ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಸಿದ್ಧ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:44 ರಿಂದ 03:12 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:27 ರಿಂದ 07:54ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 ರಿಂದ 10:49 ರವರೆಗೆ.
ಮೇಷ ರಾಶಿ: ನಿಮ್ಮ ಕಾರ್ಯವೇ ಇಂದು ಎಲ್ಲವನ್ನು ಹೇಳುವುದು. ನೀವು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಇಟ್ಟುಕೊಳ್ಳಬೇಕಾಗುವುದು. ನಿಮ್ಮ ಕಾರ್ಯವು ಆಗಬೇಕಾದರೆ ತಿರುಗಾಟವನ್ನು ಮಾಡುವುದು ಅನಿವಾರ್ಯ. ಸಂಗಾತಿಗೆ ಯಾವುದಾದರೂ ರೀತಿಯಲ್ಲಿ ಸಂತೋಷವಾಗುವಂತೆ ನೋಡಿಕೊಳ್ಳುವಿರಿ. ಇಬ್ಬರ ನಡುವೆ ವಾಗ್ವಾದವೂ ಆಗಲಿದೆ. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಮಾತೇ ನಿಮಗೆ ತೊಂದರೆಯನ್ನು ತರುವುದು. ಸಂಗಾತಿಯು ಇತರರನ್ನು ಹೋಲಿಸಿಕೊಂಡು ಮಾತನಾಡುವರು. ಹಿನ್ನಡೆಯನ್ನೂ ಸಕಾರಾತ್ಮಕವಾಗಿ ನೋಡಿಕೊಳ್ಳುವಿರಿ. ನಿಮ್ಮ ಉತ್ಸಾಹವನ್ನು ಭಂಗ ಮಾಡುವ ಮಾತುಗಳು ನಿಮ್ಮ ನಡುವೇ ಬರಬಹುದು. ವಿಜಯದ ಮೆಟ್ಟಿಲು ನಿಮಗೆ ಕಷ್ಟವಾಗದು. ಯಾರನ್ನೂ ಗೆಲ್ಲುವೆನು ಎಂಬ ಹುಂಬುತನ ಬೇಡ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ.
ವೃಷಭ ರಾಶಿ: ಎಲ್ಲವನ್ನೂ ಕಳೆದುಕೊಳ್ಳುವ ಬದಲು ಅಲ್ಪವಾದರೂ ಉಳಿದುಕೊಳ್ಳಲಿ ಎಂಬ ನಿರ್ಧಾರವೇ ಸರಿ. ವೃತ್ತಿಯನ್ನು ಹೊರತುಪಡಿಸಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಸಂಕೀರ್ಣತೆಯಿಂದ ಹೊರಬಂದಾಗ ದಾರಿ ಸಿಗುವುದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಇದ್ದರೂ ನಿಮಗೆ ಸಮಾಧಾನ ಇರದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ನೀಡುವಿರಿ. ಸಿಟ್ಟನ್ನು ಮಾಡಬಾರದು ಎಂದುಕೊಂಡರೂ ಸಂದರ್ಭವು ನಿಮ್ಮ ನಿರ್ಧಾರವನ್ನು ಬದಲಿಸುವುದು. ಮಕ್ಕಳಿಂದ ನೆಮ್ಮದಿಯು ಸಿಗುವುದು. ಎಲ್ಲವೂ ಗೊತ್ತಿದ್ದರೂ ಹಿರಿಯರನ್ನು ಕೇಳಿ ಮುನ್ನಡೆಯಿರಿ. ನಿಮ್ಮನ್ನು ಅಲ್ಪಜ್ಞರೆಂದೇ ಭಾವಿಸಿ. ವ್ಯವಹಾರವನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಲು ನೀವು ಸೋಲಬಹುದು. ನಿಮ್ಮ ಗುರಿಯನ್ನು ತಲುಪಲು ನಿಮಗೆ ವಿಘ್ನಗಳು ಬರಬಹುದು. ಅಂದುಕೊಂಡಿದ್ದನ್ನು ಸಾಧಿಸಲಾಗದು ಎಂಬ ಅಳುಕು ನಿಮ್ಮಲ್ಲಿ ಇರುವುದು.
ಮಿಥುನ ರಾಶಿ: ನಿಮ್ಮ ಹಸ್ತಕ್ಷೇಪವು ಬೇರೆಯವರಿಗೆ ಹಿಡಿಸದು. ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಕೊಡುವಿರಿ. ವೈಯಕ್ತಿಕ ಕೆಲಸಗಳು ಬಹಳಷ್ಟು ಇದ್ದು ಅದನ್ನು ಮಾಡಲು ನಿಮಗೆ ಸಮಯವು ಸಿಗದಾಗುವುದು. ಮಿತ್ರರ ಸಹಾಯದಿಂದ ನಿಮಗೆ ಉತ್ತಮ ಲಾಭವು ಸಿಗಲಿದೆ. ಎಲ್ಲರೆದುರು ನಿಮಗೆ ಅಪಮಾನವಾಗುವ ಸಂದರ್ಭವು ಬರಬಹುದು. ಇನ್ನೊಬ್ಬರ ನೋವನ್ನು ನೋಡಿ ಸುಮ್ಮನೆ ಇರಲಾಗದು. ನಿಮ್ಮಇಂದಿನ ಸಂಪಾದನೆಯು ಮನೆಯ ಬಳಕಗೇ ಆಗವುದು. ಕುಲದೇವರ ದರ್ಶನವನ್ನು ನೀವು ಮಾಡಲಿದ್ದು ನೆಮ್ಮದಿ ಇರುವುದು. ಗೆಳೆತನದಿಂದ ಸಲ್ಲದ ಮಾತುಗಳು ನಿಮ್ಮ ಬಗ್ಗೆ ಬರಬಹುದು. ನಿಮ್ಮ ಹೇಳಿಕೆಗಳು ಕಾನೂನು ಚೌಕಟ್ಟಿನಲ್ಲಿ ಇರಲಿ. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ನಡೆಯುವಿರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು.
ಕರ್ಕಾಟಕ ರಾಶಿ: ನಿಮ್ಮ ದೈಹಿಕ ಸಮಸ್ಯೆಯನ್ನು ಮುಚ್ಚಿಟ್ಟು ಪ್ರಯೋಜನವಾಗದು. ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸಬಹುದು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ಸ್ಥಳವು ಸಿಗಬಹುದು. ನಿಮಗೆ ಇಷ್ಟವಾದ ವಿಚಾರವನ್ನು ಬೇಗ ಗ್ರಹಿಸುವಿರಿ. ಮತ್ತೇನನ್ನೂ ವಿಚಾರಿಸದೇ ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ. ನಿಮ್ಮನಕಾರಾತ್ಮಕ ಆಲೋಚನೆಗಳಿಂದ ಕುಟುಂಬವನ್ನೂ ಕೆಡಸುವುದು ಬೇಡ. ನಿಮ್ಮ ಸಮಸ್ಯೆಗೆ ಅನಿರೀಕ್ಷಿತ ಪರಿಹಾರವೂ ಸಿಗುವುದು. ಅಪರಿಚಿತರು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆಯನ್ನು ಕೊಡುವರು. ಪ್ರೀತಿಪಾತ್ರರ ಭೇಟಿಯು ನಿಮಗೆ ನೆಮ್ಮದಿಯನ್ನು ನೀಡಬಹುದು. ಉದ್ಯೋಗದ ಕಾರಣ ಓಡಾಟವು ಇರಬಹುದು. ನಿಮಗೆ ಆಯ್ಕೆಗಳನ್ನು ಮಾಡಲು ಗೊಂದಲವಿರಬಹುದು. ನಿಮ್ಮ ಮೇಲಿರುವ ಭಾವನೆಯು ದೂರಾಗಬಹುದು. ಆತುರದಲ್ಲಿ ನಿಮ್ಮ ಎಲ್ಲ ಕಾರ್ಯವೂ ಮೊಟಕುಮಾಡುವಿರಿ. ಆರ್ಥಿಕವಾಗಿ ಸಮಸ್ಯೆಯಾದರೂ ಅದು ತೊಂದರೆಯಂತೆ ತೋರದು.
ಸಿಂಹ ರಾಶಿ: ನಿಮ್ಮ ಪೂರ್ವನಿರ್ಧಾರಗಳು ಬದಲಾಗಬಹುದು. ನಿಮ್ಮ ಬಂಧುಗಳ ಕಡೆಯಿಂದ ವಿವಾಹವು ಏರ್ಪಡಬಹುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸುವಿರಿ. ನೀವು ಮಾಡುವ ಕಾರ್ಯದಲ್ಲಿ ಗೊಂದಲವಿದ್ದರೆ ಯಾರನ್ನಾದರೂ ಕೇಳಿ. ನಿಮ್ಮ ಅನುಕೂಲತೆಯನ್ನು ನೋಡಿಯೇ ಹೆಜ್ಜೆ ಇಡುವುದು ಉತ್ತಮ. ಮುಂದೂಡುತ್ತ ಕುಳಿತರೆ ಇನ್ನಷ್ಟು ಗೊಂದಲಗಳು ಹೆಚ್ಚಾದೀತು. ಸಂಗಾತಿಯ ವಿಷಯಕ್ಕೆ ನಿಮಗೆ ಬೇಸರವಾಗುವುದು. ನಿಮಗೆ ಬೇಕಾಗಿರುವ ಸಂಪತ್ತನ್ನು ಸ್ನೇಹಿತರಿಂದ ಸಾಲವಾಗಿ ಪಡೆಯುವಿರಿ. ವ್ಯವಹಾರದಲ್ಲಿ ಯಾವುದೇ ದಾಕ್ಷಿಣ್ಯ ತೋರುವುದು ಬೇಡ. ದುರಭ್ಯಾಸಗಳು ಸಹವಾಸದಿಂದ ಬರಬಹುದು. ಮನೆಗೆ ಇಂದು ವಿಳಂಬವಾಗಿ ಹೋಗುವಿರಿ. ಮನೋರಂಜನೆಗೆ ಹಣವನ್ನು ಖರ್ಚು ಮಾಡುವಿರಿ. ಹಣಸಂಪಾದನೆಯ ವಿಚಾರವೇ ತಲೆಯಲ್ಲಿ ಓಡಾಡಲಿದೆ. ಇಂದಿನ ದಿನಕ್ಕೆ ನಿಮಗೆ ತಾಳ್ಮೆ ಅವಶ್ಯಕ.
ಕನ್ಯಾ ರಾಶಿ: ನಿಮ್ಮ ಉತ್ಸಾಹಕ್ಕೆ ಯಾರಾದರೂ ತಣ್ಣೀರು ಹಾಕಬಹುದು. ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ಸುಲಭ ಮಾರ್ಗದಲ್ಲಿ ಆದಾಯವನ್ನು ಪಡೆಯುವ ಯೋಜನೆಯು ಯಶಸ್ವಿಯಾಗದು. ಸರ್ಕಾರಿ ಕೆಲಸಗಳು ಒತ್ತಡದಿಂದಾಗಿ ಮುಂದುವರಿಯುವುದು. ನೀವು ಮೌನದಿಂದ ಇದ್ದಷ್ಟು ಎಲ್ಲದಕ್ಕೂ ಒಪ್ಪಿಗೆ ಸೂಚಿಸಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವಿರಿ. ದೇವರ ದರ್ಶನಕ್ಕೆ ನೀವು ಇಂದು ಬಿಡುವುಮಾಡಿಕೊಂಡು ಹೋಗುವಿರಿ. ನಿಮ್ಮ ಕಾರ್ಯವು ನಿಮಗೆ ತೃಪ್ತಿಕೊಡದೇಹೋಗಬಹುದು. ವಾಹನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ. ಒಂದು ತೀರ್ಮಾನಕ್ಕೆ ಬರಲು ಹತ್ತು ಬಾರಿ ಯೋಚಿಸಿ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಕೃಷಿಯ ಕಾರ್ಯವನ್ನು ಮಾಡಲು ನೀವೂ ಭಾಗಿಯಾಗುವಿರಿ.
ತುಲಾ ರಾಶಿ: ಇಂದು ನಿಮಗೆ ಪೂರೈಕೆಯಲ್ಲಿ ಹಿನ್ನಡೆ ಅಥವಾ ಅಧಿಕ ಒತ್ತಡವಾಗಲಿದೆ. ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಸ್ವಲ್ಪಮಟ್ಟಿಗೆ ಸಾಲವು ಮುಕ್ತಾಯವಾಗಿದ್ದರಿಂದ ಕುಟುಂಬದಲ್ಲಿ ಸೌಖ್ಯವು ಇರಲಿದೆ. ಎಲ್ಲ ಕೆಲಸಗಳೂ ಅಪೂರ್ಣವಾಗಿರುವುದು ನಿಮಗೆ ಕಿರಿಕಿರಿ ಆಗಲಿದೆ. ನಿಮ್ಮ ಕಾರ್ಯದ ಉದ್ದೇಶವು ಭಂಗವಾಗಬಹುದು. ಯಾವುದನ್ನು ಮುಗಿಸಬೇಕು ಎನ್ನುವ ಗೊಂದಲವೂ ಇರುವುದು. ಮಾನಸಿಕ ಒತ್ತಡದಿಂದ ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಇಷ್ಟು ದಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದ ನಿಮಗೆ ಇಂದು ಕಛೇರಿಗೆ ಕರೆಯುವರು. ನಿಮ್ಮ ತುರ್ತು ಕಾರ್ಯಗಳನ್ನು ನೀವು ಬಿಡಬೇಕಾದೀತು. ಹಿರಿಯರ ಮಾತುಗಳೂ ನಿಮಗೆ ಸಿಟ್ಟು ತರಿಸಬಹುದು. ಯಾರ ಕಣ್ಣಿಗೂ ಕುಕ್ಕುವಂತಹ ಕಾರ್ಯವನ್ನು ನೀವು ಮಾಡಬೇಡಿ. ಮಕ್ಕಳ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ನಿಮ್ಮ ಮಾತು ಸತ್ಯವೇ ಆದರೂ ಅದನ್ನು ಹೇಳುವ ರೀತಿಯಲ್ಲಿ ಹೇಳಿ.
ವೃಶ್ಚಿಕ ರಾಶಿ: ನಿಮ್ಮ ಇಂದಿನ ವಾದಕ್ಕೆ ಕೊನೆಮೊದಲಿಲ್ಲದೇ ಹೋಗಬಹುದು. ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಇಂದಿನ ಎಲ್ಲ ಕಾರ್ಯವನ್ನೂ ಒತ್ತಡದಿಂದಲೇ ಮಾಡಬೇಕಾದೀತು. ನೀವು ಏನಾದರೂ ಬದಲಾವಣೆಯನ್ನು ನಿಮ್ಮವರಿಂದ ನಿರೀಕ್ಷಿಸುವಿರಿ. ಶರೀರಪೀಡಿಯು ಹೆಚ್ಚಾಗಲಿದ್ದು ಕಛೇರಿಗೆ ಹೋಗುವವರು ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ಯಾರನ್ನೋ ದ್ವೇಷ ಮಾಡುವುದು ಸರಿ ಕಾಣದು. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕಾಗುತ್ತದೆ. ಎಂದೋ ಕಾಣೆಯಾದ ವಸ್ತುವನ್ನು ಇಂದು ನೀವು ಹುಡುಕುವಿರಿ. ಮೌಕಿಕವಾಗಿ ನೀವು ಗೆಲ್ಲಬಹುದು, ಪ್ರಾಯೋಗಿಕವಾಗಿ ಇದು ಸುಲಭವಲ್ಲ. ನಿಮ್ಮ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.
ಧನು ರಾಶಿ: ಯಾರಾದರೂ ತುರ್ತಾಗಿ ನಿಮ್ಮ ಬಳಿ ಸಾಲವನ್ನು ಕೇಳಿಬರಬಹುದು. ಅನುಕಂಪದಿಂದ ಕೊಡುವ ಯೋಚನೆಯನ್ನು ಮಾಡುವಿರಿ. ಆದರೆ ಅವರಿಂದ ಪಡೆಯಬೇಕಾದುದನ್ನು ಪಡೆಯಿರಿ. ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ಸ್ಪರ್ಧೆಯಲ್ಲಿ ಗೆಲುವಿಗಾಗಿ ನಿಮ್ಮ ಶ್ರಮವು ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಬಹುದು. ನಿಮ್ಮ ನೋವಿಗೆ ಸ್ಪಂದಿಸುವವರಿಲ್ಲ ಎನ್ನುವ ಕೊರಗು ಬರಬಹುದು. ಸಂಗಾತಿಯಿಂದ ನಿಮಗೆ ಬೆಂಬಲವು ಪೂರ್ಣವಾಗಿ ಸಿಗದೇ ಇರಬಹುದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರುವುದು. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೀಗುವುದು ಬೇಡ. ಜನಸಾಮಾನ್ಯರ ಜೊತೆ ಬೆರೆಯುವುದು ನಿಮಗೆ ಆಗದು. ವಂಚಿಸುವ ಯೋಚನೆ ಮಾಡಿದ್ದರೆ ಅದನ್ನು ಮರೆತುಬಿಡಿ. ಪತ್ರವ್ಯವಹಾರವನ್ನು ಸರಿಯಾಗಿ ಇಟ್ಟುಕೊಳ್ಳಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ.
ಮಕರ ರಾಶಿ: ಎಲ್ಲವೂ ಸರಿ ಇದ್ದರೂ ಏನೂ ಇಲ್ಲವೆಂಬ ಕೊರಗು ಮನವನ್ನು ಚುಚ್ಚುವುದು. ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಬೇಕಾದ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ಅನಗತ್ಯ ವಸ್ತುಗಳನ್ನು ಖರೀದಿಸುವಿರಿ. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗುವರು. ಯಾರೋ ಮಾಡಬೇಕಾದ ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬೆನ್ನನ್ನು ನೋಡಲಾಗದಿದ್ದರೂ ಕಲ್ಪಿಸಿಕೊಳ್ಳಬಹುದು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತಾತ್ಕಾಲಿಕವಾಗಿ ಸಾಲವನ್ನು ಮಾಡಬೇಕಾಗಬಹುದು. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಕೆಲಸದ ಒತ್ತಡದಿಂದ ನಿಮಗೆ ಇಂದು ಆಯಾಸವಾಗಬಹುದು. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ. ವಂಚನೆಯ ಸುಳಿವನ್ನು ಮೊದಲೇ ಪಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ಬೇರೆಯವರ ಸ್ಥಿತಿಯಿಂದ ನಿಮಗೂ ಸಮಾಧಾನವಾಗಬಹುದು.
ಕುಂಭ ರಾಶಿ: ನಿಮ್ಮ ಭಾವನೆಗೇ ಇಂದು ನೇರವಾಗಿ ಪೆಟ್ಟುಬೀಳುವ ಸಾಧ್ಯತೆ ಇದೆ. ಅದನ್ನು ಆ ಸಮಯದಲ್ಲಿ ನಿಭಾಯಿಸುವ ಜಾಣ್ಮೆ ಇರಲಿ. ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ಹೇಳಬೇಕಾದ ವಿಚಾರವನ್ನು ನೀವು ಸರಿಯಾಗಿ ಹೇಳಿ. ಬೇರೆಯವರನ್ನು ಗೊಂದಲಕ್ಕೆ ನೀವು ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿ ಮಗ್ನತೆಯು ಎಲ್ಲಿರಿಗೂ ಇಷ್ಟವಾಗುವುದು. ನೀವು ಹೋದಕಡೆ ನಿಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಎಲ್ಲ ಹಿನ್ನಡೆಗೂ ಕಾರಣವೊಂದು ಇರುತ್ತದೆ ಎಂಬುದನ್ನು ಇತರರಿಂದ ಮನದಟ್ಟು ಮಾಡಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಇಂದು ಧನ ಸಹಾಯವನ್ನು ಮಾಡುವಿರಿ. ಸರಳವಾದ ಕೆಲಸಗಳನ್ನು ಮಾಡುವಿರಿ. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಾರಾಟದ ವಿಷಯದಲ್ಲಿ ಹಿನ್ನಡೆಯಾಗಲಿದೆ. ಹೆದರಿದಷ್ಟೂ ಹೆದರಿಕೆಯಾಗುವುದು ಸಹಜ.
ಮೀನ ರಾಶಿ: ಇಂದು ನಿಮ್ಮ ಕಾರ್ಯದ ಒತ್ತಡದಿಂದ ಬೇರೆ ಏನನ್ನೂ ಆಲೋಚಿಸಲಾಗದು. ನೌಕರರ ಬಗ್ಗೆ ನಿಮಗೆ ಕಾಳಜಿ ಇರುವುದು. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮಾಡುವ ಕೌಶಲವು ನಿಮ್ಮದಾಗಲಿದೆ. ರಪ್ತು ವ್ಯವಹಾರವು ನಿಮಗೆ ಲಾಭದಾಯಕವಾಗಲಿದೆ. ಉದ್ಯಮಿಗಳು ಇಂದು ನಿಮ್ಮನ್ನು ಭೇಟಿಯಾಗಬಹುದು. ಭೂಮಿಯ ಖರೀದಿಗೆ ಸೂಕ್ತ ಸಮಯವು ಇದಾಗಿದೆ. ಸಂಗಾತಿಯ ವಿಚಾರಕ್ಕೆ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಸಹೋದ್ಯೋಗಿಗಳ ಅಸಹಕಾರದಿಂದ ನಿಮ್ಮ ನೆಮ್ಮದಿ ಸ್ವಲ್ಪ ಹೊತ್ತು ಹಾಳಾಗುವುದು. ಮನಸ್ಸಿನ ಚಾಂಚಲ್ಯವನ್ನು ನೀವು ನಿಗ್ರಹಿಸುವ ವಿಧಾನವನ್ನು ಕಂಡಿಲುಕೊಂಡಿರುವಿರಿ. ಅಧಿಕೃತ ಮೂಲದಿಂದ ಬಂದ ವಿಚಾರಗಳನ್ನು ಮಾತ್ರ ನಂಬಿ. ನಿಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾಸವು ಇರಲಿದ್ದು ಕೆಲವು ಕೆಲಸಗಳಿಗೆ ಇದು ತೊಡಕನ್ನು ತಂದೀತು. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ. ಜಾಣ್ಮೆಯಿಂದ ಸವಾಲನ್ನು ಎದುರಿಸಬೇಕಾಗಬಹುದು. ನೀವೇ ಸಮಯವನ್ನು ಹೊಂದಿಸಿಕೊಂಡು ಕಾರ್ಯದಿಂದ ಸಲ್ಪ ವಿಶ್ರಾಂತಿಯನ್ನು ಪಡೆಯಬೇಕು.
ಲೋಹಿತ ಹೆಬ್ಬಾರ್ – 8762924271 (what’s app only)