AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಮಾನಸಿಕ ಒತ್ತಡ, ಹಿರಿಯರ ಮಾತುಗಳು ನಿಮಗೆ ಕೋಪ ತರಿಸಬಹುದು

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಅಕ್ಟೋಬರ್​ 24: ವ್ಯಾಪಾರವನ್ನು ಅಚ್ಚುಕಟ್ಟಾಗಿ ಮಾಡುವ ಕೌಶಲವು ನಿಮ್ಮದಾಗಲಿದೆ. ರಪ್ತು ವ್ಯವಹಾರವು ನಿಮಗೆ ಲಾಭದಾಯಕವಾಗಲಿದೆ. ಉದ್ಯಮಿಗಳು ಇಂದು ನಿಮ್ಮನ್ನು ಭೇಟಿಯಾಗಬಹುದು.ಹಾಗಾದರೆ ಅಕ್ಟೋಬರ್​ 24ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಮಾನಸಿಕ ಒತ್ತಡ, ಹಿರಿಯರ ಮಾತುಗಳು ನಿಮಗೆ ಕೋಪ ತರಿಸಬಹುದು
ಮಾನಸಿಕ ಒತ್ತಡ, ಹಿರಿಯರ ಮಾತುಗಳು ನಿಮಗೆ ಕೋಪ ತರಿಸಬಹುದು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 24, 2024 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಸಿದ್ಧ​​, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:44 ರಿಂದ 03:12 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:27 ರಿಂದ 07:54ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 ರಿಂದ 10:49 ರವರೆಗೆ.

ತುಲಾ ರಾಶಿ: ಇಂದು ನಿಮಗೆ ಪೂರೈಕೆಯಲ್ಲಿ ಹಿನ್ನಡೆ ಅಥವಾ ಅಧಿಕ ಒತ್ತಡವಾಗಲಿದೆ. ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಸ್ವಲ್ಪಮಟ್ಟಿಗೆ ಸಾಲವು ಮುಕ್ತಾಯವಾಗಿದ್ದರಿಂದ ಕುಟುಂಬದಲ್ಲಿ ಸೌಖ್ಯವು ಇರಲಿದೆ. ಎಲ್ಲ ಕೆಲಸಗಳೂ ಅಪೂರ್ಣವಾಗಿರುವುದು ನಿಮಗೆ ಕಿರಿಕಿರಿ ಆಗಲಿದೆ. ನಿಮ್ಮ ಕಾರ್ಯದ ಉದ್ದೇಶವು ಭಂಗವಾಗಬಹುದು. ಯಾವುದನ್ನು ಮುಗಿಸಬೇಕು ಎನ್ನುವ ಗೊಂದಲವೂ ಇರುವುದು. ಮಾನಸಿಕ ಒತ್ತಡದಿಂದ ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಇಷ್ಟು ದಿನ‌ ಮನೆಯಿಂದಲೇ ಕೆಲಸ ಮಾಡುತ್ತಿದ್ದ ನಿಮಗೆ ಇಂದು ಕಛೇರಿಗೆ ಕರೆಯುವರು. ನಿಮ್ಮ ತುರ್ತು ಕಾರ್ಯಗಳನ್ನು ನೀವು ಬಿಡಬೇಕಾದೀತು. ಹಿರಿಯರ ಮಾತುಗಳೂ ನಿಮಗೆ ಸಿಟ್ಟು ತರಿಸಬಹುದು. ಯಾರ ಕಣ್ಣಿಗೂ ಕುಕ್ಕುವಂತಹ ಕಾರ್ಯವನ್ನು ನೀವು ಮಾಡಬೇಡಿ. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ನಿಮ್ಮ ಮಾತು ಸತ್ಯವೇ ಆದರೂ ಅದನ್ನು ಹೇಳುವ ರೀತಿಯಲ್ಲಿ ಹೇಳಿ.

ವೃಶ್ಚಿಕ ರಾಶಿ: ನಿಮ್ಮ ಇಂದಿನ ವಾದಕ್ಕೆ ಕೊನೆಮೊದಲಿಲ್ಲದೇ ಹೋಗಬಹುದು. ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಇಂದಿನ‌‌ ಎಲ್ಲ‌ ಕಾರ್ಯವನ್ನೂ ಒತ್ತಡದಿಂದಲೇ ಮಾಡಬೇಕಾದೀತು. ನೀವು ಏನಾದರೂ ಬದಲಾವಣೆಯನ್ನು ನಿಮ್ಮವರಿಂದ ನಿರೀಕ್ಷಿಸುವಿರಿ. ಶರೀರಪೀಡಿಯು ಹೆಚ್ಚಾಗಲಿದ್ದು ಕಛೇರಿಗೆ ಹೋಗುವವರು ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ಯಾರನ್ನೋ ದ್ವೇಷ‌ ಮಾಡುವುದು ಸರಿ ಕಾಣದು. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕಾಗುತ್ತದೆ. ಎಂದೋ ಕಾಣೆಯಾದ ವಸ್ತುವನ್ನು ಇಂದು ನೀವು ಹುಡುಕುವಿರಿ. ಮೌಕಿಕವಾಗಿ ನೀವು ಗೆಲ್ಲಬಹುದು, ಪ್ರಾಯೋಗಿಕವಾಗಿ ಇದು ಸುಲಭವಲ್ಲ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.

ಧನು ರಾಶಿ: ಯಾರಾದರೂ ತುರ್ತಾಗಿ ನಿಮ್ಮ ಬಳಿ‌ ಸಾಲವನ್ನು ಕೇಳಿಬರಬಹುದು. ಅನುಕಂಪದಿಂದ‌ ಕೊಡುವ ಯೋಚನೆಯನ್ನು ಮಾಡುವಿರಿ. ಆದರೆ ಅವರಿಂದ ಪಡೆಯಬೇಕಾದುದನ್ನು ಪಡೆಯಿರಿ. ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ಸ್ಪರ್ಧೆಯಲ್ಲಿ ಗೆಲುವಿಗಾಗಿ ನಿಮ್ಮ ಶ್ರಮವು ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಬಹುದು. ನಿಮ್ಮ ನೋವಿಗೆ ಸ್ಪಂದಿಸುವವರಿಲ್ಲ ಎನ್ನುವ ಕೊರಗು ಬರಬಹುದು. ಸಂಗಾತಿಯಿಂದ ನಿಮಗೆ ಬೆಂಬಲವು ಪೂರ್ಣವಾಗಿ ಸಿಗದೇ ಇರಬಹುದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರುವುದು. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೀಗುವುದು ಬೇಡ.‌ ಜನಸಾಮಾನ್ಯರ ಜೊತೆ ಬೆರೆಯುವುದು ನಿಮಗೆ‌ ಆಗದು. ವಂಚಿಸುವ ಯೋಚನೆ ಮಾಡಿದ್ದರೆ ಅದನ್ನು ಮರೆತುಬಿಡಿ. ಪತ್ರವ್ಯವಹಾರವನ್ನು ಸರಿಯಾಗಿ ಇಟ್ಟುಕೊಳ್ಳಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ.

ಮಕರ ರಾಶಿ: ಎಲ್ಲವೂ ಸರಿ ಇದ್ದರೂ ಏನೂ ಇಲ್ಲವೆಂಬ ಕೊರಗು ಮನವನ್ನು ಚುಚ್ಚುವುದು. ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಬೇಕಾದ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ಅನಗತ್ಯ ವಸ್ತುಗಳನ್ನು ಖರೀದಿಸುವಿರಿ. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗುವರು. ಯಾರೋ‌ ಮಾಡಬೇಕಾದ ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬೆನ್ನನ್ನು ನೋಡಲಾಗದಿದ್ದರೂ ಕಲ್ಪಿಸಿಕೊಳ್ಳಬಹುದು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತಾತ್ಕಾಲಿಕವಾಗಿ ಸಾಲವನ್ನು ಮಾಡಬೇಕಾಗಬಹುದು. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಕೆಲಸದ ಒತ್ತಡದಿಂದ ನಿಮಗೆ ಇಂದು ಆಯಾಸವಾಗಬಹುದು. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ. ವಂಚನೆಯ ಸುಳಿವನ್ನು ಮೊದಲೇ ಪಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ಬೇರೆಯವರ ಸ್ಥಿತಿಯಿಂದ ನಿಮಗೂ ಸಮಾಧಾನವಾಗಬಹುದು.

ಕುಂಭ ರಾಶಿ: ನಿಮ್ಮ ಭಾವನೆಗೇ ಇಂದು ನೇರವಾಗಿ ಪೆಟ್ಟುಬೀಳುವ ಸಾಧ್ಯತೆ ಇದೆ. ಅದನ್ನು ಆ ಸಮಯದಲ್ಲಿ ನಿಭಾಯಿಸುವ ಜಾಣ್ಮೆ ಇರಲಿ. ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ಹೇಳಬೇಕಾದ‌ ವಿಚಾರವನ್ನು ನೀವು ಸರಿಯಾಗಿ ಹೇಳಿ.‌ ಬೇರೆಯವರನ್ನು ಗೊಂದಲಕ್ಕೆ ನೀವು ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿ ಮಗ್ನತೆಯು ಎಲ್ಲಿರಿಗೂ ಇಷ್ಟವಾಗುವುದು. ನೀವು ಹೋದಕಡೆ ನಿಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಎಲ್ಲ ಹಿನ್ನಡೆಗೂ ಕಾರಣವೊಂದು ಇರುತ್ತದೆ ಎಂಬುದನ್ನು ಇತರರಿಂದ ಮನದಟ್ಟು ಮಾಡಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಇಂದು ಧನ ಸಹಾಯವನ್ನು ಮಾಡುವಿರಿ. ಸರಳವಾದ ಕೆಲಸಗಳನ್ನು ಮಾಡುವಿರಿ. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಾರಾಟದ ವಿಷಯದಲ್ಲಿ ಹಿನ್ನಡೆಯಾಗಲಿದೆ. ಹೆದರಿದಷ್ಟೂ ಹೆದರಿಕೆಯಾಗುವುದು ಸಹಜ.

ಮೀನ ರಾಶಿ: ಇಂದು ನಿಮ್ಮ ಕಾರ್ಯದ ಒತ್ತಡದಿಂದ ಬೇರೆ ಏನನ್ನೂ ಆಲೋಚಿಸಲಾಗದು. ನೌಕರರ ಬಗ್ಗೆ ನಿಮಗೆ ಕಾಳಜಿ‌ ಇರುವುದು. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮಾಡುವ ಕೌಶಲವು ನಿಮ್ಮದಾಗಲಿದೆ. ರಪ್ತು ವ್ಯವಹಾರವು ನಿಮಗೆ ಲಾಭದಾಯಕವಾಗಲಿದೆ. ಉದ್ಯಮಿಗಳು ಇಂದು ನಿಮ್ಮನ್ನು ಭೇಟಿಯಾಗಬಹುದು. ಭೂಮಿಯ ಖರೀದಿಗೆ ಸೂಕ್ತ ಸಮಯವು ಇದಾಗಿದೆ. ಸಂಗಾತಿಯ ವಿಚಾರಕ್ಕೆ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಸಹೋದ್ಯೋಗಿಗಳ ಅಸಹಕಾರದಿಂದ‌ ನಿಮ್ಮ ನೆಮ್ಮದಿ‌ ಸ್ವಲ್ಪ ಹೊತ್ತು ಹಾಳಾಗುವುದು. ಮನಸ್ಸಿನ ಚಾಂಚಲ್ಯವನ್ನು ನೀವು ನಿಗ್ರಹಿಸುವ ವಿಧಾನವನ್ನು ಕಂಡಿಲುಕೊಂಡಿರುವಿರಿ. ಅಧಿಕೃತ ಮೂಲದಿಂದ‌ ಬಂದ ವಿಚಾರಗಳನ್ನು ಮಾತ್ರ ನಂಬಿ. ನಿಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾಸವು ಇರಲಿದ್ದು ಕೆಲವು ಕೆಲಸಗಳಿಗೆ ಇದು ತೊಡಕನ್ನು ತಂದೀತು. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ. ಜಾಣ್ಮೆಯಿಂದ ಸವಾಲನ್ನು ಎದುರಿಸಬೇಕಾಗಬಹುದು. ನೀವೇ ಸಮಯವನ್ನು ಹೊಂದಿಸಿಕೊಂಡು ಕಾರ್ಯದಿಂದ ಸಲ್ಪ‌ ವಿಶ್ರಾಂತಿಯನ್ನು ಪಡೆಯಬೇಕು.