Daily Horoscope 25 October 2024: ನಿಮ್ಮ ಪ್ರಾಮಾಣಿಕತೆ ಮಾರ್ಗವನ್ನು ಬಿಡುವುದು ಬೇಡ
Daily Horoscope 25 October 2024: ಅಕ್ಟೋಬರ್ 25, 2024ರ ನಿಮ್ಮ ಭವಿಷ್ಯ ಹೇಗಿದೆ? ಬುಧವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ ,ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ನವಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:17 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:11 ರಿಂದ ಸಂಜೆ 04:39ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:22 ರವರೆಗೆ.
ಮೇಷ ರಾಶಿ: ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಸೋಲಾಗಬಹುದು. ಇಂದು ನಿಮಗೆ ಗೊತ್ತಿಲ್ಲದೇ ಪುಣ್ಯವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ತಂದುಬಿಡುವುದು. ಶತ್ರುಗಳ ಬಗ್ಗೆ ನೀವು ಸರಿಯಾದ ಮಾಹಿತಿಯನ್ನು ಪಡೆಯುವಿರಿ. ಅನಿರೀಕ್ಷಿತ ವಾರ್ತೆಗಳು ನಿಮ್ಮ ಮನಸ್ಸನ್ನು ಖಿನ್ನಗೊಳಿಸುವುದು. ಬಂಧುಗಳ ಪ್ರೀತಿಯು ನಿಮಗೆ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಬಿಡುವುದು ಬೇಡ. ಸಂಗಾತಿಯ ಆರೋಗ್ಯದ ಹದವು ತಪ್ಪುವುದು. ನಿಮ್ಮ ಕೊಟ್ಟ ಜವಾಬ್ದಾರಿಯನ್ನು ಸಕಾಲಕ್ಕೆ ಪೂರ್ಣಗೊಳಿಸುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ. ಸುಳ್ಳು ಹೇಳವ ಸಂದರ್ಭವೂ ಬರಬಹುದು. ಉದ್ವೇಗಕ್ಕೆ ಸಿಲುಕಿ ಏನನ್ನಾದರೂ ಮಾಡಲು ಹೋಗುವಿರಿ. ಸಮೂಹದ ಜೊತೆ ನಿಮ್ಮ ಕೆಲಸವು ಆಗುವುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ. ಒತ್ತಡದಿಂದ ಒಳ್ಳೆಯ ಕಾರ್ಯವೂ ಹಾಳಾಗುವುದು.
ವೃಷಭ ರಾಶಿ: ಇಂದು ಬರುವ ಅಪರೂಪದ ಸಂದರ್ಭವನ್ನು ಬಳಿಸಿದರೆ ಉತ್ತಮ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ. ಬಂಧುಗಳ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಯಾರ ಮೇಲಾದರೂ ನಿಮ್ಮ ತಪ್ಪನ್ನು ಹಾಕುವಿರಿ. ಬರುವ ಆದಾಯಕ್ಕೆ ಅಡೆತಡೆಗಳು ಬರಬಹುದು. ಸ್ನೇಹವು ಶಿಥಿಲವಾಗುವುದು. ನಿಮಗೆ ಬೇಕಾದುದನ್ನು ಮಾತ್ರ ಇಟ್ಟುಕೊಂಡು ಬೇಡದ್ದನ್ನು ಕೊಡಿ. ಬಹಳ ದಿನಗಳಿಂದ ನಿಮ್ಮ ಕೆಲಸವು ವೇಗವಾಗಿ ಸಾಗುತ್ತಿದ್ದು ಅನಿರೀಕ್ಷತವಾಗಿ ಮಂದಗತಿಯಲ್ಲಿ ಸಾಗುವುದು. ಸಿಟ್ಟಾಗುವ ಸಂದರ್ಭವು ಬರಬಹುದು. ಎಲ್ಲರ ಜೊತೆ ತಾಳ್ಮೆಯಿಂದ ಮಾತನ್ನಾಡಿ. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ. ಸಾಹಸ ಮಾಡಲು ಹೋಗಿ ಮುಗ್ಗರಿಸುವಿರಿ.
ಮಿಥುನ ರಾಶಿ: ಭರವಸೆಯ ಮಾತುಗಳೇ ನಿಮಗೆ ಧೈರ್ಯವನ್ನು ಕೊಡಬಹುದು. ಉದ್ಯೋಗದಲ್ಲಿ ಆಗದ ಸಣ್ಣ ತಪ್ಪಿನಿಂದ ನಷ್ಟವಾಗಲಿದ್ದು ಅದು ನಿಮ್ಮ ಮೇಲೆ ಬರಬಹುದು. ಭೂಮಿಯ ವ್ಯವಹಾರದಲ್ಲಿ ಲಾಭವಾಗದೇ ಕೇವಲ ಓಡಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಹೆದರಿಕೆ ಆಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮವನ್ನು ತೆಗೆದುಕೊಳ್ಳುವಿರಿ. ಪ್ರಸಿದ್ಧ ವ್ಯಕ್ತಿಗಳ ಭೇಟಿಯಾಗುವುದು. ಸರಿಯಾದ ಕಡೆ ಹೂಡಿಕೆ ಮಾಡದೇ ಹಣವನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದು ಕಷ್ಟವಾದೀತು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.
ಕರ್ಕಾಟಕ ರಾಶಿ: ದುರಸ್ತಿ ಕಾರ್ಯಗಳಿಗೆ ಸಂಪತ್ತನ್ನು ಖಾಲಿಮಾಡಬೇಕಾಗಬಹುದು. ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಹಠದ ಸ್ವಭಾವದಿಂದ ಪ್ರೀತಿಯನ್ನು ಕಳೆದುಕೊಳ್ಳುವಿರಿ. ಇಂದು ವ್ಯವಹಾರವನ್ನು ಮಾಡಲು ನಿಮಗೆ ಧೈರ್ಯವು ಸಾಕಾಗದು. ವಾಹನದಿಂದ ಇಂದು ಆದಾಯವು ಬರಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿ. ನಿಮ್ಮ ಇಷ್ಟವಾದ ವಸ್ತುವನ್ನು ಕಳೆದುಕೊಳ್ಳುವಿರಿ. ಬಂಧುಗಳು ನಿಮ್ಮನ್ನು ಅಳೆಯುವರು. ಉನ್ನತ ಅಭ್ಯಾಸವನ್ನು ಮಾಡುವ ಅಪೇಕ್ಷೆ ಇರಲಿದೆ. ಇದಕ್ಕಾಗಿ ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಕೇಳುವಿರಿ. ಹೂಡಿಕೆಯಿಂದ ಹಿಂಜರಿಯುವ ಸಾಧ್ಯತೆ ಇದೆ. ಆಪ್ತರ ಮಾತಿನಿಂದ ನಿಮಗೆ ಬೇಸರವಾಗಲಿದೆ. ಕುಟುಂಬ ಮೇಲೆ ಬೇಸರ ಬರಬಹುದು. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ.
ಸಿಂಹ ರಾಶಿ; ಅಧಿಕಾರಿಗಳಿಗೆ ಸಮಸ್ಯೆ ಎದುರಾಗುವುದು. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಗೃಹ ಬಳಕೆಗೆ ಬೇಕಾದ ಸಾಮಾನುಗಳನ್ನು ನೀವು ಖರೀದಿಸುವ ಭರದಲ್ಲಿ ಖರ್ಚಿನ ಬಗ್ಗೆಯೂ ಸೂಕ್ತ ಆಲೋಚನೆಯನ್ನು ಮಾಡಿ. ಶತ್ರುಗಳ ವಿರುದ್ಧ ಸಮರಸಾರದೇ ತಾಳ್ಮೆಯಿಂದ ನಿರ್ವಹಿಸುವಿರಿ. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವು ಚೆನ್ನಾಗಿರುವುದು. ನಿಮ್ಮ ಗುರಿಯ ಬಗ್ಗೆ ಕೆಲವರು ಆಡಿಕೊಂಡಾರು. ಅದನ್ನು ಕೇಳಿಸಿಕೊಳ್ಳದೇ ಮುಂದಡಿ ಇಡಿ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮದೇ ಕೆಲಸವಾದರೂ ಸಂಪೂರ್ಣ ಯಶಸ್ಸನ್ನು ನೀವು ಪಡೆಯಲಾರಿರಿ. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕ ಪಡೆಯುವುದು ಬೇಡ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಕೆಲವು ತೊಂದರೆಗಳನ್ನು ನೀವು ತೆಗೆದುಕೊಳ್ಳುವುದು ಅನಿವಾರ್ಯ.
ಕನ್ಯಾ ರಾಶಿ: ಕಾರ್ಯದಲ್ಲಿ ಇಂದು ನಿಮ್ಮಿಂದಲೇ ತಪ್ಪಾಗುವುದು. ಇದರಿಂದ ಉತ್ತಮ ಕಲಿಕೆಯೂ ನಿಮಗೇ ಆಗುವುದು. ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ಉದ್ಯಮದಲ್ಲಿ ಆಗುವ ಒತ್ತಡವನ್ನು ನಿವಾರಿಸಿಕೊಳ್ಳಲು ಅನ್ಯ ಮಾರ್ಗವನ್ನು ಕಂಡುಕೊಳ್ಳಿ. ಮರೆವು ನಿಮಗೆ ಉತ್ತಮ ಎನಿಸಬಹುದು. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ನಿಲ್ಲದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉತ್ಸಾಹವನ್ನು ಕೊಡುವುದು. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಲೆಕ್ಕಪತ್ರದ ವಿಷಯದಲ್ಲಿ ನಿಮಗೆ ಯಾವುದೇ ಅಡ್ಡ ದಾರಿಯನ್ನು ಹಿಡಿಯುವುದು ಬೇಡ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗಬಹುದು. ಸಂಬಂಧಗಳನ್ನು ಬೆಳೆಸಿಕೊಂಡಾಗಲಷ್ಟೇ ಬಾಂಧವ್ಯ ಬೆಳೆಡಯುವುದು. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ಪ್ರೀತಿಯಿಂದ ಆಡಿದ ಮಾತು ಇಂದು ಉಪಯೋಗಕ್ಕೆ ಬರುವುದು.
ತುಲಾ ರಾಶಿ; ಮಾನಸಿಕವಾದ ನೋವನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುವಿರಿ. ಇಂದು ನಿಮ್ಮ ಮಾತುಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯ ಕೊರತೆಯು ಕಾಣುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಹೆಚ್ಚುಕೊಡಬೇಕಾದೀತು. ಪ್ರಯೋಜನವಿಲ್ಲದೆ ಯಾವ ಕಾರ್ಯವನ್ನೂ ಮಾಡಲು ಇಷ್ಟಪಡುವುದಿಲ್ಲ. ಜನರ ಜೊತೆ ಬೆರೆಯುವುದು ಕಷ್ಟವಾದೀತು. ವಿದೇಶೀ ವ್ಯಾಪಾರದಿಂದ ನಷ್ಟವಾಗಬಹುದು. ಉದ್ಯೋಗದಲ್ಲಿ ನಿಮ್ಮ ಮನಃಸ್ಥಿತಿಯು ಖಿನ್ನವಾಗಲಿದೆ. ನಿಮಗೆ ಹಣವನ್ನು ಉಳಿಸಿಕೊಳ್ಳುವುದು ಸಮಸ್ಯೆಯೇ ಆಗಬಹುದು. ದೂರದ ಊರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ಪ್ರೇಮದಿಂದ ದುಃಖವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಒಂಟಿಯಾಗಿ ಎಲ್ಲಿಗಾದರೂ ಹೋಗಿ ಸುತ್ತಾಡಿ ಬರುವಿರಿ.
ವೃಶ್ಚಿಕ ರಾಶಿ: ನಿಮ್ಮ ಸ್ಥಗಿತಗೊಂಡ ಕಾರ್ಯಗಳಿಗೆ ಅನ್ಯರಿಂದ ಪ್ರೇರಣೆ ಸಿಗುವುದು. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಇಂದಿನ ದೀರ್ಘ ಪ್ರಯಾಣವು ಹಲವು ತೊಡಕುಗಳಿಂದ ಇರಬಹುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು. ಸಂಗಾತಿಯ ಮಾತಿಗೆ ನಿಮ್ಮ ಪ್ರತಿಕ್ರಿಯೆಯು ಇಲ್ಲದಿರುವುದು ಬೇಸರವನ್ನು ತರಿಸಬಹುದು. ಮಹಿಳಾ ಉದ್ಯೋಗಿಗಳಿಗೆ ಭಡ್ತಿ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆಹಾರದಲ್ಲಿ ನಿಯಮಿತಿ ಇರಲಿ. ಪಿತ್ತಸಂಬಂಧಿ ರೋಗವು ಕಾಣಿಸಿಕೊಳ್ಳಬಹುದು. ಇತಿಹಾಸಕ್ಕೆ ವಿಚಾರದಲ್ಲಿ ಶೋಧನೆಯನ್ನು ಮಾಡುವಿರಿ. ನಿಮ್ಮ ಕೆಲಸಗಳನ್ನು ಇನ್ನೊಬ್ಬರಿಗೆ ಕೊಟ್ಟುಬಿಡುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ. ಸಮಯದ ಬೆಲೆಯನ್ನು ಅನ್ಯರಿಂದ ಪಡೆಯುವಿರಿ. ವ್ಯಾಪಾರದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ.
ಧನು ರಾಶಿ; ಒಳ್ಳೆಯ ಸುದ್ದಿಯನ್ನು ನಾಲ್ಕು ಜನರ ಜೊತೆ ಹಂಚಿಕೊಳ್ಳುವಿರಿ. ಇಂದು ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ವಿವಾಹ ಯೋಗವು ಬಂದಿದ್ದು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ. ನಿಮ್ಮ ಮಾತು ಯಾರನ್ನಾದರೂ ಘಾಸಿ ಮಾಡೀತು. ಜಲಮೂಲದ ವ್ಯಾಪಾರದಿಂದ ಲಾಭವನ್ನು ಕಾಣಬಹುದು. ಆದರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ಹಣವನ್ನು ಕೊಡುವ ಸಂದರ್ಭವು ಬರಬಹುದು. ಮನೆಯ ನಿರ್ಮಾಣದಲ್ಲಿ ಹಿನ್ನಡೆಯಾಗುವುದು. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿ ಶುದ್ಧತೆ ಇರಲಿ. ಭವಿಷ್ಯದ ಬಗ್ಗೆ ಬಹಳ ಆಲೋಚನೆಯನ್ನು ಮಾಡುವಿರಿ. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ. ದೂರದ ಬಂಧುಗಳು ಹತ್ತಿರವಾಗುವರು. ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ. ನಿಮಗೆ ಪ್ರಶಂಸೆಯು ಬಲವನ್ನು ಕೊಡುವುದು. ನಿಮ್ಮ ಕೆಲಸಕ್ಕೆ ಬೇಕಾದ ವಸ್ತುಗಳು ಕಣ್ಮರೆಯಾಗಬಹುದು.
ಮಕರ ರಾಶಿ; ನಿಮ್ಮ ವೈಯಕ್ತಿಕ ತೊಂದರೆಯನ್ನು ಎಲ್ಲಿಯೂ ಹೇಳಿಕೊಳ್ಳುವ ಮನಸ್ಸಾಗದು. ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ಇಂದು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ನೀವು ಭಾಗಿಯಾಗಲಾರಿರಿ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದ ಕೆಲಸಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರವು ಲಾಭದಾಯಕವಲ್ಲದಿದ್ದರೂ ಅದನ್ನೇ ನಡೆಸಲು ಬಯಸುವಿರಿ. ನಿಮ್ಮ ಅತಿಯಾದ ಮಾತು ಯಾರಿಗೂ ಸುಖ ಕೊಡದು. ನಿರ್ಲಕ್ಷ್ಯದ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಪಾಲುದಾರಿಕೆಯು ಬಳಕೆ ಇಲ್ಲದೇ ತಪ್ಪಿಹೋಗುವುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ. ಯಾರ ಸರಿ ತಪ್ಪುಗಳ ಬಗ್ಗೆ ನಿಮ್ಮ ವಿಮರ್ಶೆ ಬೇಡ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ.
ಕುಂಭ ರಾಶಿ: ಕೆಲವು ಕ್ಷಣಗಳನ್ನು ನೀವು ಕಳೆದುಕೊಳ್ಳುವ ಬೇಸರವಿರುವುದು. ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ವಿಪರೀತ ಓಡಾಟದಿಂದ ನಿಮಗೆ ದಣಿವಾಗಲಿದೆ. ಹೆಚ್ಚಿನ ಸುಖಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಪ್ರೋತ್ಸಾಹವು ಸಿಗಲಿದೆ. ಮುಖವಾಡವನ್ನು ಹಾಕಿಕೊಂಡು ವರ್ತಿಸುವ ಜನರ ಜೊತೆ ಮೈಯೆಲ್ಲ ಕಣ್ಣಾಗಿ ಇರಬೇಕಾಗುವುದು. ಅಪರಿಚಿತರ ಸಹವಾಸವನ್ನು ಮಾಡುವಿರಿ. ಓಡಾಡುವಾಗ ಎಚ್ಚರ ಇರಲಿ. ಎಲ್ಲವನ್ನೂ ಒಬ್ಬರೇ ಮಾಡಿ ಮುಗಿಸಬೇಕು ಎನ್ನುವ ಉತ್ಸಾಹವು ಇದ್ದರೂ ಇನ್ನೊಬ್ಬರನ್ನು ನಿಮ್ಮ ಜೊತೆಗೆ ಜೋಡಿಸಿ ಕೊಂಡು ಕಾರ್ಯವನ್ನು ಯಶಸ್ವಿಯಾಗಿಸಿ. ಇರುವುದನ್ನು ಇದ್ದಂತೆ ಹೇಳುವುದರಿಂದ ನಿಮಗೆ ತೊಂದರೆಯಾದೀತು. ಇಂದಿನ ಒಂದು ಸಂದರ್ಭ ನಿಮ್ಮನ್ನು ಅಪಾಯದಿಂದ ತಪ್ಪಿಸುವುದು. ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ.
ಮೀನ ರಾಶಿ: ನೆಮ್ಮದಿ ಬೇಕಾದರೆ ಕೆಲವನ್ನು ಬಿಡುವುದು ಅನಿವಾರ್ಯವಾಗಬಹುದು. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ ಸಂಪಾದನೆಯಾಗಲಿದೆ. ಅತಿಥಿಗಳ ಸತ್ಕಾರವನ್ನು ಮನೆಯಲ್ಲಿ ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಹರಟೆ ಹೊಡೆಯುವಿರಿ. ಮಕ್ಕಳ ಕಾರ್ಯವು ನಿಮಗೆ ಹೆಮ್ಮೆ ಎನಿಸುವುದು. ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರಲಿದೆ. ಬೇಕೆಂದೇ ನಿಮ್ಮ ಮೇಲೆ ಯಾರಾದರೂ ಎರಗಿ ಬರಬಹುದು. ಪ್ರತಿಕ್ರಯಿಸುವಾಗ ಎಚ್ಚರವಿರಲಿ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ನಿಮ್ಮ ಶುದ್ಧ ಮನಸ್ಸಿನಿಂದ ಎಲ್ಲರಿಗೂ ಶುಭವನ್ನೇ ಹಾರೈಸಿ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವಿರಿ. ಉತ್ತಮ ಅವಕಾಶಗಳನ್ನು ವೈರಾಗ್ಯ ಬುದ್ಧಿಯಿಂದ ಬಿಟ್ಟು ಕೊಡುವಿರಿ. ಕುಟುಂಬದಲ್ಲಿ ಐಕಮತ್ಯದ ಕೊರತೆಯು ಕಾಣಿಸುವುದು. ವಸ್ತುಗಳು ಕಾಣೆಯಾಗಬಹುದು. ಎಲ್ಲವನ್ನೂ ನಿಮ್ಮ ಮೇಲೆ ಹೇರಬಹುದು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ.
ಲೋಹಿತ ಹೆಬ್ಬಾರ್ – 8762924271 (what’s app only)