Daily Horoscope: ಈ ರಾಶಿಯವ ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಅಕ್ಟೋಬರ್​ 25: ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರಲಿದೆ. ಬೇಕೆಂದೇ ನಿಮ್ಮ ಮೇಲೆ ಯಾರಾದರೂ ಎರಗಿ ಬರಬಹುದು. ಪ್ರತಿಕ್ರಯಿಸುವಾಗ ಎಚ್ಚರವಿರಲಿ. ಹಾಗಾದರೆ ಅಕ್ಟೋಬರ್​ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವ ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ
Daily Horoscope: ಈ ರಾಶಿಯವ ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ನವಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಶುಭ​​, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:17 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:11 ರಿಂದ ಸಂಜೆ 04:39ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:22 ರವರೆಗೆ.

ತುಲಾ ರಾಶಿ: ಮಾನಸಿಕವಾದ ನೋವನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುವಿರಿ. ಇಂದು ನಿಮ್ಮ ಮಾತುಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯ ಕೊರತೆಯು ಕಾಣುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಹೆಚ್ಚುಕೊಡಬೇಕಾದೀತು. ಪ್ರಯೋಜನವಿಲ್ಲದೆ ಯಾವ ಕಾರ್ಯವನ್ನೂ ಮಾಡಲು ಇಷ್ಟಪಡುವುದಿಲ್ಲ. ಜನರ ಜೊತೆ ಬೆರೆಯುವುದು ಕಷ್ಟವಾದೀತು.‌ ವಿದೇಶೀ ವ್ಯಾಪಾರದಿಂದ ನಷ್ಟವಾಗಬಹುದು. ಉದ್ಯೋಗದಲ್ಲಿ ನಿಮ್ಮ ಮನಃಸ್ಥಿತಿಯು ಖಿನ್ನವಾಗಲಿದೆ. ನಿಮಗೆ ಹಣವನ್ನು ಉಳಿಸಿಕೊಳ್ಳುವುದು ಸಮಸ್ಯೆಯೇ ಆಗಬಹುದು. ದೂರದ ಊರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ಪ್ರೇಮದಿಂದ ದುಃಖವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಒಂಟಿಯಾಗಿ ಎಲ್ಲಿಗಾದರೂ ಹೋಗಿ ಸುತ್ತಾಡಿ ಬರುವಿರಿ.

ವೃಶ್ಚಿಕ ರಾಶಿ: ನಿಮ್ಮ ಸ್ಥಗಿತಗೊಂಡ ಕಾರ್ಯಗಳಿಗೆ ಅನ್ಯರಿಂದ ಪ್ರೇರಣೆ ಸಿಗುವುದು. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ನಿಮ್ಮ ಇಂದಿನ ದೀರ್ಘ ಪ್ರಯಾಣವು ಹಲವು ತೊಡಕುಗಳಿಂದ ಇರಬಹುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು.‌ ಸಂಗಾತಿಯ ಮಾತಿಗೆ ನಿಮ್ಮ ಪ್ರತಿಕ್ರಿಯೆಯು ಇಲ್ಲದಿರುವುದು ಬೇಸರವನ್ನು ತರಿಸಬಹುದು. ಮಹಿಳಾ ಉದ್ಯೋಗಿಗಳಿಗೆ ಭಡ್ತಿ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆಹಾರದಲ್ಲಿ ನಿಯಮಿತಿ ಇರಲಿ. ಪಿತ್ತಸಂಬಂಧಿ ರೋಗವು ಕಾಣಿಸಿಕೊಳ್ಳಬಹುದು. ಇತಿಹಾಸಕ್ಕೆ ವಿಚಾರದಲ್ಲಿ ಶೋಧನೆಯನ್ನು ಮಾಡುವಿರಿ. ನಿಮ್ಮ ಕೆಲಸಗಳನ್ನು ಇನ್ನೊಬ್ಬರಿಗೆ ಕೊಟ್ಟುಬಿಡುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ. ಸಮಯದ ಬೆಲೆಯನ್ನು ಅನ್ಯರಿಂದ ಪಡೆಯುವಿರಿ. ವ್ಯಾಪಾರದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ.

ಧನು ರಾಶಿ; ಒಳ್ಳೆಯ ಸುದ್ದಿಯನ್ನು ನಾಲ್ಕು ಜನರ ಜೊತೆ ಹಂಚಿಕೊಳ್ಳುವಿರಿ. ಇಂದು ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ವಿವಾಹ ಯೋಗವು ಬಂದಿದ್ದು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ.‌ ನಿಮ್ಮ‌ ಮಾತು ಯಾರನ್ನಾದರೂ ಘಾಸಿ ಮಾಡೀತು. ಜಲಮೂಲದ ವ್ಯಾಪಾರದಿಂದ ಲಾಭವನ್ನು ಕಾಣಬಹುದು. ಆದರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ಹಣವನ್ನು ಕೊಡುವ ಸಂದರ್ಭವು ಬರಬಹುದು. ಮನೆಯ ನಿರ್ಮಾಣದಲ್ಲಿ ಹಿನ್ನಡೆಯಾಗುವುದು. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿ ಶುದ್ಧತೆ ಇರಲಿ. ಭವಿಷ್ಯದ ಬಗ್ಗೆ ಬಹಳ ಆಲೋಚನೆಯನ್ನು ಮಾಡುವಿರಿ. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ. ದೂರದ ಬಂಧುಗಳು ಹತ್ತಿರವಾಗುವರು. ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ. ನಿಮಗೆ ಪ್ರಶಂಸೆಯು ಬಲವನ್ನು ಕೊಡುವುದು. ನಿಮ್ಮ ಕೆಲಸಕ್ಕೆ ಬೇಕಾದ ವಸ್ತುಗಳು ಕಣ್ಮರೆಯಾಗಬಹುದು.

ಮಕರ ರಾಶಿ: ನಿಮ್ಮ ವೈಯಕ್ತಿಕ ತೊಂದರೆಯನ್ನು ಎಲ್ಲಿಯೂ ಹೇಳಿಕೊಳ್ಳುವ ಮನಸ್ಸಾಗದು. ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ಇಂದು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ನೀವು ಭಾಗಿಯಾಗಲಾರಿರಿ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದ‌‌‌ ಕೆಲಸಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರವು ಲಾಭದಾಯಕವಲ್ಲದಿದ್ದರೂ ಅದನ್ನೇ‌ ನಡೆಸಲು ಬಯಸುವಿರಿ. ನಿಮ್ಮ ಅತಿಯಾದ ಮಾತು ಯಾರಿಗೂ ಸುಖ ಕೊಡದು. ನಿರ್ಲಕ್ಷ್ಯದ‌ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಪಾಲುದಾರಿಕೆಯು ಬಳಕೆ ಇಲ್ಲದೇ ತಪ್ಪಿಹೋಗುವುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ. ಯಾರ ಸರಿ ತಪ್ಪುಗಳ ಬಗ್ಗೆ ನಿಮ್ಮ ವಿಮರ್ಶೆ ಬೇಡ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ.

ಕುಂಭ ರಾಶಿ: ಕೆಲವು ಕ್ಷಣಗಳನ್ನು ನೀವು ಕಳೆದುಕೊಳ್ಳುವ ಬೇಸರವಿರುವುದು. ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ವಿಪರೀತ ಓಡಾಟದಿಂದ‌ ನಿಮಗೆ ದಣಿವಾಗಲಿದೆ. ಹೆಚ್ಚಿನ ಸುಖಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಪ್ರೋತ್ಸಾಹವು ಸಿಗಲಿದೆ. ಮುಖವಾಡವನ್ನು ಹಾಕಿಕೊಂಡು ವರ್ತಿಸುವ ಜನರ ಜೊತೆ ಮೈಯೆಲ್ಲ ಕಣ್ಣಾಗಿ ಇರಬೇಕಾಗುವುದು. ಅಪರಿಚಿತರ ಸಹವಾಸವನ್ನು ಮಾಡುವಿರಿ. ಓಡಾಡುವಾಗ ಎಚ್ಚರ ಇರಲಿ. ಎಲ್ಲವನ್ನೂ ಒಬ್ಬರೇ ಮಾಡಿ ಮುಗಿಸಬೇಕು ಎನ್ನುವ ಉತ್ಸಾಹವು ಇದ್ದರೂ ಇನ್ನೊಬ್ಬರನ್ನು ನಿಮ್ಮ ಜೊತೆಗೆ ಜೋಡಿಸಿ ಕೊಂಡು ಕಾರ್ಯವನ್ನು ಯಶಸ್ವಿಯಾಗಿಸಿ. ಇರುವುದನ್ನು ಇದ್ದಂತೆ ಹೇಳುವುದರಿಂದ ನಿಮಗೆ ತೊಂದರೆಯಾದೀತು. ಇಂದಿನ ಒಂದು ಸಂದರ್ಭ ನಿಮ್ಮನ್ನು ಅಪಾಯದಿಂದ ತಪ್ಪಿಸುವುದು. ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ.

ಮೀನ ರಾಶಿ: ನೆಮ್ಮದಿ ಬೇಕಾದರೆ ಕೆಲವನ್ನು ಬಿಡುವುದು ಅನಿವಾರ್ಯವಾಗಬಹುದು. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ‌ ಸಂಪಾದನೆಯಾಗಲಿದೆ. ಅತಿಥಿಗಳ ಸತ್ಕಾರವನ್ನು ಮನೆಯಲ್ಲಿ ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಹರಟೆ ಹೊಡೆಯುವಿರಿ. ಮಕ್ಕಳ‌ ಕಾರ್ಯವು ನಿಮಗೆ ಹೆಮ್ಮೆ ಎನಿಸುವುದು. ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರಲಿದೆ. ಬೇಕೆಂದೇ ನಿಮ್ಮ ಮೇಲೆ ಯಾರಾದರೂ ಎರಗಿ ಬರಬಹುದು. ಪ್ರತಿಕ್ರಯಿಸುವಾಗ ಎಚ್ಚರವಿರಲಿ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ನಿಮ್ಮ ಶುದ್ಧ ಮನಸ್ಸಿನಿಂದ ಎಲ್ಲರಿಗೂ ಶುಭವನ್ನೇ ಹಾರೈಸಿ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವಿರಿ. ಉತ್ತಮ ಅವಕಾಶಗಳನ್ನು ವೈರಾಗ್ಯ ಬುದ್ಧಿಯಿಂದ ಬಿಟ್ಟು ಕೊಡುವಿರಿ. ಕುಟುಂಬದಲ್ಲಿ ಐಕಮತ್ಯದ ಕೊರತೆಯು ಕಾಣಿಸುವುದು. ವಸ್ತುಗಳು ಕಾಣೆಯಾಗಬಹುದು. ಎಲ್ಲವನ್ನೂ ನಿಮ್ಮ ಮೇಲೆ‌ ಹೇರಬಹುದು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್