Horoscope: ರಾಶಿಭವಿಷ್ಯ, ಇನ್ನೊಬ್ಬರ ಸಹಾಯಕ್ಕೆ ಹೋಗುವ ನಿಮಗೆ ತೊಂದರೆ ಸಾಧ್ಯತೆ ಎಚ್ಚರ!
ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ಹರ್ಷಣ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:54 ರಿಂದ 12:19ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:04 ರಿಂದ 09:29ರ ವರೆಗೆ.
ಮೇಷ ರಾಶಿ: ಮಾಡುವ ಕೆಲಸ ಎಷ್ಟು ಸಣ್ಣದು ಎನ್ನುವುದು ಮುಖ್ಯವಾಗದು. ಹೇಗೆ ಮಾಡಿದ್ದೀರಿ ಎನ್ನುವುದು ಮುಖ್ಯವಾಗುವುದು. ಇನ್ನೊಬ್ಬರಲ್ಲಿ ತಪ್ಪನ್ನೇ ಹುಡುಕುತ್ತ ನಿಮ್ಮನ್ನು ನೀವು ಮರೆಯುವಿರಿ. ಇಂದು ನೀವು ಮಾತನಾಡುವ ಸಂದರ್ಭವು ಕಡಿಮಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ಕಛೇರಿಯ ಕಾರ್ಯವು ಇಂದು ಅಧಿಕವಾಗಿ ಇರಲಿದೆ. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ಕೃಷಿಯ ಬಗ್ಗೆ ಒಲವು ಬರಬಹುದು. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು. ಇಂದು ನಿಮ್ಮ ಪರಿಚಯವು ಇತರರಿಗೆ ಆಗುವುದು. ವ್ಯಕ್ತಿತ್ವವನ್ನು ನೀವು ಸರಿಯಾಗಿ ಮಾಡಿಕೊಳ್ಳಲು ಗಮನವಿರುವುದು. ಯಶಸ್ಸಿನ ವೃದ್ಧಿಯು ಮಿತ್ರರಿಂದ ಆಗುವುದು.
ವೃಷಭ ರಾಶಿ: ಆಯಾಸವನ್ನು ಪರಿಹರಿಸಿಕೊಳ್ಳಲು ನಾನಾ ವಿಧಾನವನ್ನು ಹುಡುಕುವಿರಿ. ಮನಸ್ಸು ನಿಶ್ಚಲವಾಗದು. ನೀವು ಇಂದು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಾರಿರಿ. ಒಂದೇ ವಿಚಾರಕ್ಕೆ ಹತ್ತು ಬಾರಿ ಹೇಳಿಸಿಕೊಳ್ಳುವಿರಿ. ಕರ್ತವ್ಯದಲ್ಲಿ ನಿರಾಸಕ್ತಿ ಇರುವುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರುವಿರಿ. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು. ನಿಮ್ಮ ವರ್ತನೆಯು ಅಹಂಕಾರವಾಗಿ ಬದಲಾಗುವುದು. ಹಣವನ್ನು ಬಹಳ ಜೋಪಾನವಾಗಿ ತೆಗೆದಿಟ್ಟುಕೊಳ್ಳಿ. ಇಷ್ಟ ಮಿತ್ರರ ಸಹವಾಸವು ಸಿಗಬಹುದು. ಎಲ್ಲರ ಬಗ್ಗೆ ಸದ್ಭಾವವಿರುವುದು.
ಮಿಥುನ ರಾಶಿ: ಇನ್ನೊಬ್ಬರಿಗೆ ಸಹಾಯಕ್ಕೆ ಹೋಗುವ ನಿಮಗೆ ತೊಂದರೆ ಆಗಲಿದೆ. ದುರಭ್ಯಾಸವನ್ನು ಗೊತ್ತಾಗದಂತೆ ರೂಢಿಸಿಕೊಳ್ಳುವಿರಿ. ಇಂದು ನೀವು ವಿಸ್ಮರಣೆಯಿಂದ ಮಾಡಬೇಕಾದ ಕಾರ್ಯವನ್ನು ಮಾಡಲಾಗದು. ಧಾರ್ಮಿಕ ಆಚರಣೆಗಳಲ್ಲಿ ನಿಷ್ಠೆ ಇರಲಿದೆ. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಆರ್ಥಿಕತೆಯು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವುದು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ನಿಮ್ಮ ತಪ್ಪಿಗೆ ಯಾರನ್ನೋ ಬಯ್ಯುವಿರಿ. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ನಿಮ್ಮವರ ಪ್ರೀತಿಯನ್ನು ಇಂದು ಗಳಿಸುವಿರಿ. ಒಂದೇ ಕೆಲಸವನ್ನು ಬಹಳ ಕಾಲ ಮಾಡುವುದು ನಿಮಗೆ ಇಷ್ಟವಾಗದು. ಒಂದಾದಮೇಲೆ ಒಂದರಂತೆ ಒತ್ತಡಗಳು ಬರಬಹುದು.
ಕಟಕ ರಾಶಿ: ನೀವು ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನು ಮಾಡುವಿರಿ. ಬರಬೇಕಾದ ಹಣವನ್ನು ನೀವು ಒತ್ತಾಯದಿಂದ ಪಡೆದುಕೊಳ್ಳುವಿರಿ. ಪ್ರವಾಸಕ್ಕೆ ಸ್ನೇಹಿತರ ಜೊತೆ ಎಲ್ಲಗಾದರೂ ಹೋಗುವಿರಿ. ಸಮಾರಂಭಗಳಿಗೆ ಸ್ನೇಹಿತರ ಜೊತೆ ಹೋಗುವಿರಿ. ವಂಚನೆಗೆ ಗೊತ್ತಾಗದಂತೆ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಸ್ಥಾನಕ್ಕೆ ಯೋಗ್ಯವಾದ ಮಾತು ಇರಲಿ. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಸುಮ್ಮನೇ ಮಾತಿಗಾಗಿ ಮಾತು ಬೆಳೆಸುವುದು ಬೇಡ. ನಿಮ್ಮ ತಪ್ಪನ್ನು ಯಾರದೋ ಮೇಲೆ ಹಾಕಿ ಖುಷಿ ಪಡುವಿರಿ. ಸಂಗಾತಿಯಿಂದ ಮಾನಸಿಕ ಕಿರಿಕಿರಿ ಇರುವುದು. ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶಗಳು ಸಿಗದೇ ಹೋಗಬಹುದು. ಕೆಲವರನ್ನು ದೂರವಿಡುವುದು ಉತ್ತಮ.