Food Astrology: ಆಹಾರದಲ್ಲೂ ಜ್ಯೋತಿಷ್ಯ -ನಾವು ತಿನ್ನುವ ಆಹಾರವೂ ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ! ನಿಮಗಿದು ಗೊತ್ತಾ?
ಶನಿ ಗ್ರಹ: ಶನಿದೇವನ ಕೋಪದಿಂದ ದೂರವಿರಲು ಸಾಸಿವೆ, ಎಳ್ಳು, ಕರಿಬೇವು, ಉದ್ದಿನಬೇಳೆ, ಕರಿಮೆಣಸು, ತಾಳದ ಎಲೆ ಮತ್ತು ಉಪ್ಪಿನ ಕಾಳುಗಳನ್ನು ತಿನ್ನಬೇಕು.

ಜಾತಕದಲ್ಲಿ ಗ್ರಹಗಳ ಸ್ಥಿತಿಯನ್ನು ಬಲಪಡಿಸಲು, ಅವುಗಳ ಮೂಲಕ ಲಭ್ಯವಾಗುವ ಶುಭಗಳನ್ನು ಹೆಚ್ಚಿಸಲು, ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಿಧ ವಿಧಾನಗಳನ್ನು ಸೂಚಿಸಲಾಗಿದೆ. ಅಷ್ಟೇ ಅಲ್ಲ ರತ್ನಗಳನ್ನು ಇರಿಸಿಕೊಂಡು ಪೂಜೆ ಮಾಡುವುದರ ಮೂಲಕ ಸಹ ಗ್ರಹಗಳ ಶುಭಗಳನ್ನು ಪಡೆಯಬಹುದು ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಜ್ಯೋತಿಷ್ಯದ ಪ್ರಕಾರ ನಾವು ತಿನ್ನುವ ಆಹಾರದೊಂದಿಗೆ ಗ್ರಹಗಳಿಗೆ ನೇರ ಸಂಬಂಧವಿದೆ. ಅಂದರೆ ನಾವು ತಿನ್ನುವ ಆಹಾರ ಕೂಡ ನಮ್ಮ ಜಾತಕದಲ್ಲಿ ಗ್ರಹಗಳ ಸ್ಥಿತಿಯನ್ನು ಬಲಪಡಿಸುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ತಜ್ಞರು ಹೇಳುವ ಮಾತು. ಯಾವ ಆಹಾರದೊಂದಿಗೆ ಯಾವ ಗ್ರಹಣದ ಸಂಬಂಧವಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ (Astrology and Food Habits).
ಸೂರ್ಯ ಗ್ರಹ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಳ್ಳಲಿದೆ. ಬೆಲ್ಲ, ಮಾವು, ಗೋಧಿ, ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಅದರ ಶುಭ ಫಲಿತಾಂಶಗಳು ಬೆಳೆಯುತ್ತವೆ ಎಂದು ಹೇಳುತ್ತಾರೆ.
ಚಂದ್ರ ಗ್ರಹ: ಚಂದ್ರನ ಪ್ರಭಾವ ನೇರವಾಗಿ ನಮ್ಮ ಮನಸ್ಸಿನ ಮೇಲೆ ಇರುತ್ತದೆ. ಜಾತಕದಲ್ಲಿ ಚಂದ್ರನ ಬಲವನ್ನು ಹೆಚ್ಚಿಸುವ ಹಾಲು, ಹಾಲು ಉತ್ಪನ್ನಗಳು, ಕಬ್ಬು, ಸಕ್ಕರೆ, ಸಿಹಿ ಪದಾರ್ಥ, ಐಸ್ ಕ್ರೀಂ ಸೇವನೆ ಒಳ್ಳೆಯದೆಂದು ಭಾವಿಸಿದ್ದಾರೆ. ಬೆಳ್ಳಿ ಪಾತ್ರೆಯಲ್ಲಿ ಇರಿಸಿರುವ ನೀರನ್ನು ಕುಡಿಯುವುದರಿಂದ ಕುಂಡಲಿಯಲ್ಲಿ ಚಂದ್ರನಿಗೆ ಬಲ ಹೆಚ್ಚುತ್ತದೆ.
ಮಂಗಳ ಗ್ರಹ: ಜಾತಕದಲ್ಲಿ ಮಂಗಳ ಗ್ರಹ ಇರುವ ಸ್ಥಾನ ಬಲಪಡಬೇಕಾದರೆ ಜೇನು ತುಪ್ಪ, ಮುಸುಕಿನ ಜೋಳ, ಬೆಲ್ಲವನ್ನು ಸಾಮಾನ್ಯವಾಗಿ ಸೇವಿಸುವುದು ಉತ್ತಮ ಎಂದು ಭಾವಿಸಲಾಗಿದೆ. ತಾಮ್ರ ಅಥವಾ ಹಿತ್ತಾಳೆ ಪಾತ್ರದಲ್ಲಿ ಶೇಖರಿಸಿಡುವ ನೀರನ್ನು ಕುಡಿಯುವುದು ಒಳ್ಳೆಯದು.
ಬುಧ ಗ್ರಹ: ಹಸಿ ಕಡಲೆಬೀಜ, ಕಡಲೆಬೀಜ, ಕಡಲೆ ಪಪ್ಪು, ಹಸಿ ತರಕಾರಿಗಳನ್ನು ತಿನ್ನಬೇಕು. ಬೆಳ್ಳಿ ಪಾತ್ರೆಯಲ್ಲಿ ನೀರು ತುಂಬಿಸಿ ತಿಂದರೆ ಜಾತಕದಲ್ಲಿ ಬುಧ ಸ್ಥಾನಕ್ಕೆ ಬಲ ಸಿಗುತ್ತದೆ.
ಬೃಹ ಸ್ಪತಿ: ಬೃಹಸ್ಪತಿ ಗ್ರಹದಿಂದ ಶುಭ ಫಲಿತಗಳನ್ನು ಹೊಂದಲು ಕಡಲೆ ಬೀಜ, ಕಡಲೆ ಹಿಟ್ಟು, ಬಾಳೆಹಣ್ಣು, ಅರಿಶಿನ, ಮುಸುಕಿನ ಜೋಳ, ಹಳದಿ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.
ಶುಕ್ರ ಗ್ರಹ: ಜಾತಕದಲ್ಲಿ ಶುಕ್ರ ಗ್ರಹ ಬಲವು ಹೆಚ್ಚಾಗಬೇಕಾದರೆ ತ್ರಿಫಲಾ, ಕಲ್ಲು ಸಕ್ಕರೆ, ದಾಲ್ಚಿನ್ನಿ ಚಕ್ಕೆ, ಮೂಲಂಗಿ ಮುಂತಾದವುಗಳನ್ನು ಆಹಾರದಲ್ಲಿ ಸೇವಿಸಬೇಕು.
ಶನಿ ಗ್ರಹ: ಶನಿದೇವನ ಕೋಪದಿಂದ ದೂರವಿರಲು ಸಾಸಿವೆ, ಎಳ್ಳು, ಕರಿಬೇವು, ಉದ್ದಿನಬೇಳೆ, ಕರಿಮೆಣಸು, ತಾಳದ ಎಲೆ ಮತ್ತು ಉಪ್ಪಿನ ಕಾಳುಗಳನ್ನು ತಿನ್ನಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Thu, 20 April 23