Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್ 20ರ ಭವಿಷ್ಯ ಹೀಗಿದೆ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಧನು: ಆಕಾಶದಲ್ಲಿ ಕಾಣುವ ಎಲ್ಲ ಮೋಡಗಳು ಮಳೆಗರೆಯವು. ಎಲ್ಲರೂ ನಿಮಗೆ ಬೇಕಾದುದನ್ನು ಕೊಡುವವರಲ್ಲಿ ಮಾತ್ರ ಕೇಳಿ. ಇಂದು ಏನಾಗುವುದೋ ಎಂಬ ಭಯವು ಕಾಡಬಹುದು. ಇಷ್ಟದೇವರ ಸ್ಮರಣೆ ಮಾಡಿ. ಮಾತುಗಳಿಂದ ನಿಮಗೆ ಕಿರಿ ಕಿರಿಯಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಬೇಸರವು ಇಂದು ವ್ಯಕ್ತವಾಗುವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಆತಂಕ ಬೇಡ, ಆದಾಯಕ್ಕೂ ದಾರಿಯು ಸಿಗಲಿದೆ. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗಲಿ. ಸ್ತ್ರೀಯರು ನಿಮಗೆ ಶತ್ರುವಾಗುವರು.
ಮಕರ: ಸಾಗುವ ದಾರಿಯು ಎಷ್ಟೇ ಚೆನ್ನಾಗಿದ್ದರೂ ಒಮ್ಮೆ ಹಿಂತಿರುಗಿ ನೋಡುವುದು ಒಳ್ಳೆಯದು. ಅಸಂಬದ್ಧ ಮಾತುಕತೆಗಳನ್ನು ನಿಲ್ಲಿಸಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗಬಹುದು. ವಿದ್ಯಾರ್ಥಿಗಳಿಗೆ ಆಟದಲ್ಲಿ ಹೆಚ್ಚು ಮಗ್ನರಾಗುವರು. ನಿಮ್ಮವರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳುವಿರಿ. ನಿಮ್ಮ ಎಂದಿನ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಪ್ರರಕ್ಷುಬ್ಧ ವಾತಾವರಣವಿರಬಹುದು ಇಂದು. ಲೆಕ್ಕಕ್ಕೆ ಸಿಗದ, ಆದರೆ ನಿರಂತರವಾಗಿ ಇರುವ ಸಮಸ್ಯೆಯಿಂದ ಹೊರಬರುವುದು ಸದ್ಯ ಕಷ್ಟವಾಗಲಿದೆ. ದೈವಾನುಗ್ರಹದ ಅವಶ್ಯಕತೆ ಬಹಳ ಇದೆ.
ಕುಂಭ: ಯಾರಾದರೂ ಏನನ್ನಾದರೂ ಬಂದು ಕೇಳಿದರೆ ಇಲ್ಲವೆನ್ನದೇ ಇರುವಷ್ಟರಲ್ಲಿ ಅಲ್ಪವನ್ನಾದರೂ ಕೊಡಿ. ಅದು ಅಕ್ಷಯವೂ ಆದೀತು ಮುಂದೊಂದು ದಿನ. ಅಸಾಧ್ಯವನ್ನು ಸಾಧಿಸುವ ಛಲವು ಒಳ್ಳೆಯದೇ. ಆದರೆ ಎಲ್ಲವೂ ಕೈಗೂಡುತ್ತದೆ ಎಂಬ ಅತಿಯಾದ ನಂಬಿಕೆ ಬೇಡ. ಪವಿತ್ರ ತಾಣದಲ್ಲಿ ಇಂದಿನ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಿಗೆ ಬರಬಹುದು. ನಿಭಾಯಿಸುವ ದಾರ್ಢ್ಯವನ್ನು ಬೆಳೆಸಿಕೊಳ್ಳಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಆದರೆ ಅದನ್ನು ಕೈಬಿಡುವುದು ಸೂಕ್ತ. ಶಿವಾಲಯಕ್ಕೆ ಹೋಗಿ ಧ್ಯಾನವನ್ನು ಮಾಡಿ.
ಮೀನ: ಪೂರ್ಣವಿಚಾರವನ್ನು ತಿಳಿದು ಮಾತನಾಡಿ. ಅರ್ಧವಿಷಯವನ್ನು ತಿಳಿದು ಮಾತನಾಡಿದರೆ ಇನ್ನೊಬ್ಬರಿಗೆ ನೋವಾದೀತು. ಅವರ ಶಾಪಕ್ಕೂ ಗುರಿಯಾಗುವಿರಿ. ನಿಮ್ಮ ಮನಸ್ಸಿನಲ್ಲಿ ಒಂದು ಕೃತಿಯಲ್ಲಿ ಒಂದು ಎನ್ನುವ ವಿಷಯವು ಇಂದಿನ ನಿಮ್ಮ ವರ್ತನೆಯಿಂದ ತಿಳಿಯಲಿದೆ. ಉತ್ಸಾಹಭಂಗವನ್ನು ನಿಮ್ಮ ಸ್ನೇಹಿತರು ಮಾಡುವರು. ಆನಾರೋಗ್ಯವಿದ್ದರೂ ಬಾಯಿ ಚಪಲಕ್ಕೆ ಆಹಾರವನ್ನು ತಿಂದು ಆನಾರೋಗ್ಯವನ್ನು ಹೆಚ್ಚುಮಾಡಿಕೊಳ್ಳುವ ಲಕ್ಷಣವಿದೆ. ಕುತೂಹಲದ ನೆಪದಲ್ಲಿ ಏನಾದರೂ ಮಾಡಿಕೊಳ್ಳಬೇಡಿ. ನಿಮಗೆ ನೀವು ಮಾಡುವ ಕೆಲಸದ ಬಗ್ಗೆ ಗಮನವಿರಲಿ.