ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 26) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ 04:46 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:45 ರಿಂದ 11:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:33 ರಿಂದ 01:57ರ ವರೆಗೆ.
ಮೇಷ ರಾಶಿ : ನೀವು ಸಕ್ರಿಯರಾಗಿ ಓಡಾಡುವುದು ಇತರರಿಗೆ ಅಸೂಯೆಯಾಗುವುದು. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಲು ಯಾರಾದರೂ ಪ್ರಯತ್ನಿಸುತ್ತಲೇ ಇರಬಹುದು. ನಿಮ್ಮ ನೌಕರರನ್ನು ಆತ್ಮೀಯವಾಗಿ ನೋಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಭಾವವನ್ನು ನೀವು ಸದಾ ಉಳಿಸಿಕೊಳ್ಳುವ ಯೋಚನೆಯಲ್ಲಿಯೇ ಇರುವಿರಿ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಕ್ರೀಡೆಗೆ ಸಂಬಂಧಿಸಿದಂತೆ ಮಾರ್ಗದರ್ಶನದ ಕೊರತೆ ಕಾಣುವುದು. ಹೊಸ ಯೋಜನೆಗಳನ್ನು ನೀವು ಮನಸ್ಸಿನಲ್ಲಿ ಯೋಚಿಸುತ್ತಲೇ ಇರುವಿರಿ. ಇಂದು ಯಾರಿಗಾದರೂ ಅನಿವಾರ್ಯವಾಗಿ ನೀವು ಹಣವನ್ನು ಕೊಡಬೇಕಾಗಬಹುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳು ಬರಬಹುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು, ಎದುರಿಸುವ ಬಗ್ಗೆ ಸಲಹೆಯನ್ನು ಪಡೆಯಿರಿ.
ವೃಷಭ ರಾಶಿ : ವಿದೇಶದಲ್ಲಿ ವಾಸಿಸುವವರಿಗೆ ತಮ್ಮ ಬಗ್ಗೆಯೇ ಅಸದ್ಭಾವ ಮೂಡುವುದು. ಸಂಬಂಧಗಳನ್ನು ಕಡಿದುಕೊಂಡ ಭಾವವು ಬರುವುದು. ನಿಮ್ಮ ಬಗ್ಗೆ ಅನಗತ್ಯ ಮಾತುಗಳು ಬರುವುದು. ಸ್ವಯಾರ್ಜಿತ ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಉದ್ಯೋಗದ ಅವಕಾಶವನ್ನು ಬಿಟ್ಟುಬಿಡುವಿರಿ. ನಿಮ್ಮ ಊಹೆಯು ಸತ್ಯವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಹಿರಿಯರ ಜೊತೆ ವಾಗ್ವಾದ ಆಗಬಹುದು. ಪ್ರಯಾಣದ ಆಯಾಸದಿಂದ ಜ್ವರ, ಆಶಕ್ತತೆಯು ಬರಬಹುದು. ಅಪರಿಚಿತರು ನಿಮ್ಮನ್ನು ವಶ ಮಾಡಿಕೊಳ್ಳಲು ಉಪಾಯವನ್ನು ಮಾಡಬಹುದು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಸರಿಮಡಿಕೊಳ್ಳಿ. ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ.
ಮಿಥುನ ರಾಶಿ : ಇಂದು ನೀವು ಭವಿಷ್ಯದ ಸುಂದರ ಕ್ಷಣಗಳನ್ನು ನೆನೆದು ಸಂತೋಪಡುವಿರಿ. ಸಂಗಾತಿಯ ಜೊತೆ ಕಳೆದ ದಿನಗಳನ್ನು ಮೆಲುಕು ಹಾಕುವಿರಿ. ಎಲ್ಲರಿಗೂ ಪ್ರೀತಿಯನ್ನು ಹಂಚಿ, ಸಂತೋಷಪಡಿಸುವಿರಿ. ಇಂದು ಮಾಡಲಾಗದ ಕಾರ್ಯವನ್ನು ಮತ್ತೆಂದೋ ಮಾಡುವ ಬದಲು ಅದಕ್ಕಾಗಿ ಇಂದೇ ದಿನವನ್ನು ನಿಶ್ಚಯಿಸಿ. ಉತ್ಪನ್ನ ಮಾಡುವವರಿಗೆ ಬೇಡಿಕೆ ಅಧಿಕವಾಗಿದ್ದು, ಪೂರೈಸೈಲು ನಿಮಗೆ ಅಷ್ಟವಾಗುವುದು. ಅಧೈರ್ಯಗೊಂಡ ನಿಮಗೆ ಆಪ್ತರು ಧೈರ್ಯ ತುಂಬುವರು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಮಾನಸಿಕ ಒತ್ತಡವು ನಿಮ್ಮ ಕಾರ್ಯವನ್ನು ನಿಧಾನ ಮಾಡುವುದು. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ ನಡೆಸುವ ಸಂದರ್ಭವು ಬರಬಹುದು. ಮೃಷ್ಟಾನ್ನ ಭೋಜನದಿಂದ ಸಂತೃಪ್ತಿ. ಇಂಸು ಕೆಲವರ ಮಾತುಗಳು ಉತ್ಸಾಹವನ್ನು ಕಡಿಮೆ ಮಾಡಬಹುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ.
ಕಟಕ ರಾಶಿ : ನಿಮ್ಮ ತಂತ್ರಗಳಿಂದ ನಿಮಗೆ ಉಪಯೋಗವಾಗಲಿದೆ. ಸಾಹಿತ್ಯಾಸಕ್ತರಿಗೆ ಉತ್ತಮ ಅವಕಾಶಗಳು ಪ್ರಾಪ್ತವಾಗಿ, ತಮ್ಮ ಜೀವನವನ್ನು ಬದಲಿಸಿಕೊಳ್ಳುವರು. ಆಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡುವಿರಿ. ಸಮಯವನ್ನು ಬಹಳ ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ. ಸಂಗಾತಿಯಿಂದ ನಿಮಗೆ ಅಪರೂಪದ ವಸ್ತುಗಳು ಸಿಗಬಹುದು. ರಾಜಕೀಯವು ನಿಮಗೆ ಇಷ್ಟವಾಗದು. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ಕಲಾವಿದರು ಗೌರವವನ್ನೂ ಯಶಸ್ಸನ್ನೂ ಗಳಿಸುವರು. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ. ನಿಮ್ಮ ಶ್ರೇಯಸ್ಸಿಗೆ ದೈವದ ಕೃಪೆಯನ್ನು ಬೇಡುವಿರಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗಳಿಂದ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಏನಾದರೂ ಒಂದು ಅಸಂಬದ್ಧವನ್ನು ಮಾಡುವ ಹಣೆಪಟ್ಟಿ ಬರಬಹುದು. ದುರ್ಬಲರ ಜೊತೆ ಹೋರಾಡಿ ಗೆದ್ದು ಹೆಮ್ಮೆಪಡುವಿರಿ.