Horoscope: ಅಗತ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿ ತೊಂದರೆಗೆ ಸಿಕ್ಕಿಕೊಳ್ಳುವಿರಿ-ಎಚ್ಚರ
ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಡಿಸೆಂಬರ್ 26 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಡಿಸೆಂಬರ್ 26) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ 04:46 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:45 ರಿಂದ 11:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:33 ರಿಂದ 01:57ರ ವರೆಗೆ.
ಧನು ರಾಶಿ : ವಿವಾಹವಾಗುವ ಕುರಿತು ಬಹಳ ಕುತೂಹಲಗಳು ಇರಬಹುದು. ಸಂಗಾತಿಯ ಜೊತೆ ಹೊರಗೆ ಸುತ್ತಾಡುವ ಬಯಕೆಯಾಗುವುದು. ವಾಹನ ಖರೀದಿಯ ಬಗ್ಗೆ ನಿಮಗೆ ಚಿಂತೆಯಾಗಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ವಿಚಾರದಲ್ಲಿ ತಜ್ಞರ ಸಂಪರ್ಕ ಮಾಡುವುದು ಉತ್ತಮ. ನಿಮ್ಮ ಇಂದಿನ ಕೆಲಸವನ್ನು ಪೂರ್ಣ ಮಾಡಲು ಬಹಳ ಆತುರದಿಂದ ಇರುವಿರಿ. ಸಹೋದರನ ಮನವೊಲಿಸಲು ನಿಮಗೆ ಕಷ್ಟವಾದೀತು. ನಿಮ್ಮ ಸ್ಥಾನಕ್ಕೆ ಗೌರವವಿಲ್ಲದಂತೆ ತೋರಬಹುದು. ನಿಮ್ಮ ಸೋಲನ್ನು ಸುಲಭಕ್ಕೆ ಒಪ್ಪಿಕೊಳ್ಳಲಾರಿರಿ. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು. ಪವಿತ್ರಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು.
ಮಕರ ರಾಶಿ :ಆಮದು ವ್ಯವಹಾರದಲ್ಲಿ ಅಡೆತಡೆಗಳು ಬರಬಬಹುದು. ಭಾವೈಕ್ಯವನ್ನು ಬೆಳೆಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸುವುದು ನಿಮಗೆ ಇಷ್ಟವಾಗದು. ಇದಕ್ಕಾಗಿ ಬೇರೆ ಮಾರ್ಗವನ್ನೂ ಅನ್ವೇಷಿಸುವಿರಿ. ನಿಮ್ಮ ಸಂಗಾತಿಯ ಆರೋಗ್ಯವು ಕ್ಷೀಣಸಲಿದ್ದು ಚಿಂತೆಯೂ ಕಾಡುವುದು. ಇಂದು ಕಾರ್ಯದ ಸ್ಥಳದಲ್ಲಿ ನಿಮ್ಮ ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡಿ ನಿಮ್ಮ ಕೆಲಸವು ಪೂರ್ಣವಾಗದಂತೆ ನೋಡಿಕೊಳ್ಳುವರು. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಇಂದು ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಬಿಟ್ಟು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವರು. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹವು ಉಂಟಾಗಬಹುದು. ಮಾನಸಿಕವಾಗಿ ನೀವು ಕುಗ್ಗಬಹುದು. ಆರೋಗ್ಯವನ್ನು ಸುಧಾರಿಸಿಕೊಂಡು ಮುನ್ನಡೆಯುವುದು ಉತ್ತಮ.
ಕುಂಭ ರಾಶಿ : ನಿಮಗೆ ಶುಭ ಸುದ್ದಿಯು ಇರುವುದು. ಇಂದು ಅಗತ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ನಿಮ್ಮ ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ಚಿಂತಿಸಬೇಕಾಗುವುದು. ಇಂದು ನಿಮ್ಮ ಮಕ್ಕಳ ಬಗ್ಗೆ ಸಕಾರಾತ್ಮಕ ವಾರ್ತೆಯನ್ನು ಕೇಳುವಿರಿ. ನೀವು ಇಂದು ಯಾರ ಜೊತೆಗದರೂ ಹಣವನ್ನು ವಿನಿಮಯ ಮಾಡಿಕೊಳ್ಳಲು ಯೋಚಿಸುತ್ತಿದ್ದರೆ, ಸರಿಯಾದ ಲೆಕ್ಕಾಚಾರವನ್ನು ಇಟ್ಟುಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು. ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ. ಯಾರಾದರೂ ನಿಮ್ಮ ವ್ಯಕ್ತಿತ್ವವನ್ನು ತೂಗಿ ಅಳೆಯಬಹುದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಕೂಡಿಟ್ಟ ಹಣದಿಂದ ಕೆಲವು ಪ್ರಯೋಜನಗಳು ನಿಮಗೆ ಆಗಲಿವೆ.
ಮೀನ ರಾಶಿ : ಭವಿಷ್ಯಕ್ಕೆ ಸಂಬಂಧಿಸಿ ನಿರ್ಧಾರವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿಮ್ಮ ಮಗುವನ್ನು ಹೊರಗೆ ಓದಲು ಕಳುಹಿಸಲು ಬಯಸುವಿರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಮಕ್ಕಳೆಷ್ಟೇ ಇದ್ದರೂ ನೀವು ಜಾಗರೂಕತೆ ಮಾಡಬೇಕಾಗುವುದು. ವಿವಾಹದ ವಾತಾವರಣವು ಮನೆಯಲ್ಲಿ ಇದ್ದರೂ ಉದ್ವೇಗಕ್ಕೆ ಒಳಗಾಗದೇ ನೀವೂ ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಇಂದು ನೀವು ನಿಮ್ಮ ಸಂಬಂಧಿಕರೊಬ್ಬರಿಗೆ ಸ್ವಲ್ಪ ಹಣವನ್ನು ವ್ಯವಸ್ಥೆ ಮಾಡಬೇಕಾಗಬಹುದು. ನಿಮ್ಮ ವಸ್ತುವು ಕಳ್ಳತನವಾಗಬಹುದು ಎಂಬ ಭೀತಿಯು ಉಂಟಾಗಬಹುದು. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು. ಇದರಿಂದ ನಿಮ್ಮ ಆದಾಯಕ್ಕೆ ಹೊಡೆತ ಬೀಳಬಹುದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ.
-ಲೋಹಿತ ಹೆಬ್ಬಾರ್ – 8762924271 (what’s app only)