Nitya Bhavishya: ಈ ರಾಶಿಯವರು ವ್ಯಾಪಾರದಲ್ಲಿ ಇಂದು ಅಲ್ಪಲಾಭ, ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 23, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Nitya Bhavishya: ಈ ರಾಶಿಯವರು ವ್ಯಾಪಾರದಲ್ಲಿ ಇಂದು ಅಲ್ಪಲಾಭ, ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jan 23, 2024 | 12:10 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ (ಜನವರಿ 23) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಐಂದ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:35 ರಿಂದ 05:01ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:54 ರಿಂದ 11:19ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:44 ರಿಂದ 02:10ರ ವರೆಗೆ.

ಮೇಷ ರಾಶಿ: ನಿರ್ಭಾವುಕರಾಗಿ ವರ್ತಿಸುವುದು ಬೇಡ. ನಿಮ್ಮ ಮೇಲಿನ ಅರೋಪಕ್ಕೆ ಸಮಜಾಯಿಷಿ ಅಗತ್ಯವಿರುವುದು. ಪೂರ್ವಾಗ್ರಹವಿಲ್ಲದೇ ಎಲ್ಲದನ್ನೂ ಒಪ್ಪಿಕೊಳ್ಳುವುದು ಉತ್ತಮ. ಮಿತ್ರರ ಸಲಹೆಗಳು ನಿಮಗೆ ಪೂರಕ ಮಾನಸಿಕತೆಯನ್ನು ತಂದುಕೊಡಬಹುದು.‌ ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಉದ್ಯೋಗಕ್ಕೆ ಸೇರುವಾಗ ಅಲ್ಪದೂರದ ದೃಷ್ಟಿಯಾದರೂ ಇರಲಿ‌. ಯಶಸ್ಸನ್ನು ಹಂಬಲವು ಅತಿಯಾಗಿ ಕಾಣಿಸುವುದು. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ‌ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಹೂಡಿಕೆಯತ್ತ ಗಮನಹರಿಸುವುದು ಸದ್ತಕ್ಕೆ ಬೇಡ. ದುರ್ಬಲರಿಗೆ ಅಲ್ಪ ಸಹಾಯವನ್ನು ಮಾಡುವಿರಿ. ರೂಪವು ನಿಮ್ಮ ಕೆಲವು ಕಾರ್ಯಕ್ಕೆ ಅಡ್ಡಿಯಾದೀತು.

ವೃಷಭ ರಾಶಿ: ಆಲಸ್ಯದಿಂದ ನಿಮಗೆ ಯಾವುದನ್ನೂ ಸ್ವೀಕರಿಸುವ ಮಾನಸಿಕತೆಯೂ ಇರದು. ಅನಗತ್ಯ ಸಲಹೆಯನ್ನು ಕೊಡುವುದು ಅತಿಯಾದೀತು. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ನಿರೀಕ್ಷಿತ ಪ್ರತಿಸ್ಪಂದವು ನಿಮ್ಮ ಮಾತಿಗೆ ಸಿಗದೇ ಇರುವುದು. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು. ದ್ವೇಷವನ್ನು ಮರೆತು ಪ್ರೀತಿಯಿಂದ ಇರುವಿರಿ. ಆಪದ್ಧನವನ್ನು ವಿನಿಯೋಗ ಮಾಡುವ ಸ್ಥಿತಿಯು ಬರುವುದು. ಏಕಾಂಗಿಯಾಗಿ ಇರುವುದನ್ನು ಇಷ್ಟಪಡುವುದು ಅನಿವಾರ್ಯವಾಗಲಿದೆ. ನಿಮ್ಮನ್ನು ಪ್ರಕಟಪಡಿಸಿಕೊಳ್ಳುವುದು ಇಷ್ಟವಿದ್ದರೂ ಸಾಧಿಸಲು ಆಗದು.

ಮಿಥುನ ರಾಶಿ: ನಿಮ್ಮ ಕಾರ್ಯವು ಗುರಿಯ ಕಡೆಗೆ ಇರುವುದೇ ಎಂದು ಅವಲೋಕನ‌ ಅಗತ್ಯ. ಉದ್ಯೋಗದ ಸ್ಥಳವನ್ನು ಬದಲಿಸಬೇಕು ಎಂಬ ಇಚ್ಛೆ ಇದ್ದರೂ ಸರಿಯಾದ ಉದ್ಯೋಗವು ಪ್ರಾಪ್ತವಾಗದು. ಸಹೋದರರ ಬಾಂಧವ್ಯವು ಸಡಿಲಾಗುವುದು. ಅಸಮಾಧಾನವನ್ನು ಹೊರಹಾಕಲು ಸನ್ನಿವೇಶವು ಸಿಗಬಹುದು. ಇಂದಿನ‌ ಕಾರ್ಯದಲ್ಲಿ ರೋಚಕತೆ ಕಾಣಿಸುವುದು. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಅನವಶ್ಯಕ ವಿವಾದವನ್ನು ಹುಟ್ಟುಹಾಕಿಕೊಳ್ಳುವಿರಿ‌. ಅಪರಿತರು ನಿಮ್ಮನ್ನು ಪರಿಚಯ ಮಾಡಿಕೊಳ್ಳಬಹುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಆರೋಗ್ಯವು ವ್ಯತ್ಯಾಸವಾದ ಕಾರಣ ಕಷ್ಟವಾದೀತು. ಸಂಗಾತಿಯ ನಡುವಿನ ಸಂಬಂಧವು ದುರ್ಬಲವಾಗಲಿದ್ದು, ಗಟ್ಟಿಯಾಗಲು ತಂತ್ರವನ್ನು ಬಳಸುವಿರಿ.

ಕಟಕ ರಾಶಿ: ಇಂದು ವ್ಯಾಪಾರದಲ್ಲಿ ಆಗುವ ಅಲ್ಪಲಾಭದಿಂದ ತೃಪ್ತಿಯನ್ನು ಕಾಣುವುದು ಅನಿವಾರ್ಯವಾದೀತು. ಬಂಧುಗಳ ಮಾತನ್ನು ತಿರಸ್ಕಾರ ಮಾಡುವ ಮನಸ್ಸಿದ್ದರೂ ಮತ್ತೆ ಮತ್ತೆ ನಿಮ್ಮನ್ನು ಚುಚ್ಚಬಹುದು. ಉಪಕಾರದ ಸ್ಮರಣೆಯು ಅಲ್ಲಗಳೆದು ಸಂತೋಷದಿಂದ ಇರುವಿರಿ. ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳಬಹುದು. ಕಾರ್ಯಗಳಲ್ಲಿ ಸಿಗುವ ಪೂರ್ಣಜಯದಿಂದ ನಿಮಗೆ ಖುಷಿಯಾಗಲಿದೆ. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ಅವಿವಾಹಿತರ ವಿವಾಹಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆಯು ಇರಲಿದೆ.

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ