AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಮನೆಯವರಿಂದ‌ ಕಿರಿಕಿರಿ, ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಡಿಸೆಂಬರ್ 24, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಮನೆಯವರಿಂದ‌ ಕಿರಿಕಿರಿ, ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Dec 24, 2023 | 12:10 AM

Share

ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 24) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:43 ರಿಂದ 11:07 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:56 ರಿಂದ 03:20ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:55 ರಿಂದ 08:19ರ ವರೆಗೆ.

ಮೇಷ ರಾಶಿ: ನಿಮಗೆ ಆಕಸ್ಮಿಕವಾಗಿ ಸಿಕ್ಕ ವಸ್ತುಗಳನ್ನು ನೀವು ಜೋಪಾನ ಮಾಡಿಕೊಳ್ಳುವಿರಿ. ವಿವಿಧ ವೃತ್ತಿಗಳು ನಿಮ್ಮನ್ನು ಕರೆಯಬಹುದು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ ಬಗ್ಗೆ ಯಾರಾದರೂ ಕಿವಿಚುಚ್ಚುವರು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು. ಕೆಲವರಿಂದ ದೂರವಿರುವ ಪ್ರಯತ್ನವನ್ನು ಮಾಡುವಿರಿ. ಸಂಗಾತಿಯ ಮಾತಿನಿಂದ ನೀವು ನೆಮ್ಮದಿಯನ್ನು ಕಳೆದುಕೊಳ್ಳಬಹುದು. ಮನಸ್ಸಿನ ಚಾಂಚಲ್ಯವನ್ನು ನಿವಾರಿಸಲು ಯೋಗವೇ ಮದ್ದಾಗಲಿದೆ.

ವೃಷಭ ರಾಶಿ: ಗೊತ್ತಿಲ್ಲದ ವಿಚಾರಗಳನ್ನು ಹಂಚಿಕೊಳ್ಳುವುದು ಬೇಡ. ಎಲ್ಲರ ಸಹಕಾರದಿಂದ ಮನೆಯ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಇಂದು ಖರ್ಚಿನ ಬಗ್ಗೆ ಊಹೆಗೂ ಸಿಗದು. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ಮಿತಿಮೀರಿದ ಆಸೆಗೆ ಕಡಿವಾಣದ ಅಗತ್ಯವಿದೆ. ನೀವು ಹೋದಕಡೆ ನಿಮಗೆ ಬೇಕಾದ ಹಾಗೆ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಇಂದು ಧನ ಸಹಾಯವನ್ನು ಮಾಡುವಿರಿ.

ಮಿಥುನ ರಾಶಿ: ನಿಮ್ಮ ಕಾಳಜಿಯು ಇತರರಿಗೆ ಮುಜುಗರವನ್ನು ತಂದೀತು. ಕಟ್ಟಡ ನಿರ್ಮಾಣದವರಿಗೆ ಹೆಚ್ಚು ಲಾಭವಾಗಲಿದೆ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸುಳ್ಳು ಮಾತುಗಳನ್ನು ಯಾರೂ ಕೇಳಲು ಇಷ್ಟ ಪಡರು.‌ ಅಲ್ಪ ಕಾರ್ಯದಿಂದ ಎಲ್ಲವೂ ಸಿದ್ಧಿಸುವುದಾದರೂ ಅಧಿಕ ಶ್ರಮವಿರುವುದು. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಯಾರೋ‌ ಮಾಡಬೇಕಾದ ಕೆಲಸಕ್ಕೆ ನೀವು ಹೋಗಬೇಕಾದೀತು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತುರ್ತಾಗಿ ಸಾಲವನ್ನು ಮಾಡಬೇಕಾಗುವುದು. ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ಇಷ್ಟವಾಗದು.

ಕಟಕ ರಾಶಿ: ಮನೆಯ ಕೆಲವು ವಿಚಾರದಲ್ಲಿ ಮನೆಯವರಿಂದ‌ ಕಿರಿಕಿರಿ ಆಗಬಹುದು. ಕೃಷಿಯ ಉತ್ಪನ್ನದಿಂದ ಅಧಿಕ‌ಲಾಭವಿರಲಿದೆ. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ನಿದ್ರೆ ಇಲ್ಲದೇ ಮಾನಸಿಕ‌ವಾಗಿ ಕುಗ್ಗುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ನಿರೀಕ್ಷಿತ ಬೆಂಬಲವು ಸಿಗದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಸಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವಿರಿ.‌ ಸದಾ ಯಾರ ಮೇಲಾದರೂ ಅನುಮಾನದಿಂದಲೇ ಇರುವಿರಿ.‌ ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೋಗಲು ಇಷ್ಟ ಪಡುವುದಿಲ್ಲ.‌

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್