ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಡಿಸೆಂಬರ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:36 ರಿಂದ 06:01 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:22 ಗಂಟೆ 01:47 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 03:12 ರಿಂದ 04:36ರ ವರೆಗೆ.
ಮೇಷ ರಾಶಿ: ಹೊಸ ವಸ್ತುಗಳನ್ನು ಖರೀದಿಸುವ ಆತುರದಲ್ಲಿ ನೀವಿರುವಿರಿ. ನಿಮ್ಮ ಬುದ್ಧಿಯು ನಕಾರಾತ್ಮಕವಾಗಿ ಆಲೋಚಿಸುವುದು. ವಾಹನ ಖರೀದಗೆ ಹೆಚ್ಚು ಒತ್ತು ಕೊಡಲಿದ್ದೀರಿ. ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಕೆಲವರ ಸಹವಾಸವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ. ನಿಮ್ಮ ಸಹಾಯ ಗುಣವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ವಿಚಾದಲ್ಲಿ ನಿಮಗೆ ತಾಳ್ಮೆ ಕಡಿಮೆ ಎನಿಸಬಹುದು. ಉತ್ಸಾಹದಿಂದ ನಿಮಗೆ ಕೆಲವು ಕಾರ್ಯಗಳು ಸಾಧ್ಯವಾಗುವುದು. ಇರುವ ಸ್ಥಾನವನ್ನು ಅನಗಣ್ಯ ಮಾಡುವುದು ಬೇಡ.
ವೃಷಭ ರಾಶಿ: ನಿಮಗೆ ನೀವು ಚೌಕಟ್ಟು ಹಾಕಿಕೊಳ್ಳುವಿರಿ. ನೇರ ಮಾತು ನಿಮ್ಮ ಬಗೆಗಿನ ಭಾವವನ್ನು ಬದಲಿಸುವುದು. ಸುಲಭ ಸಂಗತಿಯನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ಶತ್ರುಗಳಿಂದ ಉದ್ಯಮಕ್ಕೆ ತೊಂದರೆ ಆಗಬಹುದು. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ಜ್ವರವು ಕಾಣಿಸಿಕೊಂಡೀತು. ಸ್ನೇಹಿತರನ್ನು ಕಳೆದುಕೊಳ್ಳುವಿರಿ. ಇಷ್ಟಪಡುವವರಿಗೆ ಸಮಯವನ್ನು ಕೊಡಲಾಗದು. ನೂತನ ಗೃಹನಿರ್ಮಾಣಕ್ಕೆ ಸಂಗಾತಿಗೆ ಒತ್ತಡವನ್ನು ತರುವಿರಿ. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಹೊಗಳುವರು. ಪುಣ್ಯಸ್ಥಳಕ್ಕೆ ಹೋಗಲು ಇಚ್ಛಿಸುವಿರಿ. ನಿಮ್ಮ ದಾರಿಯನ್ನು ಸುಗಮ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ಇದ್ದ ಆಸೆಯನ್ನು ಪೂರ್ಣಮಾಡಿಕೊಳ್ಳುವಿರಿ. ನೀವು ಯಾರ ಸಹಕಾರವನ್ನೂ ಅನಪೇಕ್ಷಿತವಾದೀತು. ವೈದ್ಯ ವೃತ್ತಿಯಲ್ಲಿ ಇರುವವರು ಯಶಸ್ಸನ್ನು ಗಳಿಸುವರು.
ಮಿಥುನ ರಾಶಿ: ಅಧಿಕಾರವನ್ನು ಕಾರಣಾಂತರಗಳಿಂದ ಬಿಡುವಿರಿ. ಸ್ವಯಂಕೃತ ಅಪರಾಧವೇ ನಿಮ್ಮ ಬಗ್ಗೆ ಸಲ್ಲದ ಮಾತನಾಡುವಂತೆ ಮಾಡುವುದು. ನಿಮ್ಮ ಕೆಲಸದ ಸ್ಥಾನವೂ ಹುದ್ದೆಯೂ ಎರಡೂ ಬದಲಾದೀತು. ನಿಮ್ಮ ಮನಸ್ಸು ಕೆಲವು ಮಾತಿನಿಂದ ದುರ್ಬಲವಾಗಬಹುದು. ಕಲಹರಣಕ್ಕೆ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ಸಮಯೋಚಿತ ಸ್ಪಂದನೆಯಿಂದ ಗೌರವ ಸಿಗುವುದು. ನೀವು ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು. ಹಣಕಾಸಿನ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದಿಲ್ಲ. ಕಛೇರಿಯಲ್ಲಿ ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಎಲ್ಲವನ್ನೂ ಹಣದಿಂದ ಲೆಕ್ಕಹಾಕಲಾಗದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯ ಪಡೆಯಿರಿ. ಒಂದಿಷ್ಟು ಕಾರ್ಯದಲ್ಲಿ ಒತ್ತಡವಿರಲಿದೆ.
ಕರ್ಕ ರಾಶಿ: ಪುಣ್ಯ ಸ್ಥಳಗಳು ನಿಮಗೆ ಮಾನಸಿಕ ನೆಮ್ಮದಿಯನ್ನು ತರಬಹುದು. ಸಾಲಗಾರರಿಂದ ಅನಿರೀಕ್ಷಿತ ಧನಾಗಮನವಾಗಲಿದೆ. ವ್ಯಾಪಾರವು ಸ್ವಲ್ಪ ಲಾಭವನ್ನು ಕೊಡಬಹುದು. ಇಷ್ಟವಾದುದನ್ನು ಪಡೆದುಕೊಳ್ಳಲು ನಿಮಗೆ ಆಸಕ್ತಿ ಇರುವುದು. ಸಂಗಾತಿಯ ಮಾನಸಿಕ ಸ್ಥಿತಿಯು ಬದಲಾಗಬಹುದು. ಹತ್ತಾರು ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ಒಂದೇ ತಕ್ಕಡಿಯಲ್ಲಿ ಎಲ್ಲರನ್ನು ತೂಗಲಾಗದು. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನಿರಾಕರಿಸುವಿರಿ. ಪ್ರೇಮ ವ್ಯವಹಾರವನ್ನು ಮನೆಯಲ್ಲಿ ತಿಳಿಸಲು ನೀವು ಭಯಪಡುವಿರಿ.