Horoscope: ಈ ರಾಶಿಯವರು ಸಂಗಾತಿಯ ಮೇಲಿನ ಕೋಪವನ್ನು ಯಾರದೋ ಮೇಲೆ ತೀರಿಸಿಕೊಳ್ಳುವಿರಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಡಿಸೆಂಬರ್ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಡಿಸೆಂಬರ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:36 ರಿಂದ 06:01 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:22 ಗಂಟೆ 01:47 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 03:12 ರಿಂದ 04:36ರ ವರೆಗೆ.
ಸಿಂಹ ರಾಶಿ : ಸಂಗಾತಿಯ ಮೇಲಿನ ಕೋಪವನ್ನು ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ನಿಮ್ಮ ವರ್ತನೆಯು ಇತರರಿಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ದೇವತಾಕಾರ್ಯದಿಂದ ನಿಮಗೆ ಇಂದಿನ ಎಲ್ಲ ಕಾರ್ಯಗಳೂ ಸುಗಮವಾಗುವುದು. ಬಹಳ ದಿನಗಳಿಂದ ಇದ್ದ ಭಯವನ್ನು ನೀವು ದೂರಮಾಡಿಕೊಳ್ಳುವಿರಿ. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗುವುದು. ಯಾರಾದರೂ ಸಂಬಂಧದ ನಡುವೆ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು. ಪ್ರಚಾರವನ್ನು ಪಡೆಯುವ ಮನಸ್ಸು ಬರುವುದು. ಮಾತಿನ ನಿಯಂತ್ರಣವು ತಪ್ಪಬಹುದು. ವಿಳಂಬದ ಕಾರ್ಯಕ್ಕೆ ವ್ಯಥೆ ಪಡುವಿರಿ.
ಕನ್ಯಾ ರಾಶಿ : ಮನೆಯ ಕೆಲಸದಲ್ಲಿ ನಿರುತ್ಸಾಹವಿರುವುದು. ಯಾರನ್ನೋ ದೂರಿಕೊಂಡು ಕುಳಿತುಕೊಳ್ಳುವುದು ಸರಿಯಾಗದು. ನಿಮ್ಮನ್ನು ಇಂದು ಸ್ನೇಹಿತರು ವಿಡಂಬನೆ ಮಾಡುವರು. ಮನಸ್ಸನ್ನು ನಿಯಂತ್ರಿಸಲು ದುಶ್ಚಟಕ್ಕೆ ಬೀಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ನಿಮ್ಮನ್ನು ದೂಷಿಸುವವರು ನಿಮ್ಮ ಜೊತೆಯೇ ಇರುವರು. ಪ್ರೀತಿಯಿಂದ ನಿಮಗೆ ದುಃಖವಾಗುವ ಸಂದರ್ಭವಿದೆ. ಯಾರಿಗಾಗಿಯೇ ಬದಲಾಗುವ ಅವಶ್ಯಕತೆ ಇಲ್ಲ. ತಪ್ಪಿದ್ದರೆ ಬದಲಾಗಿ. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು. ಮಕ್ಕಳಿಗಾಗಿ ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅನಾದರ ಬೇಡ. ನಿಮ್ಮ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಸಮಸ್ಯೆಯು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡಿಕೊಳ್ಳುವಿರಿ.
ತುಲಾ ರಾಶಿ : ರಾಜಕಾರಣದಲ್ಲಿ ಆಸಕ್ತಿ ಇಲ್ಲದಿದ್ದರೂ ಅದಾಗಿಯೇ ಬಂದು ನಿಮ್ಮನ್ನು ಸುತ್ತಿಕೊಳ್ಳುವುದು. ಪ್ರೇಮದ ವಿಚಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ವಿನಾಕಾರಣ ಸಾಲದಲ್ಲಿ ಸಿಕ್ಕಿಕೊಳ್ಳುವುದು ಬೇಡ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ಗೆಲವು ಸಿಕ್ಕರೂ ಸಂಭ್ರಮಿಸುವ ಮನಃಸ್ಥಿತಿ ಇರದು. ಸ್ನೇಹಿತರು ಪ್ರೀತಿಯಿಂದ ನಿಮಗೆ ಉಡುಗೊರೆ ಕೊಡುವರು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ. ನಿಮ್ಮ ಮನಸ್ತಾಪವನ್ನು ಕೋಪದ ಮೂಲಕ ಹೊರಹಾಕುವಿರಿ. ನಿಮ್ಮ ನಡವಳಿಕೆಯ ಬಗ್ಗೆ ಹಿರಿಯರು ಮಾತನಾಡಿಕೊಳ್ಳುವರು. ಸಂಗಾತಿಯ ಜೊತೆ ಕಲಹವಾಡಿ ಪಶ್ಚಾತ್ತಾಪಪಡಬೇಕಾದೀತು. ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗದು.
ವೃಶ್ಚಿಕ ರಾಶಿ : ನಿದ್ರೆಯಿಂದ ನಿಮಗೆ ನಾನಾ ತೊಂದರೆಗಳು ಆಗುವುದು. ಬಂಧುಗಳ ಜೊತೆ ಶತ್ರುತ್ವವನ್ನು ಬೆಳೆಸಿಕೊಳ್ಳುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಸಂತೋಷವಾಗಲಿದೆ. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ ಆಗುವ ಸಾಧ್ಯತೆ ಇದೆ. ಕ್ರೀಡಾಪಟುಗಳು ಉತ್ತಮ ಅಭ್ಯಾಸದ ಕಡೆ ಗಮನಹರಿಸುವರು. ನಿಮಗೆ ಯಾರಿಂದಲಾದರೂ ಸಹಾಯ ಕೇಳಲು ಸಂಕೋಚವಾದೀತು. ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ಇಂದು ನೀವು ಒತ್ತಡವನ್ನು ತಂದುಕೊಳ್ಳಬಾರದು ಎಂದು ಅಂದುಕೊಂಡಿದ್ದರೂ ಸಂದರ್ಭವು ಅದೇ ರೀತಿ ಸೃಷ್ಟಿಯಾಗಬಹುದು. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ನೀವು ಪ್ರಯತ್ನಿಸಬೇಕು. ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಮಾಡುವ ಸಾಧ್ಯತೆ ಇದೆ.