Horoscope 3 Dec: ಆಸ್ತಿ ವಿಚಾರದಲ್ಲಿ ಈ ರಾಶಿಯವರಿಗೆ ಕೆಲವು ಸಮಸ್ಯೆಗಳು ಎದುರಾಗಬಹುದು

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಡಿಸೆಂಬರ್​​​​ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 3 Dec: ಆಸ್ತಿ ವಿಚಾರದಲ್ಲಿ ಈ ರಾಶಿಯವರಿಗೆ ಕೆಲವು ಸಮಸ್ಯೆಗಳು ಎದುರಾಗಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 03, 2023 | 12:02 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಡಿಸೆಂಬರ್​​​​ 03 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:36 ರಿಂದ 06:01 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:22 ಗಂಟೆ 01:47 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 03:12 ರಿಂದ 04:36ರ ವರೆಗೆ.

ಮೇಷ ರಾಶಿ: ಹೊಸ ವಸ್ತುಗಳನ್ನು ಖರೀದಿಸುವ ಆತುರದಲ್ಲಿ ನೀವಿರುವಿರಿ. ನಿಮ್ಮ ಬುದ್ಧಿಯು ನಕಾರಾತ್ಮಕವಾಗಿ ಆಲೋಚಿಸುವುದು. ವಾಹನ ಖರೀದಗೆ ಹೆಚ್ಚು ಒತ್ತು ಕೊಡಲಿದ್ದೀರಿ. ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಕೆಲವರ ಸಹವಾಸವನ್ನು ಕಡಿಮೆ‌ ಮಾಡಿಕೊಳ್ಳುವುದು ಉತ್ತಮ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ. ನಿಮ್ಮ‌ ಸಹಾಯ ಗುಣವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ವಿಚಾದಲ್ಲಿ ನಿಮಗೆ ತಾಳ್ಮೆ ಕಡಿಮೆ‌ ಎನಿಸಬಹುದು. ಉತ್ಸಾಹದಿಂದ ನಿಮಗೆ ಕೆಲವು ಕಾರ್ಯಗಳು ಸಾಧ್ಯವಾಗುವುದು. ಇರುವ ಸ್ಥಾನವನ್ನು ಅನಗಣ್ಯ ಮಾಡುವುದು ಬೇಡ.

ವೃಷಭ ರಾಶಿ: ನಿಮಗೆ ನೀವು ಚೌಕಟ್ಟು ಹಾಕಿಕೊಳ್ಳುವಿರಿ. ನೇರ ಮಾತು ನಿಮ್ಮ ಬಗೆಗಿನ ಭಾವವನ್ನು ಬದಲಿಸುವುದು. ಸುಲಭ ಸಂಗತಿಯನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ಶತ್ರುಗಳಿಂದ ಉದ್ಯಮಕ್ಕೆ ತೊಂದರೆ ಆಗಬಹುದು. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ಜ್ವರವು ಕಾಣಿಸಿಕೊಂಡೀತು. ಸ್ನೇಹಿತರನ್ನು ಕಳೆದುಕೊಳ್ಳುವಿರಿ. ಇಷ್ಟಪಡುವವರಿಗೆ ಸಮಯವನ್ನು ಕೊಡಲಾಗದು. ನೂತನ ಗೃಹನಿರ್ಮಾಣಕ್ಕೆ ಸಂಗಾತಿಗೆ ಒತ್ತಡವನ್ನು ತರುವಿರಿ. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಹೊಗಳುವರು. ಪುಣ್ಯಸ್ಥಳಕ್ಕೆ ಹೋಗಲು ಇಚ್ಛಿಸುವಿರಿ. ನಿಮ್ಮ ದಾರಿಯನ್ನು ಸುಗಮ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ಇದ್ದ ಆಸೆಯನ್ನು ಪೂರ್ಣಮಾಡಿಕೊಳ್ಳುವಿರಿ. ನೀವು ಯಾರ ಸಹಕಾರವನ್ನೂ ಅನಪೇಕ್ಷಿತವಾದೀತು. ವೈದ್ಯ ವೃತ್ತಿಯಲ್ಲಿ ಇರುವವರು ಯಶಸ್ಸನ್ನು ಗಳಿಸುವರು.

ಮಿಥುನ ರಾಶಿ: ಅಧಿಕಾರವನ್ನು ಕಾರಣಾಂತರಗಳಿಂದ ಬಿಡುವಿರಿ. ಸ್ವಯಂಕೃತ ಅಪರಾಧವೇ ನಿಮ್ಮ ಬಗ್ಗೆ ಸಲ್ಲದ ಮಾತನಾಡುವಂತೆ ಮಾಡುವುದು. ನಿಮ್ಮ ಕೆಲಸದ ಸ್ಥಾನವೂ ಹುದ್ದೆಯೂ ಎರಡೂ ಬದಲಾದೀತು. ನಿಮ್ಮ ಮನಸ್ಸು ಕೆಲವು ಮಾತಿನಿಂದ ದುರ್ಬಲವಾಗಬಹುದು. ಕಲಹರಣಕ್ಕೆ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ಸಮಯೋಚಿತ ಸ್ಪಂದ‌ನೆಯಿಂದ ಗೌರವ ಸಿಗುವುದು. ನೀವು ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು. ಹಣಕಾಸಿನ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದಿಲ್ಲ. ಕಛೇರಿಯಲ್ಲಿ ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಎಲ್ಲವನ್ನೂ ಹಣದಿಂದ ಲೆಕ್ಕಹಾಕಲಾಗದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯ ಪಡೆಯಿರಿ. ಒಂದಿಷ್ಟು ಕಾರ್ಯದಲ್ಲಿ ಒತ್ತಡವಿರಲಿದೆ.

ಕರ್ಕ ರಾಶಿ: ಪುಣ್ಯ ಸ್ಥಳಗಳು ನಿಮಗೆ ಮಾನಸಿಕ ನೆಮ್ಮದಿಯನ್ನು ತರಬಹುದು. ಸಾಲಗಾರರಿಂದ ಅನಿರೀಕ್ಷಿತ ಧನಾಗಮನವಾಗಲಿದೆ. ವ್ಯಾಪಾರವು ಸ್ವಲ್ಪ ಲಾಭವನ್ನು ಕೊಡಬಹುದು. ಇಷ್ಟವಾದುದನ್ನು ಪಡೆದುಕೊಳ್ಳಲು ನಿಮಗೆ ಆಸಕ್ತಿ ಇರುವುದು. ಸಂಗಾತಿಯ ಮಾನಸಿಕ ಸ್ಥಿತಿಯು ಬದಲಾಗಬಹುದು. ಹತ್ತಾರು ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ಒಂದೇ ತಕ್ಕಡಿಯಲ್ಲಿ ಎಲ್ಲರನ್ನು ತೂಗಲಾಗದು. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನಿರಾಕರಿಸುವಿರಿ.‌ ಪ್ರೇಮ ವ್ಯವಹಾರವನ್ನು ಮನೆಯಲ್ಲಿ ತಿಳಿಸಲು ನೀವು ಭಯಪಡುವಿರಿ.

ಸಿಂಹ ರಾಶಿ: ಸಂಗಾತಿಯ ಮೇಲಿನ ಕೋಪವನ್ನು ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ನಿಮ್ಮ ವರ್ತನೆಯು ಇತರರಿಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ದೇವತಾಕಾರ್ಯದಿಂದ ನಿಮಗೆ ಇಂದಿನ ಎಲ್ಲ ಕಾರ್ಯಗಳೂ ಸುಗಮವಾಗುವುದು. ಬಹಳ ದಿನಗಳಿಂದ ಇದ್ದ ಭಯವನ್ನು ನೀವು ದೂರಮಾಡಿಕೊಳ್ಳುವಿರಿ. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗುವುದು. ಯಾರಾದರೂ ಸಂಬಂಧದ ನಡುವೆ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು. ಪ್ರಚಾರವನ್ನು ಪಡೆಯುವ ಮನಸ್ಸು ಬರುವುದು. ಮಾತಿನ ನಿಯಂತ್ರಣವು ತಪ್ಪಬಹುದು. ವಿಳಂಬದ ಕಾರ್ಯಕ್ಕೆ ವ್ಯಥೆ ಪಡುವಿರಿ.

ಕನ್ಯಾ ರಾಶಿ: ಮನೆಯ ಕೆಲಸದಲ್ಲಿ ನಿರುತ್ಸಾಹವಿರುವುದು. ಯಾರನ್ನೋ ದೂರಿಕೊಂಡು ಕುಳಿತುಕೊಳ್ಳುವುದು ಸರಿಯಾಗದು. ನಿಮ್ಮನ್ನು ಇಂದು ಸ್ನೇಹಿತರು ವಿಡಂಬನೆ ಮಾಡುವರು. ಮನಸ್ಸನ್ನು ನಿಯಂತ್ರಿಸಲು ದುಶ್ಚಟಕ್ಕೆ ಬೀಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ನಿಮ್ಮನ್ನು ದೂಷಿಸುವವರು ನಿಮ್ಮ ಜೊತೆಯೇ ಇರುವರು. ಪ್ರೀತಿಯಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌ ಯಾರಿಗಾಗಿಯೇ ಬದಲಾಗುವ ಅವಶ್ಯಕತೆ ಇಲ್ಲ. ತಪ್ಪಿದ್ದರೆ ಬದಲಾಗಿ. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು. ಮಕ್ಕಳಿಗಾಗಿ ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅನಾದರ ಬೇಡ. ನಿಮ್ಮ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಸಮಸ್ಯೆಯು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡಿಕೊಳ್ಳುವಿರಿ.

ತುಲಾ ರಾಶಿ: ರಾಜಕಾರಣದಲ್ಲಿ ಆಸಕ್ತಿ ಇಲ್ಲದಿದ್ದರೂ ಅದಾಗಿಯೇ ಬಂದು ನಿಮ್ಮನ್ನು ಸುತ್ತಿಕೊಳ್ಳುವುದು. ಪ್ರೇಮದ ವಿಚಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ವಿನಾಕಾರಣ ಸಾಲದಲ್ಲಿ ಸಿಕ್ಕಿಕೊಳ್ಳುವುದು ಬೇಡ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ಗೆಲವು ಸಿಕ್ಕರೂ ಸಂಭ್ರಮಿಸುವ ಮನಃಸ್ಥಿತಿ ಇರದು. ಸ್ನೇಹಿತರು ಪ್ರೀತಿಯಿಂದ ನಿಮಗೆ ಉಡುಗೊರೆ ಕೊಡುವರು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ. ನಿಮ್ಮ ಮನಸ್ತಾಪವನ್ನು ಕೋಪದ‌ ಮೂಲಕ ಹೊರಹಾಕುವಿರಿ. ನಿಮ್ಮ ನಡವಳಿಕೆಯ ಬಗ್ಗೆ ಹಿರಿಯರು ಮಾತನಾಡಿಕೊಳ್ಳುವರು. ಸಂಗಾತಿಯ ಜೊತೆ ಕಲಹವಾಡಿ ಪಶ್ಚಾತ್ತಾಪಪಡಬೇಕಾದೀತು. ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗದು.

ವೃಶ್ಚಿಕ ರಾಶಿ: ನಿದ್ರೆಯಿಂದ ನಿಮಗೆ ನಾನಾ ತೊಂದರೆಗಳು ಆಗುವುದು. ಬಂಧುಗಳ ಜೊತೆ ಶತ್ರುತ್ವವನ್ನು ಬೆಳೆಸಿಕೊಳ್ಳುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಸಂತೋಷವಾಗಲಿದೆ. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ ಆಗುವ ಸಾಧ್ಯತೆ ಇದೆ.‌ ಕ್ರೀಡಾಪಟುಗಳು ಉತ್ತಮ ಅಭ್ಯಾಸದ ಕಡೆ ಗಮನಹರಿಸುವರು. ನಿಮಗೆ ಯಾರಿಂದಲಾದರೂ ಸಹಾಯ ಕೇಳಲು ಸಂಕೋಚವಾದೀತು. ಸಂಗಾತಿಯ ಒತ್ತಡವನ್ನು ನೀವು ಕಡಿಮೆ ಮಾಡುವಿರಿ. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ಇಂದು ನೀವು ಒತ್ತಡವನ್ನು ತಂದುಕೊಳ್ಳಬಾರದು ಎಂದು ಅಂದುಕೊಂಡಿದ್ದರೂ ಸಂದರ್ಭವು ಅದೇ ರೀತಿ ಸೃಷ್ಟಿಯಾಗಬಹುದು. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ನೀವು ಪ್ರಯತ್ನಿಸಬೇಕು.‌ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಮಾಡುವ ಸಾಧ್ಯತೆ ಇದೆ.

ಧನು ರಾಶಿ: ಹಿತಶತ್ರುಗಳು ನಿಮ್ಮನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಬಹುದು. ಮಕ್ಕಳ ಆರೋಗ್ಯವು ಕೆಡಬಹುದು‌. ಆರೈಕೆಯ ಅಗತ್ಯ ಬೀಳುವುದು. ಹೊಸ ಉದ್ಯೋಗಕ್ಕಾಗಿ ದೂರದ ಊರಿಗೆ ಹೋಗುವಿರಿ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ನಿಮ್ಮ ರಹಸ್ಯ ವಿಚಾರವನ್ನು ಆಪ್ತರಿಗೆ ಹೇಳುವಿರಿ. ತಂತ್ರಜ್ಞಾನದ ಬಗ್ಗೆ ಮಾಹಿತಿ ಕಡಿಮೆ‌ ಇರುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಭೂವ್ಯವಹಾರವನ್ನು ಮಾಡುವವರಿಗೆ ಇಂದು ಅಧಿಕ ಲಾಭವು ಆಗುವುದು. ಕಡಿಮೆಯಾಗುತ್ತಿದ್ದ ಆರೋಗ್ಯದಿಂದ ಸಮಾಧಾನ‌ಸಿಗಲಿದೆ. ನಿಮ್ಮನ್ನು ತಿಳಿದವರೇ ನಿಮಗೆ ವಂಚನೆ ಮಾಡುವರು. ಕೃಷಿಯಲ್ಲಿ ಅಧಿಕ ಲಾಭಕ್ಕೆ ಪ್ರಯತ್ನಿಸುವಿರಿ. ಮನೆಯ ಕೆಲಸದಲ್ಲಿ ಇಂದು ಆಸಕ್ತಿ ಕಡಿಮೆ ಆಗುವುದು. ನಿಮ್ಮ ಬಗ್ಗೆಯೇ ನಿಮಗೆ ಕೀಳರಿಮೆ ಬೇಡ.‌

ಮಕರ ರಾಶಿ: ಯಾರಿಗಾದರೂ ಒಂದು ಹಂತದವರೆಗೆ ಬುದ್ಧಿ ಮಾತನ್ನು ಹೇಳಬಹುದು. ಅನಂತರ ಅವರನ್ನು ಅವರಷ್ಟಕ್ಕೆ ಬಿಡುವುದು ಸುಖ. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಪಾಲುದಾರಿಕೆಯಲ್ಲಿ ಅನ್ಯೋನ್ಯತೆಯು ಕಂಡುಬರುವುದು. ನೀವು ಮಾಡಬೇಕಂದುಕೊಂಡ ಕಾರ್ಯದಲ್ಲಿ ಜಯವಿರುವುದು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ. ನಿಮ್ಮ ನೋವನ್ನು‌ ನೀವೇ ನುಂಗಿಕೊಳ್ಳುವಿರಿ. ತಂದೆಯ ಆರೋಗ್ಯವನ್ನು ಸರಿಪಡಿಸಲು ಹೆಚ್ಚು ಜವಾಬ್ದಾರಿಯನ್ನು ಹೊರಬೇಕಾದೀತು. ಮನಸ್ಸಿಗೆ ನೆಮ್ಮದಿ ಸಿಗುವ ಜಾಗಕ್ಕೆ ಹೋಗುವಿರಿ. ಅಪರಿಚಿತರ ಮುಂದೆ ಅಸಭ್ಯ ವರ್ತನೆ ಬೇಡ.

ಕುಂಭ ರಾಶಿ: ಮನೆಯನ್ನು ಬದಲಿಸಬೇಕಾದೀತು. ಬಂಧುಗಳ ನಡವಳಿಕೆಯನ್ನು ಅರ್ಥ ಮಾಡಿಕೊಂಡು ನೀವು ದೂರ ಸರಿಯುವಿರಿ. ನಿಮಗೆ ಬರಬೇಕಾದ ಹಣವನ್ನು ನೀವು ಬಿಟ್ಟುಕೊಡುವಿರಿ. ನಿಮ್ಮ ಮಕ್ಕಳು ಮಾತನ್ನು ಕೇಳರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಚಂಚಲ ಮನಸ್ಸನ್ನು ನೀವು ನಿಯಂತ್ರಿಸಲು ಆಗದು. ಇದರಿಂದ ತೀರ್ಮಾನ ಸರಿಯಾಗಿ ತೆಗೆದುಕೊಳ್ಳಲಾಗದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಬಲವಾದ ನೋವನ್ನು ಪಡೆಯಬೇಕಾದೀತು. ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯೂ ಬರಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಸ್ವಂತ ಹಣವನ್ನು ದುಪ್ಪಟ್ಟು ಖರ್ಚುಮಾಡುವಿರಿ. ಇಂದಿನ‌ ನಿವು ಬಹಳ ಒತ್ತಡದಲ್ಲಿ ಇರುವಂತೆ ತೋರುವಿರಿ.

ಮೀನ ರಾಶಿ: ಆಸ್ತಿಯ ವಿಚಾರದಲ್ಲಿ ಸಂಕೀರ್ಣ ಸ್ಥಿತಿ ಇರಲಿದೆ. ನೌಕರರ ಅಭಾವದಿಂದ ಚಿಂತೆಗೀಡಾಗಬೇಕಾಗುವುದು. ದೇಹಾಯಾಸವು ಇಂದು ಇರುವುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯವು ಇರುವುದು. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ. ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್ತ ಸಮಾಲೋಚನೆ ಮಾಡುವಿರಿ. ಪಾಲುದಾರಿಕೆಯಲ್ಲಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಿ.

ಲೋಹಿತಶರ್ಮಾ – 8762924271 (what’s app only)