AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಹಿತಶತ್ರುಗಳು ನಿಮ್ಮನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಬಹುದು-ಎಚ್ಚರ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಡಿಸೆಂಬರ್​​ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಹಿತಶತ್ರುಗಳು ನಿಮ್ಮನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಬಹುದು-ಎಚ್ಚರ
ರಾಶಿಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 03, 2023 | 12:45 AM

Share

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಡಿಸೆಂಬರ್​ ​ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:36 ರಿಂದ 06:01 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:22 ಗಂಟೆ 01:47 ನಿಮಿಷಕ್ಕೆ, ಗುಳಿಕ ಕಾಲ ಮಧ್ಯಾಹ್ನ 03:12 ರಿಂದ 04:36ರ ವರೆಗೆ.

ಧನು ರಾಶಿ : ಹಿತಶತ್ರುಗಳು ನಿಮ್ಮನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಬಹುದು. ಮಕ್ಕಳ ಆರೋಗ್ಯವು ಕೆಡಬಹುದು‌. ಆರೈಕೆಯ ಅಗತ್ಯ ಬೀಳುವುದು. ಹೊಸ ಉದ್ಯೋಗಕ್ಕಾಗಿ ದೂರದ ಊರಿಗೆ ಹೋಗುವಿರಿ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ನಿಮ್ಮ ರಹಸ್ಯ ವಿಚಾರವನ್ನು ಆಪ್ತರಿಗೆ ಹೇಳುವಿರಿ. ತಂತ್ರಜ್ಞಾನದ ಬಗ್ಗೆ ಮಾಹಿತಿ ಕಡಿಮೆ‌ ಇರುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಭೂವ್ಯವಹಾರವನ್ನು ಮಾಡುವವರಿಗೆ ಇಂದು ಅಧಿಕ ಲಾಭವು ಆಗುವುದು. ಕಡಿಮೆಯಾಗುತ್ತಿದ್ದ ಆರೋಗ್ಯದಿಂದ ಸಮಾಧಾನ‌ಸಿಗಲಿದೆ. ನಿಮ್ಮನ್ನು ತಿಳಿದವರೇ ನಿಮಗೆ ವಂಚನೆ ಮಾಡುವರು. ಕೃಷಿಯಲ್ಲಿ ಅಧಿಕ ಲಾಭಕ್ಕೆ ಪ್ರಯತ್ನಿಸುವಿರಿ. ಮನೆಯ ಕೆಲಸದಲ್ಲಿ ಇಂದು ಆಸಕ್ತಿ ಕಡಿಮೆ ಆಗುವುದು. ನಿಮ್ಮ ಬಗ್ಗೆಯೇ ನಿಮಗೆ ಕೀಳರಿಮೆ ಬೇಡ.‌

ಮಕರ ರಾಶಿ : ಯಾರಿಗಾದರೂ ಒಂದು ಹಂತದವರೆಗೆ ಬುದ್ಧಿ ಮಾತನ್ನು ಹೇಳಬಹುದು. ಅನಂತರ ಅವರನ್ನು ಅವರಷ್ಟಕ್ಕೆ ಬಿಡುವುದು ಸುಖ. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಪಾಲುದಾರಿಕೆಯಲ್ಲಿ ಅನ್ಯೋನ್ಯತೆಯು ಕಂಡುಬರುವುದು. ನೀವು ಮಾಡಬೇಕಂದುಕೊಂಡ ಕಾರ್ಯದಲ್ಲಿ ಜಯವಿರುವುದು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ. ನಿಮ್ಮ ನೋವನ್ನು‌ ನೀವೇ ನುಂಗಿಕೊಳ್ಳುವಿರಿ. ತಂದೆಯ ಆರೋಗ್ಯವನ್ನು ಸರಿಪಡಿಸಲು ಹೆಚ್ಚು ಜವಾಬ್ದಾರಿಯನ್ನು ಹೊರಬೇಕಾದೀತು. ಮನಸ್ಸಿಗೆ ನೆಮ್ಮದಿ ಸಿಗುವ ಜಾಗಕ್ಕೆ ಹೋಗುವಿರಿ. ಅಪರಿಚಿತರ ಮುಂದೆ ಅಸಭ್ಯ ವರ್ತನೆ ಬೇಡ.

ಕುಂಭ ರಾಶಿ : ಮನೆಯನ್ನು ಬದಲಿಸಬೇಕಾದೀತು. ಬಂಧುಗಳ ನಡವಳಿಕೆಯನ್ನು ಅರ್ಥ ಮಾಡಿಕೊಂಡು ನೀವು ದೂರ ಸರಿಯುವಿರಿ. ನಿಮಗೆ ಬರಬೇಕಾದ ಹಣವನ್ನು ನೀವು ಬಿಟ್ಟುಕೊಡುವಿರಿ. ನಿಮ್ಮ ಮಕ್ಕಳು ಮಾತನ್ನು ಕೇಳರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಚಂಚಲ ಮನಸ್ಸನ್ನು ನೀವು ನಿಯಂತ್ರಿಸಲು ಆಗದು. ಇದರಿಂದ ತೀರ್ಮಾನ ಸರಿಯಾಗಿ ತೆಗೆದುಕೊಳ್ಳಲಾಗದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಬಲವಾದ ನೋವನ್ನು ಪಡೆಯಬೇಕಾದೀತು. ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯೂ ಬರಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಸ್ವಂತ ಹಣವನ್ನು ದುಪ್ಪಟ್ಟು ಖರ್ಚುಮಾಡುವಿರಿ. ಇಂದಿನ‌ ನಿವು ಬಹಳ ಒತ್ತಡದಲ್ಲಿ ಇರುವಂತೆ ತೋರುವಿರಿ.

ಮೀನ ರಾಶಿ : ಆಸ್ತಿಯ ವಿಚಾರದಲ್ಲಿ ಸಂಕೀರ್ಣ ಸ್ಥಿತಿ ಇರಲಿದೆ. ನೌಕರರ ಅಭಾವದಿಂದ ಚಿಂತೆಗೀಡಾಗಬೇಕಾಗುವುದು. ದೇಹಾಯಾಸವು ಇಂದು ಇರುವುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯವು ಇರುವುದು. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ. ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್ತ ಸಮಾಲೋಚನೆ ಮಾಡುವಿರಿ. ಪಾಲುದಾರಿಕೆಯಲ್ಲಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಿ.

-ಲೋಹಿತಶರ್ಮಾ – 8762924271 (what’s app only)