Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 2ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್​ 02ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 2ರ ದಿನಭವಿಷ್ಯ 
ಸಂಖ್ಯಾಶಾಸ್ತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 02, 2023 | 1:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 2ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ಬಗೆಯ ಆಲೋಚನೆಗಳು ನಿಮ್ಮಲ್ಲಿ ಮೂಡಲಿದೆ. ಮಕ್ಕಳ ಶಿಕ್ಷಣದ ವಿಚಾರಕ್ಕೆ ಪ್ರಾಮುಖ್ಯ ನೀಡಬೇಕಾಗುತ್ತದೆ. ಹೊಸ ವಾಹನ ಅಥವಾ ಗ್ಯಾಜೆಟ್ ಅಥವಾ ಲ್ಯಾಪ್ ಟಾಪ್ ಖರೀದಿ ಮಾಡುವಂಥ ಆಲೋಚನೆ ಮಾಡಲಿದ್ದೀರಿ. ಮನೆಯಲ್ಲಿನ ಶುಭ ಕಾರ್ಯಕ್ಕೆ ನೀವೇ ಮುಂದಾಳತ್ವ ವಹಿಸಬೇಕು ಎಂದು ತೀರ್ಮಾನ ಆಗಬಹುದು. ಆದರೆ ಈ ದಿನದ ಎಚ್ಚರಿಕೆ ಏನೆಂದರೆ, ಜ್ವರ- ಕೆಮ್ಮು ಈ ರೀತಿಯಾದಂತಹ ಅನಾರೋಗ್ಯ ಸಮಸ್ಯೆಗಳು ನಿಮಗೆ ಸ್ವಲ್ಪ ಹೈರಾಣು ಮಾಡಲಿವೆ. ಒಂದು ವೇಳೆ ಈ ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಕಾಣುವುದು ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನವ ವಿವಾಹಿತರ ಮಧ್ಯೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲಿಯೂ ಹಣಕಾಸಿನ ವಿಚಾರಕ್ಕೆ ಸಣ್ಣದಾಗಿ ಆರಂಭವಾಗುವ ಕಲಹ ತೀರಾ ಮನಶ್ಶಾಂತಿ ಹಾಳು ಮಾಡುವ ಮಟ್ಟಕ್ಕೆ ಹೋಗಲಿದೆ. ನೀವು ಒಂದು ವೇಳೆ ಈಗಾಗಲೇ ಸಾಲವನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ ತಕ್ಷಣವೇ ಹಿಂತಿರುಗಿಸುವಂತೆ ಕೆಲವರು ಕುತ್ತಿಗೆ ಮೇಲೆ ಕುಳಿತಂತಹ ಅನುಭವ ನಿಮಗೆ ಆಗಲಿದೆ. ಇತರರನ್ನು ಓಲೈಕೆ ಮಾಡುವ ಸಲುವಾಗಿ ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಈ ದಿನ ಕಾಣಿಸುತ್ತಿದೆ. ಮುಖ್ಯವಾದ ಕಾಗದ ಪತ್ರಗಳ ವಿಚಾರಗಳು ಇದ್ದಲ್ಲಿ ಈ ದಿನ ಸಾಧ್ಯವಾದಷ್ಟು ಮುಂದಕ್ಕೆ ಹಾಕುವುದು ಉತ್ತಮ. ಇನ್ನು ಖರ್ಚಿನ ಮೇಲೆ ಹತೋಟಿ ಇರುವುದು ತುಂಬಾ ಮುಖ್ಯ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಂಗಾತಿ ನೀಡುವ ಸಹಕಾರದಿಂದ ನಿಮ್ಮ ಅದೆಷ್ಟೋ ಸಮಸ್ಯೆಗಳಿಗೆ ಹಾಗೂ ಮಾನಸಿಕ ಆತಂಕಗಳಿಗೆ ಪರಿಹಾರ ಕಾಣುತ್ತದೆ. ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ಹಣಕಾಸಿನ ಸಾಲ ಕೇಳಿಕೊಂಡು ನಿಮ್ಮ ಬಳಿ ಬರುವ ಸಾಧ್ಯತೆಗಳಿವೆ. ನೀವು ಬಹಳ ಸಮಯ ಇಟ್ಟು ಹಾಗೂ ಸ್ವತಃ ಕೈಯಿಂದ ಹಣವನ್ನು ಹಾಕಿಕೊಂಡು ಮಾಡಿದ್ದ ಕೆಲಸ ಒಂದರಿಂದ ಹೊರಬರಬೇಕಾದ ಸನ್ನಿವೇಶ ಎದುರಾಗಬಹುದು. ಹತ್ತಾರು ಮಂದಿ ಇರುವಂತಹ ಕಡೆ ನಿಮ್ಮ ಅಭಿಪ್ರಾಯವನ್ನು ಹೇಳುವ ಸಂದರ್ಭ ಎದುರಾದಲ್ಲಿ ಸಾಧ್ಯವಾದಷ್ಟು ಅಲ್ಲಿನ ಸನ್ನಿವೇಶವನ್ನು ಪರಾಂಬರಿಸಿ ಆನಂತರ ನಿಮ್ಮ ಅಭಿಪ್ರಾಯ ಹೇಳುವುದು ಉತ್ತಮ, ಇಲ್ಲದಿದ್ದಲ್ಲಿ ವಿವಾದಕ್ಕೆ ಕಾರಣ ಆಗಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ದೂರದ ಊರುಗಳಿಂದ ಶುಭ ಸುದ್ದಿ ಕೇಳುವಂಥ ಯೋಗ ಈ ದಿನ ನಿಮಗಿದೆ. ಯಾರು ಉದ್ಯೋಗ ಬದಲಾವಣೆ ಮಾಡಬೇಕು ಅಂದುಕೊಳ್ಳುತ್ತಾ ಇದ್ದೀರೋ ಅಂತಹವರಿಗೆ ಸ್ನೇಹಿತರ ನೆರವು ದೊರೆಯಲಿದೆ. ಕಮಿಷನ್ ಆಧಾರದ ವ್ಯವಹಾರವನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವ ಸಾಧ್ಯತೆಗಳಿವೆ. ಬಹುತೇಕ ಮುರಿದೇ ಹೋಯಿತು ಎಂದುಕೊಂಡಿದ್ದ ವ್ಯವಹಾರವನ್ನು ಮತ್ತೆ ಆರಂಭಿಸಿ, ಯಶಸ್ವಿಯಾಗಿ ಮುಗಿಸುವಲ್ಲಿ ಸಫಲರಾಗುತ್ತೀರಿ. ಈ ದಿನ ಸಂಬಂಧಿಕರು ಅಥವಾ ಸ್ನೇಹಿತರು ತಮ್ಮ ಮನೆಯಲ್ಲಿನ ದೇವತಾ ಕಾರ್ಯಗಳಿಗೆ ನಿಮ್ಮನ್ನು ಆಹ್ವಾನಿಸುವ ಯೋಗ ಇದೆ. ಈ ದಿನ ಮಾನಸಿಕವಾಗಿ ನೆಮ್ಮದಿಯಾಗಿರುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ಪ್ರಕೃತಿಯ ಮಧ್ಯೆ ಉತ್ತಮವಾದ ಸಮಯವನ್ನು ಕಳೆಯುವಂತಹ ಯೋಗ ನಿಮ್ಮ ಪಾಲಿಗೆ ಇದೆ. ಏನು ಯೋಜನೆ ಮಾಡಿಕೊಳ್ಳದೆ ತೆರಳಿದಂತಹ ಪ್ರವಾಸಗಳು ಸಂತೋಷವನ್ನು ಕೊಡಲಿವೆ. ಇದೇ ಸಂದರ್ಭದಲ್ಲಿ ಹಳೆಯ ಸ್ನೇಹಿತರು ಅಥವಾ ಪರಿಚಯಸ್ಥರೂ ಸಿಕ್ಕಿ, ಅದರಿಂದಲೂ ಸಂತೋಷ ಸಿಗಲಿದೆ. ಅಲ್ಪಾವಧಿಗಾದರೂ ವಿದೇಶಕ್ಕೆ ಉದ್ಯೋಗ ಅಥವಾ ವೃತ್ತಿಯ ಕಾರಣಕ್ಕೆ ತೆರಳ ಬೇಕಾಗಿದ್ದು, ಅದಕ್ಕೆ ಸಂಬಂಧಪಟ್ಟಂತಹ ವೀಸಾದ ಅಡೆತಡೆಗಳು ಎದುರಾಗಿದ್ದಲ್ಲಿ ಅದು ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರಿಸಲಿವೆ. ಈ ದಿನದ ಎಚ್ಚರಿಕೆಯೇನೆಂದರೆ, ನೀವು ಜಾಮೀನಾಗಿ ನಿಂತು ಯಾರಿಗೂ ಸಾಲ ಕೊಡಿಸಲು ಹೋಗಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕುಟುಂಬ ಸದಸ್ಯರ ಅಗತ್ಯಗಳಿಗಾಗಿ ಈ ದಿನದ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡುತ್ತಿದ್ದೀರಿ ಎಂದಾದಲ್ಲಿ ಖರ್ಚಿನ ಮೇಲೆ ಒಂದಿಷ್ಟು ನಿಗಾ ಇರಲಿ. ನಿಮ್ಮ ಸುತ್ತಮುತ್ತ ಇರುವವರು ನಿಮ್ಮನ್ನು ಉಬ್ಬಿಸಿ, ಹೊಗಳಿ ವಿಪರೀತ ಖರ್ಚು ಮಾಡಿಸುವ ಸಾಧ್ಯತೆಗಳು ಕಾಣಿಸುತ್ತಿವೆ. ಖರ್ಚಿನ ವಿಚಾರ ಬಂದಾಗ ಭಾವನಾತ್ಮಕವಾಗಿ ಆಲೋಚನೆ ಮಾಡದಿರುವುದು ಈ ದಿನ ಒಳಿತು. ಉದ್ಯೋಗ ಸ್ಥಳದಲ್ಲಿ ನೀವು ಅಂದುಕೊಳ್ಳದ ರೀತಿಯಲ್ಲಿ ಕೆಲವು ಬದಲಾವಣೆಗಳು ಆಗಿ, ಆತಂಕಕ್ಕೆ ಕಾರಣ ಆಗುವ ಸಾಧ್ಯತೆಗಳಿವೆ. ಕೆಲವು ಕೆಲಸಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಬೇಸರಕ್ಕೆ ಕಾರಣವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಇತರರ ವೈಯಕ್ತಿಕ ವಿಚಾರಗಳಿಗೆ, ಪ್ರೀತಿ- ಪ್ರೇಮದ ಸಂಗತಿಗಳಿಗೆ ನೀವು ತಲೆ ಹಾಕಲು ಹೋಗಬೇಡಿ. ಒಂದು ವೇಳೆ ಮಧ್ಯಸ್ಥರಾಗಿ ನಿಮ್ಮನ್ನು ಆಹ್ವಾನ ನೀಡಿದರು ಸಹ ಅದನ್ನು ಒಪ್ಪಿಕೊಳ್ಳದೇ ಇರುವುದು ಒಳ್ಳೆಯದು. ಒಂದು ವೇಳೆ ನೀವೇ ಅತ್ಯುತ್ಸಾಹದಿಂದ ಯಾವುದಾದರೂ ಇಂಥ ವಿಚಾರಗಳಲ್ಲಿ ತೊಡಗಿಕೊಂಡಿರೋ ನಿಂದೆ ಆರೋಪಗಳಿಗೆ ಗುರಿಯಾಗುವುದು ನಿಶ್ಚಿತ. ಈ ಹಿಂದೆ ಯಾವಾಗಲೂ ಮಾಡಿದ್ದ ಹೂಡಿಕೆ, ಅದರಲ್ಲೂ ಭೂಮಿಗೆ ಸಂಬಂಧಪಟ್ಟಂತಹ ಹೂಡಿಕೆ ಇದ್ದಲ್ಲಿ ಅದನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಈ ವಿಚಾರದಲ್ಲಿ ಗೊಂದಲಗಳು ಏನಾದರೂ ಮಾಡಿದರೆ ಅನುಭವಿಗಳು- ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ತಂದೆ ಅಥವಾ ತಂದೆಗೆ ಸಮಾನರಾದವರ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ತೀವ್ರ ಆತಂಕಕ್ಕೆ ಗುರಿ ಮಾಡಲಿದೆ. ಇತರರು ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಹೆಚ್ಚಾಗುತ್ತಿದೆ ಎಂದು ನಿಮಗೇ ಅನಿಸಲಿದೆ. ಹಣದ ಅಗತ್ಯಗಳು ಕಂಡು ಬಂದು, ಸಾಲ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಬಹುದು. ನಿಧಾನಕ್ಕೆ ಮಾಡಿದರಾಯಿತು ಎಂದುಕೊಂಡಿದ್ದ ಕೆಲಸ ಒಂದನ್ನು ತುರ್ತಾಗಿ ಮುಗಿಸಲೇಬೇಕಾದಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ. ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಕೊನೆ ಕ್ಷಣದಲ್ಲಿ ಬದಲಾವಣೆಗಳು ಕಂಡು ಬಂದು, ಆ ಪ್ರಯಾಣವೇ ರದ್ದಾಗುವ ಸಾಧ್ಯತೆಗಳು ಇವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ಆರಂಭಿಸುವ ಉದ್ದೇಶದಿಂದ ಹಣಕಾಸನ್ನು ಹೊಂದಾಣಿಕೆ ಮಾಡಲು ಪ್ರಯತ್ನ ಪಡುತ್ತಿರುವವರಿಗೆ ಈ ದಿನ ಒಳ್ಳೆ ಸುದ್ದಿ ಇದೆ. ಇಷ್ಟು ಸಮಯ ಒಂದು ವೇಳೆ ಕುಟುಂಬದ ಒಳಗಿಂದ ಏನಾದರೂ ವಿರೋಧಗಳು ಬರುತ್ತಿದ್ದಲ್ಲಿ ಅದಕ್ಕೆ ಈಗ ಅವರ ಸಹಕಾರ ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗಕ್ಕೋ ಅಥವಾ ವ್ಯಾಸಂಗಕ್ಕೋ ಪ್ರಯತ್ನ ಪಡುತ್ತಾ ಇರುವವರಿಗೆ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಹಾಯಗಳು ದೊರೆಯಲಿವೆ. ಉಳಿತಾಯದ ಹಣವನ್ನು ತೆಗೆದು ಬೇರೆಲ್ಲಾದರೂ ಹೂಡಿಕೆ ಮಾಡುವ ಬಗ್ಗೆ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ ಮತ್ತು ಇದೇ ವಿಚಾರವಾಗಿ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

ತಾಜಾ ಸುದ್ದಿ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?