ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶೋಭನ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:33 ಗಂಟೆ, ರಾಹು ಕಾಲ ಬೆಳಿಗ್ಗೆ 09:25 ರಿಂದ 10:56, ಯಮಘಂಡ ಕಾಲ ಮಧ್ಯಾಹ್ನ 01:59 ರಿಂದ 03:30ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:22 ರಿಂದ 07:53ರ ವರೆಗೆ.
ಧನು ರಾಶಿ: ನೀವು ಕೌಟುಂಬಿಕ ಆಸ್ತಿಗೆ ಸಂಬಂಧಿಸಿದ ಕಾನೂನು ವಿವಾದವನ್ನು ಹೊಂದಿದ್ದರೆ. ಇಂದು ಪರಿಸ್ಥಿತಿಯು ನಿಮ್ಮ ಪರವಾಗಿ ತಿರುಗಬಹುದು. ನಿಮ್ಮ ಪ್ರತಿ ಮಾತಿನ್ನೂ ಇನ್ನೊಬ್ಬರು ಗಮನಿಸುವರು. ಸಂಗಾತಿಯ ಬಗ್ಗೆ ಸಂದೇಹವು ಹೆಚ್ಚಿರುವುದು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಯೋಚನೆಗಳು ಇದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದೇ ಇರದಬಹುದು. ಇತರರಲ್ಲಿ ನಿಮ್ಮ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಿಕೊಳ್ಳಿ. ಅನ್ಯಾಯದ ಮಾರ್ಗದಲ್ಲಿ ನೀವಿದ್ದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಉದ್ಯೋಗದಲ್ಲಿರುವ ಜನರು ಇಂದು ಹೊಸ ಕೊಡುಗೆಯನ್ನು ಪಡೆಯಬಹುದು. ಆದಾಯ ಕಡಿಮೆ ಖರ್ಚು ಹೆಚ್ಚಾಗಲಿದ್ದು, ಸಾರ್ವಜನಿಕ ಕ್ಷೇತ್ರಗಳಲ್ಲಿ ಮನ್ನಣೆ ಇರದು.
ಮಕರ ರಾಶಿ: ಇಂದು ರಾಜಕೀಯದಲ್ಲಿ ತೊಡಗಿಕೊಂಡವರಿಗೆ ಸಂತೋಷಕರವಾದ ಸುದ್ದಿ ಸಿಗಲಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಮುಂದಿನ ಕಾರ್ಯವು ಸೂಚಿಸದೇ ಬಹಳ ಜಡರಂತೆ ಆಗುವಿರಿ. ಇಂದು ನೀವು ಮನೆಯಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯಿಂದ ಪ್ರಯತ್ನಿಸಬೇಕಾದೀತು. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಆಭಾಸವೆನಿಸುವುದು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಆಗ ನಿರ್ಧಾರಗಳು ಸರಿಯಾಗಿರುತ್ತವೆ. ಹಳೆಯ ವಸ್ತುವನ್ನೇ ದುರಸ್ತಿ ಮಾಡುತ್ತ ಬಳಸುವಿರಿ. ಇಂದು ನೀವು ನಿಮ್ಮ ಮಗುವಿನ ಶಿಕ್ಷಣದ ಬಗ್ಗೆ ಚಿಂತಿತರಾಗಬಹುದು, ಇದರಲ್ಲಿ ನಿಮ್ಮ ಸಂಗಾತಿಯ ಸಲಹೆಯ ಅಗತ್ಯವಿರುತ್ತದೆ. ದೇವರ ಕಾರ್ಯಗಳಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ.
ಕುಂಭ ರಾಶಿ: ನಿಮ್ಮ ಸಾಮಾಜಿಕ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಬಹುದು. ಇಂದು ನೀವು ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಿ, ಆನಂದಿಸುವಿರಿ. ಕೆಲವು ಸವಾಲಿನ ಪರಿಸ್ಥಿತಿಗಳು ಬರುವ ಸಾಧ್ಯತೆ ಇದೆ. ಇದು ಕೆಲಸಕ್ಕೆ ಉತ್ತೇಜನವನ್ನು ಕೊಡುವುದು. ಇಂದು ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸುವಲ್ಲಿ ಸೋಲುವಿರಿ. ಕೆಲ ಕಾಲ ಹೊಸ ಉದ್ಯಮಕ್ಕೆ ಪಾಲುದಾರರಾಗುವುದು ಬೇಡ. ಅನುಭವಸ್ಥರ ಮಾತನ್ನು ಕೇಳುವ ವ್ಯವಧಾನವಿರಲಿ. ಸಂಗಾತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ನಿಮಗೆ ಅಪೂರ್ವವಾದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಅಡೆತಡೆಗಳನ್ನು ನಿವಾರಿಸಲು ತಮ್ಮ ಪೋಷಕರನ್ನು ಸಂಪರ್ಕಿಸಬೇಕಾಗುತ್ತದೆ. ಸೇಡನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ.
ಮೀನ ರಾಶಿ: ನಿಮ್ಮ ಗೃಹ ನಿರ್ಮಾಣ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ಆದರೆ ವ್ಯವಹಾರದಲ್ಲಿ ಉತ್ತಮ ಲಾಭದಿಂದಾಗಿ ನೀವು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಾಯಕ ಸ್ಥಾನದಿಂದ ನೀವು ಕೆಳಗಿಳಿಯುವ ಆಲೋಚನೆ ಮಾಡುವಿರಿ. ಇಂದು ಸಾಮಾಜಿಕ ಕೆಲಸವು ನಿಮಗೆ ಬೇಸರ ತರಿಸಬಹುದು. ನೆಮ್ಮದಿಗಾಗಿ ಎಲ್ಲಿಗಾದರೂ ಹೋಗುವ ಮನಸ್ಸು ಮಾಡುವಿರಿ. ಕಛೇರಿಯಲ್ಲಿ ಎಂದಿನ ಉತ್ಸಾಹವು ಇರುವುದಿಲ್ಲ. ಖಾಸಗಿ ಸಂಸ್ಥೆಯಲ್ಲಿ ಉನ್ನತ ಸ್ಥಾನವು ಸಿಗಬಹುದು. ಮಕ್ಕಳ ಮನಸ್ಸು ಅರ್ಥಮಾಡಿಕೊಳ್ಳುವ ವಿಚಾರದಲ್ಲಿ ಸೋಲುವಿರಿ. ನಿಮ್ಮ ಮೂಗಿನ ನೇರದ ವಿಷಯಕ್ಕೆ ಜನ ಕುಟುಂಬದಲ್ಲಿ ಬೆಂಬಲ ಸಿಗದು. ನಿಮ್ಮ ಇಂದಿನ ಒತ್ತಡವನ್ನು ನೋಡಿ ಮಾತುಕೊಡಿ. ಅಪವಾದದ ಮೂಲವನ್ನು ತಡಕಾಡುವ ಪ್ರಯತ್ನ ಮಾಡುವಿರಿ. ನೀವು ಯಾರೊಂದಿಗಾದರೂ ಹೊಸ ವ್ಯವಹಾರವನ್ನು ಮಾಡಲು ಯೋಚಿಸುತ್ತಿದ್ದರೆ, ಈ ದಿನವು ಅವರಿಗೆ ಉತ್ತಮವಾಗಿಲ್ಲ. ಹಾಗಾಗಿ ಮುಂದುವರಿಯುವುದು ಬೇಡ. ಇಂದು ನೀವು ನಿಮ್ಮ ಸಂಗಾತಿಗೆ ಉಡುಗೊರೆಯನ್ನು ಖರೀದಿಸಬಹುದು. ಅದನ್ನು ನೋಡಿ ಅವರು ಸಂತೋಷವಾಗಿರುತ್ತಾರೆ.