AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ರಾಶಿಯವರಿಗೆ ಇಂದು ಸ್ನೇಹಿತರಿಂದ ಲಾಭ ಉಂಟಾಗಲಿದೆ

ರಾಶಿ ಭವಿಷ್ಯ ಶುಕ್ರವಾರ(ಸೆ.27): ಗೊಂದಲವನ್ನು ಮಾಡಿಕೊಳ್ಳದೇ ಸರಳವಾಗಿ ಕೆಲಸಗಳನ್ನು ಮಾಡುವುದು ಒಳ್ಳೆಯದು. ಅಲ್ಪ ಹೂಡಿಯತ್ತ ಗಮನವಿರಲಿದೆ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗುವಿರಿ. ದಾನ ಮಾಡಲು ಮನಸ್ಸು ಹಿಂಜರಿಯಲಿದೆ. ಹಾಗಾದರೆ ಸೆಪ್ಟೆಂಬರ್​ 27ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರಿಗೆ ಇಂದು ಸ್ನೇಹಿತರಿಂದ ಲಾಭ ಉಂಟಾಗಲಿದೆ
ಈ ರಾಶಿಯವರಿಗೆ ಇಂದು ಸ್ನೇಹಿತರಿಂದ ಲಾಭ ಉಂಟಾಗಲಿದೆ
TV9 Web
| Edited By: |

Updated on: Sep 27, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಶಿವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:53 ರಿಂದ ಮಧ್ಯಾಹ್ನ 12:23, ಯಮಘಂಡ ಕಾಲ ಮಧ್ಯಾಹ್ನ 03:24ರಿಂದ ಸಂಜೆ 04:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ 09:23 ರ ವರೆಗೆ.

ಧನು ರಾಶಿ: ಸಾಮಾಜಿಕ ಕಾರ್ಯದಲ್ಲಿ ತೊಡಗುವುದಷ್ಟೇ ಅಲ್ಲ, ಆರ್ಥಿಕ ಸಹಾಯವನ್ನೂ ನೀವು ಮಾಡಬೇಕಾಗುವುದು. ಇಂದು ವಿದ್ಯಾರ್ಥಿಗಳಿಗೆ ತಾಯಿಯಿಂದ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವರು. ಗಂಡಾಂತರದಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಮನೆಗೆ ಬೇಕಾದ ಉಪಕರಣಗಳನ್ನು ಖರೀದಿಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಹೆಚ್ಚಿನ ಆತಂಕ ಇರಲಿದೆ. ದೊಡ್ಡ ವ್ಯವಹಾರಸ್ಥರ ಜೊತೆ ಸಂವಾದ ಮಾಡುವ ಸನ್ನಿವೇಶ ಬರುವುದು. ಕಳೆದುಕೊಂಡದ್ದರೆ ಬಗ್ಗೆ ಹೆಚ್ಚು ಮೋಹ ಉಂಟಾಗುವುದು. ಗೊಂದಲವನ್ನು ಮಾಡಿಕೊಳ್ಳದೇ ಸರಳವಾಗಿ ಕೆಲಸಗಳನ್ನು ಮಾಡುವುದು ಒಳ್ಳೆಯದು. ಅಲ್ಪ ಹೂಡಿಯತ್ತ ಗಮನವಿರಲಿದೆ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗುವಿರಿ. ದಾನ ಮಾಡಲು ಮನಸ್ಸು ಹಿಂಜರಿಯಲಿದೆ. ಮಾನಸಿಕ ಅಸಮತೋಲನವು ನಿಮ್ಮನ್ನು ಭ್ರಾಂತಗೊಳಿಸಬಹುದು.‌ ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ನಿಮ್ಮ ಪ್ರತಿಕ್ರಿಯೆ ಯೋಗ್ಯವಾಗಿರಲಿ. ನಿಮಗೆ ಬೇಕಾದ ಯಾವುದನ್ನೂ ಸುಲಭವಾಗಿ ಪಡೆಯಲಾಗದು.

ಮಕರ ರಾಶಿ: ಕುಟುಂಬದಲ್ಲಿ ಸಲ್ಲದ ಮಾತುಗಳು ಬರಬಹುದು. ಅದನ್ನು ತೆಗೆದುಕೊಂಡು ಹೋಗುವುದು ನಿಮ್ಮದೇ ಕಾರ್ಯವಾಗಬಹುದು. ಇಂದು ನೀವು ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಹೊಸ ಉದ್ಯಮವನ್ನು ಆರಂಭಿಸಲು ಧೈರ್ಯವು ಸಾಲದು. ಇನ್ನೊಬ್ಬರ ಜೊತೆ ಸೇರಿ ಮುಂದುವರಿಸುವುದು ನಿಮ್ಮ ಉತ್ತಮ ಆಯ್ಕೆ ಆಗಬಹುದು. ಮಕ್ಕಳಿಂದ ನಿಮ್ಮ ಉದ್ಯಮಕ್ಕೆ ಸಹಾಯವು ಸಿಗಬಹುದು. ಅಂದುಕೊಂಡಮಾತ್ರಕ್ಕೆ ಎಲ್ಲವೂ ಆಗುತ್ತದೆ ಎಂಬುದಿಲ್ಲ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾಗಿ ಇರಲಿದೆ. ಹೊಂದಾಣಿಕೆಯ ಮನೋಭಾವವು ಮುಖ್ಯವಾಗುವುದು. ಹಣವನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುವಿರಿ. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ಮಕ್ಕಳೆದುರು ನಿಮ್ಮ ನಡವಳಿಕೆ ಸರಿಯಾಗಿ ಇರಲಿ.

ಕುಂಭ ರಾಶಿ: ನಿಮ್ಮ ಕಾರ್ಯದ ಅನುಭವದ ಮೇಲೆ ಉತ್ತಮ ಸ್ಥಾನವು ಪ್ರಾಪ್ತವಾಗುವುದು. ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ನೋವನ್ನು ನುಂಗಿ ಬದುಕುವ ಕಲೆಯನ್ನು ನೀವು ಅರ್ಥಮಾಡಿಕೊಂಡಿರುವಿರಿ. ಸ್ವಂತ ಉದ್ಯಮವನ್ನು ನಡೆಸುವವರು ಪ್ರಸಾರದ ಕಡೆಗೆ ಗಮನ ಕೊಡುವಿರಿ.‌ ಯಾರನ್ನೂ ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಪಡೆಯಲಿದ್ದೀರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವು ಇಂದು ಕಳೆಯಲಿದೆ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಕಛೇರಿಯ ಕೆಲಸವನ್ನು ಕಾರಣಾಂತರಗಳಿಂದ ಮುಂದು ಹಾಕಲಿದ್ದೀರಿ. ನಿಮ್ಮ ಸ್ವಭಾವವನ್ನು ಸರಿ ಮಾಡಿಕೊಳ್ಳಬೇಕು ಎಂದನಿಸಬಹುದು. ಬಲವಂತದಿಂದ ನೀವು ಯಾರಬಳಿಯೂ ಕೆಲಸವನ್ನು ಮಾಡಿಸಲು ಹೋಗಬೇಡಿ, ಅದು ಆಗದು. ಕೆಲವು ಅವಕಾಶಗಳನ್ನು ನೀವೇ ಬಿಟ್ಟು ಹಾಳು ಮಾಡಿಕೊಳ್ಳುವಿರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ದಾನದಿಂದ ನಿಮಗೆ ಸಂತೋಷವಾಗಲಿದೆ.

ಮೀನ ರಾಶಿ: ನಿಮ್ಮ ಉದ್ಯಮಕ್ಕೆ ಮನೆಯಿಂದ ಪ್ರೋತ್ಸಾಹ ಸಹಾಯಗಳು ಸಿಗದಿದ್ದರೂ ಬಂಧುಗಳಿಂದ ಸಿಗುವುದು. ಇಂದು ನಿಮಗೆ ಎಲ್ಲ ಕಾರ್ಯದಲ್ಲಿಯೂ ಉತ್ಸಾಹವು ಕಡಿಮೆ ಇರುವುದು. ನಿಮ್ಮ ಚರ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ಸ್ನೇಹಿತರಿಂದ ಲಾಭವು ನಿಮಗೆ ಸಿಗಲಿದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಆರಾಮಾಗಿ ಇರಲು ಹೆಚ್ಚು ಇಷ್ಟಪಡುವಿರಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳಲು ಹೋಗುವುದು ಬೇಡ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾನುಭೂತಿಯು ಸಿಗಲಿದೆ. ವೃತ್ತಿಯನ್ನು ನೀವು ಆನಂದಿಸುತ್ತ ಮಾಡುವಿರಿ. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಆರ್ಥಿಕತೆಯ ವಿಚಾರವು ನಿಮಗೆ ಪೂರ್ಣವಾಗಿ ತಿಳಿಯದು. ನಿಮ್ಮ ಅಜ್ಞಾನವನ್ನು ಪ್ರದರ್ಶಿಸುವುದು ಬೇಡ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಚರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಪರರ ಕಷ್ಟದ ಬಗ್ಗೆಯೂ ನಿಮಗೆ ಅರಿವಿರಲಿ. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯಬಾರದು.

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್