AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2024: ಕೆಂಪು ಉಂಗುರದ ಸೂರ್ಯಗ್ರಹಣ – ಅ 2 ರಂದು ಈ ಎರಡೂ ರಾಶಿಯವರು ಜಾಗರೂಕರಾಗಿರಬೇಕು

Surya grahan 2024: ಹಿಂದೂಗಳು ಯಾವುದೇ ಗ್ರಹಣ ಕಾಲವನ್ನು ನಕಾರಾತ್ಮಕ ಸಮಯ ಎಂದು ಪರಿಗಣಿಸುತ್ತಾರೆ. ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಜಾಗರೂಕರಾಗಿರಿ. ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡಬಾರದು.

Solar Eclipse 2024: ಕೆಂಪು ಉಂಗುರದ ಸೂರ್ಯಗ್ರಹಣ - ಅ 2 ರಂದು ಈ ಎರಡೂ ರಾಶಿಯವರು ಜಾಗರೂಕರಾಗಿರಬೇಕು
ಕೆಂಪು ಉಂಗುರದ ಸೂರ್ಯಗ್ರಹಣ - ಅ 2 ರಂದು
TV9 Web
| Edited By: |

Updated on: Sep 27, 2024 | 4:06 AM

Share

ಸೂರ್ಯಗ್ರಹಣ 2024: ಹಿಂದೂ ಕ್ಯಾಲೆಂಡರ್ ಪ್ರಕಾರ ಸೂರ್ಯಗ್ರಹಣಗಳು ಅಮವಾಸ್ಯೆಯಂದು ಸಂಭವಿಸುತ್ತವೆ ಮತ್ತು ಚಂದ್ರಗ್ರಹಣಗಳು ಹುಣ್ಣಿಮೆಯಂದು ಸಂಭವಿಸುತ್ತವೆ. ಈ ವರ್ಷ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 2 ರಂದು ಸಂಭವಿಸಲಿದೆ. ಇದು ಭಾದ್ರಪ್ರದ ಮಾಸದ ಅಮವಾಸ್ಯೆ ಪಿತೃ ಪಕ್ಷದ ಕೊನೆಯ ದಿನ. ಈ ದಿನದಂದು ಭೂಮಿಗೆ ಬಂದ ಪೂರ್ವಜರು ಭೂಮಿಗೆ ಬೀಳ್ಕೊಡುಗೆ ಮಾತುಗಳನ್ನು ಹೇಳುತ್ತಾರೆ ಎಂಬುದು ನಂಬಿಕೆ. ಗಮನಾರ್ಹವೆಂದರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.. ಆದಾಗ್ಯೂ ಈ ಗ್ರಹಣವು ಪ್ರಪಂಚದ ಮೇಲೆ ಮತ್ತು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 2 ರಂದು ಸಂಭವಿಸುವ ಸೂರ್ಯಗ್ರಹಣವು (Surya grahan 2024) ಜನರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಈ ಗ್ರಹಣದ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಗೋಚರಿಸುತ್ತದೆ. ಆದರೆ ಇದು ಎರಡು ರಾಶಿಯವರ ಮೇಲೆ ಮಾತ್ರ ಹೆಚ್ಚು ಗೋಚರಿಸುತ್ತದೆ. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂಬುದನ್ನು ನಾವು ಇಂದು ತಿಳಿದುಕೊಳ್ಳೋಣ.

ಸರ್ವಪಿತೃ ಅಮಾವಾಸ್ಯೆಯ ದಿನ ಅಂದರೆ ಅಕ್ಟೋಬರ್ 2 ರಂದು ಸಂಭವಿಸಲಿರುವ ಸೂರ್ಯಗ್ರಹಣವು ಕನ್ಯಾರಾಶಿಯಲ್ಲಿ ಸಂಭವಿಸಲಿದೆ. ಈ ಕಾರಣದಿಂದಾಗಿ, ಇದು ಕನ್ಯಾರಾಶಿ ಮತ್ತು ಮೀನ ಚಿಹ್ನೆಗಳ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಅದರಲ್ಲೂ ಕನ್ಯಾ ರಾಶಿಗೆ ಸೇರಿದವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ಅದೇ ಸಮಯದಲ್ಲಿ ರಾಹು ಮೀನ ರಾಶಿಯಲ್ಲಿ ಸಾಗುತ್ತಾನೆ. ಆದ್ದರಿಂದ ಈ ಗ್ರಹಣವು ಈ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕನ್ಯಾ ಮತ್ತು ಮೀನ ರಾಶಿಯ ಜನರು ಎಚ್ಚರದಿಂದಿರಬೇಕು.

ಹಿಂದೂಗಳು ಗ್ರಹಣವನ್ನು ನಕಾರಾತ್ಮಕ ಸಮಯ ಎಂದು ಪರಿಗಣಿಸುತ್ತಾರೆ. ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಜಾಗರೂಕರಾಗಿರಿ. ಸೂರ್ಯಗ್ರಹಣದ ಸಮಯದಲ್ಲಿ ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡಬಾರದು.

ಇದನ್ನೂ ಓದಿ: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆಯೇ? ಅಕ್ಟೋಬರ್ 2 ರಂದು ಸಂಭವಿಸುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದರಿಂದಾಗಿ ಇಲ್ಲಿ ಸೂತಕ ಕಾಲ ಇಲ್ಲ. ವಾಸ್ತವವಾಗಿ, ಹಿಂದೂ ಸಂಪ್ರದಾಯದ ಪ್ರಕಾರ, ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ, ಆದ್ದರಿಂದ ಈ ಸಮಯವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ರಾಹು ಕೇತುಗಳ ಶಕ್ತಿಯು ಬಲವಾಗಿರುತ್ತದೆ, ಆದ್ದರಿಂದ ಗ್ರಹಣ ಸಮಯದಲ್ಲಿ ತಿನ್ನುವುದು ಮತ್ತು ಕುಡಿಯುವುದನ್ನು ನಿಷೇಧಿಸುವ ನಿಯಮವನ್ನು ಹಿರಿಯರು ವಿಧಿಸಿದ್ದಾರೆ.

ಯಾವ ದೇಶಗಳಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆ? ನಾಸಾ ವೆಬ್‌ಸೈಟ್ ಮಾಹಿತಿ ಪ್ರಕಾರ, ಈ ವರ್ಷ ಎರಡನೇ ಬಾರಿಗೆ ದಕ್ಷಿಣ ಅಮೆರಿಕಾದಲ್ಲಿ ಉಂಗುರಾಕಾರದ ಸೂರ್ಯಗ್ರಹಣ ಗೋಚರಿಸುತ್ತದೆ. ದಕ್ಷಿಣ ಅಮೆರಿಕ, ಅಂಟಾರ್ಟಿಕಾ, ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ, ಉತ್ತರ ಅಮೆರಿಕದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. ಈ ಗ್ರಹಣವನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಸೂರ್ಯನ ಸುತ್ತ ಕೆಂಪು ಉಂಗುರ ರಚನೆಯಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು