AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology Tips: ಆಶ್ಲೇಷಾ, ಮೂಲ, ಜೇಷ್ಠಾ, ವಿಶಾಖ ನಕ್ಷತ್ರ ದೋಷ ವಿಚಾರ; ಮದುವೆ ಆಗೋವಾಗ ಇದನ್ನು ಮರೆಯಬೇಡಿ

ಮದುವೆ ಸಂದರ್ಭದಲ್ಲಿ ಬಹಳ ಚರ್ಚೆ ಆಗುವುದು ಹುಡುಗಿಯ ನಕ್ಷತ್ರ ಯಾವುದು ಎಂಬ ಸಂಗತಿ. ಆ ಬಗ್ಗೆ ನಿಜಕ್ಕೂ ಅಷ್ಟೆಲ್ಲ ಆಲೋಚಿಸಬೇಕಾ? ಆಶ್ಲೇಷಾ, ಮೂಲಾ, ಜೇಷ್ಠಾ ಹಾಗೂ ಮೂಲಾ ನಕ್ಷತ್ರಗಳ ಬಗ್ಗೆ ವಿವರಣೆ ಇಲ್ಲಿದೆ.

Astrology Tips: ಆಶ್ಲೇಷಾ, ಮೂಲ, ಜೇಷ್ಠಾ, ವಿಶಾಖ ನಕ್ಷತ್ರ ದೋಷ ವಿಚಾರ; ಮದುವೆ ಆಗೋವಾಗ ಇದನ್ನು ಮರೆಯಬೇಡಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jun 03, 2021 | 6:54 AM

Share

ಆಶ್ಲೇಷಾ, ಮೂಲಾ ಇವೆರಡು ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಮದುವೆಗಾಗಿ ಗಂಡು ಹುಡುಕುವಾಗ ಒಬ್ಬೊಬ್ಬರು ಒಂದೊಂದು ಬಗೆಯ ಮಾತನಾಡುತ್ತಾರೆ. ಆಶ್ಲೇಷಾ ನಕ್ಷತ್ರ ಅಂದರೆ, ಅತ್ತೆ ಇಲ್ಲದ ಮನೆ ಹಾಗೂ ಮೂಲಾ ನಕ್ಷತ್ರ ಅಂದರೆ ಮಾವ ಇಲ್ಲದ ಮನೆ. ಹುಡುಗನಿಗೆ ತಂದೆ- ತಾಯಿ ಇಬ್ಬರೂ ಇದ್ದಾರೆ. ಆದ್ದರಿಂದ ಈ ನಕ್ಷತ್ರದ ಹೆಣ್ಣುಮಕ್ಕಳಾದರೆ ಬೇಡ ಅಂತ ಪೋಷಕರು ಹೇಳಿಬಿಡುತ್ತಾರೆ. ಈ ಮಾತು ನಿಜವೆ? ಆ ನಕ್ಷತ್ರದ ಹೆಣ್ಣುಮಕ್ಕಳಾದಲ್ಲಿ ಸಮಸ್ಯೆ ಆಗುತ್ತದೆಯೇ? ಅದೇ ವಿಷಯ ಇಂದಿನ ಲೇಖನವಾಗಿ ನಿಮ್ಮೆದುರು ಇದೆ. ಆಶ್ಲೇಷಾ ಮತ್ತು ಮೂಲಾದಲ್ಲಿ ಹುಟ್ಟಿದರೆ ಜನನ ಶಾಂತಿ ಮಾಡಿಸಿಕೊಳ್ಳುತ್ತಾರೆ. ಇನ್ನು ಆಶ್ಲೇಷಾ ನಕ್ಷತ್ರದವರು ಆಶ್ಲೇಷಾ ಬಲಿ ಪೂಜೆ ಮಾಡಿಸಿಕೊಳ್ಳುತ್ತಾರೆ. ಆದರೆ ಅತ್ತೆ ಇಲ್ಲದ ಮನೆ ಆಗಬೇಕು ಎಂಬುದು ಅಪದ್ಧವಾದ ಮಾತು. ಕೆಲವು ಗ್ರಂಥಗಳಲ್ಲೇ ಎರಡು ರೀತಿಯ ಅಭಿಪ್ರಾಯ ಇದೆ. ಆಶ್ಲೇಷಾ ನಕ್ಷತ್ರದ ಒಂದನೇ ಪಾದವಾದರೆ ಅತ್ತೆಗೆ ದುಷ್ಪ್ರದೆ ಅಂತಿದ್ದರೆ, ಆಶ್ಲೇಷಾ ನಕ್ಷತ್ರದ ನಾಲ್ಕನೇ ಪಾದವಾಗಿದ್ದಲ್ಲಿ ಅತ್ತೆಗೆ ದುಷ್ಪ್ರದೆ ಅಂತಿದೆ. ಆದರೆ ಅತ್ತೆಯ ಪ್ರಾಣವೇ ಹೋಗುತ್ತದೆ ಅಂತೆಲ್ಲೂ ಇಲ್ಲ.

ಇನ್ನು ಒಂದು ನಕ್ಷತ್ರ ಅಂದರೆ ನಾಲ್ಕು ಪಾದ ಇರುತ್ತದೆ. ಒಂದೊಂದು ಅಭಿಪ್ರಾಯದ ಪ್ರಕಾರ, 1 ಮತ್ತು 4ನೇ ಪಾದವನ್ನು ದೋಷ ಎಂದು ಕರೆದಿದ್ದರೆ, ಎರಡು ಮತ್ತು ಮೂರನೇ ಪಾದ ದೋಷವೇ ಇಲ್ಲ ಎಂದಾಯಿತು. ಇನ್ನೂ ಮುಂದುವರಿದು ಹೇಳುವುದಾದರೆ, ಆ ಹೆಣ್ಣುಮಗುವಿನ ಜಾತಕದಲ್ಲಿ ಉತ್ತಮ ಯೋಗಗಳಿದ್ದಲ್ಲಿ ಆ ದೋಷ ಸಹ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಇದೇ ಮಾತು ಮೂಲಾ ನಕ್ಷತ್ರಕ್ಕೂ ಅನ್ವಯಿಸುತ್ತದೆ. ಮೂಲಾ 1ನೇ ಪಾದ ಅಂತ ಕೆಲವರು, ಇಲ್ಲ 4ನೇ ಪಾದ ದೋಷ ಅಂತ ಮತ್ತೆ ಕೆಲವರು ವಾದ ಮುಂದಿಡುತ್ತಾರೆ. ಹಾಗೆ ನೋಡಿದರೆ ಎರಡು ಮತ್ತು ಮೂರನೇ ಪಾದ ದೋಷವೇ ಇಲ್ಲ ಎಂದಾಯಿತು. ಇನ್ನು ಜಾತಕದಲ್ಲಿ ಅತ್ಯುತ್ತಮ ಯೋಗಗಳಿದ್ದಲ್ಲಿ ಅದೆಂಥ ದೋಷಗಳಾದರೂ ಹಾಗೇ ನಿವೃತ್ತಿ ಆಗುತ್ತದೆ.

ಇದೇ ರೀತಿ ಜೇಷ್ಠಾ ನಕ್ಷತ್ರದ ಹೆಣ್ಣುಮಕ್ಕಳಿಗೆ ದೊಡ್ಡ ಮಗನನ್ನೇ ಕೊಟ್ಟು ಮದುವೆ ಮಾಡಬೇಕು ಅಂತಿದೆ. ಹಾಗೊಂದು ವೇಳೆ ಆಗದಿದ್ದಲ್ಲಿ ಆ ಹುಡುಗನ ಅಣ್ಣನಿಗೆ ತೊಂದರೆಗಳು ಎದುರಾಗುತ್ತವೆ ಅಂತಲೂ ಅಭಿಪ್ರಾಯ ಇದೆ. ವಿಶಾಖ ನಕ್ಷತ್ರದಲ್ಲಿ ಜನಿಸಿದ ಹೆಣ್ಣುಮಗಳಿಂದ ಗಂಡನ ತಮ್ಮನಿಗೆ ಸಮಸ್ಯೆ ಅಂತಿದೆ. ಆದರೆ ಜನ್ಮ ಜಾತಕದಲ್ಲಿನ ಉತ್ತಮ ಯೋಗಗಳು ಹಲವು ದೋಷಗಳನ್ನು ನಿವಾರಿಸುತ್ತವೆ. ಒಟ್ಟಾರೆ ಹುಡುಗನ ಮನೆಯವರೋ ಅಥವಾ ಹುಡುಗಿ ಮನೆಯವರೋ ಬಾಯಿ ಮಾತನ್ನು ನಂಬದೆ, ಸೂಕ್ತ ಜ್ಯೋತಿಷಿಗಳಲ್ಲಿ ಈ ಬಗ್ಗೆ ಅಭಿಪ್ರಾಯವನ್ನು ಪಡೆಯಬೇಕು. ಜನ್ಮ ಜಾತಕದ ಪರಿಶೀಲನೆ ಮಾಡಿಸದೆ ಸುಖಾ ಸುಮ್ಮನೆ ಆಶ್ಲೇಷಾ ನಕ್ಷತ್ರವಾದರೆ ಬೇಡ, ಮೂಲಾ ನಕ್ಷತ್ರವಾದರೆ ಬೇಡ, ಜೇಷ್ಠಾ, ವಿಶಾಖ ನಕ್ಷತ್ರಗಳು ಬೇಡ ಎಂಬ ಮೂಢನಂಬಿಕೆಯಿಂದ ಹೊರಬರಬೇಕು.

ಕೆಲವು ಮನೆಗಳಲ್ಲಿ ತಂದೆ- ತಾಯಿ, ಪೋಷಕರಿಂದಲೇ ಹೆಣ್ಣುಮಕ್ಕಳು ಹೀಯಾಳಿಸಿಕೊಳ್ಳಬೇಕಾಗುತ್ತದೆ. ಆ ಸಿಟ್ಟನ್ನು ಜ್ಯೋತಿಷ್ಯದ ಮೇಲೂ ಹಾಗೂ ಜ್ಯೋತಿಷಿಗಳ ಮೇಲೂ ಕೆಲವರು ತಿರುಗಿಸುವುದುಂಟು. ಆದ್ದರಿಂದ ಇನ್ನು ಮುಂದಾದರೂ ಇಂಥ ಸನ್ನಿವೇಶದಲ್ಲಿ ಸೂಕ್ತ ತಿಳಿವಳಿಕೆ ಮತ್ತು ಮಾರ್ಗದರ್ಶನ ಪಡೆದುಕೊಳ್ಳಿ. ಜ್ಯೋತಿಷಿಗಳ ಬಳಿ ತೆರಳಲು ಸಾಧ್ಯವಾಗಲಿಲ್ಲ, ಸಂಪರ್ಕ ಸಾಧ್ಯವಾಗಲಿಲ್ಲ ಎಂದಾದಲ್ಲಿ ಪಂಚಾಂಗಗಳಲ್ಲೇ ಈ ಬಗ್ಗೆ ಮಾಹಿತಿಯು ಸ್ಪಷ್ಟವಾದ ವಿವರಣೆಯೊಂದಿಗೆ ಕನ್ನಡದಲ್ಲೇ ಇರುತ್ತದೆ. ಓದಿದರೆ ಸುಲಭವಾಗಿ ಅರ್ಥವಾಗುವಂತೆಯೂ ಇರುತ್ತದೆ. ಅದನ್ನು ಓದಿರಿ. ತಿಳಿವಳಿಕೆ ಮೂಡಿಸಿಕೊಳ್ಳಿ.

ಇದನ್ನೂ ಓದಿ: Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

(How birth star of Ashlesha, Moola, Jyeshta, Vishakha brides faces problem at the time of marriage. Is stars are really problem for them. Here is an explainer)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ