Astrology tips: ಏಕನಕ್ಷತ್ರ ದೋಷ ಅಂದರೇನು? ಏನೆಲ್ಲ ಸಮಸ್ಯೆಗಳಾಗುತ್ತವೆ?

ಏಕನಕ್ಷತ್ರ ದೋಷ ವಿಚಾರ ಅಂದರೇನು? ಜ್ಯೋತಿಷದಲ್ಲಿ ಬಳಕೆ ಆಗುವ ಈ ದೋಷದ ಪ್ರಸ್ತಾವ ಬಗ್ಗೆ ತಿಳಿಸಿಕೊಡುವಂಥ ಲೇಖನ ಇಲ್ಲಿದೆ.

Astrology tips: ಏಕನಕ್ಷತ್ರ ದೋಷ ಅಂದರೇನು? ಏನೆಲ್ಲ ಸಮಸ್ಯೆಗಳಾಗುತ್ತವೆ?
ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: ಆಯೇಷಾ ಬಾನು

Updated on: May 30, 2021 | 7:13 AM

ಜ್ಯೋತಿಷ ಬಹಳ ವಿಸ್ತಾರವಾದದ್ದು. ನಾನಾ ಸಂಗತಿಗಳ ಬಗ್ಗೆ ನಮ್ಮ ಹಿರಿಯರು ದಾಖಲಿಸಿಟ್ಟಿದ್ದಾರೆ. ಅಂಥದ್ದೇ ಒಂದು ಸಂಗತಿ ಏಕನಕ್ಷತ್ರ ದೋಷ. ಹೆಸರೇ ಹೇಳುವ ಹಾಗೆ ಇದು ದೋಷ. ಒಂದೇ ಕುಟುಂಬದ ಇಬ್ಬರು, ಒಬ್ಬರ ಹಿಂದೆ ಒಬ್ಬರು ಒಂದೇ ನಕ್ಷತ್ರದಲ್ಲಿ ಜನಿಸಿದರೆ ಅದರ ಪ್ರಭಾವ ಚಿಕ್ಕವರ ಮೇಲೆ ಆಗುತ್ತದೆ. ಇಬ್ಬರದೂ ಒಂದೇ ನಕ್ಷತ್ರ ಹಾಗೂ ಪಾದ ಆಗಿದ್ದಲ್ಲಿ ಚಿಕ್ಕ ವಯಸ್ಸಿನವರಿಗೆ ವಯಸ್ಸಿನವರಿಗೆ ಅನಾರೋಗ್ಯ ಸಮಸ್ಯೆ ಆಗುತ್ತದೆ. ಒಂದು ವೇಳೆ ಆ ಇಬ್ಬರು ಬೇರೆ ಬೇರೆ ಪಾದಗಳಲ್ಲಿ ಜನಿಸಿದ್ದರೆ ಸಂಪತ್ತು ನಾಶ ಹಾಗೂ ಅಸಂತೋಷಕ್ಕೆ ಕಾರಣವಾಗುತ್ತದೆ.

ಯಾವಾಗ ಇಬ್ಬರೂ ದೈಹಿಕವಾಗಿ ದೂರದೂರವಾಗುತ್ತಾರೋ ಆಗ ಸಮಸ್ಯೆಗಳು ಶುರುವಾಗುತ್ತವೆ. ಹೀಗೆ ದೂರವಾದಲ್ಲಿ ಚಿಕ್ಕ ವಯಸ್ಸಿನವರಿಗೆ ಸಮಸ್ಯೆಯಾಗುತ್ತದೆ. ಹಾಗಂತ ಇಬ್ಬರೂ ಒಟ್ಟಿಗೆ ಇರುವಾಗ ತೊಂದರೆಗಳು ಇಲ್ಲ ಅಂತಲ್ಲ. ಆದರೆ ಆಗ ಪರಸ್ಪರರು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ದೂರವಾಗುವಂತೆ ಆಗುತ್ತದೆ. ಸಣ್ಣ ವಯಸ್ಸಿನ ಸದಸ್ಯರಿಗೆ ಸಮಸ್ಯೆ ಶುರುವಾಗುತ್ತದೆ. ತಂದೆಯ ನಕ್ಷತ್ರದಲ್ಲೇ ಮಗನು ಸಹ ಹುಟ್ಟಿದ್ದಲ್ಲಿ ಏಕನಕ್ಷತ್ರ ದೋಷ ಆಗುತ್ತದೆ. ಇದು ತಂದೆ ಹಾಗೂ ಮಗ ಒಂದೇ ನಕ್ಷತ್ರದಲ್ಲಿ ಹುಟ್ಟಿದರೆ ಮಾತ್ರ ಏಕನ್ಷತ್ರ ದೋಷ ಆಗುತ್ತದೆ. ಉದಾಹರಣೆಗೆ: ತಂದೆಯದು ಹಸ್ತಾ ನಕ್ಷತ್ರ ಕನ್ಯಾ ರಾಶಿಯಾಗಿದ್ದು, ಮಗನದೂ ಹಸ್ತಾ ನಕ್ಷತ್ರ ಕನ್ಯಾ ರಾಶಿಯೇ ಆಗಿದ್ದಲ್ಲಿ ಅದು ಏಕನಕ್ಷತ್ರ ದೋಷ ಆಗುತ್ತದೆ. ಇದು 27 ನಕ್ಷತ್ರಕ್ಕೂ ಅನ್ವಯಿಸುತ್ತದೆ. ನೆನಪಿರಲಿ, ಇದು ಜನ್ಮ ನಕ್ಷತ್ರಕ್ಕೆ ಮಾತ್ರ ಆಗುತ್ತದೆ. ಹೆಸರಿನ ಆಧಾರದಲ್ಲಿ ಅಲ್ಲ. ಇಬ್ಬರದೂ ಜನನ ಕಾಲದ ನಕ್ಷತ್ರವನ್ನು ಗಣನೆಗೆ ತೆಗೆದುಕೊಳ್ಳಬೇಕು.

ಏಕನಕ್ಷತ್ರ ದೋಷ ಪರಿಣಾಮಗಳೇನು, ಏಕೆ ಬರುತ್ತದೆ? * ವಯಸ್ಸಾದ ಸದಸ್ಯರಿಂದ ದೂರವಾಗುತ್ತಿಂದ ಚಿಕ್ಕ ವಯಸ್ಸಿನ ಸದಸ್ಯನಿಗೆ ತೊಂದರೆ ಆಗುತ್ತದೆ.

* ದೈಹಿಕವಾಗಿ ಮತ್ತು ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ದೂರವಾಗುವುದರಿಂದಲ್ಲೂ ಸಮಸ್ಯೆ ಎದುರಾಗುತ್ತದೆ.

* ದೋಷ ಎದುರಿಸುವ ಸದಸ್ಯನಿಗೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

* ಸಣ್ಣ ವಯಸ್ಸಿನ ಸದಸ್ಯನಿಗೆ ಹಣಕಾಸಿನ ತೊಂದರೆ ಹಾಗೂ ನಷ್ಟಗಳು ಸಂಭವಿಸುತ್ತವೆ.

* ಪಿತೃದೇವತೆಗಳ ಶಾಪ ಇರುತ್ತದೆ. (ಶ್ರಾದ್ಧ ಮೊದಲಾದ ಪಿತೃ ಕಾರ್ಯಗಳನ್ನು ಮಾಡದಿದ್ದಾಗ ಹೀಗಾಗುತ್ತದೆ)

* ಕುಟುಂಬ ಸದಸ್ಯರ ಮಧ್ಯೆ ಬಿಕ್ಕಟ್ಟು ಉದ್ಭವಿಸುತ್ತದೆ.

* ಸಂತತಿಯಿಂದ ಪೋಷಕರು ಅಸಂತುಷ್ಟಗೊಂಡಿರುತ್ತಾರೆ.

* ಈ ದೋಷವಿದ್ದಲ್ಲಿ ಮದುವೆಗೆ ತಡೆಗಳು ಎದುರಾಗುತ್ತವೆ, ಸಂತಾನ ವಿಳಂಬ ಆಗುತ್ತದೆ.

ಏಕನಕ್ಷತ್ರ ಜನನ ಶಾಂತಿ ಎಂಬುದು ಒಂದಿದೆ. ಜ್ಯೋತಿಷಿಗಳಲ್ಲಿ ಅದನ್ನು ವಿಚಾರಿಸಿಕೊಂಡು, ಮಾಡಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಯಾವ ನಕ್ಷತ್ರದಲ್ಲಿ ಜನನ ಆಗಿರುತ್ತದೋ ಅದರ ಜಪ ಮಾಡಬೇಕಾಗುತ್ತದೆ. ಈ ಬಗ್ಗೆ ಕೂಡ ಹುಡುಕಿಕೊಳ್ಳುವುದು ಕಷ್ಟವಲ್ಲ.

ಇದನ್ನೂ ಓದಿ: Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ? 

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

(What is Eka Nakshatra Dosha and how it affects on natives, here is an explainer)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್