1) ಜಾತಕದಲ್ಲಿ ಶುಕ್ರ ಗ್ರಹ ಯಾವ ಸ್ಥಾನದಲ್ಲಿ ಇದೆ ಎಂಬುದನ್ನು ಗಮನಿಸಿ. ನೀಚ ಸ್ಥಾನದಲ್ಲಿ ಇದ್ದರೆ ಆಲೋಚನೆ ಕೈ ಬಿಡಿ. ಅಥವಾ ಶುಕ್ರ ಗ್ರಹದ ಅನುಗ್ರಹ ಇಲ್ಲ ಅಂತಾದರೂ ಇದೇ ಮಾತು ಅನ್ವಯ. ಆದರೆ ಉತ್ತಮ ಸ್ಥಾನದಲ್ಲಿದ್ದು, ಉಚ್ಚ ಕ್ಷೇತ್ರವಾದ ಮೀನ ರಾಶಿಯಲ್ಲಿದ್ದಾಗ ಆ ಬಗ್ಗೆ ಚಿಂತಿಸಬಹುದು.
2) ಶುಕ್ರ ಗ್ರಹ ಉಚ್ಚ ಸ್ಥಾನದಲ್ಲಿ ಇದ್ದಾಗ ಚಿತ್ರರಂಗದಲ್ಲಿ ಕೂಡ ಪ್ರಯತ್ನಿಸಬಹುದು. ಚಿತ್ರ ನಿರ್ಮಾಣ ಸೇರಿದಂತೆ ನಟನೆ ಇತ್ಯಾದಿಗಳಲ್ಲಿ ಪಾಲ್ಗೊಳ್ಳಬಹುದು.
3) ಜಾತಕದಲ್ಲಿ ಬುಧ ಉತ್ತಮ ಸ್ಥಾನದಲ್ಲಿ ಇದ್ದಲ್ಲಿ ಕನ್ಸಲ್ಟೆನ್ಸಿ, ಕೌನ್ಸೆಲಿಂಗ್, ಮೀಡಿಯಾ ಇವುಗಳಲ್ಲಿ ಪ್ರಯತ್ನಿಸಬಹುದು.
4) ಶನಿ ಅನುಗ್ರಹವಿದ್ದಲ್ಲಿ ಸಿಮೆಂಟ್, ಚರಂಡಿ ಕಾಂಟ್ರಾಕ್ಟ್ ಮೊದಲಾದವುಗಳಲ್ಲಿ ಪ್ರಯತ್ನಿಸಿ
5) ಕುಜ ಚೆನ್ನಾಗಿದ್ದಲ್ಲಿ ಭೂಮಿಗೆ ಸಂಬಂಧಿಸಿದ್ದು
6) ಗುರುವು ಅನುಕೂಲನಾಗಿದ್ದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ್ದು, ಸಾಫ್ಟ್ವೇರ್ ಮೊದಲಾದವು ಆಗಿಬರುತ್ತದೆ.
7) ಚಂದ್ರ ಅನುಕೂಲವಾಗಿದ್ದಲ್ಲಿ ವೈದ್ಯಕೀಯ, ಡೇರಿ, ಆಹಾರ, ಪಶು ಸಂಗೋಪನೆ ಪ್ರಯತ್ನಿಸಬಹುದು.
8) ರವಿ ಅನುಗ್ರಹ ಇದ್ದಲ್ಲಿ ಸರ್ಕಾರದ ಜತೆಗೆ ಸಂವಹನದಂಥದ್ದರಲ್ಲಿ ತೊಡಗಬಹುದು.
ಆದರೆ, ಜಾತಕದಲ್ಲಿ ಶುಕ್ರ ಗ್ರಹದ ಸ್ಥಾನ ನೋಡಿದ ನಂತರವೇ ಮುಂದುವರಿಯಬೇಕು. ಕನ್ಯಾ ರಾಶಿಯಲ್ಲಿ ಶುಕ್ರ ಸ್ಥಿತವಾಗಿದ್ದಲ್ಲಿ ಉದ್ಯಮವೋ ವ್ಯಾಪಾರವೋ ಆರಂಭಿಸುವ ಆಲೋಚನೆ ಬಿಟ್ಟುಬಿಡುವುದು ಉತ್ತಮ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲೇ ಬೇಡಿ. ಜ್ಯೋತಿಷಿಗಳ ಬಳಿ ಒಮ್ಮೆ ಸಲಹೆ ಪಡೆದು ಮುಂದುವರಿಯಿರಿ.
ಇದನ್ನೂ ಓದಿ: ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?
(Astrology tips: Whether business suitable for natives according astrology here is the details)