ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಚಿತ್ರಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:20, ಯಮಘಂಡ ಕಾಲ ಬೆಳಿಗ್ಗೆ 06:24ರಿಂದ 07: 53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:52 ರವರೆಗೆ.
ಧನು ರಾಶಿ: ನೀವೇ ನಿಮ್ಮನ್ನು ಸರಿಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಉತ್ತಮ. ಕಾನೂನಿನಿಂದ ಜಯಸುವ ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಎಲ್ಲವೂ ವಿಧಿಯ ನಿಯಮದಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖವು ಹೆಚ್ಚಾಗುವುದು. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನೀವು ನಿರಾಕರಿಸುವಿರಿ. ನಿರ್ಭೀತಿಯು ನಿಮ್ಮ ಮಾರ್ಗವನ್ನು ತಪ್ಪಿಸಬಹುದು. ಪ್ರೇಮ ವ್ಯವಹಾರವನ್ನು ತಿಳಿಸಲು ನೀವು ಭಯಪಡುವಿರಿ. ವಾಹನ ಚಾಲನೆಯಲ್ಲಿ ನುರಿತವರಾದರೂ ಕಾಲವು ಅದಾವುದನ್ನೂ ಕೇಳದು. ನಿಮ್ಮ ನೇರ ನುಡಿಗಳು ಇನ್ನೊಬ್ಬರಿಗೆ ನೋವನ್ನು ಕೊಟ್ಟೀತು. ಹೇಳಿಕೊಳ್ಳಲು ಯಾರಾದರೂ ಆಪ್ತರು ಬೇಕಾಗಬಹುದು. ಕೆಲವನ್ನು ಸುಮ್ಮನೇ ಮನಸ್ಸಿನಲ್ಲಿ ಅಂದುಕೊಂಡು ಕಾಲಹರಣ ಮಾಡುವಿರಿ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು.
ಮಕರ ರಾಶಿ: ಸಮಾನಮನಸ್ಕರು ಸೇರಿದಾಗ ಮಾತ್ರ ನಿಮ್ಮ ಕಾರ್ಯವು ಸಾಧುವಾಗುವುದು. ನೀವು ಎಲ್ಲದಕ್ಕೂ ಅನುಕೂಲ ಯೋಗವನ್ನು ನೋಡುತ್ತ ಕುಳಿತಿರಲು ಆಗದು. ನೀವು ಪಡೆದುಕೊಂಡ ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ನಿಮಗೆ ಶಂಕೆ ಉಂಟಾಗಬಹುದು. ಹಣದ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದು ಬೇಡ. ನಿಮಗೆ ಯಾರೋ ಹೇಳುವ ನಿಯಮಗಳು ಬಂಧದಂತೆ ಅನ್ನಿಸುವುದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯವನ್ನು ಪಡೆಯುವಿರಿ. ಒಂದಿಷ್ಟು ಕಾರ್ಯದಲ್ಲಿ ಒತ್ತಡವಿರಲಿದೆ. ನಿಮಗೆ ನಿಮ್ಮದೇ ಆದ ಬಳಗವು ಇರಲಿದ್ದು ಅವರ ಜೊತೆ ಸಮಯವನ್ನು ಕಳೆಯುವಿರಿ. ಯಾರು ಏನೇ ಅಂದರೂ ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಲು ಹೋಗುವುದಿಲ್ಲ. ಸ್ಥಿರಾಸ್ತಿಗಳ ಬಗ್ಗೆ ವಿವಸದವಾಗುವುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ಸ್ನೇಹ ಸಂಬಂಧದಲ್ಲಿ ಅನ್ಯರ ಆಗಮನವಾಗಲಿದೆ.
ಕುಂಭ ರಾಶಿ: ಆಪ್ತರಿಂದ ನಿಮಗೆ ಪರೋಕ್ಷವಾಗಿ ನೋವು ಬರಬಹುದು. ಇಂದು ನಿಮ್ಮ ವೃತ್ತಿಕ್ಷೇತ್ರದಲ್ಲಿ ನೀವು ಕಲಹಕ್ಕೆ ದಾರಿ ಮಾಡಿಕೊಡುವಿರಿ. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಚಂದದಲ್ಲಿ ಹೊಗಳುವರು. ಪುಣ್ಯಸ್ಥಳಕ್ಕೆ ಹೋಗುವ ಮನಸ್ಸಾಗುವುದು. ಕುಟುಂಬ ನಿರ್ವಹಣೆಯನ್ನು ಒತ್ತಡದಿಂದ ನೀವು ಮಾಡಬೇಕಾದೀತು. ವೈದ್ಯ ವೃತ್ತಿಯನ್ನು ಇಷ್ಟ ಪಡುವವರು ಯಶಸ್ಸನ್ನು ಗಳಿಸುವರು. ನಿಮಗೆ ಎಷ್ಟೋ ವಿಚಾರವನ್ನು ಕಲಿಯಬೇಕು ಎಂಬ ಆಸೆಯು ಅತಿಯಾಗಲಿದೆ. ಹೊಸ ಉದ್ಯೋಗಕ್ಕೆ ಪ್ರವೇಶ ಪಡೆಯುವಿರಿ. ನಿಮ್ಮ ಅನುಕೂಲವನ್ನು ನೋಡಿ ಖರ್ಚು ಮಾಡುವುದು ಉತ್ತಮ. ಯಾರಿಗಾದರೂ ನಿಮ್ಮ ವರ್ತನೆಯು ಇಷ್ಟವಾಗದೇ ಹೋಗಬಹುದು. ನಿಮಗೆ ಸೃಜನಾತ್ಮಕ ಕಾರ್ಯದಲ್ಲಿ ಆಸಕ್ತಿ ಹೆಚ್ಚು ಕಾಣಿಸುವುದು. ಸಂತೋಷದ ಕೊನೆಯಲ್ಲಿ ದುಃಖವಿರಲಿದೆ. ಇಬ್ಬರ ನಡುವಿನ ಶೀತಲ ಸಮರವು ತಿಳಿಯಾಗಬಹುದು. ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವಾಗುವುದು.
ಮೀನ ರಾಶಿ: ನೀವು ಇಂದು ಅನವಶ್ಯಕ ವಿವಾದಗಳಿಗೆ ಮಾತನ್ನು ಹರಿದುಬಿಡುವುದು ಬೇಡ. ನಿಮ್ಮ ಮಾನಸಿಕ ತೊಳಲಾಟಕ್ಕೆ ಪೂರ್ಣವಿರಾಮದ ಅವಶ್ಯಕತೆ ಇದ್ದು, ಸರಿಯಾದ ವ್ಯಕ್ತಿಯಿಂದ ಅದು ಸಾಧ್ಯವಾಗುವುದು. ಆಪ್ತರನ್ನು ದೂರ ಮಾಡಿಕೊಂಡು ಸಂಕಟಪಡಬೇಕಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಎದ್ದು ಕಾಣುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡಿ. ವಾಹನದ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರಲಿದೆ. ನಿಮ್ಮ ಅಧಿಕಾರ ಕಾರ್ಯಕ್ಕಾಗಿಯೇ ಹೊರತು ಅಧಿಕಾರಚಲಾವಣೆ ಮಾಡಲಾಗಿರದು. ನೀವು ಸಮಯದ ನಿರೀಕ್ಷೆಯಲ್ಲಿ ಇರುವಿರಿ. ತಾಳ್ಮೆಯಿಂದ ಇದ್ದಷ್ಟೂ ನಿಮಗೆ ಹೆಚ್ಚು ಲಾಭವು ಸಿಗಲಿದೆ. ಅತಿಯಾಗಿ ಯಾರನ್ನೂ ನಂಬುವುದು ಬೇಡ. ನೋವನ್ನು ನುಂಗಲು ಕಷ್ಟವಾದೀತು. ಅನಾರೋಗ್ಯದಿಂದ ಸ್ವಲ್ಪ ಆರಾಮೆನಿಸಬಹುದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು.