Horoscope: ಮನೆ ಬದಲಿಸುವಿರಿ, ಅನಾರೋಗ್ಯವು ಪುನಃ ಕಾಣಿಸಿಕೊಳ್ಳಬಹುದು
ಅಕ್ಟೋಬರ್ 03, 2024: ನಿಮ್ಮ ಬಗ್ಗೆಯೇ ನಿಮಗೆ ಕೀಳು ಅರಿಮೆ ಉಂಡಾಗಬಹುದು. ಇಂದು ಬಿದ್ದ ಕನಸು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹಾಗಾದರೆ ಅಕ್ಟೋಬರ್ 03ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಚಿತ್ರಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:20, ಯಮಘಂಡ ಕಾಲ ಬೆಳಿಗ್ಗೆ 06:24ರಿಂದ 07: 53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:52 ರವರೆಗೆ.
ಮೇಷ ರಾಶಿ: ಯಾವುದಾದರೂ ತೊಂದರೆಗೆ ನೀವೇ ಕಾರಣವೆಂದು ಪಶ್ಚಾತ್ತಾಪವಾಸೀರು. ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಆತಂಕ ಇರುವುದು. ಮಕ್ಕಳ ಮೇಲೆ ನಿಮಗೆ ಅತಿಯಾದ ಮೋಹವು ಇರಲಿದೆ. ದಾಂಪತ್ಯದಲ್ಲಿ ನೀವು ಸಂತೋಷವಾಗಿರಲು ಹೊಸ ಆಯಾಮವನ್ನು ಕಂಡುಕೊಳ್ಳುವಿರಿ. ಕುಟುಂಬವನ್ನು ಸಂತೋಷದಿಂದ ಇಡುವಿರಿ. ಅಸಪ್ತರನ್ನು ಕಳೆದುಕೊಳ್ಳುವ ಭೀತಿ ಇರಲಿದೆ. ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್ತರ ನಡುವೆ ನಿಮ್ಮ ಸಮಾಲೋಚನೆಗಳು ನಡೆಸುವಿರಿ. ಆಮದು ವ್ಯವಹಾರವನ್ನು ನಿಮ್ಮ ನಿಯಂತ್ರಣಕ್ಕೆ ತರಲು ಸಾಧ್ಯವಾಗದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಯಾರದೋ ತಪ್ಪಿಗೆ ನೀವು ಉತ್ತರಿಸಬೇಕಾಗಬಹುದು. ನಿಮ್ಮ ಮಾತನ್ನು ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ. ಮಾತು ಅಲ್ಪವಾಗಿದ್ದರೂ ಯೋಗ್ಯವಾದ ಮಾತುಗಳನ್ನು ಆಡುವಿರಿ. ಸಂಗಾತಿಯಿಂದ ಆಗುವ ಸಣ್ಣ ತಪ್ಪನ್ನು ಕ್ಷಮಿಸುವುದು ಉಚಿತ.
ವೃಷಭ ರಾಶಿ: ಅಧಿಕಾರಿಗಳ ಒತ್ತಡವೇ ನಿಮ್ಮ ಉದ್ವೇಗಕ್ಕೆ ಕಾರಣವಾಗಲಿದೆ. ಇಂದು ನಿಮಗೆ ಯಾರ ಸಹಾನುಭೂತಿಯೂ ಬೇಡವಾಗಬಹುದು. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ನಾನಾ ವಿಧವಾದ ಕಸರತ್ತು ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸವನ್ನು ಮಾಡಲು ಕಷ್ಟವಾದೀತು. ಎಲ್ಲ ಕಾರ್ಯಗಳನ್ನೂ ಮುಗಿಸಿ ಆರಾಮಾಗಿ ಇರುವಿರಿ. ಇಂದಿನ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಏಕಾಂತಕ್ಕೆ ತೆರಳುವಿರಿ. ಸ್ನೇಹಿತರು ಅವರಿಗೆ ಅರಿವಿಲ್ಲದೇ ನಿಮ್ಮನ್ನು ತಪ್ಪು ದಾರಿಗೆ ಕರೆದೊಯ್ಯಬಹುದು. ನಿಮ್ಮ ಬಳಿ ಹಣವಿದ್ದರೂ ಇಂದು ನಿಮಗೆ ಬಳಕೆಗೆ ಬಾರದು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಯಾವುದಾದರೂ ಅಮೂಲ್ಯ ಕ್ಷಣಗಳನ್ನು ನೀವು ತಪ್ಪಿಸಿಕೊಳ್ಳಬಹುದು. ನಿಮ್ಮ ಅಸಹಜ ಸ್ವಭಾವವನ್ನು ಸರಿಮಾಡಿಕೊಳ್ಳುವುದು ಮುಖ್ಯ.
ಮಿಥುನ ರಾಶಿ: ಅನೇಕ ವಿಚಾರಗಳ ಕಡೆ ನಿಮ್ಮ ಗಮನವಿರುವುದು. ಹಾಗಾಗಿ ಇಂದಿನ ಕಾರ್ಯವು ಸಫಲವಾಗದು. ನಿಮ್ಮ ಬಿಡುವಿನ ದಿನದಲ್ಲಿಯೂ ಕುಟುಂಬದವರ ಬಗ್ಗೆ ಕಾಳಜಿ ಇರದು. ನೀವು ಮಾಡಬೇಕಂದು ಹೊರಟ ಕೆಲಸದಲ್ಲಿ ಜಯ ಆಗಲಿದೆ. ಸ್ತ್ರೀರಿಂದ ನಿಮಗೆ ವೃತ್ತಿಯಲ್ಲಿ ಸಹಕಾರವು ಸಿಗಲಿದೆ. ಹೊಸ ಬಂಧುಗಳ ಪರಿಚಯವು ನಿಮಗಾಗುವುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಉಂಟಾಗಬಹುದು. ಅವಿವಾಹಿತರು ವಿವಾಹ ಚಿಂತನೆಯನ್ನು ಮನೆಯಲ್ಲಿ ಪ್ರಸ್ತಾಪಿಸುವಿರಿ. ನೀವು ಮನಸ್ಸಿಗೆ ನೆಮ್ಮದಿ ನೀಡುವ ಸ್ಥಳಗಳಿಗೆ ಹೋಗುವಿರಿ. ನಿಮ್ಮ ಮಾತುಗಳು ಅಹಂಕಾರದಂತೆ ತೋರಬಹುದು. ನಿಮಗೆ ನಿರ್ದಿಷ್ಟ ವೇತನವನ್ನು ಪಡೆಯುವ ಹಂಬಲವಿರುವುದು. ಕಾನೂನಾತ್ಮಕ ವಿಚಾರಕ್ಕೆ ನಿಮ್ಮ ಒತ್ತು ಹೆಚ್ಚಿರುವುದು. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ಹೊಸ ಕಾರ್ಯಕ್ಕೆ ದೊಡ್ಡ ಫಲದ ಯೋಜನೆ ಇರಲಿ.
ಕರ್ಕಾಟಕ ರಾಶಿ: ಅನ್ವೇಷಣೆಯ ಮನಃಸ್ಥಿತಿಯವರಿಗೆ ಯಾವುದಾದರೂ ಮಾರ್ಗವು ಸಿಗುವುದು. ರಾಜಕೀಯ ಪರಿವರ್ತನೆಯು ನಿಮ್ಮಲ್ಲಿ ಅಚ್ಚರಿ ತಂದೀತು. ನೀವು ಇಂದು ನಿಮಗೆ ಮಾತ್ರ ಗೊತ್ತಿರುವ ಇನ್ನೊಬ್ಬರ ರಹಸ್ಯವನ್ನು ಹೇಳುವಿರಿ. ಬಾಡಿಗೆ ಮನೆಯವರಾಗಿದ್ದರೆ ಮನೆಯನ್ನು ಬದಲಿಸುವಿರಿ. ಭೂವ್ಯವಹಾರವನ್ನು ಮಾಡುವವರಿಗೆ ಹೆಚ್ಚು ಲಾಭವು ಸಿಗಲಿದೆ. ಕಡಿಮೆಯಾಗುತ್ತಿದ್ದ ಅನಾರೋಗ್ಯವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ಇಷ್ಟದವರು ನಿಮಗೆ ವಂಚನೆ ಮಾಡುವರು. ನಾಯಕರನ್ನು ಹಿಂಬಾಲಿಸುವ ಬದಲು ನೀವೇ ನಾಯಕರಾಗಬಹುದು. ನಿಮ್ಮ ಬಗ್ಗೆಯೇ ನಿಮಗೆ ಕೀಳು ಅರಿಮೆ ಉಂಡಾಗಬಹುದು. ಇಂದು ಬಿದ್ದ ಕನಸು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಹಲವಾರು ಅಭಿಪ್ರಾಯಗಳು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಬರುವುದು. ತಪ್ಪಿಲ್ಲದೇ ಹೆದರುವ ಅವಶ್ಯಕತೆ ಇರದು. ಮಕ್ಕಳಿಗಾಗಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ.